ಮೊಬೈಲ್‌ ಮೇಲೇರುವ ಮಾಲ್ವೇರುಗಳು

Team Udayavani, Dec 28, 2020, 8:01 PM IST

ಮೊಬೈಲ್‌ ಮೇಲೇರುವ ಮಾಲ್ವೇರುಗಳು

ಮುಂಚೆಯೆಲ್ಲಾ ಮೊಬೈಲ್‌ ಎಂಬುದು ಶ್ರೀಮಂತರ ಸ್ವತ್ತಾಗಿತ್ತು. ಒಂದು ಕಾಲ್‌ ಮಾಡೋಕೆನಿಮಿಷಕ್ಕೆ ಹದಿನಾರು ರೂ. ಕೊಡೋ ಕಾಲ ಹೋಗಿ ಮೂರು ತಿಂಗಳಿಗೆ ಐನೂರುಕೊಟ್ಟು ಬಿಡಿ, ಎಷ್ಟಾದ್ರೂ ಮಾತಾಡ್ಕೊಳ್ಳಿ ಅನ್ನೋ ಕಾಲ ಬಂದಿದೆ. ಕೆಲವೇ ಸಾವಿರಕ್ಕೆ ಒಳ್ಳೊಳ್ಳೆ ಸ್ಮಾರ್ಟ್‌ ಫೋನ್‌ಗಳು ಎಲ್ಲರ ಜೇಬು ಸೇರಿವೆ. ಅದಕ್ಕೆ ಸರಿಯಾಗಿ ಡಿಜಿಟಲ್‌ ಪೇಮೆಂಟ್‌ ರಂಗದಲ್ಲಿನ ಕ್ರಾಂತಿಯಿಂದಾಗಿ ಹಣ ವರ್ಗಾವಣೆಗೂ ಮೊಬೈಲ್‌ ಅವಲಂಬನೆ ಹೆಚ್ಚಾಗಿದೆ. ಹೆಚ್ಚೆಚ್ಚು ಜನರ ಬಳಿ ಮೊಬೈಲ್‌ ಬಂದಂತೆಲ್ಲಾ ಈ ಮೊಬೈಲ್‌ ಮುಖಾಂತರವೇ ಜನರಮಾಹಿತಿಗೆ, ಗೌಪ್ಯತೆಗೆ, ದುಡ್ಡಿಗೆ ಕನ್ನಹಾಕಬಾರದ್ಯಾಕೆ? ಎಂಬ ಕಳ್ಳರತಲೆಯೂ ಚುರುಕಾಗಿದೆ. ಮೊಬೈಲ್‌ ಮೂಲಕ ಮಾಹಿತಿ, ದುಡ್ಡಿಗೆ ಕನ್ನವಾ? ಅದೇನೋ ಮಾಲ್ವೇರು ಅಂದ್ರಲ್ಲಾ, ಅದೇನು ಅಂದಿರಾ? ಮುಂದೆ ಓದಿ.

ಮೊಬೈಲ್‌ ಮಾಲ್ವೇರುಗಳು :

ನಮಗೆಲ್ಲಾ ಜ್ವರ, ಥಂಡಿ ಆದ್ರೆ ಅದು ಬ್ಯಾಕ್ಟೀರಿಯಾಗಳಿಂದ, ವೈರಸ್ಸುಗಳಿಂದ ಬರುತ್ತೆ ಅಂತಾರೆವೈದ್ಯರು. ಅದೇ ಥರ ಮೊಬೈಲ್‌ಗಳನ್ನು ಕಾಡೋ ವೈರಸ್ಸು, ಟ್ರೋಜನ್ನು,ವರ್ಮ್, ಸೈವೇರ್‌, ಬ್ಯಾಕ್‌ಡೋರ್‌, ಡ್ರಾಪರ್‌ ಮುಂತಾದವುಗಳನ್ನು ಮೊಬೈಲ್‌ಮಾಲ್ವೇರ್‌ ಎನ್ನಲಾಗುತ್ತೆ. ಇವೇನು, ಇವುಮೊಬೈಲ್‌ಗೆ ಹೇಗೆ ಹಾನಿ ಮಾಡಬಹುದು ಎಂದು ನೋಡೋಣ.

