ಬೆಳೆ ಹಾನಿ ತಡೆಗೆ ಪಟಾಕಿ ಸಿಡಿಸುವ ಕೋವಿ ತಯಾರಿ

ಪ್ರಾಣಿಗಳಿಗೆ ಅಪಾಯವಿಲ್ಲ; ಹಾವಳಿ ತಪ್ಪಿಸಲು ಉಪಾಯ

Team Udayavani, Sep 10, 2020, 4:21 AM IST

ಬೆಳೆ ಹಾನಿ ತಡೆಗೆ ಪಟಾಕಿ ಸಿಡಿಸುವ ಕೋವಿ ತಯಾರಿ

ವೇಣೂರು: ಕಾಡುಪ್ರಾಣಿಗಳ ಉಪಟಳದಿಂದ ಬೇಸತ್ತು ಹೋಗುವ ಕೃಷಿಕರು ಅಮೂಲ್ಯ ಬೆಳೆ ರಕ್ಷಿಸಿಕೊಳ್ಳಲು ಅನುಕೂಲವಾಗಲೆಂದು ವೇಣೂರು ಕರಿಮಣೇಲು ಗ್ರಾಮದ ವ್ಯಕ್ತಿಯೊಬ್ಬರು ನಕಲಿ ಕೋವಿ ತಯಾರಿಸಿದ್ದು, ಜಾಲತಾಣ ಗಳಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕರಿಮಣೇಲು ಗ್ರಾಮದ ಗಾಂಧಿ ನಗರ ನಿವಾಸಿ ಗೋಪಾಲ ಆಚಾರ್ಯ ಕೃಷಿಕಸ್ನೇಹಿ ನಕಲಿ ಕೋವಿ ತಯಾರಿಸಿದವರು. ಕಳೆದ 35 ವರ್ಷಗಳಿಂದ ಬಡಗಿ ವೃತ್ತಿ ಮಾಡಿಕೊಂಡಿರುವ ಇವರು ಇದೀಗ ನಕಲಿ ಕೋವಿ ಮೂಲಕ ಕೃಷಿಕರ ಗಮನ ಸೆಳೆದಿದ್ದಾರೆ. ಈ ನಕಲಿ ಕೋವಿ ಕಾಡು ಪ್ರಾಣಿಗಳನ್ನು ಓಡಿಸಲು ಸುಲಭವಾಗಿ ಬಳಸಬಹುದಾದ ವಿಶಿಷ್ಟ ಸಾಧನ ಆಗಿದೆ.

ಕೋವಿ ಕೊಂಡು ಹೋದ ಎಲ್ಲ ರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗಿದೆ. ಹಗಲು ಹೊತ್ತು ಮಂಗಗಳ ಹಾವಳಿ, ನವಿಲು ಉಪಟಳ ಹಾಗೂ ರಾತ್ರಿ ಹೊತ್ತು ಕಾಡು ಹಂದಿಗಳ ಹಾವಳಿ ತಪ್ಪಿಸಲು ಕೋವಿ ಉತ್ತಮ ಸಾಧನವಾಗಿದೆ ಎನ್ನುತ್ತಾರೆ ಗೋಪಾಲ ಆಚಾರ್ಯ. ಅವರ ನಕಲಿ ಕೋವಿ ಕೃಷಿಕರಿಗೆ ತುಂಬಾ ಉಪಯೋಗವಾಗಿದ್ದು, ಇದರಿಂದ ಪ್ರಾಣಿ-ಪಕ್ಷಿಗಳ ಜೀವನಕ್ಕೇನೂ ಅಪಾಯ ಆಗುವುದಿಲ್ಲ. ದೊಡ್ಡ ಶಬ್ದದೊಂದಿಗೆ ಚಿಕ್ಕಕಲ್ಲು ಬೀಳುವುದರಿಂದ ಪ್ರಾಣಿ- ಪಕ್ಷಿಗಳು ಹೆದರಿ ಓಡುತ್ತವೆ. ಈ ಕೋವಿ ನಿಜವಾಗಲೂ ಕೃಷಿಕರಿಗೆ ಉಪ ಯೋಗಕ್ಕೆ ಬರುತ್ತಿದೆ. ಇದರಿಂದ ಪ್ರಾಣಿ ಗಳ ಜೀವಕ್ಕೆ ಏನೂ ಅಪಾಯ ಇಲ್ಲ. ದೊಡ್ಡ ಶಬ್ದ ದಿಂದಾಗಿ ಪ್ರಾಣಿಗಳು ಹೆದರಿ ಓಡುತ್ತವೆ. ನಾನು ಉಪಯೋಗಿಸುತ್ತಿದ್ದೇನೆ ಎಂದು ವೇಣೂರು ವಲಯ ಅರಣ್ಯಾ ಧಿಕಾರಿ ಪ್ರಶಾಂತ್‌ ಕುಮಾರ್‌ ಪೈ ತಿಳಿಸಿದ್ದಾರೆ.

