ಲಡಾಖ್-ಫಿಂಗರ್ 4; ತಂತ್ರಗಾರಿಕೆಯಿಂದಲೇ ಚೀನಾ ಸೇನೆಯನ್ನು ಕಟ್ಟಿ ಹಾಕಿದ ಭಾರತೀಯ ಸೇನಾಪಡೆ!

ಫಿಂಗರ್ 4ರಲ್ಲಿ ಚೀನಾ ಸೇನೆ ಬೀಡು ಬಿಟ್ಟಿರುವ ಪರಿಣಾಮ ಸೇನೆಯನ್ನು ಹಿಂಪಡೆಯುವ ಉಭಯ ದೇಶಗಳ ಪ್ರಕ್ರಿಯೆ ಸ್ಥಗಿತಗೊಂಡಂತಾಗಿದೆ.

Team Udayavani, Sep 10, 2020, 5:35 PM IST

ಲಡಾಖ್-ಫಿಂಗರ್ 4; ತಂತ್ರಗಾರಿಕೆಯಿಂದಲೇ ಚೀನಾ ಸೇನೆಯನ್ನು ಕಟ್ಟಿ ಹಾಕಿದ ಭಾರತೀಯ ಸೇನಾಪಡೆ

ನವದೆಹಲಿ:ದಿನಕಳೆದಂತೆ ಲಡಾಖ್ ನ ವಾಸ್ತವ ಗಡಿ ನಿಯಂತ್ರಣ ರೇಖೆ ಸಮೀಪ ಚೀನಾದ ಕಳ್ಳಾಟದ ಚಟುವಟಿಕೆ ಕಂಡು ಬರುತ್ತಿದ್ದಂತೆಯೇ ಭಾರತೀಯ ಸೇನಾಪಡೆ ಉತ್ತರ ಭಾಗದ ಪ್ಯಾಂಗಾಂಗ್ ತ್ಸೋ ಸರೋವರ ಸಮೀಪದ ಪರ್ವತ ಶ್ರೇಣಿಯಲ್ಲಿ ಹೆಚ್ಚಿನ ಸ್ಥಳವನ್ನು ತನ್ನ ವಶಕ್ಕೆ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ. ಫಿಂಗರ್ 4ರ ಪ್ರದೇಶದಲ್ಲಿ ಚೀನಾಪಡೆ ಠಿಕಾಣಿ ಹೂಡಿದ್ದು, ಏತನ್ಮಧ್ಯೆ ಭಾರತೀಯ ಸೇನಾ ಪಡೆ ಉತ್ತರ ಮತ್ತು ದಕ್ಷಿಣ ಪ್ಯಾಂಗಾಂಗ್ ತ್ಸೋ ಸರೋವರ ಪ್ರದೇಶದ ಸೇರಿದಂತೆ ಎರಡೂ ಕಡೆ ಜಾಣ್ಮೆಯ ನಡೆ ಅನುಸರಿಸಿರುವುದಾಗಿ ವರದಿ ವಿವರಿಸಿದೆ.

ಮತ್ತೊಂದೆಡೆ ಚೀನಾ ಸೇನಾಪಡೆ ಫಿಂಗರ್ 4ರ ಪರ್ವತ ಶ್ರೇಣಿಯ ತುದಿಯಲ್ಲಿ ಕುಳಿತಿದ್ದು, ಭಾರತೀಯ ಸೇನಾ ಪಡೆ ಕೂಡಾ ಮತ್ತೊಂದು ಪರ್ವತಶ್ರೇಣಿಯ ಭಾಗದಲ್ಲಿ ಕುಳಿತು ಪಿಎಲ್ ಎ ಮೇಲೆ ಒತ್ತಡ ತಂತ್ರ ಹೇರುತ್ತಿರುವುದಾಗಿ ಸೇನಾ ಮೂಲಗಳು ತಿಳಿಸಿವೆ.

