ಇಂದು ಸುಬ್ರಹ್ಮಣ್ಯ(ಸ್ಕಂದ) ಷಷ್ಠಿ ಸಂಭ್ರಮ


Team Udayavani, Dec 20, 2020, 6:40 AM IST

ಇಂದು ಸುಬ್ರಹ್ಮಣ್ಯ(ಸ್ಕಂದ) ಷಷ್ಠಿ ಸಂಭ್ರಮ

ಮಾರ್ಗಶಿರ ಶುದ್ಧ ಷಷ್ಠಿ ದಿನವಾದ ರವಿವಾರ ನಾಡಿನೆಲ್ಲೆಡೆ ಸ್ಕಂದ, ಷಣ್ಮುಖ, ಕಾರ್ತಿಕೇಯ, ಕುಮಾರ…ಎಂಬೆಲ್ಲ ಹೆಸರುಗಳಿಂದ ಕರೆಯಲ್ಪಡುವ ಶ್ರೀ ಸುಬ್ರಹ್ಮಣ್ಯನ ಪರ್ವ ದಿನ. ಸುಬ್ರಹ್ಮಣ್ಯನ ದೇಗುಲಗಳಲ್ಲಿ, ನಾಗಾರಾಧನೆಯ ತಾಣಗಳಲ್ಲೂ ಇಂದು ನಾಗನಿಗೆ ವಿಶೇಷ ಪೂಜೆ, ಸೇವೆಗಳು ನಡೆಯುತ್ತವೆ. ವರ್ಷಂಪ್ರತಿಯಂತೆ ಈ ಬಾರಿಯೂ ಷಷ್ಠಿ ಮಹೋತ್ಸವದ ಆಚರಣೆಗೆ ನಾಡಿನೆಲ್ಲೆಡೆಯ ಅದರಲ್ಲೂ ನಾಗಾರಾಧನೆಯ ಕೇಂದ್ರ ಸ್ಥಾನವಾದ ರಾಜ್ಯದ ಕರಾವಳಿಯ ಸುಬ್ರಹ್ಮಣ್ಯ ದೇಗುಲಗಳು ಮತ್ತು ನಾಗ ಕ್ಷೇತ್ರಗಳು ಸಜ್ಜಾಗಿವೆ. ಕೋವಿಡ್‌ ಹಿನ್ನೆಲೆಯಲ್ಲಿ ಈ ಬಾರಿ ದೇಗುಲಗಳಲ್ಲಿ ಪೂರ್ವಶಿಷ್ಟ ಸಂಪ್ರದಾಯದ ಪ್ರಕಾರ ಷಷ್ಠಿ ಮಹೋತ್ಸವವನ್ನು ಸರಕಾರದ ನಿಯಮಾವಳಿಯಂತೆ ಆಚರಿಸಲು ಸಕಲ ಸಿದ್ಧತೆಗಳು ನಡೆದಿವೆ.

ನಾರಾಯಣನ ಮಗ ಮನ್ಮಥ (ಕಾಮ)ನೇ ಚತುರ್ಮುಖನ ಮಗ ಸನತುRಮಾರನು. ಇವನೇ ಶಿವಪಾರ್ವತಿಯರ ಮಗ ಸುಬ್ರಹ್ಮಣ್ಯ. ಇವನಿಗೆ ಆರು ಮುಖವಿರುವ ಕಾರಣ ಷಣ್ಮುಖನು ಎನಿಸಿದ್ದಾನೆ.

ದೇವತೆಗಳ ಸೇನೆಯ ಒಡೆಯನೀತ ದೇವಸೇನಾಪತಿ. ಯೋಗ್ಯತೆಯಲ್ಲಿ ಇಂದ್ರ ನಿಗೆ ಸಮ. ಅಂದರೆ-ನಾರಾಯಣ ಲಕ್ಷ್ಮೀ ವಿಧಿ, ವಾಯು, ಸರಸ್ವತೀ, ಭಾರತೀ, ಗರುಡ ಶೇಷ ರುದ್ರ, ಷಣ್ಮಹಿಷಿಯರು ಸುಪರ್ಣೀ ವಾರುಣೀ ಪಾರ್ವತಿಯರಿಗಿಂತ ಮಾತ್ರ ಕಿರಿಯನು. ಸೂರ್ಯ, ಚಂದ್ರ, ಯಮ, ವರುಣ, ಅಗ್ನಿ, ಗುರು, ಗಣಪ, ಶನಿ, ವಾಸುಕಿ, ತಕ್ಷಕ ಮುಂತಾದ ಉಳಿದ ದೇವತೆಗಳೆಲ್ಲರೂ ಇವನಿಗಿಂತ ಕಿರಿಯರು.

