ಕೆಕೆಆರ್‌ಡಿಬಿ ಪಟ್ಟ ಯಾರಿಗೆ?

ಅಧ್ಯಕ್ಷ್ಯ ಸ್ಥಾನಕ್ಕೆ ನಡೆದಿದೆ ಪೈಪೋಟಿ ಮಠಾಧೀಶರಿಂದ ನಡೆದಿದೆ ಲಾಬಿ

Team Udayavani, Feb 9, 2020, 12:17 PM IST

09-February-08

ಸೇಡಂ: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಸರ್ಕಸ್‌ ಪೂರ್ಣಗೊಂಡ ಬೆನ್ನಲ್ಲೇ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮದ ಅಧ್ಯಕ್ಷರು ಯಾರಾಗಬಲ್ಲರು ಎನ್ನುವ ಕುರಿತು ಚರ್ಚೆ ನಡೆದಿದೆ.

ಈ ಹಿಂದೆ ಕೆಕೆಆರ್‌ಡಿಬಿ ಪಟ್ಟ ಸೇಡಂ ಶಾಸಕ ರಾಜಕುಮಾರ ಪಾಟೀಲ ಅವರಿಗೆ ದೊರೆಯಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಈಗ ಪಟ್ಟ ಕೈತಪ್ಪುವುದೇ ಎನ್ನುವ ಆತಂಕ ಅವರ ಅಭಿಮಾನಿ ವಲಯದಲ್ಲಿ ಸೃಷ್ಟಿಯಾಗಿದೆ. ಇದಕ್ಕೆ ಕಾರಣ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಸಹಕಾರಿಯಾಗಿ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘ ರಚಿಸಿರುವುದು. ಈ ನೂತನ ಸಂಘಕ್ಕೆ ಮಾಜಿ ರಾಜ್ಯಸಭಾ ಸದಸ್ಯ, ಕಲ್ಯಾಣ ಕರ್ನಾಟಕದ ಹರಿಕಾರ ಡಾ| ಬಸವರಾಜ ಪಾಟೀಲ್‌ ಸೇಡಂ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಬಸವರಾಜ ಪಾಟೀಲ ಸೇಡಂ ಅವರು ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರ ರಾಜಕೀಯ ಗುರು. ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದಲ್ಲಿ, ಇದರ ಮೇಲಿನ ಸ್ಥಾನವಾದ ಕೆಕೆಆರ್‌ಡಿಬಿ ಅಧ್ಯಕ್ಷ ಸ್ಥಾನವನ್ನು ಶಾಸಕ ತೇಲ್ಕೂರ ಒಪ್ಪುವರೇ ಎನ್ನುವುದು ಹಲವರ ಪ್ರಶ್ನೆಯಾಗಿದೆ. ಅಲ್ಲದೆ ಕೆಕೆಆರ್‌ಡಿಬಿ ಪಟ್ಟಕ್ಕಾಗಿ ಕಲಬುರಗಿ, ರಾಯಚೂರು, ಯಾದಗಿರಿಯ ಕೆಲ ಮಾಜಿ ಶಾಸಕರು, ಹಾಲಿ ಶಾಸಕರು ತೆರೆಮರೆಯಲ್ಲಿ ಪೈಪೋಟಿ ನಡೆಸುತ್ತಿರುವುದರಿಂದ ಬಿಜೆಪಿಗೆ ಮತ್ತಷ್ಟು ಇಕ್ಕಟ್ಟು ಎದುರಾದಂತಾಗಿದೆ. ಒಟ್ಟಾರೆಯಾಗಿ ಖಾಲಿ ಇರುವ ಕೆಕೆಆರ್‌ಡಿಬಿ ಅಧ್ಯಕ್ಷ ಸ್ಥಾನ ಯಾರ ಪಾಲಾಗುತ್ತದೆ ಎಂದು ಕಾಯ್ದು ನೋಡಬೇಕಿದೆ.

ಮಠಾಧಿಧೀಶರಿಂದ ಲಾಬಿ: ಕೆಕೆಆರ್‌ಡಿಬಿ ಪಟ್ಟ ತೇಲ್ಕೂರಗೆ ನೀಡುವಂತೆ ರಾಜ್ಯದ ಪ್ರತಿಷ್ಠಿತ ಮಠಾಧಿಧೀಶರು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ತೇಲ್ಕೂರಗೆ ಅಧ್ಯಕ್ಷ ಸ್ಥಾನ ನೀಡುವುದರಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಅನುದಾನ ತಂದು, ಅಭಿವೃದ್ಧಿಗೆ ಮುಂದಾಗಬಹುದು ಎನ್ನುವ ಒತ್ತಾಸೆಯನ್ನು ಸಿಎಂ ಮುಂದಿಡಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಕೆಕೆಆರ್‌ಡಿಬಿ ಪಟ್ಟಕ್ಕಾಗಿ ನಾನು ಲಾಬಿ ನಡೆಸಿಲ್ಲ. ಜನ ಮಾತಾಡಿ
ಕೊಳ್ಳುತ್ತಿದ್ದಾರೆ ಅಷ್ಟೆ. ಪಕ್ಷಕ್ಕಾಗಲಿ, ಮುಖ್ಯಮಂತ್ರಿಗಾಗಲಿ
ನಾನು ಯಾವುದೇ ಒತ್ತಡ ಹೇರಿಲ್ಲ, ಹೇರಲ್ಲ. ಯಾರಿಗೆ ಯಾವ ಸ್ಥಾನ ನೀಡಬೇಕು ಎನ್ನುವುದನ್ನು ಪಕ್ಷವೇ ತೀರ್ಮಾನಿಸುತ್ತದೆ. ರಾಜಕುಮಾರ ಪಾಟೀಲ ತೇಲ್ಕೂರ,
ಶಾಸಕ, ಸೇಡಂ

