ಮರೆಯಾಗುತ್ತಿರುವ ಆಟದ ಪ್ರಕ್ರಿಯೆ


Team Udayavani, Jul 26, 2020, 12:02 PM IST

edition-tdy-2

ಸಾಂದರ್ಭಿಕ ಚಿತ್ರ

ಮಗುವಿಗೆ ಹರ್ಷ ಉಂಟುಮಾಡಬಹುದಾದ ಸ್ವಯಂಪ್ರೇರಿತ ಚಟುವಟಿಕೆಗಳನ್ನು ಆಟ ಎಂಬುದಾಗಿ ಕರೆಯಬಹುದು. ಅವಕಾಶ ಒದಗಿಬಂದಾಗಲೆಲ್ಲ ಮಗು ಆಟವಾಡಲು ಬಯಸಬಹುದು. ಆಟವಾಡುವುದು ಮಗುವಿನ ಮನಸ್ಸಿನ ಕಿಟಕಿಯನ್ನು ತೆರೆಯುತ್ತದೆ ಎಂದು ಭಾವಿಸಲಾಗಿದೆ. ಆಟಗಳನ್ನು ಎರಡು ವಿಭಾಗಗಳಾಗಿ ವರ್ಗೀಕರಿಸಬಹುದು – ವ್ಯವಸ್ಥಿತ ಮತ್ತು ಅವ್ಯವಸ್ಥಿತ ಆಟಗಳು. ವ್ಯವಸ್ಥಿತ ಆಟವು ಸಾಮಾನ್ಯವಾಗಿ ಹಿರಿಯರಿಂದ ನೀಡಲ್ಪಟ್ಟದ್ದಾಗಿರುತ್ತದೆ ಹಾಗೂ ನಿರ್ದಿಷ್ಟ ಫ‌ಲಿತಾಂಶ ಮತ್ತು ನಿಯಮಗಳನ್ನು ಹೊಂದಿರುತ್ತದೆ (ಉದಾಹರಣೆಗೆ, ಬೋರ್ಡ್‌ ಗೇಮ್‌ಗಳು, ಕ್ರಿಕೆಟ್‌, ಫ‌ುಟ್‌ಬಾಲ್‌ ಇತ್ಯಾದಿ). ಇವು ಸಕ್ರಿಯ ಆಲಿಸುವಿಕೆ ಮತ್ತು ಗುರಿ ಆಧರಿತ ಸಮಸ್ಯಾ ಪರಿಹಾರ ಕೌಶಲ ಅಭಿವೃದ್ಧಿಗೆ ಸಹಾಯಕವಾಗಿವೆ. ಇನ್ನೊಂದೆಡೆ, ಅವ್ಯವಸ್ಥಿತ ಆಟಗಳು ಮಗುವೇ ಸ್ವತಃ ನೇತೃತ್ವ ವಹಿಸಿ, ತನ್ನದೇ ಪರಿಸರದಲ್ಲಿ ಆಡುವ ಆಟಗಳಾಗಿವೆ (ಮರಳಿನಲ್ಲಿ ಆಟ, ಬ್ಲಾಕ್‌ ಗಳೊಂದಿಗೆ ಆಟ, ಖಾಲಿ ಹಾಳೆಯಲ್ಲಿ ಚಿತ್ರಗಳನ್ನು ಬಿಡಿಸುವುದು ಇತ್ಯಾದಿ). ಈ ಆಟಗಳು ಕಲ್ಪನೆ, ಸಹಾನುಭೂತಿ, ಗ್ರಹಣಾತ್ಮಕ ಮತ್ತು ಸಂವಹನಾತ್ಮಕ ಕೌಶಲಗಳ ಅಭಿವೃದ್ಧಿಗೆ ನೆರವಾಗುತ್ತವೆ ಎನ್ನಲಾಗಿದೆ.

