ಮೋಸದ ಜಾಲಕ್ಕೆ ಬಲಿಯಾಗಿ 31.14 ಲಕ್ಷ ರೂಪಾಯಿಗಳನ್ನು ಕಳಕೊಂಡ ಶಿಕ್ಷಕಿ!


Team Udayavani, Jun 25, 2020, 8:28 PM IST

Cyber-Crime

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ರಾಣಿಬೆನ್ನೂರು (ಹಾವೇರಿ): ಸುಳ್ಳು ಕರೆ, ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರಿಗೆ ಎಷ್ಟೇ ಎಚ್ಚರಿಕೆಗಳನ್ನು ನೀಡಿದರೂ ಸಹ ಜನರು ಮಾತ್ರ ವಂಚಕರ ಮೋಸಕ್ಕೆ ಬಲಿಯಾಗಿ ಹಣ ಕಳೆದುಕೊಳ್ಳುವುದು ನಿಂತಿಲ್ಲ.

ಇದಕ್ಕೊಂದು ನಿದರ್ಶನವೆಂಬಂತೆ ನಗರದ ಶಿಕ್ಷಕಿಯೋರ್ವರು ಈ ಮೋಸದ ಜಾಲಕ್ಕೆ ಸಿಲುಕಿ ಬರೋಬರಿ 31.14 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.

ನಗರದ ನಿವಾಸಿ ತಾಲೂಕಿನ ಚಿಕ್ಕಮಾಗನೂರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಧಾ ಸುರೇಶ ಕಡೆಮನಿ ವಂಚನೆಗೊಳಗಾದವರು.

ಇವರ ಮೊಬೈಲ್‌ಗೆ 4,80,00,0000 ರೂ.ಗಳ ಬಹುಮಾನ ಬಂದಿದೆ ಎಂದು ಅಮೆರಿಕಾದಿಂದ ಕರೆ ಮಾಡಿದ್ದರು ಎನ್ನಲಾದ ಡಾ| ಥಾಮೋಸ್ ವಿಲಿಯಮ್ಸ್ ಮತ್ತು ಅಲೆಕ್ಸಾಂಡರ್ ಜೈನ್ ಎಂಬಿಬ್ಬರು ನಿಮಗೆ ವಾಟ್ಸ್ಯಾಪ್ ಗ್ಲೊಬಲ್ ಆವಾರ್ಡ್ ಬಂದಿದೆ ಎಂದು ಸಂದೇಶ ಕಳುಹಿಸಿದ್ದರು.

ಬಳಿಕ ಫೋನ್ ಮಾಡಿದ ವಂಚಕರ ಮಾತುಗಳನ್ನು ಈ ಶಿಕ್ಷಕಿ ನಂಬಿದ್ದಾರೆ. ಬಳಿಕ ಶಿಕ್ಷಕಿಯ ವೈಯಕ್ತಿಕ ಮಾಹಿತಿ ಪಡೆದುಕೊಂಡು ಆಕೆಗೆ ನಂಬಿಕೆ ಬರುವಂತೆ ಹಲವು ಬಾರಿ ಮೇಲ್‌ಗಳನ್ನು ಕಳಿಸಿ ಅವರ ಜೊತೆಯಲ್ಲಿ ಪೋನ್‌ನಲ್ಲಿ ಆಂಗ್ಲ ಭಾಷೆಯಲ್ಲಿ ವಂಚಕರು ಮಾತನಾಡಿದ್ದಾರೆ.

ಆ ಬಳಿಕ ಅಮೆರಿಕಾ ಡಾಲರನ್ನು ರೂಪಾಯಿಯಲ್ಲಿ ವಿನಿಮಯ ಮಾಡಿ ಖಾತೆ ಹಾಕಲು ನೀವು ಕೆಲವೊಂದು ಸರ್ವಿಸ್ ಚಾರ್ಜ್‌ಗಳನ್ನು ಕಟ್ಟಬೇಕು ಎಂದು ನಂಬಿಸಿ 37,14,600 ರೂಪಾಯಿಗಳನ್ನು ವಂಚಕರು ಶಿಕ್ಷಕಿಯಿಂದ ಕಟ್ಟಿಸಿಕೊಂಡಿದ್ದಾರೆ.

ವಂಚಕರ ಈ ಮೋಸ ತಡವಾಗಿ ಅರಿತುಕೊಂಡ ಶಿಕ್ಷಕಿ ಕಂಗಾಲಾಗಿ ಸೈಬರ್ ಕ್ರೈಂ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಟಾಪ್ ನ್ಯೂಸ್

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

1-modi

Varanasi; 25000 ಮಹಿಳೆಯರ ಜತೆ ಸ್ವಕ್ಷೇತ್ರದಲ್ಲಿ ಪಿಎಂ ಸಂವಾದ

ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

Mangaluru ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

MOdi (3)

Odisha ರಾಜ್ಯ ಸರಕಾರವು ಭ್ರಷ್ಟರ ಹಿಡಿತಕ್ಕೆ ಸಿಲುಕಿದೆ: ಪಿಎಂ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta

Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ: ಚಕ್ರವರ್ತಿ ಸ್ವಾಮೀಜಿ

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ: ಚಕ್ರವರ್ತಿ ಸ್ವಾಮೀಜಿ

ಅಬ್ಬಾ…ತರಕಾರಿ ಬಲು ದುಬಾರಿ..! ಗ್ರಾಹಕರ ಜೇಬಿಗೆ ಕತ್ತರಿ

ಅಬ್ಬಾ…ತರಕಾರಿ ಬಲು ದುಬಾರಿ..! ಗ್ರಾಹಕರ ಜೇಬಿಗೆ ಕತ್ತರಿ

ಬ್ಯಾಡಗಿ- ಮದುವೆ ಮೂಲ ಅರ್ಥ ಕಳೆದುಕೊಳ್ತಿದೆ: ಸ್ವಾಮೀಜಿ

ಬ್ಯಾಡಗಿ- ಮದುವೆ ಮೂಲ ಅರ್ಥ ಕಳೆದುಕೊಳ್ತಿದೆ: ಸ್ವಾಮೀಜಿ

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಖ:ದ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಃಖದ ನಡುವೆ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-fff

Geneva Open ಟೆನಿಸ್‌: ಸುಮಿತ್‌ಗೆ ಸೋಲು

police USA

China ಶಾಲೆಯಲ್ಲಿ ಚಾಕು ಇರಿತ: 5 ಮಂದಿಗೆ ಗಾಯ

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.