ಕೋವಿಡ್-19 ವಾರಿಯರ್ಸ್‌ ಮೃತರಾದರೆ ಹುತಾತ್ಮರೆಂದು ಕರೆಯಿರಿ: ಡಾ. ಸಿ.ಎನ್.ಮಂಜುನಾಥ

Team Udayavani, Oct 17, 2020, 10:27 AM IST

ಕೋವಿಡ್-19 ವಾರಿಯರ್ಸ್‌ ಮೃತರಾದರೆ ಹುತಾತ್ಮರೆಂದು ಕರೆಯಿರಿ: ಡಾ. ಸಿ.ಎನ್.ಮಂಜುನಾಥ

ಮೈಸೂರು: ಕೋವಿಡ್ ವಾರಿಯರ್ಸ್‌ ಮೃತರಾದರೆ ಅವರನ್ನು ಹುತಾತ್ಮರೆಂದು ಕರೆಯಬೇಕು ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್‌ ಹೇಳಿದರು.

ನಾಡಹಬ್ಬ ದಸರಾ ಮಹೋತ್ಸವಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಹುತಾತ್ಮ ಯೋಧರಿಗೆ ಸಿಗುವ ಗೌರವ ಕೋವಿಡ್ ವಾರಿಯರ್ಸ್ ಮೃತರಾದರೆ ಅವರಿಗೂ ಸಿಗಬೇಕು ಎಂದು ತಿಳಿಸಿದರು.

ಇಂದು ನನಗಾಗಿ ನಾನು ಏನನ್ನೂ ಚಾಮುಂಡಿ ದೇವಿಯ ಬಳಿ ಬೇಡಿಲ್ಲ. ಕೋವಿಡ್ ಲಸಿಕೆ ಬೇಗ ಬರಲಿ, ಕೋವಿಡ್-19 ಸಂಪೂರ್ಣ ನಿವಾರಣೆಯಾಗಲಿ, ಜಲಪ್ರವಾಹ ಕಡಮೆಯಾಗಲಿ ಎಂದು ದೇವರ ಬಳಿ ಬೇಡಿದ್ದೇನೆ ಎಂದರು.

ಇದನ್ನೂ ಓದಿ:ಮೈಸೂರು ದಸರಾ 2020: ಚಾಮುಂಡಿ ಸನ್ನಿಧಿಯಲ್ಲಿ ಮೈಸೂರು ದಸರಾಗೆ ಚಾಲನೆ

ಚೀನಾದಲ್ಲಿ ಸೃಷ್ಟಿಯಾದ ವೈರಸ್ ಇಡೀ ಪ್ರಪಂಚವನ್ನೇ ನಡುಗಿಸಿದೆ. ಮಾಡಬಾರದ್ದು ಮಾಡಿದರೆ, ತಿನ್ನಬಾರದನ್ನು ತಿಂದರೆ ಹೇಗೆ ವೈರಸ್ ಉತ್ಪಾದನೆ ಆಗುತ್ತದೆ ಎಂಬುದಕ್ಕೆ ಈ ವೈರಸ್ ಸಾಕ್ಷಿ ಎಂದು ಚೀನಾ ವಿರುದ್ಧ ಹರಿಹಾಯ್ದರು.

ದಸರಾ ಉದ್ಘಾಟಿಸಿದ್ದು ನನ್ನ ಜೀವಿತಾವಧಿಯ ದೊಡ್ಡ ಗೌರವ. ಕೋವಿಡ್-19 ವಾರಿಯರ್ಸ್‌ ಅಭಿನಂದನೆಯು ವೈದ್ಯ ಸಮುದಾಯಕ್ಕೆ ಕೊಟ್ಟ ದೊಡ್ಡ ಗೌರವ ಎಂದು ಸ್ಮರಿಸಿದರು.

ಕೋವಿಡ್ ಗೆ ಈ ವರ್ಷ ಲಸಿಕೆ ಬರುವ ಲಕ್ಷಣಗಳಿಲ್ಲ. ಮುಂದಿನ‌ ವರ್ಷದ ಫೆಬ್ರವರಿ, ಮಾರ್ಚ್‌ನಲ್ಲಿ ಲಸಿಕೆ ಬರಬಹುದು. ಕೋವಿಡ್-19 ಪಾಸಿಟಿವ್ ಬಂದರೆ ಅವರನ್ನು ಅಸ್ಪೃಶ್ಯರ ರೀತಿ ನೋಡಬೇಡಿ. ವೈದ್ಯರೇ ರೋಗಿಗಳಾಗುತ್ತಿದ್ದಾರೆ‌, ವೈದ್ಯರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ವೈದ್ಯರ ಮೇಲೆ ಹಲ್ಲೆ ಮಾಡುವುದು, ಆಸ್ಪತ್ರೆಗಳ ಮೇಲೆ ದಾಳಿ ಮಾಡುವುದು ನಿಲ್ಲಿಸಬೇಕು. ವೈದ್ಯರಿಗೆ ಗ್ರಾಮೀಣ ಭಾಗದಲ್ಲಿ ರಕ್ಷಣೆ ಸಿಗುತ್ತಿಲ್ಲ. ಹೀಗಾಗಿ, ವೈದ್ಯರು ಗ್ರಾಮೀಣ ಭಾಗಕ್ಕೆ ಹೋಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರಲ್ಲದೇ, ಗ್ರಾಮೀಣ ಭಾಗದ ಆಸ್ಪತ್ರೆಗಳನ್ನು ಜಿಲ್ಲಾ ಪಂಚಾಯತ್ ವ್ಯಾಪ್ತಿಯಿಂದ ಹೊರಗಿಟ್ಟು ಜಿಲ್ಲಾ ಕೇಂದ್ರದಿಂದ ನಿರ್ವಹಣೆ ಮಾಡಿಸಬೇಕು ಎಂದು ಆಗ್ರಹಿಸಿದರು.