ವೈರಸ್‌ ಇದು ತನ್ನ ಕಾರ್ಯನಿರ್ವಹಣಾ ವಿಧಿ(ಕೋಡ್‌) ಅನ್ನು ಬೇರೆ ಪ್ರೋಗ್ರಾಂಗಳಲ್ಲಿ ತುರುಕಿ ತನ್ನ ಸಂಖ್ಯೆಯನ್ನುಬೆಳೆಸುತ್ತಾ ಹೋಗುತ್ತೆ. ಇದರಿಂದ ಏನಾಗುತ್ತೆ ಅಂದಿರಾ? 2016ರಲ್ಲಿ ಬಂದ ಹಮ್ಮಿಂಗ್‌ ಬ್ಯಾಡ್‌ ಎಂಬ ವೈರಸ್‌ 1 ಕೋಟಿ ಆಂಡ್ರ್ಯಾಡ್‌ ಬಳಕೆದಾರರ ಮೊಬೈಲಲ್ಲಿ ನುಸುಳಿತ್ತು! ಅವರ ಮಾಹಿತಿಗಳನ್ನೆಲ್ಲಾ ಜಾಹಿರಾತು ದಾರರಿಗೆ ಮಾರಿತ್ತು! ಗ್ರಾಹಕರಿಗೆ ಅರಿವಿಲ್ಲದಂತೆ ಅವರ ಮೊಬೈಲಿನಿಂದ ಜಾಹಿರಾತುಗಳ ಕ್ಲಿಕ್‌ ಮಾಡಿ ಅದೆಷ್ಟೋ ದುಡ್ಡು ದೋಚಿತ್ತು!

ವರ್ಮ್ :

ಎಸ್‌ಎಂಎಸ್‌ ಗಳ ಮೂಲಕ ಬರೋ ಇವುಗಳಿಗೆ ನಿಯಂತ್ರಣವಿಲ್ಲದಂತೆ  ಬೆಳೆಯುವುದೇ ಕೆಲಸ. ಎಸ್‌ಎಂಎಸ್‌ ಅಲ್ಲಿ ಬಂದ ಯಾವುದೋ ಗೊತ್ತಿರದ ಲಿಂಕ್‌ ಒತ್ತಿದಿರಿ ಎಂದರೆ ಇವುಗಳು ನಿಮ್ಮ ಮೊಬೈಲನ್ನು ಆಕ್ರಮಿಸೋ ಎಲ್ಲಾ ಲಕ್ಷಣಗಳೂಇವೆ! ಮೊಬೈಲಲ್ಲಿ ಹೇಗಿದ್ರೂ ಜಿಬಿ ಗಟ್ಟಲೇ ಜಾಗವಿದೆ, ಬೆಳೆಯಲಿ ಬಿಡಿ ಎಂದು ನಿರ್ಲಕ್ಷಿಸುವಂತಿಲ್ಲ. ತಪ್ಪು ತಪ್ಪುಮಾಹಿತಿಯನ್ನು ಮೊಬೈಲು ತನ್ನ ಗ್ರಾಹಕರಿಗೆ ನೀಡುವಂತೆ ಇದು ಮಾಡಬಲ್ಲದು. ಮೊಬೈಲು ತನ್ನಿಂತಾನೇ ಬೇಕಾದ ತಾಣವನ್ನು ತೆಗೆದು ಬೇಕಾದ್ದದ್ದು ಮಾಡಲು ಆ ಮೊಬೈಲ್‌ ಒಡೆಯನ ಅಪ್ಪಣೆ ಬೇಡ ಇವಿದ್ದರೆ! ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ ಅಲ್ಲಿರೋ ಎಲ್ಲರಿಗೆ, ನಿಮ್ಮ ಬ್ಲೂಟೂತ್‌ ಸಂಪರ್ಕದಲ್ಲಿರೋ ಎಲ್ಲರಿಗೂ ಇದು ಸೋಂಕನ್ನು ಹಚ್ಚಬಲ್ಲದು !