ಭಾರತದ ಸೇನೆಯ ಈ ತಂತ್ರಗಾರಿಕೆ ಈಗಾಗಲೇ ಫಿಂಗರ್ 4ರ ಪರ್ವತಶ್ರೇಣಿಯ ಮೇಲಿಂದ ಹಿಂದಕ್ಕೆ ಸರಿಯಲ್ಲ ಎಂದು ಹಠ ಹಿಡಿದಿರುವ ಚೀನಾವನ್ನು ಭವಿಷ್ಯದ ಸಂಧಾನದ ಮಾತುಕತೆಯಲ್ಲಿ ಮಣಿಸಲು ಸಾಧ್ಯವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: Explained:ಚೀನಾ ಸೇನೆಗೆ 3ನೇ ಬಾರಿ ಮುಖಭಂಗ: ಸೆಪ್ಟೆಂಬರ್ 7ರಂದು ಗಡಿಯಲ್ಲಿ ನಡೆದಿದ್ದೇನು?

ಫಿಂಗರ್ 4ರ ಉತ್ತರ ಭಾಗದಲ್ಲಿ ಚೀನಾ ಸೇನೆ ಬೀಡು ಬಿಟ್ಟಿರುವ ಪರಿಣಾಮ ಸೇನೆಯನ್ನು ಹಿಂಪಡೆಯುವ ಉಭಯ ದೇಶಗಳ ಪ್ರಕ್ರಿಯೆ ಸ್ಥಗಿತಗೊಂಡಂತಾಗಿದೆ. ಸರೋವರದ ದಕ್ಷಿಣ ಭಾಗ ಈಗ ಹೊಸ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಭಾರತೀಯ ಸೇನೆ ಕೂಡಾ ಚೀನಾದ ಅತಿಕ್ರಮಣ ತಡೆಯಲು ಸಜ್ಜಾಗಿ ಕುಳಿತಿರುವುದಾಗಿ ವರದಿ ತಿಳಿಸಿದೆ.

ಈಗಾಗಲೇ ಭಾರತೀಯ ಸೇನಾ ಪಡೆ ಫಿಂಗರ್ 4ರ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಪ್ಯಾಂಗಾಂಗ್ ತ್ಸೋನ ಉತ್ತರ ಸರೋವರ ಪ್ರದೇಶದಲ್ಲಿ ಚೀನಾ ಪಡೆ ಶಿಬಿರ ನಿರ್ಮಿಸುತ್ತಿದ್ದು, ಭಾರತದ ಸೇನಾಪಡೆ ಕುಳಿತಿರುವ ಪರ್ವತಶ್ರೇಣಿ ಪ್ರದೇಶದ ಸಮೀಪಕ್ಕೆ ಬರಲು ಯತ್ನಿಸುತ್ತಿರುವುದಾಗಿ ವರದಿ ಹೇಳಿದೆ.

ಇದನ್ನೂ ಓದಿ: ಗಡಿಯಲ್ಲಿ ಮತ್ತೆ ಯುದ್ಧದ ಸದ್ದು! ಭಾರತ, ಚೀನಾ ಯೋಧರ ಜಮಾವಣೆ, ನರಾವಣೆ ಭೇಟಿ

ಅತ್ಯಂತ ಕಠಿಣವಾದ ಹಾಗೂ ಎತ್ತರದ ಪ್ರದೇಶವಾದ ರೆಚಿನ್ ಲಾ ಪ್ರದೇಶದಲ್ಲಿ ಭಾರತೀಯ ಸೇನಾ ಪಡೆ ಅಲ್ಲಿ ಪಹರೆ ಕಾಯುತ್ತಿರುವುದಕ್ಕೆ ಚೀನಾ ಸೇನೆ ಪ್ರಬಲ ವಿರೋಧ ವ್ಯಕ್ತಪಡಿಸಿದೆ. ಆಯಕಟ್ಟಿನ ಸ್ಥಳದಲ್ಲಿ ಕುಳಿತಿರುವ ಭಾರತೀಯ ಸೇನಾಪಡೆ ಪ್ಯಾಂಗಾಂಗ್ ಸರೋವರದ ದಕ್ಷಿಣ ಪ್ರದೇಶದಲ್ಲಿ ಚೀನಾ ಮಿಲಿಟರಿ ಪಡೆ ಏನು ಮಾಡುತ್ತಿದೆ ಎಂಬ ಬಗ್ಗೆ ಕಣ್ಗಾವಲಿಟ್ಟಿದೆ. ಅಷ್ಟೇ ಅಲ್ಲ ಫಿಂಗರ್ 4ರ ಉತ್ತರ ಭಾಗದಲ್ಲಿಯೂ ಚಲನವಲನ ವೀಕ್ಷಿಸುತ್ತಿದೆ ಎಂದು ವರದಿ ಹೇಳಿದೆ.

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.