ಮುಚ್ಚಳ ಮುಚ್ಚಿ ಫ್ಲಶ್ ಮಾಡಿ ; ಇಲ್ಲೂ ಅವಿತಿರುತ್ತೆ ಕಿಲ್ಲರ್ ವೈರಾಣು!
Team Udayavani, Jun 20, 2020, 12:08 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೀಜಿಂಗ್: ನೀವು ಶೌಚಾಲಯಕ್ಕೆ ಹೋದಾಗ ಕಮೋಡ್‌ನ ಮುಚ್ಚಳ ಮುಚ್ಚಿ ಫ್ಲಶ್ ಮಾಡಿ. ವೈರಾಣುಗಳು ಮಲದಲ್ಲೂ ಜೀವಿಸಬಹುದಾದ್ದರಿಂದ ಫ್ಲಶ್‌ನ ಗಾಳಿಯ ಮೂಲಕ ವೈರಾಣು ವ್ಯಕ್ತಿಯ ದೇಹವನ್ನು ಪ್ರವೇಶಿಸಬಹುದು!
ಚೀನದ ಯಾಂಗ್ಟೌ ವಿವಿಯ ತಜ್ಞರ ಸಂಶೋಧನಾ ವರದಿ ಈ ಮಾಹಿತಿ ಬಿಚ್ಚಿಟ್ಟಿದೆ. “ಕೊರೊನಾ ವೈರಸ್‌ಗಳು ಮನುಷ್ಯನ ಜೀರ್ಣಾಂಗವ್ಯೂಹದಲ್ಲಿ ಬದುಕುಳಿಯಬಲ್ಲವು. ದೇಹದ ತ್ಯಾಜ್ಯವನ್ನು ಹೊರಹಾಕುವುದರಿಂದ ಅವು ಟಾಯ್ಲೆಟ್‌ನಲ್ಲಿ ಆಶ್ರಯ ಪಡೆಯುವ ಸಾಧ್ಯತೆ ಇರುತ್ತದೆ’ ಎಂದು ವೈರಲಾಜಿಸ್ಟ್ ಜಿ ಕ್ಸಿಯಾಂಗ್ ವಾಂಗ್ ಅಭಿಪ್ರಾಯಪಟ್ಟಿದ್ದಾರೆ.
‘ಸೋಂಕಿತ ಬಳಸಿದ ಟಾಯ್ಲೆಟ್‌ಗೆ ಆರೋಗ್ಯವಂತ ವ್ಯಕ್ತಿ ಪ್ರವೇಶಿಸಿ ಫ್ಲಶ್ ಮಾಡಿದಾಗ ತ್ಯಾಜ್ಯದ ಹನಿಗಳು ದೇಹವನ್ನು ಸೇರುವ ಅಪಾಯವಿರುತ್ತದೆ. ಹೆಚ್ಚು ಜನರಿರುವ ಮನೆಗಳಲ್ಲಿ ಅಥವಾ ಸಾರ್ವಜನಿಕ ಶೌಚಾಲಯಗಳಲ್ಲಿ ಈ ರೀತಿಯ ಅವಘಡಗಳು ಸಂಭವಿಸಬಹುದು’ ಎಂದು ಎಚ್ಚರಿಸಿದ್ದಾರೆ. ಆದರೆ ಈ ಅಭಿಪ್ರಾಯವನ್ನು ಅಮೆರಿಕದ ಮೈಕ್ರೋ ಬಯಲಾಜಿಸ್ಟ್ ಚಾರ್ಲ್ಸ್ ಪಿ. ಗೆಬ್ರಾ ನಿರಾಕರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tulu Movie: ಕತಾರ್ ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್”
ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು: ಕೃತಜ್ಞತೆ, ಗೌರವ
Brazil Floods: ಪ್ರವಾಹಕ್ಕೆ ತತ್ತರಿಸಿದ ಬ್ರೆಜಿಲ್, ಸಾವಿನ ಸಂಖ್ಯೆ 90ಕ್ಕೆ ಏರಿಕೆ
Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್ ಪಡೆ
ಚಿಕಿತ್ಸೆ ವೆಚ್ಚ ಭರಿಸಲಾಗದೆ ಹೆಂಡತಿಯನ್ನೇ ಕೊಂದ!