ಇಂಗ್ಲೆಂಡ್ ಕ್ರಿಕೆಟಿಗರಿಗೆ ಕೋವಿಡ್ ಸೋಂಕು? ರದ್ದುಗೊಂಡಿತು ಮೊದಲ ಏಕದಿನ
Team Udayavani, Dec 7, 2020, 8:00 AM IST
ಪಾರ್ಲ್: ಇಂಗ್ಲೆಂಡಿನ ಇಬ್ಬರು ಕ್ರಿಕೆಟಿಗರಿಗೆ ಕೋವಿಡ್-19 ಸೋಂಕು ತಗಲಿರುವ ಶಂಕೆಯಿಂದ ಆತಿಥೇಯ ದಕ್ಷಿಣ ಅಫ್ರಿಕಾ ಎದುರಿನ ಮೊದಲ ಏಕದಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ.
ಸೋಮವಾರ ಮತ್ತು ಬುಧವಾರ ಸರಣಿಯ ಇನ್ನೆರಡು ಪಂದ್ಯಗಳಿವೆ. ಇವನ್ನು ನಡೆಸಬೇಕೇ, ಬೇಡವೇ ಎನ್ನುವುದನ್ನು ಅಂತಿಮ ಪರೀಕ್ಷಾ ವರದಿಯ ಬಳಿಕ ನಿರ್ಧರಿಸಲಾಗುತ್ತದೆ ಎಂದು ಹೇಳಲಾಗಿದೆ. ಆದರೆ ಸೋಮವಾರವೇ ಎರಡನೇ ಪಂದ್ಯವಿರುವುದರಿಂದ ಅದು ರದ್ದಾಗುವ ಸಾಧ್ಯತೆಯೇ ಜಾಸ್ತಿ.
ಆತಂಕ ಹುಟ್ಟಿಸಿರುವ ಸಂಗತಿಯೆಂದರೆ, ಎರಡೂ ತಂಡಗಳಿದ್ದ ಜೈವಿಕ ಸುರಕ್ಷಾ ವಲಯದಲ್ಲಿನ ಇಬ್ಬರು ಹೊಟೇಲ್ ಸಿಬಂದಿಗೆ ಕೋವಿಡ್ ಬಂದಿರುವುದು. ಆದ್ದರಿಂದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ.
ಪಂದ್ಯ ರದ್ದಾಗಿರುವುದಕ್ಕೆ ಇಂಗ್ಲೆಂಡ್ ಬೇಸರ ವ್ಯಕ್ತಪಡಿಸಿದರೂ, ನಮ್ಮ ಮೊದಲ ಆದ್ಯತೆ ಆಟಗಾರರ ಆರೋಗ್ಯ ಎಂದಿದೆ. ಜೈವಿಕ ಸುರಕ್ಷಾ ವಲಯ ಇನ್ನಷ್ಟು ಬಿಗುವಾಗಿರಬೇಕಿತ್ತು ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Desi Swara: ಅಪಹಾಸ್ಯ ನೀಡಿದ ಅದೃಷ್ಟ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
Desi Swara: ದುಬೈ ವರ್ಲ್ಡ್ ಕಪ್ 2024- ಗೆಲ್ಲುವ ಅರಬ್ ಕುದುರೆಗಳ ನಾಗಾಲೋಟ!