ಸ್ವರ್ಣ ಖರೀದಿಗೆ ಆನ್‌ಲೈನ್‌ನಲ್ಲಿ ಸುವರ್ಣ ಅವಕಾಶ

ಈ ಬಾರಿ ಅಕ್ಷಯ ತೃತೀಯಾಕ್ಕೆ ಹೊಸ ಸೊಬಗು

Team Udayavani, Apr 24, 2020, 6:15 AM IST

ಸ್ವರ್ಣ ಖರೀದಿಗೆ ಆನ್‌ಲೈನ್‌ನಲ್ಲಿ ಸುವರ್ಣ ಅವಕಾಶ

ಸಾಂದರ್ಭಿಕ ಚಿತ್ರ

ಮಂಗಳೂರು/ಉಡುಪಿ: ಕೋವಿಡ್ 19 ಅಬ್ಬರದ ಮಧ್ಯೆಯೇ ಶುಭ ಸಮಾಚಾರವನ್ನು ಅಕ್ಷಯ ತೃತೀಯಾ ಹೊತ್ತು ತಂದಿದೆ.

ಈ ಬಾರಿ ಲಾಕೌಡೌನ್‌ ಹಿನ್ನೆಲೆಯಲ್ಲಿ ಗ್ರಾಹಕರು ಅಕ್ಷಯ ತೃತೀಯಾದ ದಿನ ಚಿನ್ನವನ್ನು ಕೊಳ್ಳುವ ಉದ್ದೇಶ ತಪ್ಪಿಸಿಕೊಳ್ಳಬಾರದೆಂದು ಉಭಯ ಜಿಲ್ಲೆಗಳ ಚಿನ್ನಾಭರಣ ಮಳಿಗೆಯವರು ಗ್ರಾಹಕರಿಗೆ ಆನ್‌ಲೈನ್‌ ಮೂಲಕ ಖರೀದಿ ಮಾಡಲು ಅವಕಾಶ ಸೃಷ್ಟಿಸಿದ್ದಾರೆ.

ಕೋವಿಡ್ 19 ಸೋಂಕನ್ನು ತಡೆಗಟ್ಟಲು ಲಾಕ್‌ಡೌನ್‌ ಘೋಷಿಸಲಾಗಿದ್ದು, ಅಗತ್ಯ ವಸ್ತುಗಳ ಮಳಿಗೆಗಳೂ ನಿಗದಿತ ಅವಧಿ ಹೊರತುಪಡಿಸಿದಂತೆ ಬೇರೆ ಸಮಯದಲ್ಲಿ ತೆರೆಯುವಂತಿಲ್ಲ. ಈ ರವಿವಾರ (ಎ.26) ದಂದು ಈ ಬಾರಿಯ ಅಕ್ಷಯ ತೃತೀಯಾ ಬರುತ್ತಿದೆ. ಹಾಗಾಗಿ ಹಲವು ಮಳಿಗೆಯವರು ಗ್ರಾಹಕರಿಗೆ ಆನ್‌ ಲೈನ್‌ ಮೂಲಕ ಖರೀದಿ ಸೌಲಭ್ಯ ಕಲ್ಪಿಸಲು ಈಗಾಗಲೇ ಸಿದ್ಧತೆ ಕೈಗೊಂಡಿದ್ದಾರೆ.

ಮಂಗಳೂರು : ಸಡಗರಕ್ಕೆ ಕೊರತೆ ಇಲ್ಲ
ಹಲವು ಸಂಸ್ಥೆಗಳು ಸಂಸ್ಥೆಗಳ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ ಖರೀದಿ ಕೈಗೊಳ್ಳಬಹುದೆಂದು ಪ್ರಕಟಿಸಿವೆ. ಇದರಿಂದ ಅಕ್ಷಯ ತೃತೀಯಾ ದಿನದಂದು ಮಳಿಗೆ ಹೋಗದೇ ಇದ್ದರೂ ಚಿನ್ನ ಕೊಳ್ಳುವ ಸಂಭ್ರಮಕ್ಕೆ ಕೊರತೆಯಾಗದು. ಮಂಗಳೂರಿನ ಜೋಯ್‌ ಆಲುಕ್ಕಾಸ್‌, ಜೋಸ್‌ ಆಲುಕ್ಕಾಸ್‌, ಪುತ್ತೂರಿನ ಜಿ.ಎಲ್‌. ಆಚಾರ್ಯ ಸ್ವರ್ಣ ಮಳಿಗೆಗಳೂ ಸೇರಿದಂತೆ ಹಲವರು ಆನ್‌ ಲೈನ್‌ ಖರೀದಿಗೆ ಆಫ‌ರ್‌ಗಳನ್ನು ಘೋಷಿಸಿದ್ದಾರೆ.

