ಗೋವಾದಲ್ಲಿ ಮಹದಾಯಿ ಕುರಿತ ಹಾಡು ವೈರಲ್
Team Udayavani, Jan 16, 2020, 3:05 AM IST
ಪಣಜಿ: ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ಬಿಡಬಾರದು ಎಂದು ಗೋವಾದಲ್ಲಿ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ಸತತ ಹೋರಾಟ ನಡೆಸುತ್ತಲಿವೆ. ಇದೀಗ ಕಬೀರ್ ನಾಯ್ಕ ಎಂಬ ಯುವಕ ಮಹದಾಯಿ ನದಿ ಬಗ್ಗೆ ಗೋವಾ ಜನರಲ್ಲಿ ಜಾಗೃತಿ ಮೂಡಿಸಲು ಮಾಡಿರುವ “ಅಮಚಿ ಮಹದಾಯಿ, ಅಮಕಾ ಜಾಯ್’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುಟ್ಯೂಬ್ ಮತ್ತು ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡು ಹರಿದಾಡುತ್ತಿದೆ.
ಹಾಡನ್ನು ಮಹದಾಯಿ ಜಲಾನಯನ ಪ್ರದೇಶದಲ್ಲಿ ಚಿತ್ರಿಸಿದ್ದು, ಪಣಜಿ ಸ್ಟುಡಿಯೋದಲ್ಲಿ ಆಡಿಯೊ ರೆಕಾರ್ಡ್ ಮಾಡಲಾಗಿದೆ. ಮಹದಾಯಿ ನದಿ ನೀರು ಉಳಿವಿಗಾಗಿ ರಾಜ್ಯದ ಯುವ ವರ್ಗದ ಗಮನ ಸೆಳೆಯಲು ಈ ಹಾಡನ್ನು ಚಿತ್ರೀಕರಿ ಸಲಾಗಿದೆ. ರಾಪ್ ಸಾಂಗ್ನ್ನು ಯುವವರ್ಗ ಇಷ್ಟಪಡುತ್ತದೆ, ಇದರಿಂದಾಗಿ ನಮ್ಮ ಮಹದಾಯಿ ಸಂದೇಶ ಈ ಮೂಲಕ ಯುವವರ್ಗಕ್ಕೆ ತಲು ಪುತ್ತದೆ ಎಂದು ಕಬೀರ್ ನಾಯ್ಕ ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ
Hassan Pen Drive; 40 ಜಿಬಿ ಪೆನ್ಡ್ರೈವ್ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!
Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್
Home Minister ಅಮಿತ್ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್
Karnataka Govt ಎಸ್ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