ಸ್ಟಾರ್‌ ಇಲ್ಲದೆ ಗೆದ್ದವರು.. ಇವರಿಗೆ ಕಥೆಯೇ ಹೀರೋ ಗುರು

Team Udayavani, May 9, 2020, 9:47 AM IST

ಸ್ಟಾರ್‌ ಇಲ್ಲದೆ ಗೆದ್ದವರು.. ಇವರಿಗೆ ಕಥೆಯೇ ಹೀರೋ ಗುರು

ಕನ್ನಡದಲ್ಲಿ ಈಗಾಗಲೇ ಗಟ್ಟಿ ಕಥೆ ನಂಬಿದವರಿಗೆ ಎಂದಿಗೂ ಮೋಸ ಆಗಿಲ್ಲ. ಅದಕ್ಕೆ ಸಾಕ್ಷಿಯೆಂಬಂತೆ ಸಾಕಷ್ಟು ಹೊಸಬರ ಚಿತ್ರಗಳು ಬಂದು, ಆ ಮೂಲಕ ಗೆಲುವು ಕಂಡಿದ್ದಾರೆ. ಹಾಗಂತ, ಸಕ್ಸಸ್‌ ಕಂಡ ಚಿತ್ರಗಳಿಗೆ ಸ್ಟಾರ್‌ಗಳೇ ಇದ್ದಾರೆ ಅಂದುಕೊಂಡರೆ ಆ ಊಹೆ ತಪ್ಪು. ಈಗಾಗಲೇ ಯಶಸ್ಸು ಕಂಡಿರುವ ಅಂತಹ ಸಿನಿಮಾಗಳಿಗೆ ಸ್ಟಾರ್‌ಗಿರಿಯ ಅಗತ್ಯತೆಯೂ ಇಲ್ಲ ಎಂಬುದನ್ನು ಗಮನಿಸಲೇಬೇಕು. ಇಲ್ಲಿ ನೇಮು-ಫೇಮು ಇದ್ದವರಷ್ಟೇ ಸಿನಿಮಾ ಮಾಡಿದರೆ,  ಆ ಚಿತ್ರ ಗೆಲ್ಲುತ್ತೆ ಎಂಬ ಲೆಕ್ಕಾಚಾರ ನಿಜಕ್ಕೂ ತಪ್ಪು. ಹಾಗೊಮ್ಮೆ ಸ್ಟಾರ್‌ಗಿರಿ ಇರದ ಚಿತ್ರಗಳ ಪಟ್ಟಿ ಹಾಕಿದರೆ, ಅಲ್ಲಿ ಯಶಸ್ಸು ಕಂಡಿರುವ ಸಂಖ್ಯೆಯೇ ಜಾಸ್ತಿ.

