ರಾಜ್ಯದಲ್ಲಿ ಇಂದು ‘ಸೋಂಕು’ ಭಾನುವಾರ!; ಒಂದೇ ದಿನ ಪತ್ತೆಯಾಯ್ತು 1267 ಪ್ರಕರಣಗಳು

ಬೆಂಗಳೂರಿನಲ್ಲಿ 783 ; ದಕ್ಷಿಣ ಕನ್ನಡ 97, ಉಡುಪಿ 40 ಪ್ರಕರಣ ; ಬಳ್ಳಾರಿ 71 ಪಾಸಿಟಿವ್ ಪ್ರಕರಣ ದಾಖಲು

Team Udayavani, Jun 28, 2020, 8:21 PM IST

ರಾಜ್ಯದಲ್ಲಿ ಇಂದು ‘ಸೋಂಕು’ ಭಾನುವಾರ!; ಒಂದೇ ದಿನ ಪತ್ತೆಯಾಯ್ತು 1267 ಪ್ರಕರಣಗಳು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಬೆಂಗಳೂರು: ರಾಜ್ಯದಲ್ಲಿ ಇಂದು ಕೋವಿಡ್ 19 ಸೋಂಕು ಸ್ಪೋಟಗೊಂಡಿದೆ.

ಒಂದೇ ದಿನ ರಾಜ್ಯಾದ್ಯಂತ 1267 ಪ್ರಕರಣಗಳು ವರದಿಯಾಗಿದೆ.

ಮತ್ತು ಇಂದೂ ಸಹ ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರು ನಗರವೇ ಮುಂಚೂಣಿಯಲ್ಲಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನುಳಿದಂತೆ ದಕ್ಷಿಣ ಕನ್ನಡ, ಬಳ್ಳಾರಿ, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ.

ಇಂದು ರಾಜ್ಯದಲ್ಲಿ ಕೋವಿಡ್ 19 ಸೋಂಕಿಗೆ ಒಟ್ಟು 16 ಜನರು ಬಲಿಯಾಗಿದ್ದಾರೆ. ಇದರಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ 4 ಸಾವು ಸಂಭವಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಕೋವಿಡ್ 19 ಸೋಂಕಿತರು ಸಾವನ್ನಪ್ಪಿದ್ದಾರೆ. ಬಾಗಲಕೋಟೆಯಲ್ಲಿ ಹಾಗೂ ತುಮಕೂರು ಜಿಲ್ಲೆಗಳಲ್ಲಿ ತಲಾ 02 ಸಾವು ಸಂಭವಿಸಿದ್ದು, ಇನ್ನುಳಿದಂತೆ, ಧಾರವಾಡ, ಹಾಸನ, ಮೈಸೂರು, ಬಳ್ಳಾರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ತಲಾ 01 ಸಾವು ಸಂಭವಿಸಿದೆ.

ಇದನ್ನೂ ಓದಿ: ಉಡುಪಿ: ಹೊಟೇಲ್ ಕುಕ್ ಗೆ ಕೋವಿಡ್ ಸೋಂಕು ; ಆತಂಕದಲ್ಲಿ ಗ್ರಾಹಕರು!

ಈ ಮೂಲಕ ರಾಜ್ಯದಲ್ಲಿ ಇಂದಿನವರೆಗೆ 13190 ಕೋವಿಡ್ 19 ಸೋಂಕು ಪ್ರಕರಣಗಳು ದಾಖಲುಗೊಂಡಿದೆ. ಮತ್ತು ಇವರಲ್ಲಿ 7507 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೂ 5472 ಸಕ್ರಿಯ ಪ್ರಕರಣಗಳಿವೆ.

ರಾಜ್ಯದಲ್ಲಿ ಒಟ್ಟಾರೆಯಾಗಿ ಇದುವರೆಗೆ 207 ಜನ ಕೋವಿಡ್ 19 ಸೋಂಕಿನ ಕಾರಣದಿಂದ ಮೃತಪಟ್ಟಿದ್ದಾರೆ. ಹಾಗೂ 4 ಜನ ಕೋವಿಡ್ 19 ಸೋಂಕಿತರು ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ. 243 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಇಂದೂ ಸಹ ಬೆಂಗಳೂರು ನಗರ ಜಿಲ್ಲೆಯಲ್ಲೇ ಅತೀ ಹೆಚ್ಚಿನ ಕೋವಿಡ್ 19 ಸೋಂಕಿತರು ಪತ್ತೆಯಾಗಿದ್ದಾರೆ. ಇಲ್ಲಿ ಇಂದು 783 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ದಕ್ಷಿಣ ಕನ್ನಡ – 97, ಬಳ್ಳಾರಿ – 71, ಉಡುಪಿ – 40, ಕಲಬುರಗಿ – 34, ಹಾಸನ – 31, ಗದಗ – 30, ಬೆಂಗಳೂರು ಗ್ರಾಮಾಂತರ – 27, ಧಾರವಾಡ – 18, ಮೈಸೂರು – 18, ಬಾಗಲಕೋಟೆ – 17, ಉತ್ತರ ಕನ್ನಡ – 14, ಹಾವೇರಿ – 12 ಮತ್ತು ಕೋಲಾರ – 11 ಇವು ಇಂದು ಎರಡಂಕೆಯ ಕೋವಿಡ್ ಸೋಂಕಿತರು ಪತ್ತೆಯಾಗಿರುವ ಜಿಲ್ಲೆಗಳಾಗಿವೆ.

