ದಸರಾ ಖರೀದಿ ಉತ್ಸಾಹ ದೀಪಾವಳಿಯಲ್ಲೂ ಹೆಚ್ಚಲಿ

ಆರ್ಥಿಕತೆ ಚೇತರಿಕೆ ಲಕ್ಷಣ; ಕರಾವಳಿ ಉದ್ಯಮ ವಲಯದಲ್ಲಿ ಹೊಸ ಆಶಾಭಾವ

Team Udayavani, Oct 19, 2020, 6:15 AM IST

ದಸರಾ ಖರೀದಿ ಉತ್ಸಾಹ ದೀಪಾವಳಿಯಲ್ಲೂ ಹೆಚ್ಚಲಿ

ಸಾಂದರ್ಭಿಕ ಚಿತ್ರ

ಮತ್ತೆ ನವರಾತ್ರಿ ಬಂದಿದೆ. ಮುಂದೆ ದೀಪಾವಳಿ. ಹಬ್ಬದ ಸಡಗರವಿರುವುದೇ ಸಂಭ್ರಮಿಸುವುದಕ್ಕೆ. ಎಂಥ ಸಂಕಷ್ಟವಿದ್ದರೂ ಎಲ್ಲವನ್ನೂ ಹೊಂದಿಸಿ ಕೊಂಡು ಹಬ್ಬವನ್ನು ಸಂಭ್ರಮಿಸಿ ಬದುಕಿನ ಸಡಗರವನ್ನು ಹೆಚ್ಚಿಸಿಕೊಳ್ಳುವುದು ಸದಾ ಕರಾವಳಿಗರ‌ ಪದ್ಧತಿ. ಕೊರೋನೋತ್ತರ ಸಂದರ್ಭದ ಮೊದಲ ದೀಪಾವಳಿಗೆ ಮುನ್ನುಡಿಯಾಗಿ ಬಂದಿರುವ ದಸರಾದಲ್ಲಿ ಕಂಡು ಬಂದಿರುವ ಪ್ರಮುಖ ಲಕ್ಷಣವೆಂದರೆ ಮಾರುಕಟ್ಟೆ ಅಂದುಕೊಂಡದ್ದಕ್ಕಿಂತ ಹೆಚ್ಚಿನ ವೇಗವಾಗಿ ಪುಟಿದೇಳುತ್ತಿರುವುದು ಹಾಗೂ ಗ್ರಾಹಕರು ಖರೀದಿಗೆ ಮನಸ್ಸು ಮಾಡುತ್ತಿರುವುದು.

ಮಂಗಳೂರು/ಉಡುಪಿ: ಕೊರೋನೋತ್ತರ ಮೊದಲ ದಸರಾದ ಆಚರಣೆ ಸರಳವಾಗಿದ್ದರೂ ಕರಾವಳಿಯಾದ್ಯಂತ ಮಾರುಕಟ್ಟೆಯಲ್ಲಿ ನವ ಉತ್ಸಾಹ ಎದ್ದು ಕಾಣುತ್ತಿದೆ. ಗೃಹೋಪಯೋಗಿ ವಲಯದಲ್ಲಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಧನಾತ್ಮಕ ಪ್ರತಿಕ್ರಿಯೆ ಗ್ರಾಹಕರಿಂದ ವ್ಯಕ್ತವಾಗಿರುವುದು ದೀಪಾವಳಿಯತ್ತ ಹೊಸ ನಿರೀಕ್ಷೆ ಹುಟ್ಟು ಹಾಕಿದೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್‌ಡೌನ್‌, ಸರಕಾರದ ಮಾರ್ಗಸೂಚಿ ಇತ್ಯಾದಿ ಕಾರಣ ಗಳಿಂದ ಜನ ಖರೀದಿಗೆ ಬರಲಾರರೇನೋ ಎಂಬ ಆತಂಕವಿತ್ತು. ಅದೀಗ ದೂರವಾಗಿದ್ದು, ನವರಾತ್ರಿ ಸಂಭ್ರಮವನ್ನು ಹೆಚ್ಚಿಸಿಕೊಳ್ಳಲು ಜನರು ಮಾರುಕಟ್ಟೆ ಯತ್ತ ಮುಖ ಮಾಡಿದ್ದಾರೆ. ಹಾಗಾಗಿ ಸ್ಥಳೀಯ ಆರ್ಥಿಕತೆಗೂ ಹೊಸ ಉಮೇದು ಬಂದಿದೆ. ಉದ್ಯಮ ವಲಯದಲ್ಲೂ ಹೊಸ ಆಶಾಭಾವ ಮೂಡಿದೆ.

