ಕಲಬುರಗಿ: ಓರ್ವ ಬಾಲಕ, ಇಬ್ಬರು ಬಾಲಕಿಯರು ಸೇರಿ ನಾಲ್ವರು ಸೋಂಕಿನಿಂದ ಗುಣಮುಖ
Team Udayavani, May 2, 2020, 6:02 PM IST
ಕಲಬುರಗಿ: ಮಹಾಮಾರಿ ಕೋವಿಡ್-19 ಸೋಂಕಿತ ಓರ್ವ ಬಾಲಕ, ಇಬ್ಬರು ಬಾಲಕಿಯರು ಸೇರಿ ನಾಲ್ವರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ನಗರದ ಸತ್ರಾಸವಾಡಿ ನಿವಾಸಿಗಳಾದ 10 ವರ್ಷದ ಬಾಲಕಿ (ಪಿ-254), ಐದು ವರ್ಷದ ಬಾಲಕ (ಪಿ-315) ಮತ್ತು 13 ವರ್ಷದ ಬಾಲಕಿ (ಪಿ-393) ಕೋವಿಡ್-19 ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಈ ಮೂವರಿಗೆ ಕೋವಿಡ್ ಸೋಂಕಿನಿಂದ ಮೃತಪಟ್ಟ 55 ವರ್ಷದ ಬಟ್ಟೆ ವ್ಯಾಪಾರಿ (ಪಿ-205) ಯ ನೇರ ಸಂಪರ್ಕದಿಂದ ಸೋಂಕು ಹರಡಿತ್ತು.
ಮತ್ತೊಬ್ಬ 32 ವರ್ಷದ (ಪಿ-314) ಯುವಕ ಕೂಡ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇವರು ಮಾ.24 ರಂದು ಬೆಂಗಳೂರಿನಿಂದ ಮರಳಿದ್ದರು.
ಬೆಂಗಳೂರಿನಿಂದ ಮರಳಿದ ಕಾರಣ ಗಂಟಲು ಮಾದರಿ ಪರೀಕ್ಷೆ ಮಾಡಲಾಗಿತ್ತು. ಆದರೆ, ವರದಿ ನೆಗೆಟಿವ್ ಎಂದು ಬಂದಿತ್ತು. ನಂತರದಲ್ಲಿ ಜ್ವರ ಕಾಣಿಸಿಕೊಂಡ ಪರಿಣಾಮ ಏ.16ರಂದು ಮತ್ತೊಮ್ಮೆ ನಡೆಸಿದ ಪರೀಕ್ಷೆಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿತ್ತು.
ಇದರೊಂದಿಗೆ ಜಿಲ್ಲೆಯ ಒಟ್ಟು 55 ಸೋಂಕಿತರಲ್ಲಿ 18 ಜನರು ಗುಣಮುಖರಾದಂತೆ ಆಗಿದೆ. ಐವರು ಸೋಂಕಿತರು ಮೃತಪಟ್ಟಿದ್ದು, 32 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಬಿಜೆಪಿ ಕಾರ್ಯಕರ್ತನ ಮೇಲೆ ಮರಣಾಂತಿಕ ಹಲ್ಲೆ
Marks card ಕೊಡಲು ಲಂಚ: ಶಿಕ್ಷಣ ಇಲಾಖೆ ಅಧಿಕಾರಿಗಳಿಬ್ಬರು ಲೋಕಾಯುಕ್ತ ಬಲೆಗೆ
Kalaburagi; ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸುರೇಶ ಸಜ್ಜನ್ ನಾಮಪತ್ರ ಸಲ್ಲಿಕೆ
Kalaburagi: ಮರ್ಮಾಂಗಕ್ಕೆ ಕರೆಂಟ್ ಶಾಕ್ ನೀಡಿದ ಪ್ರಕರಣ: ಶೀಘ್ರ ಇನ್ನುಳಿದ ಆರೋಪಿಗಳ ಬಂಧನ
ಎಂಎಲ್ಸಿ ಚುನಾವಣೆ: ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾದ ಬಿಜೆಪಿ ನಾಯಕ…
MUST WATCH
ಹೊಸ ಸೇರ್ಪಡೆ
IPL Playoff ಪಂದ್ಯಗಳಿಗೆ ಮೀಸಲು ದಿನವಿದೆಯೇ? ಮಳೆ ನಿಯಮ ಏನು ಹೇಳುತ್ತದೆ?
Devil; ದರ್ಶನ್ ಚಿತ್ರಕ್ಕೆ ನಾಯಕಿಯಾದ ಕರಾವಳಿ ಬೆಡಗಿ
Bengaluru: ಬರ್ತ್ ಡೇ ಹೆಸರಲ್ಲಿ ಮಾಡೆಲ್, ಟೆಕ್ಕಿಗಳ ರೇವ್ ಪಾರ್ಟಿ; ಸಿಸಿಬಿ ಪೊಲೀಸರ ದಾಳಿ
IPL ಮುಂದಿನ ವರ್ಷವೂ ಧೋನಿ ಆಡುತ್ತಾರಾ..?; ರಾಯುಡು ಹೇಳಿದ್ದೇನು?
Farrukhabad; ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತದಾನ ಮಾಡಿದ ವ್ಯಕ್ತಿ; ವಿಡಿಯೋ ವೈರಲ್