ಗೋಕುಲ ಸ್ಮಾರ್ಟ್‌ ರಸ್ತೆ ದುರವಸ್ಥೆ ! ನೆಲಕ್ಕುರುಳಿದ ವಿಭಾಜಕಗಳು

Team Udayavani, Oct 5, 2020, 12:39 PM IST

ಗೋಕುಲ ಸ್ಮಾರ್ಟ್‌ ರಸ್ತೆ ದುರವಸ್ಥೆ ! ನೆಲಕ್ಕುರುಳಿದ ವಿಭಾಜಕಗಳು

ಹುಬ್ಬಳ್ಳಿ: ನಗರದ ಕೆಲ ಪ್ರಮುಖ ರಸ್ತೆಗಳನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಅಂದ-ಚೆಂದ ಮಾಡಲಾಗುತ್ತಿದೆ. ಆದರೆ ಗೋಕುಲ ರಸ್ತೆಯಲ್ಲಿ ಮಾಡಿರುವ ರಸ್ತೆ ವಿಭಜಕ ಸೇರಿದಂತೆ ಇನ್ನಿತರೆ ಕಾರ್ಯಗಳನ್ನು ನೋಡಿದರೆ ಇದೆಂತಹ ಸ್ಮಾರ್ಟ್‌ ಎನ್ನುವಂತಾಗಿದೆ. ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ, ಆಗಲೇ ವಾಹನದ ಚಕ್ರಕ್ಕೆ ಸಿಲುಕಿ ರಸ್ತೆ ವಿಭಜಕಕ್ಕೆ ಹಾಕಿದ ಕಾಂಕ್ರೀಟ್‌ ನೆಲಕ್ಕುರುಳಿದೆ.
ನಗರ ಪ್ರವೇಶಿಸುವ ಜನರ ಆಕರ್ಷಿಸುವಂತೆ ರಸ್ತೆಗಳನ್ನು ಸುಂದರಗೊಳಿಸುವುದು ಸ್ಮಾರ್ಟ್‌ ರಸ್ತೆಯ ಪರಿಕಲ್ಪನೆಯಾಗಿದೆ. ಹೀಗಾಗಿ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನಗರದ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಿದ್ದು, ಈಗಾಗಲೇ ಗೋಕುಲ ರಸ್ತೆಯಲ್ಲಿ ಒಂದಿಷ್ಟು ಕಾಮಗಾರಿ ಕೈಗೊಳ್ಳಲಾಗಿದೆ. ಇನ್ನೂ ಕೆಲ ಕಾಮಗಾರಿ ಬಾಕಿ ಇರುವಾಗಲೇ ವಾಹನಗಳ ಚಕ್ರಕ್ಕೆ ಸಿಲುಕಿ ರಸ್ತೆ ವಿಭಜಕದ ಕಾಂಕ್ರೀಟ್‌ ಬಿದ್ದು ಹೋಗಿದ್ದು, ಕಾಮಗಾರಿ ಗುಣಮಟ್ಟ ಜನರಲ್ಲಿ ಅಚ್ಚರಿ ಮೂಡಿಸಿದೆ. ಗುತ್ತಿಗೆದಾರ ಅದೆಂತಹ ಕಾಂಕ್ರೀಟ್‌ ಸುರಿದಿದ್ದಾನೆ, ಅಧಿಕಾರಿಗಳು ಅದ್ಯಾವ ರೀತಿ ಮೇಲ್ವಿಚಾರಣೆ ಮಾಡಿದ್ದಾರೆ ಎನ್ನುವ ಮಾತು ಜನರಿಂದ ಕೇಳಿಬರುತ್ತಿದೆ.

ಇದನ್ನೂ ಓದಿ:ಕಾಂಗ್ರೆಸ್ ತನ್ನ ಅಹಂಕಾರ ಮುಂದುವರೆಸಿದರೆ ಕರ್ನಾಟಕದಲ್ಲೂ ನೆಲೆ ಕಳೆದುಕೊಳ್ಳಬಹುದು :HDK

ವಿಮಾನ ನಿಲ್ದಾಣ-ಹೊಸೂರು ಜಂಕ್ಷನ್‌ವರೆಗೆ 5 ಕಿಮೀ ವ್ಯಾಪ್ತಿಯ ರಸ್ತೆಯನ್ನು ಸುಮಾರು 43 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್‌ ಮಾಡಲು ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಬೀದಿದೀಪ, ರಸ್ತೆ ಗುರುತುಗಳು, ಪಾದಚಾರಿ ಮಾರ್ಗ, ಜಂಕ್ಷನ್‌ ಅಭಿವೃದ್ಧಿ, ಚರಂಡಿ, ರಸ್ತೆ ವಿಭಜಕದಲ್ಲಿ ಗಿಡ ನೆಡುವುದು ಸೇರಿದಂತೆ ಹಲವು ಕಾರ್ಯಗಳನ್ನು ಕೈಗೊಂಡಿದ್ದು, 5 ವರ್ಷ ಗುತ್ತಿಗೆದಾರರ ನಿರ್ವಹಣೆಯಿದೆ. ವಿಪರ್ಯಾಸ ಅಂದರೆ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಅಲ್ಲಲ್ಲಿ ವಾಹನಗಳ ಚಕ್ರ ತಾಗಿ ರಸ್ತೆ ವಿಭಜಕ ಬಿದ್ದು ಹೋಗಿವೆ.

