ಬಿಸಿಯೂಟ ಪಡಿತರ ವಿತರಣೆಗೆ ಸರ್ಕಾರ ತಡೆ


Team Udayavani, Nov 3, 2020, 3:42 PM IST

ಬಿಸಿಯೂಟ ಪಡಿತರ ವಿತರಣೆಗೆ ಸರ್ಕಾರ ತಡೆ

 

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ ಕಾರಣದಿಂದ ಶಾಲೆಗಳು ಮುಚ್ಚಿರುವ ಕಾರಣ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿ ಗಳಿಗೆ ಬಿಸಿಯೂಟದ ಅಕ್ಕಿ ಮತ್ತು ಬೇಳೆಯನ್ನು ಮೇ ತಿಂಗಳವರೆಗೆ ವಿತರಿಸಲಾಗಿದೆ. ರಾಜ್ಯ ಸರ್ಕಾರದ ಆದೇಶದಂತೆ ಜೂನ್‌ ತಿಂಗಳಿಂದ ಬಿಸಿಯೂಟದ ಪಡಿತರ ವಿತರಣೆ ಮಾಡಿಲ್ಲ.

ಶಾಲೆಗಳು ತೆರೆಯದ ಕಾರಣ, ಸರ್ಕಾರಿ ಮತ್ತುಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ಮನೆಗಳಿಗೆ ಅವರ ಪಾಲಿನ ಅಕ್ಕಿ ಮತ್ತು ಬೇಳೆಯನ್ನು ಶಾಲೆಗಳು ವಿತರಣೆ ಮಾಡಿವೆ. ಮಾರ್ಚ್‌ 22 ರವರೆಗೂಶಾಲೆಗಳು ನಡೆದಿವೆ. ಅಂದಿನಿಂದ ಮೇ 31ರವರೆಗಿನ ಅಕ್ಕಿ, ಬೇಳೆ ಹಾಗೂ ತರಕಾರಿ ಬದಲಿಗೆ ಅಷ್ಟೇ ಮೌಲ್ಯದ ಬೇಳೆಯನ್ನು ಶಾಲೆಗಳು ವಿದ್ಯಾರ್ಥಿಗಳಿಗೆ ವಿತರಣೆ ಮಾಡಿವೆ.

ಈ ನಡುವೆ, ರಾಜ್ಯ ಸರ್ಕಾರ ಒಂದು ಆದೇಶ ಹೊರಡಿಸಿದ್ದು, ಈಗಾಗಲೇ ಬಿಪಿಎಲ್‌ ಕುಟುಂಬ ಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಹಾರಇಲಾಖೆಯಿಂದ ಪಡಿತರ ನೀಡುತ್ತಿರುವುದರಿಂದ, ಅದೇ ಕುಟುಂಬಗಳಿಗೆ ಮತ್ತೆ ಶಾಲೆಯ ಪಡಿತರ ವನ್ನೂ ನೀಡುವುದರಿಂದ ಒಂದೇ ಕುಟುಂಬಕ್ಕೆ ಎರಡೆರಡು ಪಡಿತರ ನೀಡಿದಂತಾಗುತ್ತದೆ. ಇದನ್ನು ಪರಿಶೀಲಿಸುವ ಅಗತ್ಯವಿರುವುದರಿಂದ ಬಿಸಿಯೂಟದ ಪಡಿತರ ನೀಡಿಕೆಯನ್ನು ಮುಂದಿನ ಆದೇಶದವರೆಗೆ ತಡೆ ಹಿಡಿದಿದೆ. ಹೀಗಾಗಿ ಜೂನ್‌ ನಿಂದ ಜಿಲ್ಲೆಯಲ್ಲಿ ಬಿಸಿಯೂಟದ ಪಡಿತರ ವಿತರಣೆ ಆಗಿಲ್ಲ.

