ನಕಲಿ ಚಿನ್ನದ ನಾಣ್ಯ ಕೊಟ್ಟು 15 ಲಕ್ಷ ರೂ. ವಂಚನೆ

Team Udayavani, Dec 16, 2019, 5:03 PM IST

mandya-tdy-2

ಮಂಡ್ಯ: ಬೆಂಗಳೂರು ಮೂಲದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರ ದೂರದ ಸಂಬಂಧಿಯೊಬ್ಬರಿಗೆ ನಕಲಿ ಚಿನ್ನದ ನಾಣ್ಯ ನೀಡಿ 15 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ಮದ್ದೂರು ಪಟ್ಟಣದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ತೆಲಂಗಾಣ ರಾಜ್ಯದ ಹೈದರಾಬಾದ್‌ನ ರವೀಂದ್ರ ನಾಯಕ್‌ ಅವರಿಂದ ಹುಬ್ಬಳ್ಳಿ ಮೂಲದ ಶಿವ ಎಂಬುವರು 15 ಲಕ್ಷ ರೂ. ಪಡೆದು ನಕಲಿ ಚಿನ್ನದ ನಾಣ್ಯ ನೀಡಿ ವಂಚಿಸಿದ್ದು, ಈ ಬಗ್ಗೆ ರವೀಂದ್ರ ನಾಯಕ್‌ ಶನಿವಾರ ಮದ್ದೂರು ಪೊಲೀಸರಿಗೆ ದೂರು ನೀಡಿದ್ದಾರೆ. ಬೆಂಗಳೂರು ಪಶ್ಚಿಮ ವಲಯ ಡಿಸಿಪಿ ಡಿ.ರಮೇಶ್‌ ದೂರದ ಸಂಬಂಧಿಯಾಗಿರುವ ರವೀಂದ್ರ ನಾಯಕ್‌ ಆಂಧ್ರದಲ್ಲಿ ಡ್ರಿಲ್ಲಿಂಗ್‌ ಕೆಲಸ ಮಾಡುತ್ತಿದ್ದು, ಅವರೊಂದಿಗೆ ಆರೋಪಿ ಶಿವ ಕೂಡ ಕೆಲಸ ಮಾಡುತ್ತಿದ್ದನು. ಆನಂತರದಲ್ಲಿ ಶಿವ ಕೆಲಸ ಬಿಟ್ಟಿದ್ದರೂ ಸಹ ರವೀಂದ್ರ ನಾಯಕ್‌ ಅವರೊಂದಿಗೆ ದೂರವಾಣಿ ಸಂಪರ್ಕದಲ್ಲಿದ್ದನು. ನಂತರದಲ್ಲಿ ರವೀಂದ್ರ ನಾಯಕ್‌ ಕೂಡ ಕೆಲಸ ತೊರೆದು ಕ್ಯಾಬ್‌ ಚಾಲಕನಾಗಿದ್ದನು.

ಕೆಲವು ದಿನಗಳ ಹಿಂದೆ ಆರೋಪಿ ಶಿವ ನನಗೆ ಹಣಕಾಸಿನ ತೊಂದರೆ ಇದೆ. ಹೀಗಾಗಿ 15 ಲಕ್ಷ ರೂ. ಹಣ ಬೇಕಾಗಿದೆ. ಹಣದ ಭದ್ರತೆಗಾಗಿ 1 ಕೆ.ಜಿ. ಚಿನ್ನದ ನಾಣ್ಯಗಳನ್ನು ಕೊಡುವುದಾಗಿ ತಿಳಿಸಿದ್ದನು. ಅದರಂತೆ ಮದ್ದೂರಿನ ಕೊಪ್ಪ ಮೇಲ್ಸೆತುವೆ ಬಳಿ ಬರುವಂತೆ ರವೀಂದ್ರನಾಯಕ್‌ಗೆ ಸೂಚಿಸಿದ್ದನು. ಈತನ ಮಾತನ್ನು ನಂಬಿದ ರವೀಂದ್ರ ನಾಯಕ್‌ ಕಳೆದ ನ. 22ರಂದು ಮದ್ದೂರು ಪಟ್ಟಣದ ಕೊಪ್ಪ ಮೇಲ್ಸೆತುವೆ ಬಳಿ ರಾತ್ರಿ 7 ಗಂಟೆ ಸಮಯದಲ್ಲಿ ಆರೋಪಿ ಶಿವನನ್ನು ಭೇಟಿ ಮಾಡಿದ

ರವೀಂದ್ರ ನಾಯಕ್‌, ಅವನಿಗೆ 15 ಲಕ್ಷ ರೂ. ಕೊಟ್ಟು ಚಿನ್ನದ ನಾಣ್ಯಗಳಿದ್ದ ಬ್ಯಾಗ್‌ನ್ನು ಪಡೆದುಕೊಂಡಿದ್ದಾನೆ. ಚಿನ್ನದ ನಾಣ್ಯಗಳ ಗೌಪ್ಯತೆ ಕಾಪಾಡಲು ಹಾಗೂ ಬೇರೆ ಯಾರಿಗೂ ವಿಷಯ ಗೊತ್ತಾಗದಿರುವಂತೆ ತಿಳಿಸಿದ ಶಿವ ಮೂರು ದಿನಗಳ ಬಳಿಕ ಬ್ಯಾಗ್‌ನ್ನು ತೆಗೆದು ನೋಡುವಂತೆ ಹೇಳಿ ಕಳುಹಿಸಿದ್ದಾನೆ. ಚಿನ್ನದ ನಾಣ್ಯಗಳಿದ್ದ ಬ್ಯಾಗ್‌ನೊಂದಿಗೆ ಹೈದಾ ಬಾದ್‌ಗೆ ವಾಪಸಾದ ರವೀಂದ್ರ ನಾಯಕ್‌ ಶಿವ ನೀಡಿದ ಸೂಚನೆಯಂತೆ ಮೂರು ದಿನಗಳ ಬಳಿಕ ಬ್ಯಾಗ್‌ ತೆರೆದು ಅದರಲ್ಲಿದ್ದ ನಾಣ್ಯಗಳನ್ನು ಪರಿಶೀಲಿಸಿದಾಗ ಅವು ನಕಲಿ ಚಿನ್ನದ ನಾಣ್ಯಗಳು ಎಂಬ ಸತ್ಯ ಅರಿವಾಯಿತು.

ಆನಂತರ ತಾನು ಮೋಸ ಹೋಗಿರುವ ಬಗ್ಗೆ ಡಿಸಿಪಿ ಡಿ.ರಮೇಶ್‌ ಅವರಿಗೆ ವಿಷಯ ತಿಳಿಸಿದ ರವೀಂದ್ರ ನಾಯಕ್‌, ನ್ಯಾಯಕ್ಕಾಗಿ ಅವರ ಮೊರೆ ಹೋಗಿದ್ದಾನೆ. ಅವರ ಸೂಚನೆಯಂತೆ ಮದ್ದೂರು ಪೊಲೀಸರಿಗೆ ರವೀಂದ್ರ ನಾಯಕ್‌ ದೂರು ನೀಡಿದ್ದಾರೆ. ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

ಟಾಪ್ ನ್ಯೂಸ್

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.