ಶೇರು ಮಾರುಕಟ್ಟೆ Monday Crash ; ಹೂಡಿಕೆದಾರರಿಗೆ ಒಂದೇ ದಿನದಲ್ಲಿ 6 ಲಕ್ಷ ಕೋಟಿ ರೂ. ನಷ್ಟ
Team Udayavani, Mar 9, 2020, 2:25 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮುಂಬಯಿ: ವಿಶ್ವವ್ಯಾಪಿಯಾಗುತ್ತಿರುವ ಕೊರೊನಾ ಸಂಕಟ, ಸೌದಿ-ರಷ್ಯಾ ದರ ಸಮರದಿಂದ ಭಾರೀ ಕುಸಿತ ಕಂಡಿರುವ ಕಚ್ಛಾ ತೈಲ ಬೆಲೆ ಹಾಗೂ ದೇಶದಲ್ಲಿ ಯೆಸ್ ಬ್ಯಾಂಕ್ ಸಂಕಟ ಇವು ಮೂರು ಪ್ರಮುಖ ಅಂಶಗಳು ಶೇರು ಮಾರುಕಟ್ಟೆಯ ಮೇಲೆ ಘಾತಕವಾಗಿ ಎರಗಿದ್ದು ಹೂಡಿಕೆದಾರರು ಸೋಮವಾರ ಒಂದೇ ದಿನದಲ್ಲಿ 6 ಲಕ್ಷ ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.
ವ್ಯವಹಾರದ ಮೊದಲನೇ ದಿನದ ಪ್ರಾರಂಭದಲ್ಲೇ ಕುಸಿತಕ್ಕೊಳಗಾದ ಬಿ.ಎಸ್.ಇ. ಸೂಚ್ಯಂಕ ಬಳಿಕ ಮಧ್ಯಾಹ್ನ 1.22ರ ವೇಳೆಗೆ 2,326.35 ಅಂಕಗಳಷ್ಟು ಅಥವಾ 6% ಕುಸಿತ ಕಂಡು 35,250.27 ಅಂಕಗಳಿಗೆ ಸ್ಥಿರವಾಯಿತು. ಇನ್ನು ಎನ್.ಎಸ್.ಇ. ನಿಫ್ಟಿ 646.95 ಅಂಕಗಳಷ್ಟು ಅಂದರೆ 5.89% ಕುಸಿತವನ್ನು ದಾಖಲಿಸಿ 10,342.50 ಅಂಕಗಳಿಗೆ ಕುಸಿದು ನಿಂತಿತು.
ಇದು ಒಂದೇ ದಿನದಲ್ಲಿ ಸೆನ್ಸೆಕ್ಸ್ ನಲ್ಲಿ ದಾಖಲಾಗಿರುವ ಅತೀ ದೊಡ್ಡ ಕುಸಿತವಾಗಿದೆ. 30 ಪ್ಯಾಕ್ ಬೆಂಚ್ ಮಾರ್ಕ್ ಇಂಡೆಕ್ಸ್ ನಲ್ಲಿ ಹೆಚ್ಚಿನ ಎಲ್ಲಾ ಶೇರುಗಳು ಕೆಂಪು ಬಣ್ಣಕ್ಕೆ ತಿರುಗಿದವು. ಇನ್ನು ನಿಫ್ಟಿ ಸಹ 10,500ಕ್ಕೆ ಕುಸಿದಿದ್ದು ಇದು 2018ರ ಡಿಸೆಂಬರ್ ಬಳಿಕದ ಅತೀ ಕನಿಷ್ಟ ಅಂಕವಾಗಿದೆ.
ಐ.ಒ.ಸಿ., ಹೆಚ್.ಪಿ.ಸಿ.ಎಲ್., ಒ.ಎನ್.ಜಿ.ಸಿ., ರಿಲಯನ್ಸ್ ಇಂಡಸ್ಟ್ರೀಸ್, ಇಂಡಸ್ ಇಂಡ್ ಬ್ಯಾಂಕ್ ಮತ್ತು ಟಾಟಾ ಸ್ಟೀಲ್ ಸಂಸ್ಥೆಗಳ ಶೇರುಗಳು ಭಾರೀ ನಷ್ಟಕ್ಕೊಳಗಾದವು. ಕಳೆದೆರಡು ವ್ಯವಹಾರದ ಅವಧಿಯಲ್ಲಿ ಹೂಡಿಕೆದಾರರಿಗೆ ಒಟ್ಟಾರೆಯಾಗಿ 10 ಲಕ್ಷ ಕೋಟಿ ರೂಪಾಯಿಗಳನ್ನು ಕಳೆದುಕೊಂಡಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