ಜಿಲ್ಲೆಯ ಕೊಳ್ಳೇಗಾಲ ಮತ್ತು ಹನೂರು ತಾಲೂಕುಗಳಿಗೆ ಜೂನ್‌, ಜುಲೈ ತಿಂಗಳ ಬೇಳೆ, ಅಕ್ಕಿ ಬಂದಿದೆ. ಅದನ್ನು ಗೋದಾಮಿನಲ್ಲಿ ಸಂಗ್ರಹಿಸಲಾಗಿದೆ. ಸರ್ಕಾರದ ಆದೇಶದ ಕಾರಣ ಶಾಲೆಗಳಿಗೆ ವಿತರಿಸಿಲ್ಲ ಎಂದು ಅಕ್ಷರ ದಾಸೋಹ ಜಿಲ್ಲಾ ಅಧಿಕಾರಿ ಗುರುಲಿಂಗಯ್ಯ “ಉದಯವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ 81,474 ಮಕ್ಕಳಿಗೆ ಬಿಸಿಯೂಟ: ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 81,474 ವಿದ್ಯಾರ್ಥಿಗಳು ಬಿಸಿಯೂಟ ಯೋಜನೆಯ ವ್ಯಾಪ್ತಿಗೊಳಪಟ್ಟಿದ್ದಾರೆ. 1 ರಿಂದ 5 ನೇ ತರಗತಿ ವಿದ್ಯಾರ್ಥಿಗಳಿಗೆ 100 ಗ್ರಾಂ ಅಕ್ಕಿ, 20 ಗ್ರಾಂ ತೊಗರಿಬೇಳೆಯುಳ್ಳ ಬಿಸಿಯೂಟ ನೀಡಲಾಗುತ್ತಿದೆ. 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 150 ಗ್ರಾಂ ಅಕ್ಕಿ ಹಾಗೂ 30 ಗ್ರಾಂ ಬೇಳೆ ಪ್ರಮಾಣದ ಅನ್ನ ಸಾರು ನೀಡಲಾಗುತ್ತಿದೆ.

25 ಸಾವಿರ ಕ್ವಿಂಟಲ್‌ ಅಕ್ಕಿ: ಇಷ್ಟು ವಿದ್ಯಾರ್ಥಿಗಳಿಗೆ ಪಡಿತರ ವಿತರಿಸಲು, ಜಿಲ್ಲೆಯಲ್ಲಿ ತಿಂಗಳಿಗೆ ಅಂದಾಜು 2500 ಕ್ವಿಂಟಲ್‌ ಅಕ್ಕಿ ಮತ್ತು 600 ಕ್ವಿಂಟಲ್‌ ತೊಗರಿ ಬೇಳೆಯನ್ನು ಸರ್ಕಾರದಿಂದ ನೀಡಲಾಗುತ್ತದೆ. ಈ ಪಡಿತರ ಆಹಾರ ಇಲಾಖೆಯ ಉಗ್ರಾಣಗಳಲ್ಲಿ ಸಂಗ್ರಹವಾಗುತ್ತದೆ. ಪ್ರತಿ ತಿಂಗಳೂ ಶಾಲೆಗಳಿಗೆ ರವಾನೆಯಾಗುತ್ತದೆ. ಕೊಳ್ಳೇಗಾಲ ಮತ್ತು ಹನೂರು ತಾಲೂಕುಗಳ ಪಾಲಿನ ಅಕ್ಕಿ ಮತ್ತು ಬೇಳೆ ಗೋದಾಮಿನಲ್ಲಿದೆ. ಸರ್ಕಾರದ ಆದೇಶದ ಕಾರಣ ಶಾಲೆಗಳಿಗೆ ಕಳುಹಿಸಿಲ್ಲ. ಚಾಮರಾಜನಗರ, ಗುಂಡ್ಲುಪೇಟೆ,ಯಳಂದೂರು ತಾಲೂಕುಗಳಿಗೆ ಜೂನ್‌ನಿಂದ ಸರ್ಕಾರದಿಂದಲೇ ಪಡಿತರ ಕಳುಹಿಸಿಲ್ಲ. ಮೇ 31ರವರೆಗೆ ಬಂದಿರುವ ಪಡಿತರವನ್ನುಜಿಲ್ಲೆಯ ಎಲ್ಲಾ ಶಾಲೆಗಳೂ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿವೆ. ವಿದ್ಯಾರ್ಥಿಗಳು ರಜೆಗೆಂದು ಬೇರೆಡೆ ಹೋಗಿರುವ ಪ್ರಕರಣಗಳಲ್ಲಿ ಪ್ಯಾಕ್‌ ಮಾಡಿ ಮನೆಗಳಿಗೆ ವಿತರಿಸಲಾಗಿದೆ.