ಉದ್ಯಮ ವಲಯ ಎಣಿಸಿದ್ದಕ್ಕಿಂತಲೂ ಕ್ಷಿಪ್ರ ವಾಗಿ ಮಾರುಕಟ್ಟೆಯಲ್ಲಿ ಚೇತರಿಕೆಯ ಲಕ್ಷಣ ಕಂಡು ಬಂದಿರುವುದು ವಿಶೇಷ. ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಬಹುತೇಕ ಎಲ್ಲ ಗೃಹೋಪಯೋಗಿ ಮಳಿಗೆಗಳಲ್ಲಿ ಖರೀದಿ ಪ್ರಕ್ರಿಯೆಗೆ ಬಿರುಸು ಸಿಕ್ಕಿದೆ.

ದಸರಾ, ದೀಪಾವಳಿ ಸಂದರ್ಭ ಮನೆಗೆ ಗೃಹೋಪ ಯೋಗಿ ವಸ್ತು, ವಾಹನ ಇತ್ಯಾದಿ ಖರೀ ದಿಸಿದರೆ ಸಮೃದ್ಧಿಯ ಪ್ರತೀಕ ಎಂಬ ನಂಬಿಕೆಯೂ ಇದೆ. ಇದರೊಂದಿಗೆ ಉದ್ಯಮ ವಲಯವೂ ಹಲ ವಾರು ರಿಯಾಯಿತಿ, ಆಫ‌ರ್‌ಗಳನ್ನು ನೀಡುವ ಕಾರಣ ಗ್ರಾಹಕರು ಖರೀದಿಗೆ ಮುಗಿ ಬೀಳುತ್ತಾರೆ. ಲಕ್ಕಿ ಕೂಪನ್‌, ರಿಯಾಯಿತಿ ದರ, ಬಂಪರ್‌ ಬಹುಮಾನ-ತರಹೇವಾರಿ ಕೊಡುಗೆ‌ಗಳನ್ನೂ ಪ್ರಕಟಿಸಲಾಗಿದೆ.

ನಮಗಂತೂ ಉತ್ಸಾಹ ತುಂಬಿದೆ
“ಸದ್ಯದ ಮಾರುಕಟ್ಟೆ ಟ್ರೆಂಡ್‌ ನೋಡಿದಾಗ ಕೊರೊನಾ ಎಂಬ ನೆಪ ಎಲ್ಲೂ ಕಾಣುತ್ತಿಲ್ಲ. ಪ್ರತೀ ವರ್ಷದ ನವರಾತ್ರಿ ವೇಳೆಯಂತೆಯೇ ಈ ವರ್ಷವೂ ಖರೀದಿ ಚಟುವಟಿಕೆ ಇದೆ. ವಿಶೇಷ ಆಫರ್‌ ಗಳನ್ನು ನೀಡಿರುವ ಕಾರಣದಿಂದ ಗ್ರಾಹಕರ ಸಂಖ್ಯೆ ಮತ್ತಷ್ಟು ಹೆಚ್ಚುವ ಭರವಸೆಯಿದೆ’ ಎನ್ನುತ್ತಾರೆ ಬಂಟ್ಸ್‌ ಹಾಸ್ಟೆಲ್‌ನ ಪೈ ಸೇಲ್ಸ್‌ನ ಶಾಖಾಧಿಕಾರಿ ಶರತ್‌ ಕುಮಾರ್‌.

