ಚೀನಿಯರನ್ನು ಮುಂದೆಯೂ ಕಾಡಲಿದೆ ವೈರಸ್
Team Udayavani, May 19, 2020, 11:53 AM IST
ಬೀಜಿಂಗ್: ಬಹುಪಾಲು ಚೀನೀಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿರುವ ಕಾರಣ ಕೋವಿಡ್-19 ಸೋಂಕಿನ ಎರಡನೇ ಸುತ್ತಿನ ಸವಾಲನ್ನು ಚೀನ ಎದುರಿಸುತ್ತಿದೆ ಎಂದು ಉನ್ನತ ವೈದ್ಯಕೀಯ ಸಲಹೆಗಾರ ಡಾ| ಝಾಂಗ್ ನನ್ಶಾನ್ ಎಚ್ಚರಿಸಿದ್ದಾರೆ.
ಈ ಸಮಯದಲ್ಲಿ ಬಹುಪಾಲು ಚೀನೀಯರು ರೋಗ ನಿರೋಧಕ ಶಕ್ತಿಯ ಕೊರತೆಯನ್ನು ಎದುರಿಸುತ್ತಿರುವುದರಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜನರು ಕೋವಿಡ್ -19 ಸೋಂಕಿಗೆ ತುತ್ತಾಗಲಿದ್ದಾರೆ. ಇದು ಇಡೀ ಮಾನವ ಜಾನಂಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ವೈರಸ್.ಮುಂಬರುವ ದಿನಗಳಲ್ಲಿ ನಾವು ಇನ್ನೂ ದೊಡ್ಡ ಸವಾಲನ್ನು ಎದುರಿಸ ಬೇಕಾಗಬಹುದು ಎಂದಿದ್ದಾರೆ.