ಹೌದು, ಕನ್ನಡ ಮಾತ್ರವಲ್ಲ, ಇಡೀ ಜಗತ್ತಿಗೇ ಹೊಸತನದ ಸಿನಿಮಾ ಆಗಿ ಹೊರಹೊಮ್ಮಿದ “ತಿಥಿ ‘ ಸಿನಿಮಾದಲ್ಲಿ ಇದ್ದವರ್ಯಾರೂ ಕನ್ನಡ ಸಿನಿಮಾರಂಗಕ್ಕೆ ಗೊತ್ತಿದ್ದವರಲ್ಲ. ಆ ಮೂಲಕ ಒಂದಷ್ಟು ಹೊಸ ಪ್ರತಿಭೆಗಳು ಸಿನಿಮಾ ರಂಗಕ್ಕೆ ಪರಿಚಯಗೊಂಡವು. ಅದೊಂದು ಶ್ರೇಷ್ಠ ಸಿನಿಮಾ ಆಗಿ ಹೊರಹೊಮ್ಮಿತು. ಇನ್ನು, ಅದೇ ಸಾಲಿಗೆ ಸೇರಿದ “ರಾಮಾ ರಾಮಾ ರೇ ‘ ಸಿನಿಮಾ ಹೊರಬಂದಾಗಲಷ್ಟೇ ಅದರ ಮಹತ್ವ ಎಲ್ಲರಿಗೂ ತಿಳಿಯಿತು. ಅಲ್ಲೂ ಹೊಸಬರ ಕೈಚಳಕವಿತ್ತು. ಆದರೆ, ಯಾವ ಸ್ಟಾರ್‌ ಕೂಡ ಆ ಚಿತ್ರದಲ್ಲಿ ಇರಲಿಲ್ಲ. ಒಂದು ಬೋಳುತಲೆ ಕುರಿತ ಕಥೆ ಹೆಣೆದು ಹೀಗೂ ಸಿನಿಮಾ ಮಾಡಿ ಗೆಲ್ಲಬಹುದು ಅಂತ ತೋರಿಸಿಕೊಟ್ಟ ಸಿನಿಮಾ ಅಂದರೆ ಅದು “ಒಂದು ಮೊಟ್ಟೆಯ ಕಥೆ ‘ ಇಲ್ಲೂ ಹೊಸಬರೇ ಹೊರ ಬಂದರು. ಹಾಗೆಯೇ, ಪುನಃ ಸಾಬೀತುಪಡಿಸಿದ್ದು, “ಒಂದಲ್ಲಾ ಎರಡಲ್ಲಾ ‘, “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ- ಕಾಸರಗೋಡು ‘,”ನಡುವೆ ಅಂತರವಿರಲಿ ‘, “ಗೊಂಬೆಗಳ ಲವ್‌ ‘, “ಲೂಸಿಯಾ ‘ಹೀಗೆ ಕನ್ನಡದಲ್ಲಿ ಈ ರೀತಿಯ ನೂರಾರು ಚಿತ್ರಗಳೇ ಬಂದವು. ಗೆದ್ದು ಬೀಗಿದವು. ಆದರೆ, ಈ ಸಿನಿಮಾಗಳಲ್ಲಿ ಸ್ಟಾರ್‌ಗಿರಿ ಎಂಬುದೇ ಇರಲಿಲ್ಲ. ಅಲ್ಲಿ ಇದ್ದದ್ದು, ಬರೀ ಗಟ್ಟಿ ಕಥೆ. ಕಥೆ ನಂಬಿ ಬಂದವರು ಜನರ ಮನಸ್ಸನ್ನು ಗೆದ್ದರು. ಆ ಮೂಲಕ ಹೊಸ ಅಲೆಯ ಸಿನಿಮಾದ  ಜರ್ನಿ ಹೆಚ್ಚಾಯಿತು. ಇತ್ತೀಚೆಗೆ ಪುನಃ ಅಂತಹ ಪ್ರಯತ್ನಗಳು ಸಾಲಾಗಿ ಕಾಣಿಸಿಕೊಂಡವು. “ದಿಯಾ ‘, “ಲವ್‌ ಮಾಕ್ಟೇಲ್‌ ‘ ಕೂಡ ನೋಡುಗರ ಗಮನ ಸೆಳೆದವು.

ಸ್ಟಾರ್‌ಗಳ ಚಿತ್ರಗಳಿಗೆ ಪೈಪೋಟಿ ಕೊಡುವ ನಿಟ್ಟಿನಲ್ಲಿ ಹೊಸಬರು ತಮ್ಮ ಗಟ್ಟಿ ಕಥೆ ಮೂಲಕ ಅನಾವರಣಗೊಂಡರು. ಈಗ ಹೊಸ ಪ್ರಯತ್ನಗಳು ಹೆಚ್ಚಾಗುತ್ತಿವೆ. ಲಾಕ್‌ಡೌನ್‌ ಸಮಯದಲ್ಲಿ ಪ್ರತಿಯೊಬ್ಬ ಪ್ರತಿಭಾವಂತ ನಿರ್ದೇಶಕ ಹೊಸ ಕಥೆಯನ್ನು ಹೆಣೆಯುವಲ್ಲಿ ನಿರತನಾಗಿದ್ದಾನೆ. ಮತ್ತೂಂದು ಹೊಸಬಗೆಯ ಚಿತ್ರ ಕಟ್ಟಿಕೊಡುವ ಮೂಲಕ ಎಲ್ಲರನ್ನೂ ತನ್ನತ್ತ ಆಕರ್ಷಿಸುವ ಪ್ರಯತ್ನದಲ್ಲಿದ್ದಾನೆ. ಅದೇನೆ ಇರಲಿ, ಹೊಸ ಬಗೆಯ ಚಿತ್ರಗಳಿಗೆ ಕನ್ನಡಿಗರು ಎಂದೂ ಮೋಸ ಮಾಡಿಲ್ಲ. ಅದರಲ್ಲೂ ಕಂಟೆಂಟ್‌ ಕಥೆಗಳಿಗೆ ಜೈ ಎಂದಿದ್ದಾನೆ. ಈಗಂತೂ ಹೊಸಬರದ್ದೇ ಹವಾ ಎಂಬುದು ಮತ್ತೂಮ್ಮೆ ಸಾಬೀತಾಗಿದೆ ಕೂಡ.

