ಹಾಸನ ಜಿಲ್ಲೆಯಲ್ಲಿ ಶೇ.22ರಷ್ಟು ಹೆಚ್ಚು ಮಳೆ

Team Udayavani, Jun 4, 2020, 7:30 AM IST

22percent

ಹಾಸನ: ಜಿಲ್ಲೆಯಲ್ಲಿ ಕಳೆದ ಮೇ ತಿಂಗಳಲ್ಲಿ ವಾಡಿಕೆಗಿಂತ ಶೇ.22ರಷ್ಟು ಹೆಚ್ಚು ಮಳೆ ದಾಖಲಾಗಿದೆ. ವಿವಿಧ ಬೆಳೆಗಳ ಬಿತ್ತನೆ ಚಟುವಟಿಕೆ ಆರಂಭವಾಗಿದ್ದು, ಶೇ.11. ರಷ್ಟು ಬಿತ್ತನೆಯಾಗಿದೆ.  ಮೇ ತಿಂಗಳಲ್ಲಿ ವಾಡಿಕೆ ಮಳೆ 106 ಮಿ.ಮೀ.  ಗಳಾಗಿದ್ದು,129 ಮಿ.ಮೀ. ಮಳೆ ಯಾಗಿದೆ. ಅರಕಲಗೂಡು ಹೊರತುಪಡಿಸಿ ಉಳಿದೆಲ್ಲಾ ತಾಲೂಕುಗಳಲ್ಲೂ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ಅರಕಲ ಗೂಡು ತಾಲೂಕು ಕಸಬಾ ಹೋಬಳಿಯಲ್ಲಿ ಶೇ.39ರಷ್ಟು ಮಳೆ  ಕೊರತೆಯಾಗಿದ್ದರೆ, ಕೊಣನೂರು ಹೋಬಳಿಯಲ್ಲಿ ಶೇ.6ರಷ್ಟು, ಮಲ್ಲಿಪಟ್ಟಣ ಹೋಬಳಿಯಲ್ಲಿ ಶೇ.38ರಷ್ಟು ಹಾಗೂ ರಾಮನಾಥಪುರ ಹೋಬಳಿಯಲ್ಲಿ ಶೇ.2ರಷ್ಟು ಮಳೆ ಕೊರತೆಯಾಗಿದೆ.

ಅರಸೀಕೆರೆ, ಹೊಳೆನರಸೀಪುರದಲ್ಲಿ ಹೆಚ್ಚು ಮಳೆ: ಅರಸೀಕೆರೆ ಮತ್ತು ಹೊಳೆನರಸೀಪುರ ತಾಲೂಕಿನಲ್ಲಿ ವಾಡಿಕೆಗಿಂತ ಕ್ರಮವಾಗಿ ಶೇ.5 ಮತ್ತು ಶೇ.3ರಷ್ಟು ಹೆಚ್ಚು ಮಳೆಯಾಗಿದೆ. ಅರಸೀಕೆರೆ ತಾಲೂಕಿನ ಕಸಬಾ ಹೋಬಳಿಯಲ್ಲಿ  ಶೇ.15ರಷ್ಟು, ಬಾಣಾವರ ಹೋಬಳಿಯಲ್ಲಿ ಶೇ.8ರಷ್ಟು ಹಾಗೂ ಜಾವಗಲ್‌ ಹೋಬಳಿಯಲ್ಲಿ ಶೇ.12ರಷ್ಟು  ಮಳೆ ಕೊರತೆಯಾಗಿದೆ.

ಹೊಳೆನರಸೀಪುರ ತಾಲೂಕಿನ ಹಳೆಕೋಟೆ ಹೋಬಳಿಯಲ್ಲಿ ಶೇ.  8ರಷ್ಟು ಕೊರತೆಯಾಗಿದ್ದರೆ, ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿಯಲ್ಲಿ ಶೇ.10ರಷ್ಟು ಮಳೆ ಕೊರತೆ ದಾಖಲಾಗಿದೆ. ಇನ್ನುಳಿದಂತೆ ಜಿಲ್ಲೆಯ ಎಲ್ಲ ಹೋಬಳಿಗಳಲ್ಲೂ ವಾಡಿಕೆಯಷ್ಟು ಮಳೆ ಸುರಿದಿದೆ.