ಈತನ ವಾಹನ – ಮಯೂರ, ಧ್ವಜ- ಕುಕ್ಕುಟ, ಪ್ರಧಾನ ಶಿಷ್ಯ- ನಾರದ, ಮುಖ್ಯ ಆಯುಧ – ಶಕ್ತಿ, ಅವತಾರ – ಭರತ (ರಾಮನ ತಮ್ಮ), ಪ್ರದ್ಯುಮ್ನ (ಕೃಷ್ಣನ ಮಗ). ಚಕ್ರ, ಶಂಖ ಮೊದಲಾದ ಭಗವಂತನ ಆಯುಧಗಳೆಲ್ಲವೂ ಭಗವಂತನ ರೂಪಗಳೇ ಆಗಿವೆ. ಅವು ಚಿನ್ಮಯಗಳು. ಹಾಗೆಯೇ ಭಗವಂತನ ಆಯುಧಗಳೂ ಆಭರಣಗಳೂ ಎಲ್ಲವೂ ಲಕ್ಷ್ಮೀ ಸ್ವರೂಪಗಳೂ ಆಗಿರುತ್ತವೆ. ಅವೂ ಚಿನ್ಮಯಗಳೇ.

ಸುದರ್ಶನ ಚಕ್ರ ದೇವತೆಯಾಗಿ ದೇವತೆಗಳ ರಕ್ಷಣೆ ಯಲ್ಲಿ ದೇವಸೇನಾ – ಪನಾದ ಸುಬ್ರಹ್ಮಣ್ಯನು ಭಗವಂತನ ಕೈಯಲ್ಲಿ ಮೆರೆ ಯುತ್ತಿರುವನು. ಹೀಗಾಗಿ ಮಾರ್ಗ ಶಿರ ಶುದ್ಧ ಷಷ್ಠಿಯಂದು ಈತನನ್ನು ಆರಾಧನೆಗೈಯಬೇಕು. ಆ ದಿನವನ್ನು ಚಂಪಾಷಷ್ಠಿ ಎಂದೂ ಕರೆಯುತ್ತಾರೆ. ಚಂಪಾಷಷ್ಠಿಯಂದು ಸುಬ್ರಹ್ಮಣ್ಯ, ನಾಗ ದೇವರ ಸನ್ನಿಧಿಗಳಲ್ಲಿ ವಿಶೇಷ ಪೂಜೆ ಪುರಸ್ಕಾರಗಳು ನಡೆಯುತ್ತವೆ. ಈತನಿಗೆ ನಿವೇದಿಸಿದ ಪ್ರಸಾದಗಳನ್ನು ಭಕ್ತಿಯಿಂದ ಸ್ವೀಕರಿಸುತ್ತಾರೆ.

ಪರಿವಾರ ದೇವತೆಗಳು
ವಿರಿಂಚನು ದೇವತೆಗಳ ಸೇನಾಪತ್ಯದಲ್ಲಿ ಸ್ಕಂದನನ್ನು ಅಭಿಷೇಕಗೈದಾಗ ನಾರಾಯ ಣನು ಚಕ್ರ ವಿಕ್ರಮ ಸಂಕ್ರಮರನ್ನು ಪಾರಿಷದರನ್ನಾಗಿ ಸ್ಕಂದನಿಗೆ ನೀಡಿದನು. ಅದರಂತೆ ಉಳಿದ ಬ್ರಹ್ಮ, ವಾಯು, ಶಿವ, ಪಾರ್ವತಿ, ಅಗ್ನಿಯೇ ಮೊದಲಾದ ದೇವತೆ ಗಳೆಲ್ಲರೂ ಸೇವಕರನ್ನು ಕಾಣಿಕೆಯಿತ್ತರು.

