ಕಳ್ಳಭಟ್ಟಿ: ಹೆಡೆ ಮುರಿಯುತ್ತಿರುವ ಖಾಕಿ

ಕೆಲ ಹಳ್ಳಿಗಳಲ್ಲಿ ಸಕ್ರಿಯವಾಗುತ್ತಿದೆ ಕದ್ದುಮುಚ್ಚಿ ಮಾರಾಟ

Team Udayavani, Apr 23, 2020, 3:40 PM IST

ಕಳ್ಳಭಟ್ಟಿ: ಹೆಡೆ ಮುರಿಯುತ್ತಿರುವ ಖಾಕಿ

ಗುಳೇದಗುಡ್ಡ: ಲಾಕ್‌ಡೌನ್‌ನಿಂದ ಮದ್ಯದಂಗಡಿಗಳು ಬಂದ್‌ ಆಗಿದ್ದರಿಂದ ಕಳ್ಳಭಟ್ಟಿಯ ದಂಧೆ ಜೋರಾಗಿ ನಡೆದಿದ್ದು, ಪೊಲೀಸ್‌ ಇಲಾಖೆ ದಾಳಿ ನಡೆಸುವುದರ ಮೂಲಕ ಕಳ್ಳಭಟ್ಟಿ ದಂಧೆಕೋರರ ಹೆಡೆ ಮುರಿಯುತ್ತಿದೆ.

ಕೋವಿಡ್ 19 ದಿಂದ ಲಾಕ್‌ಡೌನ್‌ ಆಗಿದ್ದರಿಂದ ಅಬಕಾರಿ ಪರವಾನಗಿ ಹೊಂದಿದ ಮದ್ಯ ವ್ಯಾಪಾರಿಗಳು ಮಾರಾಟ ಸ್ಥಗಿತಗೊಳಿಸಿ ಸುಮಾರು ತಿಂಗಳು ಕಳೆದಿದೆ. ಇದರಿಂದ ದಿಕ್ಕೇ ತೋಚದಂತಾದ ಪರಿಣಾಮ ಕೆಲ ಮದ್ಯ ವ್ಯಸನಿಗಳು ಅನಿವಾರ್ಯವಾಗಿ ಕಳ್ಳಭಟ್ಟಿಗೆ ಮೊರೆ ಹೋಗುತ್ತಿದ್ದಾರೆ ಎನ್ನಲಾಗಿದೆ.

ಕೆಲ ಹಳ್ಳಿಗಳಲ್ಲೇ ಹೆಚ್ಚು: ಗುಳೇದಗುಡ್ಡ ಭಾಗದ ಕೆಲ ಗ್ರಾಮಗಳಲ್ಲಿ ಕಳ್ಳಭಟ್ಟಿಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಕಳ್ಳಭಟ್ಟಿ ತಯಾರಿಕೆಗೆ ಹಲವರ ವಿರೋಧವಿದ್ದರೂ ಕೆಲವರು ಗುಟ್ಟಾಗಿ ತಯಾರಿಸಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕಳ್ಳಭಟ್ಟಿ ತಯಾರಿಕೆ, ಮಾರಾಟ ಹಾಗೂ ಸಾಗಾಟಕ್ಕೆ ಪ್ರತ್ಯೇಕ ಸಮಯವನ್ನೆ ಮೀಸಲಿಟ್ಟಿರುವ ಈ ದಂಧೆಕೋರರು ಪೊಲೀಸರು ಹಾಗೂ ಅಬಕಾರಿ ಇಲಾಖೆ ಕಣ್ತಪ್ಪಿಸಿ ಮಧ್ಯರಾತ್ರಿ, ಇಲ್ಲವೇ ಬೆಳಗಿನ ಜಾವ ಈ ದಂಧೆ ನಡೆಸುತ್ತಿದ್ದಾರೆ.

