ಲಿಯಾಂಡರ್ ಪೇಸ್ 2020ರಲ್ಲಿ ನಿವೃತ್ತಿ
Team Udayavani, Dec 26, 2019, 12:06 AM IST
ಹೊಸದಿಲ್ಲಿ: ಸುದೀರ್ಘ ಸಮಯದಿಂದ ಟೆನಿಸ್ ಆಟ ಆಡುತ್ತಿರುವ ಲಿಯಾಂಡರ್ ಪೇಸ್ 2020ರಲ್ಲಿ ತನ್ನ ಮಹೋನ್ನತ ಬಾಳ್ವೆಗೆ ನಿವೃತ್ತಿ ಘೋಷಿಸಲಿದ್ದಾರೆ. ಪ್ರೊ ಸರ್ಕ್ನೂಟ್ನಲ್ಲಿ 2020 ಅವರ ವಿದಾಯ ಋತುವಾಗಿರಲಿದೆ. 46ರ ಹರೆಯದ ಪೇಸ್ 18 ಗ್ರ್ಯಾನ್ ಸ್ಲಾಮ್ ಡಬಲ್ಸ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ಅವರ ಆಟದಲ್ಲಿ ಅಷ್ಟೊಂದು ಮೊನಚು ಇಲ್ಲ. 18ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಅವರು ಮಾರ್ಟಿನಾ ಹಿಂಗಿಸ್ ಜತೆ ಸೇರಿಕೊಂಡು 2016ರಲ್ಲಿ ಪಡೆದಿದ್ದರು. ಪೇಸ್ ಡೇವಿಸ್ ಕಪ್ ಇತಿಹಾಸದ ಅತ್ಯಂತ ಯಶಸ್ವಿ ಡಬಲ್ಸ್ ಆಟಗಾರರಾಗಿದ್ದಾರೆ. 44 ಪಂದ್ಯಗಳಲ್ಲಿ ಗೆಲುವು ಒಲಿಸಿಕೊಂಡಿದ್ದಾರೆ.