ವಂಚಿಸಿ 2ನೇ ಮದುವೆ: ಪೊಲೀಸ್‌ ಠಾಣೆ ಮುಂದೆ ಪ್ರತಿಭಟನೆ

Team Udayavani, Dec 27, 2019, 2:29 PM IST

rn-tdy-2

ಚನ್ನಪಟ್ಟಣ: ಮದುವೆಯಾಗಿ ಮಗು ಇರುವುದನ್ನು ಮರೆಮಾಚಿ, ಕಾರು ಚಾಲಕನೊರ್ವ ಮತ್ತೂಂದು ಮದುವೆಯಾಗಿ ಆಕೆಯಿಂದ ಹಣ, ಆಭರಣ ಪಡೆದು ಮಾನಸಿಕವಾಗಿ, ದೈಹಿಕವಾಗಿ ದೌರ್ಜನ್ಯವೆಸಗಿರುವ ಘಟನೆ ತಾಲೂಕಿನ ಬಾಣ ಗಹಳ್ಳಿ ಗ್ರಾಮದಲ್ಲಿ ನಡೆದಿದೆ.

ಎರಡನೇ ಮದುವೆಯಾಗಿ ವಂಚನೆ ಮಾಡಿರುವ ಕಾರು ಚಾಲಕ ಎನ್‌.ಡಿ.ಶ್ರೀನಿವಾಸ್‌ ಎಂದು ಹೇಳಲಾಗಿದ್ದು, ಮಳವಳ್ಳಿ ತಾಲೂಕಿನ ಹಲಗೂರು ಪಕ್ಕದ ಗೊಲ್ಲರಹಳ್ಳಿ ಗ್ರಾಮದ ದಾಸೇಗೌಡ ಎಂಬುವರ ಮಗನಾದ ಈತ ತಾಲೂಕಿನ ಬಾಣಗಹಳ್ಳಿ ಗ್ರಾಮದ ವೆಂಕಟರಾಜು ಎಂಬುವರ ಮಗಳಾದ ಸುಕನ್ಯರನ್ನು ಕೆಲ ತಿಂಗಳ ಹಿಂದೆ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದನು. ಮದುವೆಯಾದ ಹೊಸತರಲ್ಲಿ ಪತ್ನಿಯ ಜೊತೆ ಚೆನ್ನಾಗಿದ್ದ ಈತ ಮದುವೆಯಾದ ಕೆಲವೇ ದಿನಗಳಲ್ಲಿಯೇ ತನಗೆ ವರದಕ್ಷಣೆ ಕೊಡುವಂತೆ ಪೀಡಿಸಿದ್ದನೆಂದು ಆರೋಪಿಸಲಾಗಿದೆ. ಹಣವನ್ನು ಪಡೆದ ಆತ, ಮತ್ತಷ್ಟು ವರದಕ್ಷಣೆ ಬೇಕು ಎಂದು ಪತ್ನಿಯ ಮೈಮೇಲಿದ್ದ ಚಿನ್ನದ ಆಭರಣಗಳನ್ನು ಪಡೆದು ಮಾರಾಟ ಕೂಡ ಮಾಡಿದ್ದಾನೆನ್ನಲಾಗಿದೆ.

ವರದಕ್ಷಣೆ ಕೊಡುವಂತೆ ಪತ್ನಿಗೆ ಮಾನಸಿಕವಾಗಿ ಹಿಂಸೆ ನೀಡುವುದಲ್ಲದೆ ದೈಹಿಕವಾಗಿ ದೌರ್ಜನ್ಯವನ್ನು ಎಸೆಗಲು ಮುಂದಾಗಿದ್ದಾನೆ. ಆತನಿಗೆ ಆತನ ಕುಟುಂಬದವರೂ ಪ್ರಚೋದನೆ ನೀಡಿದ್ದಾರೆ. ಹಲವಾರು ಭಾರಿ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆಂದು ದೂರಿನಲ್ಲಿ ಆಕೆ ತಿಳಿಸಿದ್ದಾಳೆ. ಪತಿ ತನಗೆ ಗೊತ್ತಿಲ್ಲದಂತೆ ಮೊದಲೇ ಬೆಂಗಳೂರಿನ ಚನ್ನಸಂದ್ರದ ಪವಿತ್ರ ಎಂಬಾಕೆಯನ್ನು ಮದುವೆಯಾಗಿದ್ದು, ಆಕೆಗೆ ಒಂದು ಮಗು ಕೂಡ ಇದೆ. ಆಕೆಯು ಕೂಡ ನನ್ನಿಂದ ವರದಕ್ಷಿಣೆ ಕೇಳುವಂತೆ ಹಾಗೂ ದೈಹಿಕವಾಗಿ ದೌರ್ಜನ್ಯವೆಸಗಲು ಪ್ರಚೋದನೆ ಮಾಡುತ್ತಿದ್ದಾಳೆಂದು ದೂರುದಾರೆ ಸುಕನ್ಯ ತಿಳಿಸಿದ್ದಾರೆ.