ನಕಲಿಕೋವಿ ಬಳಗೆ ಸುಲಭ. ಕೋವಿ ಯಲ್ಲಿ ರಚಿಸಲಾಗಿರುವ ಗುಂಡಿಯೊಳಗೆ ಪಟಾಕಿ ಇಡಬೇಕು. ನಳಿಕೆಯೊಳಗೆ ಚಿಕ್ಕ ಕಲ್ಲುಗಳನ್ನು ಹಾಕಬೇಕು. ಪಟಾಕಿ ಬತ್ತಿಗೆ ಬೆಂಕಿ ಹಚ್ಚಿದ ಕೂಡಲೇ ದೊಡ್ಡ ಶಬ್ದದೊಂದಿಗೆ ಆ ಕಲ್ಲುಗಳು ನಳಿಕೆಯಿಂದ ರಭಸವಾಗಿ ಹೊರ ದಬ್ಬಲ್ಪಡುತ್ತವೆ. ಪಟಾಕಿಯ ಶಬ್ದಕ್ಕೆ ಮತ್ತು ಚಿಕ್ಕಚಿಕ್ಕ ಕಲ್ಲುಗಳು ಸಿಡಿಯಲ್ಪಟ್ಟು ಪ್ರಾಣಿಗಳ ಮೇಲೆ ಬೀಳುವುದರಿಂದ ಅವು ಹೆದರಿ ಓಡುತ್ತವೆ. ಕೋವಿಯಿಂದ ಚಾಟಿ ಬೀಸಿದಷ್ಟು ನೋವಾಗುವುದರಿಂದ ಪ್ರಾಣಿ ಗಳಿಗೆ ಅಪಾಯ ಇಲ್ಲ. ಕಾಡುಪ್ರಾಣಿ ಹಾವಳಿಯಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಹೋರಾಡುತ್ತಿರುವ ಕೃಷಿಕರ ಮನೆಯಲ್ಲಿ ಇದೊಂದು ಸುರಕ್ಷಿತ ಉತ್ತಮ ಸಾಧನ ಎನ್ನುತ್ತಾರೆ ಗೋಪಾಲ ಆಚಾರ್ಯ.

ಬಾಧೆ ತಡೆಗೆ ಉಪಾಯ
ಈ ವರೆಗೆ ಹಲವು ಕೋವಿಗಳನ್ನು ತಯಾರಿಸಿಕೊಟ್ಟಿದ್ದೇನೆ. ಅಪಾಯ ವಾಗದ ರೀತಿಯಲ್ಲಿ ಕಾಡು ಪ್ರಾಣಿಗಳನ್ನು ಓಡಿಸಲು ಯೋಚಿಸಿ ದಾಗ ಇಂತಹ ಉಪಾಯ ಹೊಳೆದಿದೆ. ಕೋವಿಯನ್ನು ಪಡೆದುಕೊಂಡಿರುವ ಕೃಷಿಕರು ತೋಟದಲ್ಲಿ ಪ್ರಾಣಿ- ಪಕ್ಷಿಗಳ ಬಾಧೆ ಕಡಿಮೆ ಆಗಿದೆ ಎಂದಿದ್ದಾರೆ.
-ಗೋಪಾಲ ಆಚಾರ್ಯ ಕರಿಮಣೇಲು, ನಕಲಿ ಕೋವಿ ಶೋಧಕರು