ಮೇ 31ರವರೆಗೂ ಜಿಲ್ಲೆಯ ಶಾಲೆಗಳ ಮೂಲಕ ವಿದ್ಯಾರ್ಥಿ ಗಳಿಗೆ ಬಿಸಿಯೂಟದ ಬದಲು ಅಷ್ಟೇ ಪ್ರಮಾಣದ ಪಡಿತರವನ್ನು ವಿತರಿಸಲಾಗಿದೆ. ರಾಜ್ಯ ಸರ್ಕಾರದ ಆದೇಶ ದನ್ವಯ ಜೂನ್‌ನಿಂದ ಜಿಲ್ಲೆಗೆ ಹನೂರು ಮತ್ತು ಕೊಳ್ಳೇಗಾಲ ತಾಲೂಕು ಹೊರತು ಪಡಿಸಿ ಪಡಿತರ ಬಂದಿಲ್ಲ. ಸರ್ಕಾರದ ಆದೇಶದಂತೆ ಮುಂದಿನ ಕ್ರಮ ವಹಿಸಲಾಗುವುದು.- ಗುರುಲಿಂಗಯ್ಯ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ

ಅಕ್ಷರ ದಾಸೋಹ ಕಚೇರಿಯಿಂದ ಶಾಲೆಗಳಿಗೆ ತಲುಪಿದೆ. ಶಾಲೆಯಿಂದ ನೇರವಾಗಿ ಮಕ್ಕಳಿಗೆ ತಲುಪಿಸಲಾಗಿದೆ. 8,9,10 ವಿದ್ಯಾರ್ಥಿಗಳಿಗೆ ತಲುಪಿಸಿದ್ದೇವೆ. ಮೇ 31ರ ವರೆಗೆ ನೀಡಿದ್ದೇವೆ. ನಂತರ ಸರ್ಕಾರದಿಂದ ಪಡಿತರ ಬಂದಿಲ್ಲ. ಕುಮಾರ್‌, ಮುಖ್ಯ ಶಿಕ್ಷಕರು, ಬಿಸಲವಾಡಿ

ಜೂನ್‌ವರೆಗೆ ಶಾಲೆಯ ಎಲ್ಲಾ  ಮಕ್ಕಳಿಗೂ ಬಿಸಿಯೂಟದ ಬದಲು ಪಡಿತರ ವಿತರಿಸಲಾಗಿದೆ. ಜೂನ್‌ ನಂತರ ವಿತರಿಸಿಲ್ಲ. ಈ ಬಗ್ಗೆ ವಿಚಾರಿಸ ದರೆ ಸರ್ಕಾರದ ಆದೇಶ ಬಂದಿಲ್ಲ ಎಂದು ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ಮಣಿ, ಎಸ್‌ಡಿಎಂಸಿ ಅಧ್ಯಕ್ಷ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹನೂರು

 

-ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತಗಟ್ಟೆ ಧ್ವಂಸ: ಕಾಡಲ್ಲಿ ಅವಿತಿದ್ದವರಿಗೆ ಧೈರ್ಯ ತುಂಬಿ ಗ್ರಾಮಕ್ಕೆ ಕರೆತಂದ ಅಧಿಕಾರಿಗಳು

ಮತಗಟ್ಟೆ ಧ್ವಂಸ: ಕಾಡಲ್ಲಿ ಅವಿತಿದ್ದವರಿಗೆ ಧೈರ್ಯ ತುಂಬಿ ಗ್ರಾಮಕ್ಕೆ ಕರೆತಂದ ಅಧಿಕಾರಿಗಳು

ಮಕ್ಕಳಿಗೆ ಲಸಿಕೆ: ಚಿಕ್ಕಬಳ್ಳಾಪುರ ಪ್ರಥಮ, ಚಾಮರಾಜನಗರ ದ್ವಿತೀಯ

ಮಕ್ಕಳಿಗೆ ಲಸಿಕೆ: ಚಿಕ್ಕಬಳ್ಳಾಪುರ ಪ್ರಥಮ, ಚಾಮರಾಜನಗರ ದ್ವಿತೀಯ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.