ಎನ್‌.ಜಿ.ಓ ದಲ್ಲಿ ಕರ್ತವ್ಯ ನಿರ್ವಹಿಸುವ ಸುಕನ್ಯಳ ನೆರವಿಗೆ ಸಂಘ ಸಂಸ್ಥೆಗಳು ನೆರವಿಗೆ ಬಂದಿದ್ದು, ಪೊಲೀಸ್‌ ಠಾಣೆಯಲ್ಲಿ ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ. ಪೊಲೀಸ್‌ ಠಾಣೆಯಲ್ಲಿಯೇ ಪೊಲೀಸರ ರಕ್ಷಣೆಯಲಿದ್ದ ಪತಿ ಶ್ರೀನಿವಾಸ ಹಾಗೂ ಪವಿತ್ರಳನ್ನು ಬಂಧಿಸುವಂತೆ ಪೊಲೀಸ್‌ ಠಾಣೆಯ ಮುಂದೆ ಮಲಗಿ ಪ್ರತಿಭಟಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಸಹಾಯಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಮರಾಜನ್‌, ಮದುವೆಯಾಗಿ ಮಗು ಇದ್ದರೂ ಮರೆಮಾಚಿ ಮತ್ತೂಂದು ಮದುವೆಯಾಗಿರುವುದು ಕಾನೂನಿನಡಿ ಅಪರಾಧವಾಗಿದ್ದು, ಸಮಗ್ರವಾಗಿ ವಿಚಾರಣೆ ನಡೆಸಿ ಸಂಬಂಧಿಸಿದರ ಮೇಲೆ ಶಿಸ್ತುಕ್ರಮ ಕೈಗೊಳ್ಳಲು ಪೊಲೀಸರಿಗೆ ಆದೇಶ ನೀಡಿದ್ದಾರೆ. ಸದ್ಯಅಕ್ಕೂರು ಪೊಲೀಸ್‌ ಠಾಣೆಯಲ್ಲಿ ಆರೋಪಿಯ ಮೇಲೆ ಪ್ರಕರಣ ದಾಖಲಾಗಿದೆ.

ಪ್ರತಿಭಟನೆಯಲ್ಲಿ ಎಸ್‌ಡಿಎಂಸಿ ಸಮನ್ವಯ ಸಮಿತಿ ರಾಜ್ಯ ಉಪಾಧ್ಯಕ್ಷ ನಾಗವಾರ ಶಂಭೂಗೌಡ, ಬಿಸಿಯೂಟ ನೌಕರರ ಸಂಘದ ಜಿಲ್ಲಾಧ್ಯಕ್ಷೆ ನಿರ್ಮಲ.ಎಚ್‌, ಪ್ರಧಾನ ಕಾರ್ಯದರ್ಶಿ ಲತಾ, ಸಂಚಾಲಕಿ ರೋಸ್‌ಮೇರಿ, ಸ್ಪಂದನ ಫರನಾಭಾನು ಹಾಗೂ ಹಲವಾರು ಮಹಿಳೆಯರು ಹಾಜರಿದ್ದರು.

ಟಾಪ್ ನ್ಯೂಸ್

ಸಾವಿರ ವರ್ಷಗಳ ಭಾರತಕ್ಕಾಗಿ ಯೋಜನೆ; ಈಗಿನ ಯೋಜನೆಗಳಿಂದ ಭಾರತದ ಭವಿಷ್ಯ ಉಜ್ವಲ

ಸಾವಿರ ವರ್ಷಗಳ ಭಾರತಕ್ಕಾಗಿ ಯೋಜನೆ; ಈಗಿನ ಯೋಜನೆಗಳಿಂದ ಭಾರತದ ಭವಿಷ್ಯ ಉಜ್ವಲ

bCharmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್‌ ಲಾರಿ; ಟ್ರಾಫಿಕ್‌ ಜಾಮ್‌Charmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್‌ ಲಾರಿ; ಟ್ರಾಫಿಕ್‌ ಜಾಮ್‌

Charmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್‌ ಲಾರಿ; ಟ್ರಾಫಿಕ್‌ ಜಾಮ್‌

