ಭಾರತಕ್ಕೆ ಹರ್ಕ್ಯುಲಸ್ ಬಿಡಿಭಾಗಗಳ ಮಾರಾಟಕ್ಕೆ ಪೆಂಟಗಾನ್ ಅಸ್ತು
Team Udayavani, Oct 3, 2020, 6:15 AM IST
ವಾಷಿಂಗ್ಟನ್: ಭಾರತದ ಬೇಡಿಕೆಯ ಮೇರೆಗೆ ಸೂಪರ್ ಹರ್ಕ್ಯುಲಸ್ ನೌಕಾಯುದ್ಧ ವಿಮಾನಕ್ಕೆ ಸಂಬಂಧಿಸಿದ ಬಿಡಿಭಾಗಗಳು ಸೇರಿದಂತೆ ಇತರ ಉಪಕರಣಗಳನ್ನು ಮಾರಲು ಅಮೆರಿಕದ ಪೆಂಟಗನ್ ಸಮ್ಮತಿಸಿದೆ. ಅಂದಾಜು 660 ಕೋ. ರೂ. ಮೌಲ್ಯದ ಮಾರಾಟ ವ್ಯವಹಾರ ಇದಾಗಿದೆ.
ಅಮೆರಿಕ ರಕ್ಷಣ ಇಲಾಖೆಯ ಡಿಫೆನ್ಸ್ ಸೆಕ್ಯುರಿಟಿ ಕಾರ್ಪೊರೇಶನ್ ಏಜೆನ್ಸಿ ಸಂಸತ್ತಿಗೆ ನೀಡಿದ ಅಧಿಸೂಚನೆಯಲ್ಲಿ ಈ ಮಾಹಿತಿ ನೀಡಿದೆ. “ಅಮೆರಿಕ- ಭಾರತ ಕಾರ್ಯತಂತ್ರದ ಭಾಗವಾಗಿ ವಿದೇಶಿ ನೀತಿ ಮತ್ತು ರಾಷ್ಟ್ರೀಯ ಭದ್ರತೆ ಬೆಂಬಲಿಸುವ ಉದ್ದೇಶದಿಂದ ಹರ್ಕ್ಯು ಲಸ್ ಬಿಡಿಭಾಗಗಳ ಮಾರಾಟ ನಡೆಯಲಿದೆ. ಉಭಯ ದೇಶಗಳ ನಡುವಿನ ರಾಜಕೀಯ ಸ್ಥಿರತೆ, ಶಾಂತಿ, ಆರ್ಥಿಕ ಪ್ರಗತಿಗೆ ಇದು ಸಹಕಾರಿ’ ಎಂದು ಏಜೆನ್ಸಿ ಹೇಳಿದೆ.
ಭಾರತದ ಬೇಡಿಕೆ ಏನು?
ಸಿ-130 ಜೆ ಸೂಪರ್ ಹರ್ಕ್ಯುಲಸ್ ಕಾರ್ಗೋ ಏರ್ಕ್ರಾಫ್ಟ್ಗೆ ಸಂಬಂಧಿಸಿದ ಬಿಡಿಭಾಗಗಳು, ದುರಸ್ತಿ ಉಪಕರಣಗಳು, ಕಾಟ್ರಿಡ್ಜ್ ಆಕ್ಯುಯೆಟೆಡ್ ಡಿವೈಸಸ್, ಫೈರ್ ಎಕ್ಸ್ಟಿಂಗ್ವಿಷರ್ ಕಾಟ್ರಿಡ್ಜ್ , ಫ್ಲೇರ್ ಕಾಟ್ರಿಡ್ಜ್, ಬಿಬಿಯು- 35/ಬಿ ಕಾಟ್ರಿಡ್ಜ್ ಇಂಪಲ್ಸ್ ಸ್ಕ್ವಿಬ್ಸ್, ಎಎನ್/ ಎಎಲ್ಆರ್-56 ಎಂ ಸುಧಾರಿತ ರಾಡಾರ್ ವಾರ್ನಿಂಗ್ ರಿಸೀವರ್ ಶಿಪ್ಸೆಟ್, 10 ಲೈಟ್ವೇಟ್ ನೈಟ್ ವಿಷನ್ ಬೈನಾಕ್ಯುಲರ್, ನೈಟ್ ವಿಷನ್ ಗಾಗಲ್, ಜಿಪಿಎಸ್ ಮತ್ತು ಎಲೆಕ್ಟ್ರಾನಿಕ್ ವಾರ್ಫೇರ್ಗಳ ಖರೀದಿಗೆ ಭಾರತ ಒಲವು ತೋರಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