ಜಯದೇವ ಆಸ್ಪತ್ರೆಯಲ್ಲಿ ಈವರೆಗೆ 50 ಲಕ್ಷ ಜನರಿಗೆ ಚಿಕಿತ್ಸೆ ಕೊಟ್ಟಿದ್ದೇವೆ. 5 ಲಕ್ಷ ಜನರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದೇವೆ ಎಂದರು. ಸಾಮಾಜಿಕ‌ ಜಾಲತಾಣಗಳು ಸಮಾಜ‌ ಕಟ್ಟಬೇಕಿತ್ತು. ಆದರೆ, ಅವು ಸಮಾಜವನ್ನು ತಪ್ಪು ದಾರಿಗೆ ತಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

1-qwewe

Star Air ;ತಿರುಪತಿಯಿಂದ ಬೆಳಗಾವಿಗೆ ವಿಮಾನ ರದ್ದು: ಪ್ರಯಾಣಿಕರ ಪರದಾಟ

1-wqewewqe

Vijayapura;ದೌರ್ಜನ್ಯದಿಂದ ನೊಂದು ದಯಾ ಮರಣಕ್ಕೆ ಮನವಿ ಸಲ್ಲಿಸಿದ ನಾಲ್ವರ ಕಟುಂಬ

Iran President

Iran ಅಧ್ಯಕ್ಷ ಮೃತ್ಯು; ಭಾರತದಾದ್ಯಂತ ಒಂದು ದಿನದ ಶೋಕಾಚರಣೆ

1-wqeqeqwe

List ಅಲ್ಲಿ ಹೆಸರಿಲ್ಲದೆ ಮಮತಾ ಬ್ಯಾನರ್ಜಿ ಸಹೋದರನಿಗೆ ಮತ ಹಾಕಲು ಸಾಧ್ಯವಾಗಲಿಲ್ಲ!

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Bandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆBandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆ

Bandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆ

Parameshwar

CBI ಗೆ ಕೊಡುವ ಅಗತ್ಯವಿಲ್ಲ; ಅಂಜಲಿ ಪ್ರಕರಣ ಕೂಡ ಸಿಐಡಿಗೆ:ಡಾ.ಜಿ.ಪರಮೇಶ್ವರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

2-hunsur

Hunsur: ಹೆದ್ದಾರಿ ಸರ್ವೆ ಕಾರ್ಯ ತಡೆದು ರೈತರ ಆಕ್ರೋಶ

1-sadsadas

Hunsur; ಬೈಕ್‌ಗಳ ಮುಖಾಮುಖಿ: ಓರ್ವ ಸಾವು, ಇಬ್ಬರು ಗಂಭೀರ

Hunasuru: ಸರಣಿ ಅಪಘಾತ; ಬೈಕ್ ಸವಾರ ಮೃತ್ಯು… ಎರಡು ಬಸ್, ಎರಡು ಕಾರು ಜಖಂ

Hunasuru: ಸರಣಿ ಅಪಘಾತ; ಬೈಕ್ ಸವಾರ ಮೃತ್ಯು… ಎರಡು ಬಸ್, ಎರಡು ಕಾರು ಜಖಂ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-qwewe

Star Air ;ತಿರುಪತಿಯಿಂದ ಬೆಳಗಾವಿಗೆ ವಿಮಾನ ರದ್ದು: ಪ್ರಯಾಣಿಕರ ಪರದಾಟ

1-wqewewqe

Vijayapura;ದೌರ್ಜನ್ಯದಿಂದ ನೊಂದು ದಯಾ ಮರಣಕ್ಕೆ ಮನವಿ ಸಲ್ಲಿಸಿದ ನಾಲ್ವರ ಕಟುಂಬ

Iran President

Iran ಅಧ್ಯಕ್ಷ ಮೃತ್ಯು; ಭಾರತದಾದ್ಯಂತ ಒಂದು ದಿನದ ಶೋಕಾಚರಣೆ

1-wqeqeqwe

List ಅಲ್ಲಿ ಹೆಸರಿಲ್ಲದೆ ಮಮತಾ ಬ್ಯಾನರ್ಜಿ ಸಹೋದರನಿಗೆ ಮತ ಹಾಕಲು ಸಾಧ್ಯವಾಗಲಿಲ್ಲ!

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.