ಇದನ್ನೂ ಓದಿ:ಉಪಚುನಾವಣೆ ಕಾರಣ ದಾಳಿ ಮಾಡಿದ್ದಾರೆ, ಸಿಬಿಐ ದಾಳಿ ರಾಜಕೀಯ ಪ್ರೇರಿತ: ಲಕ್ಷ್ಮೀ ಹೆಬ್ಬಾಳಕರ್

ಹೊಸೂರು ವೃತ್ತ ಹಾಗೂ ವಿಕಾಸ ನಗರ ವೃತ್ತದಲ್ಲಿ ಕಾಂಕ್ರೀಟ್‌ ಬಿದ್ದು ಹೋಗಿವೆ. ಯೂ ಟರ್ನ್ ತೆಗೆದುಕೊಳ್ಳುವ ಪ್ರತಿಯೊಂದು ಜಂಕ್ಷನ್‌ನಲ್ಲಿ ರಸ್ತೆ ವಿಭಜಕ ಕಾಂಕ್ರೀಟ್‌ ಕಿತ್ತು ಹೋಗಿವೆ. ಇನ್ನೂ ಕೆಲವೆಡೆ ಬಿರುಕು ಬಿಟ್ಟಿದೆ. ವಿವಿಧೆಡೆ ರಸ್ತೆ ವಿಭಜಕ ಕಾಮಗಾರಿಯೂ ಅಷ್ಟೊಂದು ಅಚ್ಚುಕಟ್ಟಾಗಿ ಆಗಿಲ್ಲ ಎನ್ನುವ ಆರೋಪಗಳು ಇವೆ. ರಸ್ತೆ ವಿಭಜಕ ಮಾಡಲು ಹಾಕಿರುವ ಕಾಂಕ್ರೀಟ್‌ ಗೋಡೆ ಅಲ್ಲಲ್ಲಿ ರಸ್ತೆ ಕಡೆ ವಾಲಿಕೊಂಡಿರುವುದು ವಾಹನಗಳಿಗೆ ತಾಕಿ ಬೀಳಲು ಕಾರಣವಾಗುತ್ತಿದೆ. ಇನ್ನೂ ಹಾಕಿರುವ ಕಾಂಕ್ರೀಟ್‌ ಅರ್ಧ ಸಿಸಿ ರಸ್ತೆ ಇನ್ನರ್ಧ ಮಣ್ಣಿನ ಮೇಲೆ ಇರುವುದರಿಂದ ಗಟ್ಟಿಯಾಗಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತದೆ.

ಈಡೇರದ ಯೋಜನೆ ಮೂಲ ಉದ್ದೇಶ; ಎಲ್ಲಿದೆ ಸ್ಮಾರ್ಟ್‌?
ರಸ್ತೆ ವಿಭಜಕ ಆಗಿರುವ ಕಡೆಗಳಲ್ಲಿ ಹಾಕಿರುವ ವಿದ್ಯುತ್‌ ಕೇಬಲ್‌, ಅಳವಡಿಸಿರುವ ವಿದ್ಯುತ್‌ ಬಾಕ್ಸ್‌ಗಳನ್ನು ನೋಡಿದರೆ ಸ್ಮಾರ್ಟ್‌ ಎನ್ನುವ ಪದಕ್ಕೆ ಅಗೌರವ ತೋರಿದಂತಿದೆ. ಅಲ್ಲಲ್ಲಿ ತುಂಡಾಗಿರುವ ಕೇಬಲ್‌ಗ‌ಳನ್ನೇ ಜೋಡಿಸಿ ಬೇಕಾಬಿಟ್ಟಿ ಬಿಸಾಡಿದಂತಿದೆ. ಇಂತಹ ಅವ್ಯವಸ್ಥೆಗಳಿಂದ ಕೋಟ್ಯಂತರ ರೂ. ಖರ್ಚು ಮಾಡಿ ಅಭಿವೃದ್ಧಿ ಮಾಡುತ್ತಿರುವ ಕಾರ್ಯ ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತಾಗುತ್ತಿದೆ. ರಸ್ತೆ ಮಧ್ಯದ ಜಾಹೀರಾತು ಫಲಕಗಳನ್ನು ನೋಡಿದರೆ ಹಿಂದಿನ ರಸ್ತೆ ವಿಭಜಕವೇ ನೆನಪಾಗುತ್ತಿದೆ. ಕಾಂಕ್ರೀಟ್‌ ಸುರಿಯುವುದಕ್ಕೆ ನೀಡುವ ಒತ್ತು ಇನ್ನಿತರೆ ಕಾರ್ಯಗಳಿಗೆ ನೀಡದಿರುವುದು ಮೂಲ ಉದ್ದೇಶ ಈಡೇರದಂತಾಗಿದೆ.

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.