ಆಟಗಳನ್ನು ಆಡುವುದರಿಂದ ಹೊಸ ನರಜಾಲ ಬೆಳವಣಿಗೆಗೊಂಡು ಗ್ರಹಣಾತ್ಮಕ ಕೌಶಲಗಳು ಅಭಿವೃದ್ಧಿಗೆ ಸಹಾಯವಾಗುತ್ತದೆ. ಅಭಿಪ್ರಾಯ ಹಂಚಿಕೊಳ್ಳುವುದು, ಚರ್ಚೆ, ಬಿಕ್ಕಟ್ಟು, ಭಿನ್ನಮತಗಳನ್ನು ಪರಿಹರಿಸಿಕೊಳ್ಳುವುದು ಮತ್ತು ಸ್ವಯಂ ಪ್ರತಿಪಾದನೆಯನ್ನು ಒಳಗೊಂಡ ಗುಂಪು ಸಂವಾದ ಸಾಮರ್ಥ್ಯವು ಗೆಳೆಯ ಗೆಳತಿಯರ ಜತೆಗೆ ಗುಂಪುಗೂಡಿ ಆಟವಾಡುವುದರಿಂದ ವೃದ್ಧಿಸುತ್ತದೆ. ವಯಸ್ಕರಾದಾಗ ಅತ್ಯಂತ ಅಗತ್ಯವಾಗಿ ಬೇಕಾದ ಸೃಜನಶೀಲತೆ ಮತ್ತು ಕಲ್ಪನೆಯ ಶಕ್ತಿಗಳು ಬೆಳೆಯುವುದಕ್ಕೆ ಆಟವಾಡುವುದು ಸಮರ್ಪಕ ವಾತಾವರಣವನ್ನು ಒದಗಿಸಿಕೊಡುತ್ತದೆ.

ಆಟವಾಡುವುದರ ಬೆಳವಣಿಗೆ ಮತ್ತು ಭಾಷೆಯ ಬೆಳವಣಿಗೆ ಒಂದಕ್ಕೊಂದು ಹೋಲಿಸಬಹುದಾದದ್ದು ಮತ್ತು ಇವುಗಳಲ್ಲಿ ಒಂದರ ಬೆಳವಣಿಗೆಯು ಇನ್ನೊಂದರ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ ಎಂಬುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ. ಉದಾಹರಣೆಗೆ, ಮಗುವೊಂದು ಬಾಟಲಿಯಲ್ಲಿ ನೀರು ತುಂಬಿಸಿ ಗೊಂಬೆಗೆ ಹಾಲು ಕುಡಿಸುವಂತೆ ಅಭಿನಯಿಸುವಾಗ ಸಮಾನಾಂತರವಾಗಿ ಪದಗಳನ್ನು ಜೋಡಿಸಿ ಮಾತನಾಡಲು ಕಲಿಯುವ ಪ್ರಕ್ರಿಯೆಯೂ ಸಂಭವಿಸುತ್ತದೆ.

ಆಟದ ಬಯಲಿನ ಸ್ಥಳಾಂತರ ಮತ್ತು ಸ್ಥಿತ್ಯಂತರ’ :  ಆದರೆ ಇತ್ತೀಚೆಗಿನ ದಶಕಗಳಲ್ಲಿ ಮಗುವಿನ ಆಟವಾಡುವ “ಆಟದ ಬಯಲು’ ಸತತವಾಗಿ ಸ್ಥಳಾಂತರ ಮತ್ತು ಸ್ಥಿತ್ಯಂತರಗೊಳ್ಳುತ್ತ ಬಂದಿದೆ. ಹಿಂದೆ ಹಿತ್ತಿಲಿನಲ್ಲಿ ಆಟವಾಡುತ್ತಿದ್ದರೆ ಈಗ ಮನೆಯೊಳಕ್ಕೆ, ಹಿಂದೆ ಖಾಲಿ ಗದ್ದೆಯೋ ಬಯಲಿನಲ್ಲಿಯೋ ಆಟವಾಡುತ್ತಿದ್ದರೆ ಈಗ ನಿರ್ದಿಷ್ಟ ಆಟದ ಪ್ರದೇಶಗಳಾದ ಪಾರ್ಕ್‌, ಒಳಾಂಗಣ ಕ್ರೀಡಾಂಗಣಗಳಿಗೆ ಸ್ಥಳಾಂತರವಾಗಿದೆ. ಈ ಸ್ಥಳಾಂತರವು ಆಟವಾಡುವ ಸ್ಥಳದಲ್ಲಿ ಮಾತ್ರ ಆಗಿರುವುದಲ್ಲ; ಹೆತ್ತವರು ಮಕ್ಕಳನ್ನು ಪ್ರೋತ್ಸಾಹಿಸುವ ಆಟಗಳಲ್ಲೂ ಆಗಿದೆ. ಇಂದಿನ ಹೆತ್ತವರು ತಮ್ಮ ಮಕ್ಕಳು ಆಟವಾಡುತ್ತಲೂ ಏನೋ ಒಂದನ್ನು ಕಲಿಯಬೇಕೆಂದು ಬಯಸುತ್ತಾರೆ; ಹೀಗಾಗಿ ಹೆಚ್ಚು ವ್ಯವಸ್ಥಿತ ಆಟಗಳನ್ನು ಮತ್ತು ಕಲಿಕೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತಮ್ಮ ಮಕ್ಕಳು ತೊಡಗಿಕೊಳ್ಳಬೇಕು ಎಂಬುದಾಗಿ ಬಯಸುತ್ತಾರೆ.