ರಾಜ್ಯದಲ್ಲಿ ಅತೀ ಹೆಚ್ಚಿನ ಕೋವಿಡ್ ಸೋಂಕಿತರೂ ಸಹ ಬೆಂಗಳೂರು ನಗರ ಜಿಲ್ಲೆಯಲ್ಲಿದ್ದಾರೆ. ಇಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 3314ಕ್ಕೆ ಏರಿಕೆಯಾಗಿದ್ದು, 533 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ ಹಾಗೂ 2692 ಸಕ್ರಿಯ ಪ್ರಕರಣಗಳಿವೆ. ಇಲ್ಲಿ ಕೋವಿಡ್ ಸಂಬಂಧಿತ 88 ಸಾವುಗಳು ಸಂಭವಿಸಿದೆ.

ರಾಜ್ಯಕ್ಕೆ ಇಂದು ಕೆನಡಾದಿಂದ ಎರಡು ವಿಮಾನಗಳು ಬಂದಿಳಿದಿದ್ದು ಇವೆರಡರಲ್ಲಿ ಕ್ರಮವಾಗಿ 107 ಮತ್ತು 106 ಪ್ರಯಾಣಿಕರು ಆಗಮಿಸಿದ್ದಾರೆ. ಶ್ರೀಲಂಕಾದಿಂದ ಬಂದಿದ್ದ ವಿನಾನದಲ್ಲಿ 56 ಪ್ರಯಾಣಿಕರು ಆಗಮಿಸಿದ್ದಾರೆ ಹಾಗೂ ಸ್ಯಾನ್ ಫ್ರ್ಯಾನ್ಸಿಸ್ಕೋದಿಂದ ಬಂದ ವಿಮಾನದಲ್ಲಿ 96 ಪ್ರಯಾಣಿಕರು ಬಂದಿದ್ದು ಒಟ್ಟು 365 ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲಾಗಿದೆ. ಈ ಮೂಲಕ ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಇದುವರೆಗೆ ಒಟ್ಟಾರೆ 152240 ಪ್ರಯಾಣಿಕರನ್ನು ತಪಾಸಣೆಗೊಳಿಸಲಾಗಿದೆ. ಇಂದು ಒಂದೇ ದಿನ 13835 ಕೋವಿಡ್ 19 ಸಂಬಂಧಿತ ತಪಾಸಣೆಯನ್ನು ನಡೆಸಲಾಗಿದೆ.