ಮೊಬೈಲ್‌, ಲ್ಯಾಪ್‌ಟಾಪ್‌ಗ್ಳಿಗೆ ಗ್ರಾಹಕರಿಂದ ಬಹು ಬೇಡಿಕೆ!
ಈ ಬಾರಿ ಉಳಿದ ಗೃಹೋಪಯೋಗಿ ಉತ್ಪನ್ನ ಗಳೊಂದಿಗೆ ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ಗ್ಳಿಗೆ ಬೇಡಿಕೆ ಹೆಚ್ಚುತ್ತಿದೆ. ಆನ್‌ಲೈನ್‌ ತರಗತಿ ಜಾರಿಯಲ್ಲಿರುವ ಕಾರಣವೂ ಇರಬಹುದು. ಹಿಂದೆ ಕಡಿಮೆ ಮೊತ್ತದ ಮೊಬೈಲ್‌ ಕೇಳುತ್ತಿದ್ದವರೂ ಈ ಬಾರಿ ಉತ್ತಮ ಗುಣಮಟ್ಟದ್ದು ಕೊಡಿ ಎನ್ನುತ್ತಿದ್ದಾರೆ. ಗ್ರಾಹಕರಾದ ರಾಜೇಶ್‌ ಅವರ ಪ್ರಕಾರ “ಈ ಬಾರಿ ಹಬ್ಬಕ್ಕೆ ಟಿವಿ ಖರೀದಿಸಲು ಯೋಚಿಸಿದ್ದೆವು. ಆದರೆ, ಮಕ್ಕಳಿಗೆ ಆನ್‌ಲೈನ್‌ ತರಗತಿಗಾಗಿ ಲ್ಯಾಪ್‌ಟಾಪ್‌ ಖರೀದಿಸುತ್ತಿದ್ದೇವೆ’ ಎಂದರು.

ಆಫರ್‌ ಸಿಕ್ಕರೆ ಖರೀದಿಗೆ ಮನಸ್ಸು!
ಈ ಮಾತು ಸುಳ್ಳಲ್ಲ ಎಂದವರು ಮಳಿಗೆ ಯಲ್ಲಿ ಫ್ಯಾನ್‌ ಖರೀದಿಸುತ್ತಿದ್ದ ಜೆಪ್ಪುವಿನ ವಿಮಲಾ ಅವರು. “ಈ ಬಾರಿ ದಸರಾ ಹಾಗೂ ದೀಪಾವಳಿ ಜತೆ ಜತೆಯಾಗಿ ಬರುತ್ತಿರುವ ಕಾರಣ ಮಳಿಗೆಗಳು ಹೆಚ್ಚಿನ ಕೊಡುಗೆ ನೀಡುತ್ತಿರುವುದು ಸ್ವಾಗತಾರ್ಹ. ಕೊರೊನಾ ದಿಂದಾಗಿ ಖರೀದಿಗೆ ಹಿಂಜರಿಯುವವರೂ ಸಹ ಇದೊಂದು ಅವಕಾಶವೆಂದು ಮನಸ್ಸು ಮಾಡುತ್ತಾರೆ’ ಎನ್ನುತ್ತಾರೆ.

ಇದೇ ಪುಷ್ಟೀಕರಿಸುವ ಉಡುಪಿಯ ಹರ್ಷ ಮಳಿಗೆಯಲ್ಲಿ ಖರೀದಿಯಲ್ಲಿ ತೊಡಗಿದ್ದ ಗ್ರಾಹಕ ವಿಘ್ನೇಶ್‌, ಹಿಂದೆಲ್ಲ ಯಾವಾಗ ಬೇಕಾದರೂ ಶಾಪಿಂಗ್‌ಗೆ ಹೋಗುತ್ತಿದ್ದೆವು. ಕೊರೊನಾ ಕಾರಣದಿಂದ ಖರೀದಿಯನ್ನು ಮುಂದೂಡಿದ್ದೆವು. ನವರಾತ್ರಿ ಅಂಗವಾಗಿ ವಿಶೇಷ ಕೊಡುಗೆಗಳೂ ಸಿಗುತ್ತಿವೆ. ಹಾಗಾಗಿ ಮನೆಯವರ ಜತೆಗೆ ಟಿವಿ ಖರೀದಿಸಲು ಬಂದಿದ್ದೇನೆ ಎಂದರು.