ಮಕ್ಕಳು ಅವರ ಪೂರ್ಣ ಸಾಮರ್ಥ್ಯಕ್ಕೆ ಸರಿಯಾಗಿ ಬೆಳವಣಿಗೆ ಕಾಣುವ ಯಾವುದೇ ಅವಕಾಶವನ್ನು ತಪ್ಪಿಸಿಕೊಳ್ಳಬಾರದು ಎಂಬುದಾಗಿ ಹೆತ್ತವರ ಮೇಲಿರುವ ಸಾಮಾಜಿಕ ಒತ್ತಡವೇ ಇದಕ್ಕೆ ಕಾರಣವಾಗಿರುತ್ತದೆ. ಅವ್ಯವಸ್ಥಿತ ಆಟಗಳನ್ನು ಆಡುವುದಕ್ಕೆ ಅವಕಾಶವನ್ನು ನಿರಾಕರಿಸುವ ಮೂಲಕ ತಾವು ತಮ್ಮ ಮಕ್ಕಳು ಅನುಕಂಪ, ಸಹಾನುಭೂತಿ, ಸೃಜನಶೀಲ ಆಲೋಚನಾ ಕ್ರಮ, ಕಾರ್ಯಕಾರಣ ಆಲೋಚನ ಸಾಮರ್ಥ್ಯ, ಸಾಮಾಜಿಕ ಭಾವನಾತ್ಮಕ ಅಭಿವ್ಯಕ್ತಿಯ ಸರಿ-ತಪ್ಪುಗಳು, ಗ್ರಹಣಾತ್ಮಕ ಮತ್ತು ಸಂವಹನಾತ್ಮಕ ಕೌಶಲಗಳನ್ನು ಕಲಿಯುವ ಅವಕಾಶವನ್ನು ನಿರಾಕರಿಸುತ್ತಿದ್ದೇವೆ ಎಂಬುದನ್ನು ಹೆತ್ತವರು ಅರಿತುಕೊಳ್ಳುವುದೇ ಇಲ್ಲ.

ಮಕ್ಕಳು ಹೊರಾಂಗಣ ಆಟಗಳನ್ನು ಆಡುವುದು ಕಡಿಮೆಯಾಗಲು ಇನ್ನೊಂದು ಕಾರಣ ಎಂದರೆ ತಂತ್ರಜ್ಞಾನದಲ್ಲಿ ಆಗಿರುವ ಅಭಿವೃದ್ಧಿ. ಇದರಿಂದ ಮಕ್ಕಳು ಆಲಸಿ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದು ಹೆಚ್ಚುತ್ತಿದೆ. ಮಕ್ಕಳು ವೀಡಿಯೋ ಗೇಮ್‌, ಮೊಬೈಲ್‌ ಗೇಮ್‌, ಎಕ್ಸ್‌ಬಾಕ್ಸ್‌, ಟ್ಯಾಬ್ಲೆಟ್‌ಗಳಲ್ಲಿ ಮುಳುಗುವುದರಿಂದ ಮಲಗಿಕೊಂಡೋ ಕುಳಿತುಕೊಂಡೋ ಇರುವುದು ಹೆಚ್ಚುತ್ತಿದೆ. ಇದು ಮಕ್ಕಳ ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರಿ ಅಧಿಕ ದೇಹತೂಕ, ಬೊಜ್ಜಿಗೆ ಕಾರಣವಾಗುತ್ತಿದೆ. ಇಂದಿನ ಕಾಲಘಟ್ಟದ ಮಕ್ಕಳ ಜೀವನದಿಂದ ಈ ಗ್ಯಾಜೆಟ್‌ ಗಳನ್ನು ದೂರ ಮಾಡುವುದು ಅಸಾಧ್ಯ ಎಂಬಷ್ಟರ ಮಟ್ಟಿಗೆ ಈ ಅವಲಂಬನೆ ಬೆಳೆದಿದೆ.