ಅನಾಮಧೇಯ ಲಿಂಕ್‌ ಕ್ಲಿಕ್ಕಿಸಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ

ಅನಾಮಧೇಯ ಲಿಂಕ್‌ ಕ್ಲಿಕ್ಕಿಸಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ

ಮಕ್ಕಳ ಕೈಗೆ ಮೊಬೈಲ್‌ ಬದಲು ಪತ್ರಿಕೆ ಕೊಡಿ; ಡಾ| ಜೋಗತಿ ಮಂಜಮ್ಮ

ಮಕ್ಕಳ ಕೈಗೆ ಮೊಬೈಲ್‌ ಬದಲು ಪತ್ರಿಕೆ ಕೊಡಿ; ಡಾ| ಜೋಗತಿ ಮಂಜಮ್ಮ

Road Mishap ಕಾಸರಗೋಡು; ಕಾರು-ಸ್ಕೂಟರ್‌ ಢಿಕ್ಕಿ: ದಂಪತಿ ಸಾವು

Road Mishap ಕಾಸರಗೋಡು; ಕಾರು-ಸ್ಕೂಟರ್‌ ಢಿಕ್ಕಿ: ದಂಪತಿ ಸಾವು

kejriwal

AAP ಮುಗಿಸಲು ಬಿಜೆಪಿ ಆಪರೇಷನ್‌ ಬಲೆ: ಕೇಜ್ರಿವಾಲ್ ಕಿಡಿ

Doddangudde ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 21-24: ಪ್ರತಿಷ್ಠಾ ವರ್ಧಂತಿ ಮಹೋತ್ಸವ

Doddangudde ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 21-24: ಪ್ರತಿಷ್ಠಾ ವರ್ಧಂತಿ ಮಹೋತ್ಸವ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewqewe

Ramanagara; ಅಪ್ರಾಪ್ತ ಮಕ್ಕಳ ಮೈಯನ್ನು ಕಾದ ಕಬ್ಬಿಣದಿಂದ ಸುಟ್ಟ ಮದ್ಯವ್ಯಸನಿ ತಂದೆ

crime

Ramanagara: ತಂದೆಯಿಂದಲೇ ಮಗನ ಕೊಲೆ.!

Bengaluru-Mysuru Expressway; 15 ದಿನಗಳ‌ಲ್ಲಿ 12 ಸಾವಿರ ವಾಹನಗಳಿಗೆ ದಂಡ!

Bengaluru-Mysuru Expressway; 15 ದಿನಗಳ‌ಲ್ಲಿ 12 ಸಾವಿರ ವಾಹನಗಳಿಗೆ ದಂಡ!

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ

Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

police crime

National Conference ರೋಡ್‌ ಶೋ ವೇಳೆ ಮೂವರಿಗೆ ಚಾಕು ಇರಿತ

ಸಾವಿರ ವರ್ಷಗಳ ಭಾರತಕ್ಕಾಗಿ ಯೋಜನೆ; ಈಗಿನ ಯೋಜನೆಗಳಿಂದ ಭಾರತದ ಭವಿಷ್ಯ ಉಜ್ವಲ

ಸಾವಿರ ವರ್ಷಗಳ ಭಾರತಕ್ಕಾಗಿ ಯೋಜನೆ; ಈಗಿನ ಯೋಜನೆಗಳಿಂದ ಭಾರತದ ಭವಿಷ್ಯ ಉಜ್ವಲ

bCharmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್‌ ಲಾರಿ; ಟ್ರಾಫಿಕ್‌ ಜಾಮ್‌Charmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್‌ ಲಾರಿ; ಟ್ರಾಫಿಕ್‌ ಜಾಮ್‌

Charmady: ರಸ್ತೆಯಲ್ಲಿ ಸಿಲುಕಿದ ಕಂಟೈನರ್‌ ಲಾರಿ; ಟ್ರಾಫಿಕ್‌ ಜಾಮ್‌

ಅನಾಮಧೇಯ ಲಿಂಕ್‌ ಕ್ಲಿಕ್ಕಿಸಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ

ಅನಾಮಧೇಯ ಲಿಂಕ್‌ ಕ್ಲಿಕ್ಕಿಸಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ

police crime

Madhya Pradesh:ಮಗ ಮಾಡಿದ ತಪ್ಪಿಗೆ ದಲಿತ ತಂದೆ,ತಾಯಿಗೆ ಕಂಬಕ್ಕೆ ಕಟ್ಟಿ ಥಳಿಸಿ,ಬೂಟಿನ ಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.