ಬಾಗಿಲು ಹಾಕಿದ ವಿಶ್ವದ ಅತೀ ದೊಡ್ಡ ಪಿಂಕ್ ಡೈಮಂಡ್ ಗಣಿ
Team Udayavani, Nov 4, 2020, 6:50 AM IST
ಮೆಲ್ಬರ್ನ್: ಜಗತ್ತಿನ ಅತಿ ದೊಡ್ಡ ಪಿಂಕ್ ಡೈಮಂಡ್ ಗಣಿ ಎಂಬ ಗರಿಮೆಗೆ ಪಾತ್ರವಾಗಿದ್ದ ಪಶ್ಚಿಮ ಆಸ್ಟ್ರೇಲಿಯಾದ ಆಗೈಲ್ ಮೈನ್ ಮಂಗಳವಾರ ಬಾಗಿಲು ಹಾಕಿದೆ.
ಜಾಗತಿಕ ಗಣಿಗಾರಿಕೆ ದೈತ್ಯ ರಿಯೋ ಟಿಂಟೋ ಒಡೆತನ ಆಗೈಲ್ ಮೈನ್‌ನಲ್ಲಿ ನಿಕ್ಷೇಪವೆಲ್ಲ ಖಾಲಿಯಾಗಿರುವುದು ಇದಕ್ಕೆ ಕಾರಣ.
ಪಿಂಕ್ ಡೈಮಂಡ್ ಜಗತ್ತಿನ ಅತೀ ದುಬಾರಿ ಹಾಗೂ ಅತ್ಯಪರೂಪದ ವಜ್ರವಾಗಿದ್ದು, ಪ್ರಸಕ್ತ 1 ಕ್ಯಾರೆಟ್ ಪಿಂಕ್ ಡೈಮಂಡ್‌ನ ಬೆಲೆ 3 ದಶಲಕ್ಷ ಡಾಲರ್‌ಗಳಷ್ಟಿದೆ.
ಇಂದು ಜಾಗತಿಕ ಮಾರುಕಟ್ಟೆಯಲ್ಲಿರುವ ಗುಲಾಬಿ ವಜ್ರಗಳಲ್ಲಿ ಆಗೈಲ್ ಗಣಿಯ ಉತ್ಪನ್ನದ ಪಾಲು 90 ಪ್ರತಿಶತದಷ್ಟಿದೆ.
ಆಗೈಲ್ ಗಣಿ ಮುಚ್ಚಿರುವುದರಿಂದಾಗಿ, ಮುಂದಿನ ದಿನಗಳಲ್ಲಿ ಈ ಅಪರೂಪದ ವಜ್ರ ಬೆಲೆ ಮತ್ತಷ್ಟು ಜಿಗಿಯಬಹುದು ಎನ್ನುತ್ತಾರೆ ತಜ್ಞರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nijjar ಕೇಸ್ ತನಿಖೆ ಮೂವರ ಬಂಧನಕ್ಕೆ ಮುಕ್ತಾಯವಾಗಿಲ್ಲ: ಕೆನಡಾ ಪ್ರಧಾನಿ
Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?
Pakistan; ಈಗ ಯೋಗ ತರಬೇತಿ ಅಧಿಕೃತವಾಗಿ ಆರಂಭ
Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ
China ಹೊಸ ಸಾಹಸ; ಭೂಮಿಗೆ ಕಾಣದ ಚಂದ್ರನ ಭಾಗದ ಮಾದರಿ ಸಂಗ್ರಹ