ಹಬ್ಬಕ್ಕೊಂದು ವಸ್ತು ಬೇಕು!
“ಹಬ್ಬಕ್ಕೆ ಯಾವುದಾದರೂ ವಸ್ತುವನ್ನು ಕೊಂಡೊಯ್ಯುವುದು ನಮ್ಮ ಸಂಪ್ರದಾಯ. ಹೀಗಾಗಿ ಕೊರೊನಾ, ಹಣಕಾಸಿನ ತೊಂದರೆ ಯಾವುದೂ ಹಬ್ಬದ ಸಮಯದಲ್ಲಿ ನಮಗೆ ಲೆಕ್ಕಕ್ಕಿಲ್ಲ. ಖರೀದಿ ಅಷ್ಟೇ ನಮ್ಮ ಗಮನ’ ಎನ್ನುತ್ತಾರೆ ಬೈಕಂಪಾಡಿಯ ಅಶೋಕ್‌.

ಲಾಕ್‌ಡೌನ್‌ ಸಂಪೂರ್ಣವಾಗಿ ತೆರವಾಗದ ಬೆನ್ನಿಗೇ ಬಂದ ಗಣೇಶನ ಹಬ್ಬಕ್ಕೆ ಈ ಉತ್ಸಾಹ ಬಂದಿರಲಿಲ್ಲ. ಆದರೀಗ ಆ ಛಾಯೆ ಎಲ್ಲೂ ತೋರುತ್ತಿಲ್ಲ ಎಂಬುದು ಉದ್ಯಮ ಹಾಗೂ ಗ್ರಾಹಕರ ಅಭಿಪ್ರಾಯ.

ಚೌತಿ ಸಂದರ್ಭದಲ್ಲಿ ಮೊಬೈಲ್‌ ಅಗತ್ಯವಿತ್ತಾದರೂ ಬೆಲೆ ಅಧಿಕವಿರುವ ಹಿನ್ನೆಲೆಯಲ್ಲಿ ಖರೀದಿಸಲು ಹಿಂಜರಿಕೆ ಇತ್ತು. ಇದೀಗ ಆರ್ಥಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ. ಪ್ರಸ್ತುತ ಮೊಬೈಲ್‌ ಖರೀದಿಸು ತ್ತಿದ್ದೇನೆ ಎನ್ನುತ್ತಾರೆ ಉಡುಪಿಯ ನಿಹಾಲ್‌.

ಮಂಗಳೂರಿನ ಕೆ.ಎಸ್‌. ರಾವ್‌ ರಸ್ತೆ ಯಲ್ಲಿರುವ ಹರ್ಷ ಮಳಿಗೆಯ ಸ್ಟೋರ್‌ ಮ್ಯಾನೇಜರ್‌ ಫರ್ಹಾಜ್‌ ಹೇಳುವುದು ಸುಧಾರಿಸುತ್ತಿರುವ ಮಾರುಕಟ್ಟೆಯ ಲಕ್ಷಣವನ್ನು ವಿವರಿಸಬಲ್ಲದು. “ಮೊದಲು ಕಡಿಮೆ ಬೆಲೆಯ ಕಡಿಮೆ ವಾರಂಟಿಯ ವಸ್ತುಗಳಿಗೆ ಮನಸ್ಸು ಮಾಡುತ್ತಿದ್ದವರು, ಈಗ ಸ್ವಲ್ಪ ಬೆಲೆ ಹೆಚ್ಚಾದರೂ ಮೌಲ್ಯಯುತ ವಸ್ತುಗಳ ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ. ವಿವಿಧ ಆಫ‌ರ್‌ಗಳು ಸದ್ಯ ಲಭ್ಯವಿರುವ ಕಾರಣವೂ ಅವರನ್ನು ಉತ್ತೇಜಿಸುತ್ತಿದೆ’ ಎಂಬುದು ಅವರ ಅಭಿಪ್ರಾಯ.