ಮೆಕ್ಕೆ ಜೋಳ ಬಿತ್ತನೆ ಹೆಚ್ಚು: ಜಿಲ್ಲೆಯಲ್ಲಿ ಏಕದಳ ಧಾನ್ಯಗಳ ಬಿತ್ತನೆಯ ವಾರ್ಷಿಕ ಗುರಿ 1,87,750 ಹೆಕ್ಟೇರ್‌. ಅದರಲ್ಲಿ ಮೆಕ್ಕೆಜೋಳದ ಪ್ರಮಾಣ 78,000 ಹೆಕ್ಟೇರ್‌. ಇದುವರೆಗೆ 14,009 ಹೆಕ್ಟೇರ್‌ನಲ್ಲಿ ಮೆಕ್ಕೆ ಜೋಳ ಬಿತ್ತನೆಯಾಗಿದೆ.  ಏಕದಳ ಧಾನ್ಯಗಳ ಒಟ್ಟು ಬಿತ್ತನೆ ಪ್ರಮಾಣ 14,009 ಹೆಕ್ಟೇರ್‌. ಮೆಕ್ಕೆ ಜೋಳ ಹೊರತುಪಡಿಸಿ ಇನ್ನುಳಿದ ಏಕದಳ ಧಾನ್ಯಗಳ ಬಿತ್ತನೆ ಇನ್ನೂ ಆರಂಭವಾಗಿಲ್ಲ.

ವಾಣಿಜ್ಯ ಬೆಳೆಗಳ ಒಟ್ಟು ಗುರಿ 12,850 ಹೆಕ್ಟೇರ್‌. ಆ ಪೈಕಿ ಇದುವರೆಗೆ 4,420  ಹೆಕ್ಟೇರ್‌ ಬಿತ್ತನೆಯಾಗಿದೆ. ಆ ಪೈಕಿ ತಂಬಾಕು ಬೆಳೆಯ ಬಿತ್ತನೆ ಗುರಿಗೆ 4,375 ಹೆಕ್ಟೇರ್‌ಸಾಧನೆಯಾಗಿದೆ. ತಂಬಾಕು ಹೊರತು  ಪಡಿಸಿ ಉಳಿದ ವಾಣಿಜ್ಯ ಬೆಳೆಗಳ ಬಿತ್ತನೆ ಯಾಗಿರುವ ಪ್ರಮಾಣ 147 ಹೆಕ್ಟೇರ್‌ ಮಾತ್ರ. ಅದರಲ್ಲಿ ನೆಲಗಡಲೆ 145  ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ಜಿಲ್ಲೆಯಲ್ಲಿಈವರೆಗೆ ಆಶಾದಾಯಕ ಮಳೆ ಯಾಗಿದೆ. ಬಿತ್ತನೆ ಚಟುವಟಿಕೆಗಳು ಆರಂಭವಾಗಿದ್ದು, ರೈತರಿಗೆ ಅಗತ್ಯ ವಿರುವಷ್ಟು ಬಿತ್ತನೆ ಬೀಜ ಮತ್ತು ರಸ ಗೊಬ್ಬರದ ದಾಸ್ತಾನು ಮಾಡಲಾಗಿದೆ.
-ಮಧುಸೂದನ್‌, ಜಂಟಿ ಕೃಷಿ ನಿರ್ದೇಶಕ