ಟ್ರೋಜನ್ನುಗಳು :

ಮುಂಚಿನವುಗಳಿಗಿಂತ ಸ್ವಲ್ಪ ಭಿನ್ನವಾದ ಇವುಗಳಿಗೆ ಕಾರ್ಯನಿರ್ವಹಿಸಲು ಮೊಬೈಲ್‌ಒಡೆಯನ ಅನುಮತಿ ಬೇಕು. ಹಾಗಾಗೇ ಇವು ತಮ್ಮ ಗುರುತು ಮರೆಸಿಕೊಂಡುದಾಳಿಯಿಡುತ್ತವೆ. ಯಾವುದೋ ವೆಬ್‌ಸೈಟಿಗೆಹೋದಾಗ ಅದು ಯಾವುದೋ ಉಚಿತ ಆ್ಯಪ್‌ಅನ್ನು ಡೌನ್‌ ಲೋಡ್‌ ಮಾಡಲುಹೇಳುತ್ತಿದೆಯೆಂದರೆ, ಆ ಆ್ಯಪ್‌ ಟ್ರೋಜನ್‌ ಆಗಿರುವ ಎಲ್ಲಾ ಸಾಧ್ಯತೆಯೂ ಇದೆ. ನೀವೇ ಆಮಂತ್ರಣ ಕೊಟ್ಟು ಕರೆದ ಮೇಲೆ ಇದು ಸುಮ್ಮನೇ ಬಿಟ್ಟಿತೆ? ನಿಮ್ಮಲ್ಲಿರೋ ಆ್ಯಪ್‌ಗಳನ್ನು ನಿಷ್ಕ್ರಿಯಗೊಳಿಸಿ, ನಿಮ್ಮ ಇ ಮೇಲ್, ಕ್ಯಾಲೆಂಡರ್‌ ಮುಂತಾದವುಗಳಲ್ಲಿರೋ ಎಲ್ಲಾ ಮಾಹಿತಿಯನ್ನು ದೋಚಿ ತನ್ನ ಸರ್ವರ್‌ ಗೆಕಳುಹಿಸುತ್ತವೆ. ನಿಮಗೆ ಆ ಮಾಹಿತಿ ಬೇಕು ಎಂದರೆ ಫೋನ್‌ ಸರಿಯಾಗಬೇಕು ಎಂದರೆ ದುಡ್ಡು ಕೊಡಿ ಎನ್ನುತ್ತೆ !

ಮಾಲ್ವೇರುಗಳಿಂದ ದೂರವಿರೋದು ಹೇಗೆ? :  ಕಂಪ್ಯೂಟರಿನ ಸುರಕ್ಷತೆಗೆ ಎಷ್ಟು ಎಚ್ಚರ ವಹಿಸುತ್ತೀರೋ ಅಷ್ಟೇ ಎಚ್ಚರವನ್ನು ಮೊಬೈಲ್‌ಕುರಿತೂ ವಹಿಸಿ, ಗೊತ್ತಿಲ್ಲದ ನಂಬರ್‌ಗಳಿಂದಬರೋ ಸಂದೇಶಗಳಿಂದ, ಸಂಶಯಾಸ್ಪದಲಿಂಕುಗಳಿಂದ, ವೆಬ್‌ ಸೈಟುಗಳಿಂದ ದೂರವಿದ್ದರೆ, ನಿಮ್ಮ ಮೊಬೈಲನ್ನು ಈಮಾಲ್ವೇರುಗಳಿಂದ ರಕ್ಷಿಸಬಹುದು

ಪ್ರಶಸ್ತಿ.ಪಿ  

ಟಾಪ್ ನ್ಯೂಸ್

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.