ಪರಿಹಾರವೇನು? : ವ್ಯವಸ್ಥಿತ ಮತ್ತು ಅವ್ಯವಸ್ಥಿತ ಆಟಗಳ ನಡುವೆ ಸಮತೋಲನ ಕಾಪಾಡುವುದೇ ಇದಕ್ಕಿರುವ ಪರಿಹಾರವಾಗಿದೆ. ವೀಡಿಯೋ ಗೇಮ್‌, ಮೊಬೈಲ್‌ ಫೋನ್‌ ಗೇಮ್‌ ಗಳ ಜತೆಗೆ ನಮ್ಮ ಮಕ್ಕಳು ದೈಹಿಕವಾಗಿ ಶ್ರಮ ಪಡುವ ಮತ್ತು ಸಕ್ರಿಯವಾಗಿ ತೊಡಗಿಕೊಳ್ಳುವ ಆಟಗಳನ್ನು ಆಡುವಂತೆ ನಾವು ಎಚ್ಚರಿಕೆ ವಹಿಸಿ ಅವಕಾಶಗಳನ್ನು ಒದಗಿಸಬೇಕಾಗಿದೆ. ಮಗುವಿನ ಸಂವನಾತ್ಮಕ, ಗ್ರಹಣಾತ್ಮಕ ಮತ್ತುಸಾಮಾಜಿಕ- ಭಾವನಾತ್ಮಕ ಬೆಳವಣಿಗೆಯಲ್ಲಿ ಆಟವಾಡುವುದು ನಿರ್ಣಾಯಕ ಪಾತ್ರ ಹೊಂದಿದೆ ಎಂಬುದನ್ನು ನಾವು ನೆನಪಿಡಬೇಕಾಗಿದೆ.

ಸಕ್ರಿಯ ಆಟಗಳಿಂದ ದೂರವಿರುವುದು ಸ್ವಯಂಲೀನತೆ (ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್‌ಗಳು), ಏಕಾಗ್ರತೆಯ ಕೊರತೆಯ ಅತಿ ಚಟುವಟಿಕೆ ಸಮಸ್ಯೆ (ಎಡಿಎಚ್‌ಡಿ), ಬೌದ್ಧಿಕ ಅಸಾಮರ್ಥ್ಯಗಳು ಮತ್ತು ಇನ್ನಿತರ ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆಗಳ ಪೂರ್ವಸೂಚನೆಯೂ ಆಗಿರಬಹುದಾಗಿದೆ. ನಿಮ್ಮ ಮಗು ಈ ಕೆಳಕಂಡ ಯಾವುದೇ ಚಿಹ್ನೆಗಳನ್ನು ಹೊಂದಿದ್ದರೆ ಆದಷ್ಟು ಬೇಗನೆ ಹತ್ತಿರದ ಸ್ಪೀಚ್‌ ಲ್ಯಾಂಗ್ವೇಜ್‌ ಥೆರಪಿಸ್ಟ್‌ರನ್ನು ಸಂಪರ್ಕಿಸಿ.

  1. ತನ್ನ ವಯಸ್ಸಿಗೆ ತಕ್ಕಂತೆ ಮಾತನಾಡುವಲ್ಲಿ ವಿಫ‌ಲವಾಗುವುದು.
  2. ಇತರರ ಜತೆಗೆ ಆಟವಾಡುವುದು ಅಥವಾ ಒಡನಾಡುವುದಕ್ಕೆ ಕಷ್ಟ ಅನುಭವಿಸುವುದು.
  3. ಆಟದ ವಸ್ತುಗಳು ಅಥವಾ ಗೊಂಬೆಗಳನ್ನು ಅಸಹಜವಾಗಿ ಉಪಯೋಗಿಸುವುದು.
  4. ತನಗೆ ಹೇಳಿರುವುದು ಅಥವಾ ಸೂಚಿಸಿರುವುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಕಷ್ಟಪಡುವುದು.
  5. ಹೆಸರು ಕರೆದಾಗ ಓಗೊಡದಿರುವುದು ಅಥವಾ ಪರಿಸರದ ಸದ್ದುಗಳಿಗೆ ಪ್ರಪಿಸ್ಪಂದಿಸದಿರುವುದು.

 

ಮೇಘಾ ಮೋಹನ್‌

ಅಸಿಸ್ಟೆಂಟ್‌ ಪ್ರೊಫೆಸರ್‌,

ಆಡಿಯಾಲಜಿ ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌

ಪೆಥಾಲಜಿ ವಿಭಾಗ, ಕಸ್ತೂರ್ಬಾ ಆಸ್ಪತ್ರೆ,

ಅತ್ತಾವರ, ಮಂಗಳೂರು

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.