Covid-19 : ಎರಡು ತಿಂಗಳ ಬಳಿಕ ವಿಮಾನ ಯಾನ ಶುರು ! Photo Gallery
ಕೋವಿಡ್ ಹಿನ್ನೆಲೆಯಲ್ಲಿ ಎರಡು ತಿಂಗಳ ಬಳಿಕ ವಿಮಾನ ಯಾನ ಶುರುವಾಗಿದೆ. ಚೆನ್ನೈ, ಹೈದರಾಬಾದ್ ಏರ್ಪೋರ್ಟ್ಗಳಿಂದ ಸೀಮಿತವಾಗಿ ವಿಮಾನ ಸಂಚಾರ ನಡೆದಿದೆ. ಮುಂಬಯಿ, ದಿಲ್ಲಿ ಸೇರಿದಂತೆ ದೇಶದ ವಿವಿಧ ಏರ್ಪೋರ್ಟ್ಗಳಲ್ಲಿ ಟಿಕೆಟ್ ಪಡೆದುಕೊಂಡು ವಿಮಾನ ಏರಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಪ್ರಯಾಣ ರದ್ದಾಗಿರುವ ಬಗ್ಗೆ ಆಯಾ ವಿಮಾನಯಾನ ಸಂಸ್ಥೆಗಳು ಮಾಹಿತಿ ನೀಡಿದವು. ಇದರಿಂದಾಗಿ ಪ್ರಯಾಣಿಕರು ಕೆಂಡಾಮಂಡಲವಾದ ಘಟನೆಗಳೂ ನಡೆದವು. ಹಲವಾರು ಮಂದಿ ಟ್ವೀಟ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ನಿಲ್ದಾಣದ ಅಧಿಕಾರಿಗಳು, ಈ ಹಿಂದೆ ಸೇವೆ ಪುನಾರಂಭಕ್ಕೆ ಒಪ್ಪಿಕೊಂಡಿದ್ದ ಕೆಲ ರಾಜ್ಯಗಳು ಕಡೇ ಕ್ಷಣದಲ್ಲಿ ವಿಮಾನಗಳ ಪ್ರವೇಶಕ್ಕೆ ಅನುಮತಿ ನಿರಾಕರಿಸಿದ್ದರಿಂದ ಅನಿವಾರ್ಯವಾಗಿ ಸೇವೆ ರದ್ದು ಮಾಡಿದ್ದಾಗಿ ಮಾಹಿತಿ ನೀಡಿದರು.