ಟಾಪ್ ನ್ಯೂಸ್

Siddaramaiah ಚುನಾವಣೆ ಫ‌ಲಿತಾಂಶದ ಬಳಿಕ ಸಂಪುಟ ಪುನಾರಚನೆ ಇಲ್ಲ

Siddaramaiah ಚುನಾವಣೆ ಫ‌ಲಿತಾಂಶದ ಬಳಿಕ ಸಂಪುಟ ಪುನಾರಚನೆ ಇಲ್ಲ

D. K. Shivakumar ವರ್ಷದ ಆಡಳಿತ ತೃಪ್ತಿ ತಂದಿದೆ

D. K. Shivakumar ವರ್ಷದ ಆಡಳಿತ ತೃಪ್ತಿ ತಂದಿದೆ

bjp-jCongress ಅಭಿವೃದ್ಧಿ ಶೂನ್ಯ ಸರಕಾರ: ಬಿಜೆಪಿ ಕಿಡಿ

Congress ಅಭಿವೃದ್ಧಿ ಶೂನ್ಯ ಸರಕಾರ: ಬಿಜೆಪಿ ಕಿಡಿ

Karnataka Govt. ಗ್ಯಾರಂಟಿ ಬಿಟ್ಟರೆ ಬೇರೇನಿದೆ ಸಾಧನೆ: ಎಚ್‌ಡಿಕೆ ಪ್ರಶ್ನೆ

Karnataka Govt. ಗ್ಯಾರಂಟಿ ಬಿಟ್ಟರೆ ಬೇರೇನಿದೆ ಸಾಧನೆ: ಎಚ್‌ಡಿಕೆ ಪ್ರಶ್ನೆ

Raghupati Bhat ಪದವೀಧರರ ಅಗತ್ಯವನ್ನು ಪ್ರಾಮಾಣಿಕವಾಗಿ ಪೂರೈಸುವೆ

Raghupati Bhat ಪದವೀಧರರ ಅಗತ್ಯವನ್ನು ಪ್ರಾಮಾಣಿಕವಾಗಿ ಪೂರೈಸುವೆ

SSLC ಪರೀಕ್ಷೆ-2: ನೋಂದಣಿ ದಿನಾಂಕ ವಿಸ್ತರಣೆ

SSLC ಪರೀಕ್ಷೆ-2: ನೋಂದಣಿ ದಿನಾಂಕ ವಿಸ್ತರಣೆ

1-qwewe

Star Air ;ತಿರುಪತಿಯಿಂದ ಬೆಳಗಾವಿಗೆ ವಿಮಾನ ರದ್ದು: ಪ್ರಯಾಣಿಕರ ಪರದಾಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddaramaiah ಚುನಾವಣೆ ಫ‌ಲಿತಾಂಶದ ಬಳಿಕ ಸಂಪುಟ ಪುನಾರಚನೆ ಇಲ್ಲ

Siddaramaiah ಚುನಾವಣೆ ಫ‌ಲಿತಾಂಶದ ಬಳಿಕ ಸಂಪುಟ ಪುನಾರಚನೆ ಇಲ್ಲ

D. K. Shivakumar ವರ್ಷದ ಆಡಳಿತ ತೃಪ್ತಿ ತಂದಿದೆ

D. K. Shivakumar ವರ್ಷದ ಆಡಳಿತ ತೃಪ್ತಿ ತಂದಿದೆ

bjp-jCongress ಅಭಿವೃದ್ಧಿ ಶೂನ್ಯ ಸರಕಾರ: ಬಿಜೆಪಿ ಕಿಡಿ

Congress ಅಭಿವೃದ್ಧಿ ಶೂನ್ಯ ಸರಕಾರ: ಬಿಜೆಪಿ ಕಿಡಿ

Karnataka Govt. ಗ್ಯಾರಂಟಿ ಬಿಟ್ಟರೆ ಬೇರೇನಿದೆ ಸಾಧನೆ: ಎಚ್‌ಡಿಕೆ ಪ್ರಶ್ನೆ

Karnataka Govt. ಗ್ಯಾರಂಟಿ ಬಿಟ್ಟರೆ ಬೇರೇನಿದೆ ಸಾಧನೆ: ಎಚ್‌ಡಿಕೆ ಪ್ರಶ್ನೆ

Raghupati Bhat ಪದವೀಧರರ ಅಗತ್ಯವನ್ನು ಪ್ರಾಮಾಣಿಕವಾಗಿ ಪೂರೈಸುವೆ

Raghupati Bhat ಪದವೀಧರರ ಅಗತ್ಯವನ್ನು ಪ್ರಾಮಾಣಿಕವಾಗಿ ಪೂರೈಸುವೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-weqwewq

Para Athletics: ದೀಪ್ತಿ ಜೀವಂಜಿ ವಿಶ್ವದಾಖಲೆ

1-nnn

World ಬೆಂಚ್‌ಪ್ರಸ್‌ ಸ್ಪರ್ಧೆ : ಸತೀಶ್‌ ಕುಮಾರ್‌ ಕುದ್ರೋಳಿ ಕೋಚ್‌

Siddaramaiah ಚುನಾವಣೆ ಫ‌ಲಿತಾಂಶದ ಬಳಿಕ ಸಂಪುಟ ಪುನಾರಚನೆ ಇಲ್ಲ

Siddaramaiah ಚುನಾವಣೆ ಫ‌ಲಿತಾಂಶದ ಬಳಿಕ ಸಂಪುಟ ಪುನಾರಚನೆ ಇಲ್ಲ

D. K. Shivakumar ವರ್ಷದ ಆಡಳಿತ ತೃಪ್ತಿ ತಂದಿದೆ

D. K. Shivakumar ವರ್ಷದ ಆಡಳಿತ ತೃಪ್ತಿ ತಂದಿದೆ

bjp-jCongress ಅಭಿವೃದ್ಧಿ ಶೂನ್ಯ ಸರಕಾರ: ಬಿಜೆಪಿ ಕಿಡಿ

Congress ಅಭಿವೃದ್ಧಿ ಶೂನ್ಯ ಸರಕಾರ: ಬಿಜೆಪಿ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.