* ಎನ್‌. ನಂಜುಂಡೇಗೌಡ

ಟಾಪ್ ನ್ಯೂಸ್

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

Dina Bhavishya

ಅನಿರೀಕ್ಷಿತ ಯಶಸ್ಸು..ಅನಿರೀಕ್ಷಿತ ಪ್ರಗತಿ… ಅನಿರೀಕ್ಷಿತ ಧನಪ್ರಾಪ್ತಿ

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

12-madikeri

Madikeri: ಅತ್ಯಾಚಾರಿಗೆ ಕಠಿಣ ಸಜೆ

ಲೋಕಸಭೆ ಮುಗಿಯಿತು, ಪರಿಷತ್‌ ಹಣಾಹಣಿ ಆರಂಭ

Election; ಲೋಕಸಭೆ ಮುಗಿಯಿತು, ಪರಿಷತ್‌ ಹಣಾಹಣಿ ಆರಂಭ

needs 400 seats to avoid Babri lock to Mandir: PM Modi

Loksabha; ಮಂದಿರಕ್ಕೆ ಬಾಬರಿ ಲಾಕ್‌ ಬೀಳದಿರಲು 400 ಸೀಟು ಬೇಕು: ಪ್ರಧಾನಿ ಮೋದಿ

Prajwal Revanna Case 25 ಸಾವಿರ ಪೆನ್‌ಡ್ರೈವ್‌, ಡಿಕೆಶಿ ರೂವಾರಿ: ಎಚ್‌ಡಿಕೆ

Prajwal Revanna Case 25 ಸಾವಿರ ಪೆನ್‌ಡ್ರೈವ್‌, ಡಿಕೆಶಿ ರೂವಾರಿ: ಎಚ್‌ಡಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KR Nagar ಶಾಸಕರ ಚಿತಾವಣೆ ಮೇರೆಗೆ ರೇವಣ್ಣ ವಿರುದ್ಧ ಪ್ರಕರಣ: ಜೆಡಿಎಸ್‌

KR Nagar ಶಾಸಕರ ಚಿತಾವಣೆ ಮೇರೆಗೆ ರೇವಣ್ಣ ವಿರುದ್ಧ ಪ್ರಕರಣ: ಜೆಡಿಎಸ್‌

6–strike

Holenarasipur: ಶಾಸಕ ಹೆಚ್.ಡಿ. ರೇವಣ್ಣ ಬಂಧನ ಹಿನ್ನೆಲೆ ಬಂದ್ ಗೆ ಕರೆ

Sakleshpur: ಮಲೆನಾಡಿಗರಿಗೆ ಕಾಡಾನೆ ಜತೆ ಚಿರತೆ ಭಯ

Sakleshpur: ಮಲೆನಾಡಿಗರಿಗೆ ಕಾಡಾನೆ ಜತೆ ಚಿರತೆ ಭಯ

HD Revanna ಫಾರ್ಮ್ ಹೌಸ್‌ನಲ್ಲಿ ಎಸ್‌ಐಟಿ ತಂಡ ಪರಿಶೀಲನೆ

HD Revanna ಫಾರ್ಮ್ ಹೌಸ್‌ನಲ್ಲಿ ಎಸ್‌ಐಟಿ ತಂಡ ಪರಿಶೀಲನೆ

Prajwal Revanna ಲೈಂಗಿಕ ದೌರ್ಜನ್ಯ ಪ್ರಕರಣ: ಪೊಲೀಸರ  ಕಾರ್ಯವೈಖರಿ ಬಗ್ಗೆ ವಕೀಲರ ಸಂಶಯ

Prajwal Revanna ಲೈಂಗಿಕ ದೌರ್ಜನ್ಯ ಪ್ರಕರಣ: ಪೊಲೀಸರ  ಕಾರ್ಯವೈಖರಿ ಬಗ್ಗೆ ವಕೀಲರ ಸಂಶಯ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

Dina Bhavishya

ಅನಿರೀಕ್ಷಿತ ಯಶಸ್ಸು..ಅನಿರೀಕ್ಷಿತ ಪ್ರಗತಿ… ಅನಿರೀಕ್ಷಿತ ಧನಪ್ರಾಪ್ತಿ

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

12-madikeri

Madikeri: ಅತ್ಯಾಚಾರಿಗೆ ಕಠಿಣ ಸಜೆ

ಲೋಕಸಭೆ ಮುಗಿಯಿತು, ಪರಿಷತ್‌ ಹಣಾಹಣಿ ಆರಂಭ

Election; ಲೋಕಸಭೆ ಮುಗಿಯಿತು, ಪರಿಷತ್‌ ಹಣಾಹಣಿ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.