ಬೆಲೆ-ಹೊರೆ ಕಡಿಮೆ
ಸುಮಾರು 7 ತಿಂಗಳ ಬಳಿಕ ಪತ್ನಿ ಸಮೇತ ಶಾಪಿಂಗ್‌ ಬಂದಿದ್ದೇನೆ. ಹಬ್ಬದ ಸಂದರ್ಭ ವಿಶೇಷ ಆಫ‌ರ್‌ಗಳಿರುವ ಕಾರಣ ಖರೀದಿಗೆ ಹುಮ್ಮಸ್ಸು ಬರುತ್ತದೆ ಎನ್ನುತ್ತಾರೆ ಕುಂಜಿಬೆಟ್ಟು ದಿನೇಶ್‌ ರಾವ್‌. ಇದೇ ಅಭಿಪ್ರಾಯ ಸಂತೆ ಕಟ್ಟೆಯ ಮಂಜುನಾಥ ಪ್ರಭು ಅವರದ್ದು.

ಚೌತಿ ಸೇಲ್‌ಗೆ ಹೋಲಿಸಿದರೆ ದಸರಾದಲ್ಲಿ ವ್ಯವಹಾರ ಸಾಕಷ್ಟು ಹೆಚ್ಚಾಗಿದೆ. ಹಿಂದೆಯೂ ಹಬ್ಬದ ಸಂದರ್ಭದಲ್ಲಿ ಆಫ‌ರ್‌ ನೀಡುತ್ತಿದ್ದರೂ ಈ ಉತ್ಸಾಹ ತೋರುತ್ತಿರಲಿಲ್ಲ. ಇದು ಉತ್ತಮ ಬೆಳವಣಿಗೆ. ನಮ್ಮಲ್ಲಿ ಮನೆಗೆ ಸಂಬಂಧಿಸಿದ ವಸ್ತುಗಳಿಗಿಂತ ಹೆಚ್ಚಾಗಿ ಹೊಲಿಗೆ ಯಂತ್ರಕ್ಕೆ ಬೇಡಿಕೆ ಬರುತ್ತಿದೆ ಎನ್ನುತ್ತಾರೆ ಉಡುಪಿ ಉಷಾ ಸೇಲ್ಸ್‌ ಆ್ಯಂಡ್‌ ಸರ್ವೀಸ್‌ ಮಾಲಕ ಆನಂದ ಕಾರ್ನಾಡ್‌.

ಕೊರೊನಾದಿಂದ ಮಾರುಕಟ್ಟೆ ಚೇತರಿಸಿ
ಕೊಳ್ಳಲು ಎರಡು ವರ್ಷ ಬೇಕೆಂದುಕೊಂಡಿ ದ್ದೆವು. ಆದರೆ ಪ್ರಸ್ತುತ ಚಟುವಟಿಕೆ ಗಮನಿಸಿದರೆ, ನಾಲ್ಕೈದು ತಿಂಗಳಿನಲ್ಲಿ ಸಹಜ ಸ್ಥಿತಿಗೆ ಬರಬಹುದು. ಆರು ತಿಂಗಳಲ್ಲೇ ಹೆಚ್ಚಿನ ಪ್ರತಿಕ್ರಿಯೆ ಗ್ರಾಹಕರಿಂದ ಸಿಗುತ್ತಿದೆ ಎಂದವರು ಉಡುಪಿಯ ಟೈಟಾನ್‌ ವರ್ಲ್ಡ್ ಮಾಲಕ ಮಾಕ್ಸಿಮ್‌ ಎಸ್‌.

ಟಾಪ್ ನ್ಯೂಸ್

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.