ಕಲಬುರಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡುವೆ ಗೋಡೆ ಹಾರಿ ವಿದ್ಯಾರ್ಥಿಗಳಿಗೆ ಚೀಟಿ ಪೂರೈಕೆ
Team Udayavani, Jun 25, 2020, 2:00 PM IST
ಕಲಬುರಗಿ: ಕೋವಿಡ್ ಮಹಾಮಾರಿ ಆತಂಕದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದೆ. ಆದರೆ, ಪರೀಕ್ಷೆಗೆ ನಕಲು ಹಾವಳಿ ಮಾತ್ರ ತಪ್ಪಿಲ್ಲ. ನಗರದ ಹಳೆ ಜೇವರ್ಗಿ ರಸ್ತೆಯಲ್ಲಿ ಲೋಕೋಪಯೋಗಿ ವಸತಿ ಗೃಹದ ಸಮೀಪವಿರುವ ಸರ್ಕಾರಿ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಮೊದಲ ದಿನವೇ ನಕಲು ಚೀಟಿ ಪೂರೈಕೆ ಕಸರತ್ತು ನಡೆದಿದೆ. ಯುವಕರು ಪರೀಕ್ಷಾ ಕೇಂದ್ರದ ಗೋಡೆ ಹಾರಿ ರಾಜಾರೋಷವಾಗಿ ವಿದ್ಯಾರ್ಥಿಗಳಿಗೆ ನಕಲು ಚೀಟಿ ನೀಡುತ್ತಿದ್ದಾರೆ. ಹೊರಗಡೆ ಯಾವುದೇ ಪೊಲೀಸರಿಲ್ಲದ್ದನ್ನು ನೋಡಿ ಯುವಕರು ಗೋಡೆ ಹಾರಿ ಚೀಟಿ ಪೂರೈಸುತ್ತಿದ್ದಾರೆ.