Ullala: ತಾಂತ್ರಿಕ ದೋಷದಿಂದ ಸಮುದ್ರದಲ್ಲಿ ಸಿಲುಕಿದ ಮೀನುಗಾರಿಕಾ ಬೋಟಿನ ರಕ್ಷಣಾ ಕಾರ್ಯ
Team Udayavani, Jul 13, 2020, 10:47 AM IST
ಉಳ್ಳಾಲ: ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಒಂದು ಹಿಂದೆ ಬರುವಾಗ ತಾಂತ್ರಿಕ ದೋಷ ಉಂಟಾಗಿ ಸಮಸ್ಯೆಗೆ ಸಿಲುಕಿದ ಘಟನೆ ಇಲ್ಲಿ ಅಳಿವೆಬಾಗಿಲು ಸಮುದ್ರ ತೀರದಲ್ಲಿ ನಡೆದಿದೆ.ಇನ್ನೊಂದು ಬೋಟ್ ನಲ್ಲಿ ಹೋಗಿ ಬೋಟ್ ರಿಪೇರಿ ಮಾಡಿ ದಡಕ್ಕೆ ತರಲಾಗಿದೆ. ಉಳ್ಳಾಲ ಕೋಡಿ ಮೂಲದವರಿಗೆ ಸೇರಿದ ಈ ಬೋಟ್ ಎರಡು ದಿನಗಳ ಹಿಂದೆ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಹಿಂದೆ ಬರುವ ಸಮಯದಲ್ಲಿ ಇಂಜಿನ್ ಸಮಸ್ಯೆ ಎದುರಾಗಿದೆ. ಕೂಡಲೇ ಕರಾವಳಿ ರಕ್ಷಣಾ ಪಡೆಗೆ ಮಾಹಿತಿ ಪಡೆಗೆ ನೀಡಲಾಗಿತ್ತು.