ಟಾಪ್ ನ್ಯೂಸ್

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

India’s first-ever ‘hybrid pitch’ was unveiled at the HPCA stadium

HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

1-qweqwqwe

Kerala ಕರಾವಳಿಯಲ್ಲಿ 6 ಮೀನುಗಾರರ ಸಹಿತ ಇರಾನ್ ಹಡಗು ಕೋಸ್ಟ್ ಗಾರ್ಡ್ ವಶಕ್ಕೆ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

foeticide

Mandya: ಮತ್ತೆ ಹೆಣ್ಣುಭ್ರೂಣ ಹತ್ಯೆ ಜಾಲ ಪತ್ತೆ; ನಾಲ್ವರ ಬಂಧನ

Kanniyakumari: ಮದುವೆಗೆಂದು ಆಗಮಿಸಿ ಸಮುದ್ರ ಪಾಲಾದ ಐವರು ವೈದ್ಯಕೀಯ ವಿದ್ಯಾರ್ಥಿಗಳು

Kanniyakumari: ಮದುವೆಗೆಂದು ಆಗಮಿಸಿ ಸಮುದ್ರ ಪಾಲಾದ ಐವರು ವೈದ್ಯಕೀಯ ವಿದ್ಯಾರ್ಥಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ

ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

12

ʼಟಾಕ್ಸಿಕ್ʼ ಅಪ್ಡೇಟ್‌ಗಾಗಿ ಸೋಶಿಯಲ್‌ ಮೀಡಿಯಾದಲ್ಲಿ ಮತ್ತಷ್ಟು ಆ್ಯಕ್ಟಿವ್ ಆಗ್ತಾರಾ ಯಶ್?

Kaatera; ಬರಹಗಾರರಿಗೆ ರಾಕ್‌ಲೈನ್‌ ಕಾರು ಗಿಫ್ಟ್

Kaatera; ಬರಹಗಾರರಿಗೆ ರಾಕ್‌ಲೈನ್‌ ಕಾರು ಗಿಫ್ಟ್

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

1-wwwewqwq

Koratagere: ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

1—wewqeqw

Maharashtra ;120 ಅಡಿ ಜಲಪಾತದಿಂದ ಹಾರಿದ ಯುವಕ ಮೃತ್ಯು: ವಿಡಿಯೋ ವೈರಲ್

India’s first-ever ‘hybrid pitch’ was unveiled at the HPCA stadium

HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?

65 ವರ್ಷದಿಂದ ದೇಶಕ್ಕೆ ಚೊಂಬು ಹಿಡಿಸಿದ್ದೆ ಕಾಂಗ್ರೆಸ್‌ ಸಾಧನೆ: ಹರಿಪ್ರಕಾಶ ಕೋಣೆಮನೆ

65 ವರ್ಷದಿಂದ ದೇಶಕ್ಕೆ ಚೊಂಬು ಹಿಡಿಸಿದ್ದೆ ಕಾಂಗ್ರೆಸ್‌ ಸಾಧನೆ: ಹರಿಪ್ರಕಾಶ ಕೋಣೆಮನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.