ಪಾಕಿಸ್ತಾನಕ್ಕೆ ಅಮೆರಿಕದಿಂದ 100 ವೆಂಟಿಲೇಟರ್ಗಳ ರವಾನೆ
Team Udayavani, Jul 3, 2020, 9:07 PM IST
ಇಸ್ಲಾಮಾಬಾದ್: ಕೋವಿಡ್ ವಿರುದ್ಧ ಪಾಕಿಸ್ತಾನದ ಹೋರಾಟಕ್ಕೆ ಅಮೆರಿಕ ನೆರವು ನೀಡಿದೆ. ಪಾಕಿಸ್ತಾನಕ್ಕೆ ಅಮೆರಿಕ 100 ವೆಂಟಿಲೇಟರ್ಗಳನ್ನು ನೀಡಿದೆ.
ಈ ಕುರಿತು ಪಾಕಿಸ್ತಾನದ ಅಮೆರಿಕ ರಾಯಭಾರ ಕಚೇರಿ ಪ್ರಕಟಣೆ ಹೊರಡಿಸಿದೆ.
ಯುಎಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವೆಲಪ್ಮೆಂಟ್(ಯುಎಸ್ಎಐಡಿ) ಮೂಲಕ ಟ್ರಂಪ್ ಆಡಳಿತ ಹೊಸದಾಗಿ ತಯಾರಿಸಲಾದ 100 ವೆಂಟಿಲೇಟರ್ಗಳನ್ನು ಪಾಕಿಸ್ತಾನಕ್ಕೆ ರವಾನಿಸಿದೆ.
ವೆಂಟಿಲೇಟರ್ಗಳು ಜು.2ರಂದು ಕರಾಚಿಗೆ ತಲುಪಿದವು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಕೋವಿಡ್ ಸೋಂಕು ತಡೆಗಟ್ಟುವಲ್ಲಿ ಅಮೆರಿಕ-ಪಾಕಿಸ್ತಾನ ಸಹಯೋಗ ಮುಂದುವರೆಯಲಿದೆ.
ಅಮೆರಿಕ ಪಾಕಿಸ್ತಾನಕ್ಕೆ ಪ್ರಯೋಗಾಲಯ ಮತ್ತಿತರ ಸೌಲಭ್ಯಗಳನ್ನೂ ಮುಂದಿನ ದಿನಗಳಲ್ಲಿ ನೀಡಲಿದೆ ಎಂದು ರಾಯಭಾರ ಕಚೇರಿ ಹೇಳಿದೆ.