ಹೊಸ ರೂಪದಲ್ಲಿ ಕೋವಿಡ್: ತೀವ್ರ ಹರಡುವಿಕೆ ಆತಂಕ
Team Udayavani, Dec 21, 2020, 12:35 AM IST
ಸಾಂದರ್ಭಿಕ ಚಿತ್ರ
ಲಂಡನ್: ಕೊರೊನಾಕ್ಕೆ ಲಸಿಕೆ ಬಂತು, ಒಂದಷ್ಟು ನೆಮ್ಮದಿಯಿಂದ ಇರಬಹುದು ಎಂಬ ನಿರೀಕ್ಷೆಯಲ್ಲಿದ್ದ ಬ್ರಿಟನಿನ ಜನರಿಗೆ ಕೋವಿಡ್ ವೈರಸ್ನ ಹೊಸ ತಳಿ ಪತ್ತೆಯಾಗಿರುವುದು ಆತಂಕ ಹುಟ್ಟಿಸಿದೆ. ಇಲ್ಲಿನ ಆರೋಗ್ಯ ಇಲಾಖೆ ಪ್ರಕಾರ, ವೈರಸ್ನ ಹೊಸ ತಳಿ ಪತ್ತೆಯಾಗಿದ್ದು, ಇದು ನಿಯಂತ್ರಣ ಮೀರಿ ಹಬ್ಬುತ್ತಿದೆ. ಎಚ್ಚರಿಕೆಯಿಂದ ಇರಲು ನಾಗರಿಕರಿಗೆ ಸೂಚಿಸಲಾಗಿದ್ದು, ಕಠಿನ ಲಾಕ್ಡೌನ್ ಘೋಷಣೆ ಮಾಡಲಾಗಿದೆ.
ನೆದರ್ಲೆಂಡ್, ಇಟಲಿ ಬ್ರಿಟನ್ಗೆ ವಿಮಾನ ಸಂಚಾರ ರದ್ದುಪಡಿಸಿವೆ. ಇನ್ನೂ ಕೆಲವು ಐರೋಪ್ಯ ದೇಶಗಳು ಇದೇ ನಿಟ್ಟಿನಲ್ಲಿ ಚಿಂತನೆ ನಡೆಸಿವೆ. ಆದರೆ ಈ ವೈರಸ್ನ ತೀವ್ರತೆ ಕೊಂಚ ಕಡಿಮೆ ಇದ್ದು, ಹೆಚ್ಚು ಸಾವು ಸಂಭವಿಸುವ ಸಾಧ್ಯತೆ ಕಡಿಮೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಬ್ರಿಟನ್ನಲ್ಲಿ ಕೊರೊನಾ ವೈರಸ್ನ ಹೊಸ ತಳಿ ಪತ್ತೆಯಾಗಿರುವುದು ಭಾರತದಲ್ಲೂ ಕಳವಳ ಮೂಡಿಸಿದ್ದು, ದೇಶದಲ್ಲಿ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಸೋಮವಾರ ಜಂಟಿ ನಿಗಾವಣ ಸಮೂಹದ ತುರ್ತು ಸಭೆ ಕರೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nijjar ಕೇಸ್ ತನಿಖೆ ಮೂವರ ಬಂಧನಕ್ಕೆ ಮುಕ್ತಾಯವಾಗಿಲ್ಲ: ಕೆನಡಾ ಪ್ರಧಾನಿ
Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?
Pakistan; ಈಗ ಯೋಗ ತರಬೇತಿ ಅಧಿಕೃತವಾಗಿ ಆರಂಭ
Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ
China ಹೊಸ ಸಾಹಸ; ಭೂಮಿಗೆ ಕಾಣದ ಚಂದ್ರನ ಭಾಗದ ಮಾದರಿ ಸಂಗ್ರಹ