ಉಡುಪಿಯಲ್ಲೂ ಸೊಬಗಿದೆ !
ಉಡುಪಿಯಲ್ಲೂ ಅಕ್ಷಯ ತೃತೀಯಾದ ಸೊಬಗಿದೆ. ಆಭರಣ ಜುವೆಲರ್, ಗುಜ್ಜಾಡಿ ಸ್ವರ್ಣ ಜುವೆಲರ್ ಸೇರಿದಂತೆ ಹಲವರು ಆನ್‌ ಲೈನ್‌ ಮೂಲಕ ಖರೀದಿಗೆ ವ್ಯವಸ್ಥೆ ಮಾಡಿದ್ದಾರೆ. ವಿವಿಧ ಆಫ‌ರ್‌ಗಳನ್ನೂ ಘೋಷಿಸಿದ್ದು, ಗ್ರಾಹಕರು ಮುಂಗಡವಾಗಿ ಹಣ ಪಾವತಿಸಿ ಚಿನ್ನದ ದರವನ್ನು ನಿಗದಿಪಡಿಸಿಕೊಳ್ಳಬೇಕು ಎಂದು ಕಂಪೆನಿಗಳು ತಿಳಿಸಿವೆ. ಗ್ರಾಹಕರು ಆನ್‌ಲೈನ್‌ ಮೂಲಕ ಖರೀದಿಸಿದ ದಿನವೇ ಚಿನ್ನದ ಮಾಲಿಕತ್ವದ ಪ್ರಮಾಣ ಪತ್ರ ಪಡೆಯ ಬಹುದು ಎಂದು ಕೆಲ ಚಿನ್ನಾಭರಣ ಕಂಪೆನಿಗಳು ತಿಳಿಸಿವೆ.

ಅಕ್ಷಯ ತೃತೀಯಾ ಹಿಂದೂ ಧರ್ಮದ ಪ್ರಕಾರ ವಿಶೇಷ ಮಹತ್ವದ ದಿನ. ಉತ್ತಮ ಮುಹೂರ್ತ, ಒಳ್ಳೆಯ ದಿನ ಎಂಬ ನಂಬಿಕೆ ಹಲವು ವರ್ಷಗಳಿಂದ ಪಾಲಿಸಲಾಗುತ್ತಿದೆ. ಅಂದು ಎಲ್ಲವೂ ಶುಭ ಎಂಬ ನಂಬಿಕೆ ಭಾರತೀಯರದು. ಈ ಬಾರಿಯ ಸಣ್ಣ ಕೊರಗೆಂದರೆ ಒಂದು ತಿಂಗಳು ಮೊದಲೇ ಅಕ್ಷಯ ತೃತೀಯಾಕ್ಕೆಂದು ಬುಕ್ಕಿಂಗ್‌ ಮಾಡಿ, ಹಬ್ಬದ ದಿನದಂದು ಸಾಲಿನಲ್ಲಿ ನಿಂತು ಖರೀದಿಸುವ ಸಡಗರವಿಲ್ಲವಷ್ಟೇ ; ಆದರೆ ಚಿನ್ನವನ್ನು ಕೊಂಡುಕೊಂಡ ಸಂಭ್ರಮಕ್ಕೇನೂ ಕೊರತೆ ಇಲ್ಲ.

14 ಕೋ. ರೂ. ವ್ಯವಹಾರ
ಕಳೆದ ವರ್ಷ ಅಕ್ಷಯ ತೃತೀಯಾದಂದು ಮಂಗಳೂರಿನ ಸ್ವರ್ಣ ಮಳಿಗೆಗಳಲ್ಲಿ ಅಂದಾಜು 14 ಕೋಟಿ ರೂ.ಗಳಿಗೂ ಮಿಕ್ಕಿ ವ್ಯವಹಾರವಾಗಿತ್ತು. ಸರಾಸರಿ 25 ಕೆಜಿ ಚಿನ್ನ, 100 ಕೆಜಿ ಬೆಳ್ಳಿ ಮಾರಾಟವಾಗಿತ್ತು. ಈ ವರ್ಷ ಮಳಿಗೆಗಳಲ್ಲಿ ಮಾರಾಟ ಇಲ್ಲದಿದ್ದರೂ, ಆನ್‌ಲೈನ್‌ ಖರೀದಿಗೆ ಅವಕಾಶ ಕಲ್ಪಿಸಿರುವುದರಿಂದ ಒಳ್ಳೆಯ ವಹಿವಾಟು ನಿರೀಕ್ಷಿಸಿದ್ದೇವೆ ಎನ್ನುತ್ತಾರೆ ಸ್ವರ್ಣ ಮಳಿಗೆಗಳ ಪ್ರಮುಖರು.

ಆನ್‌ಲೈನ್‌ ಖರೀದಿ
ಅಕ್ಷಯ ತೃತೀಯಾದಂದು ಚಿನ್ನ ಖರೀದಿಸಿದರೆ ಶುಭ ಎಂಬ ನಂಬಿಕೆ ದೆ. ಹಾಗಾಗಿ ಪ್ರತಿ ವರ್ಷ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನ ಖರೀದಿಸುತ್ತಾರೆ. ಈ ಬಾರಿ ಲಾಕ್‌ಡೌನ್‌ ಕಾರಣದಿಂದ ಗ್ರಾಹಕರಿಗೆ ನೇರವಾಗಿ ಮಳಿಗೆಗಳಲ್ಲಿ ಖರೀದಿಸಲು ಅವಕಾಶವಿಲ್ಲ. ಅದಕ್ಕಾಗಿ ನಗರದ ಕೆಲವು ಮಳಿಗೆಗಳು ಆನ್‌ಲೈನ್‌ನಲ್ಲಿ ಖರೀದಿಗೆ ಅವಕಾಶ ಕಲ್ಪಿಸಿವೆ.
– ಪ್ರಶಾಂತ್‌ ಎಲ್‌. ಶೇಟ್‌, ಕಾರ್ಯದರ್ಶಿ, ಚಿನ್ನ-ಬೆಳ್ಳಿ ಮಾರಾಟಗಾರರ ಸಂಘ, ದ.ಕ.

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.