ದೇಶದ ಹಿರಿಯ ಫೈಟರ್ ಪೈಲಟ್ಗೆ ಇಂದು ಶತಕದ ಸಂಭ್ರಮ
Team Udayavani, Jul 27, 2020, 8:48 AM IST
ಹೊಸದಿಲ್ಲಿ: ದೇಶದ ಅತ್ಯಂತ ಹಿರಿಯ ಫೈಟರ್ ಪೈಲಟ್, ಸ್ಕ್ವಾಡ್ರನ್ ಲೀಡರ್ ( ನಿವೃತ್ತ) ದಲಿಪ್ ಸಿಂಗ್ ಮಜಿತಿಯಾ ಅವರು ಸೋಮವಾರ 100ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಸಂದರ್ಭ ದಲ್ಲಿ ಮಾತನಾಡಿದ ಅವರು, “ನನ್ನ ಬ್ಯಾಚ್ನ ಯಾರೂ ಈಗ ಬದುಕಿ ಉಳಿದಿಲ್ಲ. ಭಾರತೀಯ ವಾಯುಪಡೆಯ ಅಧಿಕಾರಿಗಳನ್ನು ಭೇಟಿಯಾ ದಾಗಲೆಲ್ಲಾ ನಾನಿನ್ನೂ ಸೇವೆಯಲ್ಲಿ ದ್ದೇನೆ ಎಂಬ ಭಾವನೆ ನನ್ನಲ್ಲಿ ಮೂಡುತ್ತದೆ’ ಎಂದು ತಿಳಿಸಿದ್ದಾರೆ.
1940ರ ಆಗಸ್ಟ್ 5ರಂದು ಅವರು ಇಬ್ಬರು ಬ್ರಿಟಿಷ್ ಟ್ರೇನರ್ಗಳ ಜತೆ ಲಾಹೋರ್ನ ವಾಲ್ಟನ್ ವಾಯುನೆಲೆಯಿಂದ ಟೈಗರ್ ಮಾತ್ ತರಬೇತಿ ವಿಮಾನದಲ್ಲಿ ತರಬೇತಿ ಹಾರಾಟ ಆರಂಭಿಸಿದರು. ಆಗವರಿಗೆ ಕೇವಲ 20 ವರ್ಷ. ಇದಾದ 17 ದಿನಗಳ ನಂತರ, ಮೊದಲ ಬಾರಿಗೆ ಒಬ್ಬರೇ ವಿಮಾನ ದಲ್ಲಿ ಹಾರಾಟ ನಡೆಸಿದರು. ನಂತರ, ಅವರು ತಮ್ಮ ಜೀವಿತಾವಧಿಯುದ್ದಕ್ಕೂ ಪೈಲಟ್ ಆಗಿಯೇ (ಮೊದಲು ವಾಯು ಪಡೆಯಲ್ಲಿ, ನಂತರ ಖಾಸಗಿ ಪೈಲಟ್) ಮುಂದುವರಿದರು.
2ನೇ ವಿಶ್ವ ಮಹಾಯುದ್ಧದ ಸಮಯದಲ್ಲಿ ಬರ್ಮಾ ಹಾಗೂ ಕಠ್ಮಂಡು ಕಣಿವೆಗಳಲ್ಲಿ ಬ್ರಿಟಿಷ್ ಏಕ ಆಸನ ಯುದ್ಧ ವಿಮಾನ, ಹಾಕರ್ ಹರಿಕೇನ್ನಲ್ಲಿ ಹಾರಾಟ ನಡೆಸಿದರು. ಹಲವು ದಶಕಗಳ ನಂತರ ಕಠ್ಮಂಡು ಕಣಿವೆಯಲ್ಲಿ ವಿಮಾನ ಇಳಿಸಿದ ಮೊದಲ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸ್ವಾತಂತ್ರ್ಯಪೂರ್ವದ ಅವಧಿಯಲ್ಲಿ ಭಾರತೀಯ ವಾಯುಪಡೆಯಲ್ಲಿ ಹಲವು ವಿಮಾನಗಳ ಪೈಲಟ್ ಆಗಿ ಸೇವೆ ಸಲ್ಲಿಸಿ, 1947ರಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿ ನಿವೃತ್ತರಾ ದರು. 1979ರ ಜನವರಿ 16ರಂದು ಅವರು ಕೊನೆಯ ಬಾರಿಗೆ ಖಾಸಗಿ ವಿಮಾನದಲ್ಲಿ ಪೈಲಟ್ ಆಗಿ ಹಾರಾಟ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
Manipal ಹಾಸ್ಪಿಟಲ್ಸ್ ಪಾಲಾದ ಮೆಡಿಕಾ ಸಿನರ್ಜಿ