ಸುಬ್ರಹ್ಮಣ್ಯನ ಆರಾಧನೆ
ಶಿವನ ತೇಜಸ್ಸನ್ನು ಅಗ್ನಿ ಸಹಿಸಲಾಗದೆ ಗಂಗೆಯಲ್ಲಿ ಚೆಲ್ಲಿದನು. ಗಂಗೆ ಧಾರಣೆ ಮಾಡಲಾಗದೆ ಹಿಮಾಲಯದ ತಪ್ಪಲಲ್ಲಿ ಹುಲ್ಲಿನ ಹಾಸಿನಲ್ಲಿ ಒರೆಸಿದಳು. ಬಿದಿಗೆಯಲ್ಲಿ ಬೆಳಕು ಕಂಡ ತದಿಗೆಯಲ್ಲಿ ಮಗುವಾದ ಚೌತಿಯಲ್ಲಿ ತುಂಬಿನಿಂತ ಮಗುವಿನ ಬಳಿಗೆ ಬಂದು ಆರು ಕೃತ್ತಿಕೆ ಯರು ಹಾಲುಣಿಸಿದರು. ಪಂಚಮಿ ಯಂದು ಎಲ್ಲ ದೇವತೆಯರು ಸ್ತುತಿಸಿದ್ದಾರೆ. ಪಕ್ಕದ ಬೆಟ್ಟಗಳು ಮಗುವಿನ ತೇಜಸ್ಸಿನಿಂದ ಬಂಗಾರವಾದವು. ಅಗ್ನಿ ಪುತ್ರನಾದ ಸ್ಕಂದನ ಈ ದಿವ್ಯಶಕ್ತಿಗಾಗಿ ಸುವರ್ಣದಾನವನ್ನು ವಿಧಿಸಿದ್ದಾರೆ.
ಷಷ್ಠಿಯಂದು ಸರಸ್ವತೀ ತೀರದಲ್ಲಿ ಅಭಿಷಿಕ್ತನಾದ ಸ್ಕಂದನಿಗೆ ವಿಧಿ ಕೃಷ್ಣಾಜಿನ ವನ್ನು ಕೊಟ್ಟನು. ವಿಷ್ಣು ವೈಜಯಂತಿ ಮಾಲೆ ನೀಡಿದ. ರುದ್ರ ಮಹಾಘಂಟೆ, ಪತಾಕೆ, ಮೂವತ್ತು ಸಾವಿರ ಯೋಧರ ಧನಂಜಯ ಸೇನೆ ನೀಡಿದ. ಪಾರ್ವತಿ ಕೆಂಪೆರಡು ಬಟ್ಟೆ ನೀಡಿದಳು. ಗರುಡನು ಮಯೂರನನ್ನು ನೀಡಿದ. ಇಂದ್ರ ಭದ್ರ ಶಾಖಾ ಎಂಬ ಶಕ್ತಿ ಆಯುಧ ನೀಡಿದ. ಅರುಣ ತಾಮ್ರಚೂಡನೆಂಬ ಕೆಂಪುಕೋಳಿಯನ್ನು ನೀಡಿದ. ಹಿಮಾಲಯ ರತ್ನಪೀಠ ನೀಡಿದ. ವಿಶ್ವಾಮಿತ್ರ ಸಂಸ್ಕಾರ ಮಾಡಿದ. ಗುರು ಅಭಿಷೇಕದ ಹೋಮ ಮಾಡಿ ದಂಡ ನೀಡಿದ. ಗಂಗೆ ಕಮಂಡಲು ಕೊಟ್ಟಳು.

ಇಂದ್ರ ನೀಡಿದ ದೇವಸೇನೆ ಯಾದ ಷಷ್ಠಿàದೇವಿಯನ್ನು ಮಡದಿಯನ್ನಾಗಿ ಪಡೆದ ಸ್ಕಂದನು ಎಲ್ಲ ದೇವತೆ ಗಳ ಸಹಾಯದಿಂದ ಬಹು ರೂಪದ ಬಹುಭಾಷೆಯ ತನ್ನ ಅನುಯಾಯಿ ಗಳಿಂದ ಕೂಡಿಕೊಂಡು ಲಕ್ಷದೈತ್ಯರೊಡನೆ ಬಂದ ತಾರಕನನ್ನು, ಅಷ್ಟಪದ್ಮದೈತ್ಯರ ಮಹಿ ಷನನ್ನು, ಕೋಟಿದೈತ್ಯರ ತ್ರಿಪಾದನನ್ನು, ದಶನಿಖರ್ವ ದೈತ್ಯರ ಹ್ರದೋದರನನ್ನೂ ಸಂಹರಿಸಿ ಲೋಕಕ್ಕೆ ಮಂಗಳವನ್ನು ನೀಡಿದ. ಷಷ್ಠಿಯಂದು ಸುಬ್ರಹ್ಮಣ್ಯನನ್ನು ಅವ ನೊಳಗಿನ ಪ್ರದ್ಯುಮ್ನ ನಾರಾಯಣನನ್ನು ಪ್ರಾರ್ಥಿಸಿರಿ.

– ಡಾ| ರಾಮನಾಥ ಆಚಾರ್ಯ

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.