ಪ್ರಿನ್ಸ್ ಲಾರಾಗೆ 51ರ ಸಂಭ್ರಮ; ಕ್ರಿಕೆಟ್ ದಿಗ್ಗಜರಿಂದ ಶುಭ ಹಾರೈಕೆ
Team Udayavani, May 3, 2020, 6:17 AM IST
ಪೋರ್ಟ್ ಆಫ್ ಸ್ಪೇನ್:ವೆಸ್ಟ್ ಇಂಡೀಸಿನ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಶನಿವಾರ 51ನೇ ವರ್ಷಕ್ಕೆ ಕಾಲಿಟ್ಟರು. ಈ ಸಂದರ್ಭದಲ್ಲಿ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಸೇರಿದಂತೆ ವಿಶ್ವದ ಖ್ಯಾತ ಕ್ರಿಕೆಟಿಗರು ಲಾರಾಗೆ ಶುಭ ಹಾರೈಸಿದರು.
“ಆತ್ಮೀಯ ಗೆಳೆಯನಿಗೆ ಹುಟ್ಟುಹಬ್ಬದ ಶುಭಾಶಯಗಳು. ಇತ್ತೀಚಿನ ನಮ್ಮಿಬ್ಬರ ಭೇಟಿ ಬಹಳ ಅದ್ಭುತವಾಗಿತ್ತು. ನಿಮ್ಮನ್ನು ಶೀಘ್ರದಲ್ಲೇ ಮತ್ತೆ ಕಾಣಬಯಸುತ್ತೇನೆ ಪ್ರಿನ್ಸ್…’ ಎಂಬುದು ಸಚಿನ್ ತೆಂಡುಲ್ಕರ್ ಅವರ ಶುಭ ಹಾರೈಕೆಯಾಗಿತ್ತು.
ರಾಹುಲ್ ದ್ರಾವಿಡ್, ರಿಕಿ ಪಾಂಟಿಂಗ್, ಯುವರಾಜ್ ಸಿಂಗ್, ಕೆ.ಎಲ್. ರಾಹುಲ್, ಶಿಖರ್ ಧವನ್, ಹರ್ಭಜನ್ ಸಿಂಗ್ ಮೊದಲಾದವರೆಲ್ಲ ಕೆರಿಬಿಯನ್ ಕ್ರಿಕೆಟ್ ದೈತ್ಯನ ಬರ್ತ್ಡೇಗೆ ಶುಭಾಶಯ ಸಲ್ಲಿಸಿದ್ದಾರೆ. ಆರ್ಸಿಬಿ ಫ್ರಾಂಚೈಸಿಯೂ ಶುಭ ಹಾರೈಸಿದೆ.
“ಅಂಗಳದಲ್ಲಿ ಊಹಿಸಲೂ ಸಾಧ್ಯವಿಲ್ಲದ ದಾಖಲೆಗಳ ಸರದಾರ, ಬದುಕಿನಲ್ಲಿ ಮಾನವತೆಯ ಸಾಕಾರಮೂರ್ತಿ. ಹ್ಯಾಪ್ಪಿ ಬರ್ತ್ಡೇ ಸರ್ ಬ್ರಿಯಾನ್’ ಎಂದು ಯುವರಾಜ್ ಸಿಂಗ್ “ಪ್ರಿನ್ಸ್ ಆಫ್ ಟ್ರಿನಿಡಾಡ್’ಗೆ ಶುಭ ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