ಮಾ.6 ಕ್ಕೆ ಹೊಸಬರ ಮದುವೆ

ಎಲ್ಲರೂ ಸರಿ ಹೋಗ್ತಾರೆ ಎಂಬ ನಂಬಿಕೆಯಲ್ಲಿ ಚಿತ್ರತಂಡ

Team Udayavani, Feb 25, 2020, 7:00 AM IST

Maduve-Maadri-Sari-Hogtane

ಈಗಾಗಲೇ ಶೀರ್ಷಿಕೆ ಹಾಗು ಪೋಸ್ಟರ್‌ಗಳಲ್ಲೇ ಜೋರು ಸುದ್ದಿ ಮಾಡಿದ್ದ “ಮದುವೆ ಮಾಡ್ರೀ ಸರಿ ಹೋಗ್ತಾನೆ’ ಚಿತ್ರತಂಡ ಇದೀಗ ಖುಷಿಯಲ್ಲಿದೆ. ಅದಕ್ಕೆ ಕಾರಣ, ಚಿತ್ರ ಬಿಡುಗಡೆ ಮುನ್ನವೇ ಚಿತ್ರದ ಟ್ರೇಲರ್‌, ಹಾಡುಗಳಿಗೆ ಸಾಕಷ್ಟು ಮೆಚ್ಚುಗೆ ಸಿಗುತ್ತಿರುವುದು. ಇದೇ ಉತ್ಸಾಹದಲ್ಲಿ ನಿರ್ದೇಶಕ ಗೋಪಿ ಕೆರೂರು ಮತ್ತು ನಿರ್ಮಾಪಕ ಶಿವರಾಜ್‌ ಲಕ್ಷ್ಮಣರಾವ್‌ ದೇಸಾಯಿ ಚಿತ್ರವನ್ನು ಮಾ.6 ರಂದು ರಾಜ್ಯಾದ್ಯಂತ ಸುಮಾರು 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ.

ನಿರ್ಮಾಪಕ ಶಿವರಾಜ್‌ ಲಕ್ಷ್ಮಣರಾವ್‌ ದೇಸಾಯಿ ಅವರಿಗೆ ಇದು ಮೊದಲ ನಿರ್ಮಾಣದ ಚಿತ್ರ. ಸಿನಿಮಾಗೆ ಸಿಗುತ್ತಿರುವ ಪ್ರತಿಕ್ರಿಯೆಯಿಂದಾಗಿ, ಸ್ವತಃ ಅವರೇ ಚಿತ್ರವನ್ನು ಹಂಚಿಕೆ ಮಾಡಲು ಮುಂದಾಗಿದ್ದಾರೆ. ಚಿತ್ರದ ಪ್ರತಿ ಹಾಡಿಗೂ ಉತ್ತಮ ಮೆಚ್ಚುಗೆ ಸಿಗುತ್ತಿದೆಯಲ್ಲದೆ, ಇತ್ತೀಚೆಗೆ ಬಿಡುಗಡೆಗೊಂಡಿರುವ ಸುಖ್ವೀಂದರ್‌ ಸಿಂಗ್‌ ಹಾಡಿರುವ ತಾಯಿ ಸೆಂಟಿಮೆಂಟ್‌ ಹಾಡಿಗೆ ಬಹುತೇಕರಿಂದ ಸಾಕಷ್ಟು ಕಾಮೆಂಟ್ಸ್‌ ಬರುತ್ತಿರುವುದು ಚಿತ್ರತಂಡಕ್ಕೆ ಚಿತ್ರ ಗೆಲುವಿನ ಹಾದಿಯಲ್ಲಿರುವ ಸಂತಸ.

ನಾಗೇಂದ್ರ ಪ್ರಸಾದ್‌ ಅವರು ಬರೆದಿರು “ಹಳೇ ಹಳೇ ಎದೆಗಾಯ, ಇದೊಂಥರಾ ಬರೀ ಮಾಯ, ಈ ಬಾಳು ಖಾಲಿ ಬಾನು, ನನ್ನೊಳಗೆ ಇಲ್ಲ ನಾನು…’ ಎಂಬ ಹಾಡಿಗೆ ಸಾಕಷ್ಟು ವೀವ್ಸ್‌, ಲೈಕ್‌ ಆಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಂತೂ ಚಿತ್ರದ ಬಿಡುಗಡೆ ಮೊದಲೇ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿದೆ ಎಂಬುದು ನಿರ್ದೇಶಕರ ಹೇಳಿಕೆ. ಇದಕ್ಕೂ ಮೊದಲು ಜಗದೀಶ್‌ ಶೆಟ್ಟರ್‌ ಹಾಗು ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಹಾಡುಗಳನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ಅಂದಹಾಗೆ, ಇಡೀ ಚಿತ್ರ ಉತ್ತರ ಕರ್ನಾಟಕ ಭಾಷೆಯಲ್ಲಿ ಮೂಡಿಬಂದಿದ್ದು, ಉತ್ತರ ಕರ್ನಾಟಕ ಭಾಗದಲ್ಲೇ ಚಿತ್ರೀಕರಿಸಿರುವುದು ವಿಶೇಷ. ಊರಲ್ಲಿ ಸೋಮಾರಿ ಹುಡುಗನೊಬ್ಬನ ಮದುವೆ ಪುರಾಣ ಇಲ್ಲಿದೆ. ಸದಾ ಊರ ಜನರಿಂದ ಬೈಯಿಸಿಕೊಳ್ಳುವ ಹುಡುಗ ಕೊನೆಗೆ ಹೇಗೆ ಅದೇ ಊರ ಜನರಿಗೆ ಇಷ್ಟವಾಗುತ್ತಾನೆ ಎಂಬುದು ಕಥೆ. ವಿಶೇಷವೆಂದರೆ, ಸಂಗೀತ ನಿರ್ದೇಶಕ ಅವಿನಾಶ್‌ ಬಾಸೂತ್ಕರ್‌ ಅವರು 11 ಹಾಡುಗಳಿಗೆ ಸಂಗೀತ ನೀಡಿದ್ದಾರೆ.