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಆಗಬೇಕಾದರೆ ಕೆಕೆಆರ್‌ಡಿಬಿ ಅಧ್ಯಕ್ಷರನ್ನಾಗಿ ಶಾಸಕ ರಾಜಕುಮಾರ ಪಾಟೀಲ ಅವರನ್ನು ಆಯ್ಕೆ ಮಾಡಬೇಕು. ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಅವರ ಕಾರ್ಯಕ್ಕೆ ಗೌರವ ನೀಡಬೇಕು.
ಶ್ರೀಮಂತ ಅವಂಟಿ,
ಬಿಜೆಪಿ ಮುಖಂಡ

„ಶಿವಕುಮಾರ ಬಿ. ನಿಡಗುಂದಾ

ಟಾಪ್ ನ್ಯೂಸ್

3-madikeri

Crime Followup: ಸೂರ್ಲಬ್ಬಿ ವಿದ್ಯಾರ್ಥಿನಿ ಕೊಲೆ ಪ್ರಕರಣದ ಆರೋಪಿ ಪೊಲೀಸ್ ವಶ

Pramod Muthalik: ಹುಣಸೂರು ಮತ್ತೊಂದು ಭಟ್ಕಳ್ಳ ಆಗಲಿದೆ… ಪ್ರಮೋದ್ ಮುತಾಲಿಕ್ ಎಚ್ಚರಿಕೆ

Pramod Muthalik: ಹುಣಸೂರು ಮತ್ತೊಂದು ಭಟ್ಕಳ್ಳ ಆಗಲಿದೆ… ಪ್ರಮೋದ್ ಮುತಾಲಿಕ್ ಎಚ್ಚರಿಕೆ

Fraud Case: ಮುಂಬೈ ಬಿಲ್ಡರ್‌ ಮನೆ ಮೇಲೆ ಇಡಿ ದಾಳಿ… 52 ಕೋಟಿ ಮೌಲ್ಯದ ಆಸ್ತಿ ಜಪ್ತಿ

Housing Fraud Case: ಇಡಿ ದಾಳಿ… ಬಿಲ್ಡರ್‌ ಗೆ ಸೇರಿದ 52 ಕೋಟಿ ಮೌಲ್ಯದ ಆಸ್ತಿ ಜಪ್ತಿ

2-uv-fusion

UV Fusion: ಮೂಕಪ್ರಾಣಿಗಳ ವೇದನೆಗೆ ದನಿಯಾಗುವಿರಾ!

1-24-saturday

Daily Horoscope: ಉದ್ಯೋಗದಲ್ಲಿ ದಿನೇ ದಿನೇ ಉನ್ನತಿ, ಅಕಸ್ಮಾತ್‌ ಧನಾಗಮ ಯೋಗ

Market ಮೊಟ್ಟೆ ದರ ಏರಿಳಿತ: ಬಸವಳಿದ ಗ್ರಾಹಕರು

Market ಮೊಟ್ಟೆ ದರ ಏರಿಳಿತ: ಬಸವಳಿದ ಗ್ರಾಹಕರು

Dubai-Mangaluru ವಿಮಾನದಿಂದ ಹಾರುವುದಾಗಿ ಬೆದರಿಕೆ!

Dubai-Mangaluru ವಿಮಾನ ಪ್ರಯಾಣಿಕನ ದುರ್ವರ್ತನೆ; ವಿಮಾನದಿಂದ ಹಾರುವುದಾಗಿ ಬೆದರಿಕೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yadagiri

SSLC Exam Result; ಮತ್ತೆ ಕೊನೆಯ ಸ್ಥಾನ ಪಡೆದ ಯಾದಗಿರಿ..; ಕಾರಣವೇನು?

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

3-madikeri

Crime Followup: ಸೂರ್ಲಬ್ಬಿ ವಿದ್ಯಾರ್ಥಿನಿ ಕೊಲೆ ಪ್ರಕರಣದ ಆರೋಪಿ ಪೊಲೀಸ್ ವಶ

Pramod Muthalik: ಹುಣಸೂರು ಮತ್ತೊಂದು ಭಟ್ಕಳ್ಳ ಆಗಲಿದೆ… ಪ್ರಮೋದ್ ಮುತಾಲಿಕ್ ಎಚ್ಚರಿಕೆ

Pramod Muthalik: ಹುಣಸೂರು ಮತ್ತೊಂದು ಭಟ್ಕಳ್ಳ ಆಗಲಿದೆ… ಪ್ರಮೋದ್ ಮುತಾಲಿಕ್ ಎಚ್ಚರಿಕೆ

Fraud Case: ಮುಂಬೈ ಬಿಲ್ಡರ್‌ ಮನೆ ಮೇಲೆ ಇಡಿ ದಾಳಿ… 52 ಕೋಟಿ ಮೌಲ್ಯದ ಆಸ್ತಿ ಜಪ್ತಿ

Housing Fraud Case: ಇಡಿ ದಾಳಿ… ಬಿಲ್ಡರ್‌ ಗೆ ಸೇರಿದ 52 ಕೋಟಿ ಮೌಲ್ಯದ ಆಸ್ತಿ ಜಪ್ತಿ

2-uv-fusion

UV Fusion: ಮೂಕಪ್ರಾಣಿಗಳ ವೇದನೆಗೆ ದನಿಯಾಗುವಿರಾ!

1-24-saturday

Daily Horoscope: ಉದ್ಯೋಗದಲ್ಲಿ ದಿನೇ ದಿನೇ ಉನ್ನತಿ, ಅಕಸ್ಮಾತ್‌ ಧನಾಗಮ ಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.