ಟಾಪ್ ನ್ಯೂಸ್

HD Kumaraswamy ಮೈತ್ರಿ ಮುಂದುವರಿಕೆ ಉದ್ದೇಶ

BJP-JDS ಮೈತ್ರಿ ಮುಂದುವರಿಕೆ ಉದ್ದೇಶ; ಎಚ್‌.ಡಿ. ಕುಮಾರಸ್ವಾಮಿ

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಅಶೋಕ್‌

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಆರ್‌. ಅಶೋಕ್‌

Prajwal ಪತ್ತೆಗೆ ಎಸ್‌ಐಟಿ ತಂಡ ವಿದೇಶಕ್ಕೆ ಯಾನ?8 ಅಧಿಕಾರಿಗಳ ತಂಡ ಪ್ರಯಾಣ ಸಾಧ್ಯತೆ

Prajwal ಪತ್ತೆಗೆ ಎಸ್‌ಐಟಿ ತಂಡ ವಿದೇಶಕ್ಕೆ ಯಾನ?8 ಅಧಿಕಾರಿಗಳ ತಂಡ ಪ್ರಯಾಣ ಸಾಧ್ಯತೆ

HD ರೇವಣ್ಣಗೆ ಹೊಟ್ಟೆನೋವು, ಎದೆಯುರಿ: ಆಸ್ಪತ್ರೆಗೆ ದಾಖಲು

HD ರೇವಣ್ಣಗೆ ಹೊಟ್ಟೆನೋವು, ಎದೆಯುರಿ: ಆಸ್ಪತ್ರೆಯಲ್ಲಿ ಚಿಕಿತ್ಸೆ

Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್‌

Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್‌

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

ಆಯೋಗದ ಮತದಾನ ಮಾಹಿತಿಯಲ್ಲಿ ಲೋಪವಿದೆ, ಧ್ವನಿಯೆತ್ತಿ: ಖರ್ಗೆ ಪತ್ರ

Loksabha election; ಆಯೋಗದ ಮತದಾನ ಮಾಹಿತಿಯಲ್ಲಿ ಲೋಪವಿದೆ, ಧ್ವನಿಯೆತ್ತಿ: ಖರ್ಗೆ ಪತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

Puttur ಜಾನಪದ ವಿದ್ವಾಂಸ ಡಾ| ಪಾಲ್ತಾಡಿ ಇನ್ನಿಲ್ಲ

18

Benjana Padavu: ನೇಣು ಬಿಗಿದು ಆತ್ಮಹತ್ಯೆ

17-

Bantwala: ರಾಂಗ್‌ಸೈಡಿನಲ್ಲಿ ಬಂದು ಎರಡು ಬೈಕ್‌ಗಳಿಗೆ  ಢಿಕ್ಕಿ ಹೊಡೆದ ಲಾರಿ

11-

Sulya: ಕಾರು-ಬೈಕ್‌ ಅಪಘಾತ; ಸವಾರನಿಗೆ ಗಾಯ

1-bantwala

Crime: ಮಂಗಳೂರಿನ ಅವಿವಾಹಿತ ಯುವಕ ಬಿಸಿರೋಡಿನಲ್ಲಿ ನೇಣುಬಿಗಿದು ಆತ್ಮಹತ್ಯೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

HD Kumaraswamy ಮೈತ್ರಿ ಮುಂದುವರಿಕೆ ಉದ್ದೇಶ

BJP-JDS ಮೈತ್ರಿ ಮುಂದುವರಿಕೆ ಉದ್ದೇಶ; ಎಚ್‌.ಡಿ. ಕುಮಾರಸ್ವಾಮಿ

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಅಶೋಕ್‌

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಆರ್‌. ಅಶೋಕ್‌

Prajwal ಪತ್ತೆಗೆ ಎಸ್‌ಐಟಿ ತಂಡ ವಿದೇಶಕ್ಕೆ ಯಾನ?8 ಅಧಿಕಾರಿಗಳ ತಂಡ ಪ್ರಯಾಣ ಸಾಧ್ಯತೆ

Prajwal ಪತ್ತೆಗೆ ಎಸ್‌ಐಟಿ ತಂಡ ವಿದೇಶಕ್ಕೆ ಯಾನ?8 ಅಧಿಕಾರಿಗಳ ತಂಡ ಪ್ರಯಾಣ ಸಾಧ್ಯತೆ

HD ರೇವಣ್ಣಗೆ ಹೊಟ್ಟೆನೋವು, ಎದೆಯುರಿ: ಆಸ್ಪತ್ರೆಗೆ ದಾಖಲು

HD ರೇವಣ್ಣಗೆ ಹೊಟ್ಟೆನೋವು, ಎದೆಯುರಿ: ಆಸ್ಪತ್ರೆಯಲ್ಲಿ ಚಿಕಿತ್ಸೆ

Jharkhand 32 crore discovery case: Two arrested

Jharkhand 32 ಕೋಟಿ ಪತ್ತೆ ಪ್ರಕರಣ: ಇಬ್ಬರ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.