ಎಲ್ಲಾ ಹಾಡುಗಳೂ ಕಥೆಗೆ ಪೂರಕವಾಗಿವೆ. ಚಿತ್ರಕ್ಕೆ ಶಿವಚಂದ್ರಕುಮಾರ್‌ ಹೀರೋ. ಅವರಿಗೂ ಇದು ಮೊದಲ ಸಿನಿಮಾ. ಆರಾಧ್ಯ ನಾಯಕಿ. ಉಳಿದಂತೆ ಚಿತ್ರದಲ್ಲಿ ಹಿರಿಯ ರಂಗಕರ್ಮಿ ಕೃಷ್ಣಮೂರ್ತಿ ಕವಾತ್ತರ್‌ ಇಲ್ಲಿ ನೆಗೆಟಿವ್‌ ಪಾತ್ರ ಮಾಡಿದ್ದಾರೆ. ಚಿತ್ಕಲ ಬಿರಾದಾರ, ಸದಾನಂದ ಕಾಳಿ, ಚಕ್ರವರ್ತಿ ದಾವಣಗೆರೆ ಇತರರು ನಟಿಸಿದ್ದಾರೆ. ಚಿತ್ರಕ್ಕೆ ಸುರೇಶ್‌ ಬಾಬು ಛಾಯಾಗ್ರಹಣವಿದೆ. ವೆಂಕಿ ಸಂಕಲನವಿದೆ.

ಟಾಪ್ ನ್ಯೂಸ್

1-qweqewqe

BSNL 4G; ಆಗಸ್ಟ್‌ನಲ್ಲಿ ದೇಶಾದ್ಯಂತ ಸೇವೆ: ಮೂಲಗಳು

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಲಕ್ಷಾಂತರ ರೂ. ವಂಚನೆ ಪ್ರಕರಣ; ಆರೋಪಿಗಳ ಬಂಧನ

Kasaragod ಲಕ್ಷಾಂತರ ರೂ. ವಂಚನೆ ಪ್ರಕರಣ; ಆರೋಪಿಗಳ ಬಂಧನ

Kundapura ಹಾಡಹಗಲೇ ದೇವಸ್ಥಾನದಿಂದ ನಗದು, ಸೊತ್ತು ಕಳವು: ಪ್ರಕರಣ ದಾಖಲು

Kundapura ಹಾಡಹಗಲೇ ದೇವಸ್ಥಾನದಿಂದ ನಗದು, ಸೊತ್ತು ಕಳವು: ಪ್ರಕರಣ ದಾಖಲು

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Mangaluru, ಉಡುಪಿಯಲ್ಲಿ ಆ್ಯಂಬುಲೆನ್ಸ್‌ ಸೇವೆ ಯಥಾಸ್ಥಿತಿ

Mangaluru, ಉಡುಪಿಯಲ್ಲಿ ಆ್ಯಂಬುಲೆನ್ಸ್‌ ಸೇವೆ ಯಥಾಸ್ಥಿತಿ

Manipal ಖಾಸಗಿ ಬಸ್‌ ಮಾಲಕನಿಂದ ನಿರ್ವಾಹಕನಿಗೆ ಹಲ್ಲೆ; ದೂರು ದಾಖಲು

Manipal ಖಾಸಗಿ ಬಸ್‌ ಮಾಲಕನಿಂದ ನಿರ್ವಾಹಕನಿಗೆ ಹಲ್ಲೆ; ದೂರು ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ

ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

12

ʼಟಾಕ್ಸಿಕ್ʼ ಅಪ್ಡೇಟ್‌ಗಾಗಿ ಸೋಶಿಯಲ್‌ ಮೀಡಿಯಾದಲ್ಲಿ ಮತ್ತಷ್ಟು ಆ್ಯಕ್ಟಿವ್ ಆಗ್ತಾರಾ ಯಶ್?

Kaatera; ಬರಹಗಾರರಿಗೆ ರಾಕ್‌ಲೈನ್‌ ಕಾರು ಗಿಫ್ಟ್

Kaatera; ಬರಹಗಾರರಿಗೆ ರಾಕ್‌ಲೈನ್‌ ಕಾರು ಗಿಫ್ಟ್

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

1-qweqewqe

BSNL 4G; ಆಗಸ್ಟ್‌ನಲ್ಲಿ ದೇಶಾದ್ಯಂತ ಸೇವೆ: ಮೂಲಗಳು

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Ra

50% ಮಿತಿ ರದ್ದು, ಎಷ್ಟು ಬೇಕೋ ಅಷ್ಟೇ ಮೀಸಲು:ರಾಹುಲ್‌ ಗಾಂಧಿ

Kasaragod ಲಕ್ಷಾಂತರ ರೂ. ವಂಚನೆ ಪ್ರಕರಣ; ಆರೋಪಿಗಳ ಬಂಧನ

Kasaragod ಲಕ್ಷಾಂತರ ರೂ. ವಂಚನೆ ಪ್ರಕರಣ; ಆರೋಪಿಗಳ ಬಂಧನ

Rahul Gandhi 3

Rahul Gandhiವಿರುದ್ಧ ಶಿಕ್ಷಣ ತಜ್ಞರು, ಕುಲಪತಿಗಳು ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.