ಬೆಳ್ಳಂಬೆಳಿಗ್ಗೆ ಓಟ: ಲಾಕ್‌ಡೌನ್‌ ಆರಂಭದ ದಿನಗಳಲ್ಲಿ ಕದ್ದು ಮುಚ್ಚಿ ಸಂಗ್ರಹಿಸಿಡಲಾದ ಮದ್ಯವನ್ನು ಹೆಚ್ಚಿನ ಬೆಲೆಗೆ ಪಡೆದಿದ್ದ ಕೆಲವರು ಇನ್ನು ಮದ್ಯ ಸಿಗಲ್ಲ ಎಂಬುದು ಖಚಿತಗೊಂಡಾಗ ಹತ್ತಾರು ಕಿ.ಮೀ. ತೆರಳಿ ಕಳ್ಳಭಟ್ಟಿ ದಂಧೆ ನಡೆಯುವ ಸ್ಥಳಗಳಿಗೆ ತೆರಳಿ ಅಲ್ಲಿಯೇ ಕುಡಿದು ಬರುತ್ತಿದ್ದಾರೆ. ಕೆಲವರಂತೂ ಬೆಳ್ಳಬೆಳಿಗ್ಗೆ ಕಳ್ಳಭಟ್ಟಿ ತಯಾರಕರನ್ನು ಸಂಪರ್ಕಿಸಿ ಖರೀದಿಸುತ್ತಿದ್ದಾರೆ. ಕೇವಲ 40-50 ರೂ.ಗೆ ಸಿಗುತ್ತಿದ್ದ ಕಳ್ಳಭಟ್ಟಿ ಈಗ ಲೀಟರ್‌ಗೆ 150-200ರೂ ಮಾರಾಟವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಕೆಲ ಏಜೆಂಟರು ಅಲ್ಲಲ್ಲಿ ಕದ್ದುಮುಚ್ಚಿ ಕಳ್ಳಭಟ್ಟಿ ಖರೀದಿಸಿ ಮಾರುತ್ತಿದ್ದಾರೆ ಎನ್ನಲಾಗಿದೆ.

ಕಳ್ಳಭಟ್ಟಿ ಬೆನ್ನಟ್ಟಿದ ಪೊಲೀಸರು: ತಾಲೂಕಿನ ಕೆಲ ಹಳ್ಳಿಗಳಲ್ಲಿರುವ ಮನೆ ಹಾಗೂ ಗುಡ್ಡಗಳಲ್ಲಿ ಕಳ್ಳಭಟ್ಟಿ ತಯಾರಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಗುಳೇದಗುಡ್ಡ ಠಾಣೆ ಪೊಲೀಸರು ಕಳ್ಳಭಟ್ಟಿ ತಯಾರಿಸುವವರ ಮನೆ ಸೇರಿದಂತೆ ಇನ್ನಿತರೆ ಪ್ರದೇಶಗಳ ಮೇಲೆ ದಾಳಿ ಮಾಡಿ, ಕಳ್ಳಭಟ್ಟಿಯ ಕಚ್ಚಾಮಾಲು ಸೇರಿದಂತೆ ಬೆಲ್ಲದ ಕೊಳೆಯನ್ನು ನಾಶ ಪಡಿಸುತ್ತಿದ್ದಾರೆ. ಕಳೆದ 4 ದಿನಗಳಲ್ಲಿ ಹಾನಾಪುರ ತಾಂಡಾದಲ್ಲಿ 1.5 ಲಕ್ಷ, ಹುಲ್ಲಿಕೇರಿ ತಾಂಡಾದಲ್ಲಿ 75 ಸಾವಿರ ಮೌಲ್ಯದ ಕಳ್ಳಭಟ್ಟಿ ನಾಶಪಡಿಸಿದ್ದಲ್ಲದೇ ತಯಾರಿಕರಿಗೆ ಬಿಸಿ ಮುಟ್ಟಿಸಿದ್ದಾರೆ.

ಅಬಕಾರಿ ಇಲಾಖೆ ಮೌನ: ಕಳಭಟ್ಟಿ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಸಂಬಂಧಿಸಿದ ಅಬಕಾರಿ ಇಲಾಖೆ ಮಾತ್ರ ನೆಪ ಮಾತ್ರಕ್ಕೆ ದಾಳಿ ನಡೆಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಲಾಕ್‌ಡೌನ್‌ನಿಂದ ಮದ್ಯದಂಗಡಿಗಳು ಬಂದ್‌ ಆಗಿವೆ. ಮದ್ಯವ್ಯಸನಿಗಳು ಕಳ್ಳಭಟ್ಟಿಗೆ ಮೊರೆ ಹೋಗಿದ್ದಾರೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಈ ಬಗ್ಗೆ ದೂರುಗಳು ಬರುತ್ತಿದ್ದು, ಅದಕ್ಕಾಗಿ ದಾಳಿ ಮಾಡುತ್ತಿದ್ದೇವೆ. ಸದ್ಯ 2 ಕಡೆ ದಾಳಿ ಮಾಡಿದ್ದೇವೆ. ಜನರ ಆರೋಗ್ಯ ಕಾಪಾಡುವ ಸಲುವಾಗಿ ಕಳ್ಳಭಟ್ಟಿ ತಯಾರಿಕೆಗೆ ಕಡಿವಾಣ ಹಾಕಲಾಗುವುದು. -ಡಾ|ಲಕ್ಷ್ಮೀಕಾಂತ ಬಾನಿಕೋಲ, ಪಿಎಸ್‌ಐ, ಗುಳೇದಗುಡ್ಡ ಪೊಲೀಸ್‌ ಠಾಣೆ

 

ಮಲ್ಲಿಕಾರ್ಜುನ ಕಲಕೇರಿ

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.