ರೋಹಿತ್‌: ಆಸೀಸ್‌ ಎದುರು 100 ಸಿಕ್ಸರ್‌


Team Udayavani, Jan 9, 2021, 5:30 AM IST

ರೋಹಿತ್‌: ಆಸೀಸ್‌ ಎದುರು 100 ಸಿಕ್ಸರ್‌

ಐಪಿಎಲ್‌ ವಿಕ್ಟರಿ ಬಳಿಕ ಮೊದಲ ಸಲ ಬ್ಯಾಟ್‌ ಹಿಡಿದ ರೋಹಿತ್‌ ಶರ್ಮ ಅಪರೂಪದ ಸಾಧನೆಯಿಂದ ಸುದ್ದಿಯಾಗಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 100 ಸಿಕ್ಸರ್‌ ಸಿಡಿಸಿದ ವಿಶ್ವದ ಮೊದಲ ಕ್ರಿಕೆಟಿಗನೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ನಥನ್‌ ಲಿಯಾನ್‌ ಎಸೆದ ಇನ್ನಿಂಗ್ಸಿನ 16ನೇ ಓವರಿನಲ್ಲಿ ಸಿಕ್ಸರ್‌ ಎತ್ತುವ ಮೂಲಕ ರೋಹಿತ್‌ ಈ ಮೈಲುಗಲ್ಲು ನೆಟ್ಟರು. ಒಟ್ಟಾರೆಯಾಗಿ ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್‌ ಬಾರಿಸಿದ 424ನೇ ಸಿಕ್ಸರ್‌. ಈ ಯಾದಿಯಲ್ಲಿ ಅವರಿಗೆ 3ನೇ ಸ್ಥಾನ. ಒಂದೇ ದೇಶದ ವಿರುದ್ಧ, ಎಲ್ಲ ಮೂರು ಮಾದರಿಗಳಲ್ಲಿ ಅತ್ಯಧಿಕ ಸಿಕ್ಸರ್‌ ಹೊಡೆದ ದಾಖಲೆ ಕ್ರಿಸ್‌ ಗೇಲ್‌ ಹೆಸರಲ್ಲಿದೆ. ಅವರು ಇಂಗ್ಲೆಂಡ್‌ ಎದುರು 140 ಸಿಕ್ಸರ್‌ ಸಿಡಿಸಿದ್ದಾರೆ.

ಭಾರತದ ಆರಂಭಿಕರನ್ನು ಕೆಣಕಿದ ಲಬುಶೇನ್‌ :

ಭಾರತ-ಆಸ್ಟ್ರೇಲಿಯ ಪಂದ್ಯವೆಂದರೆ ಅಲ್ಲಿ ಮಾತಿನ ಚಕಮಕಿ ನಡೆಯುವುದು ಮಾಮೂಲು. ಸಿಡ್ನಿ ಟೆಸ್ಟ್‌ ಪಂದ್ಯವೂ ಇದಕ್ಕೆ ಹೊರತಾಗಲಿಲ್ಲ.
ದ್ವಿತೀಯ ದಿನದ ಆಟದ ವೇಳೆ ಆಸ್ಟ್ರೇಲಿಯದ ಬ್ಯಾಟ್ಸ್‌ಮನ್‌ ಮಾರ್ನಸ್‌ ಲಬುಶೇನ್‌ ಟೀಮ್‌ ಇಂಡಿಯಾ ಆರಂಭಿಕರಾದ ಶುಭಮನ್‌ ಗಿಲ್‌ ಮತ್ತು ರೋಹಿತ್‌ ಶರ್ಮ ಅವರನ್ನು ಪದೇಪದೇ ಕೆಣಕಿದರು. ಮೊದಲು ಗಿಲ್‌ ತಂಟೆಗೆ ಹೋದ ಅವರು, “ನಿಮಗೆ ಸಚಿನ್‌ ಮತ್ತು ಕೊಹ್ಲಿ ನಡುವೆ ಯಾರು ಇಷ್ಟ’ ಎಂದು ಕೇಳಿದರು. ಇದಕ್ಕೆ ಗಿಲ್‌ ಉತ್ತರಿಸಲಿಲ್ಲ. ಅನಂತರ ರೋಹಿತ್‌ ಸ್ಟ್ರೈಕ್‌ಗೆ ಬಂದರು. ಆಗ, ಕ್ವಾರಂಟೈನ್‌ ವೇಳೆ ಏನು ಮಾಡಿದಿರಿ ಎಂದು ಕೆಣಕಿದರು. ಇದನ್ನು ರೋಹಿತ್‌ ನಿರ್ಲಕ್ಷಿಸಿ ಸುಮ್ಮನಾದರು.  ಆಟಗಾರರ ಏಕಾಗ್ರತೆಗೆ ಭಂಗ ತರಲು ಆಸೀಸ್‌ ಕ್ರಿಕೆಟಿಗರು ಇಂಥ ತಂತ್ರ ಹೂಡುವುದು ಮಾಮೂಲು.

ಟಾಪ್ ನ್ಯೂಸ್

Revanna 2

H.D. Revanna;ಇನ್ನಷ್ಟು ವಿಚಾರಣೆಗೆ 4 ದಿನ ಎಸ್ ಐಟಿ ಕಸ್ಟಡಿಗೆ

1-wqeqwqe

IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್‌ಗಳ ಜಯ

voter

Pen Drive ಹಗರಣದ ನಡುವೆ ರಾಜ್ಯದ ಎರಡನೇ ಹಂತದ ಬಹಿರಂಗ ಪ್ರಚಾರ ಅಂತ್ಯ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

ಯತ್ನಾಳ್ ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್

Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqwqe

IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್‌ಗಳ ಜಯ

IPL: ಪ್ಲೇ ಆಫ್‌ ರೇಸ್‌ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್‌ ಬೌಲರ್

IPL: ಪ್ಲೇ ಆಫ್‌ ರೇಸ್‌ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್‌ ಬೌಲರ್

1-wwwqewq

RCB ವೆಂಟಿಲೇಟರ್ ಆಫ್ ಮಾಡಲಾಗಿದೆ, ಆದರೂ ಐಸಿಯುನಲ್ಲಿದೆ: ಅಜಯ್ ಜಡೇಜಾ

ICC ಚಾಂಪಿಯನ್ಸ್‌ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್‌ನ ರಶೀದ್‌ ಲತೀಫ್

ICC ಚಾಂಪಿಯನ್ಸ್‌ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್‌ನ ರಶೀದ್‌ ಲತೀಫ್

1BP

NADA; ಕುಸ್ತಿಪಟು ಬಜರಂಗ್ ಅನಿರ್ದಿಷ್ಟಾವಧಿಗೆ ಅಮಾನತು: ಒಲಿಂಪಿಕ್ಸ್‌ ಭಾಗಿ ಅನುಮಾನ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

Revanna 2

H.D. Revanna;ಇನ್ನಷ್ಟು ವಿಚಾರಣೆಗೆ 4 ದಿನ ಎಸ್ ಐಟಿ ಕಸ್ಟಡಿಗೆ

1-wqeqwqe

IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್‌ಗಳ ಜಯ

voter

Pen Drive ಹಗರಣದ ನಡುವೆ ರಾಜ್ಯದ ಎರಡನೇ ಹಂತದ ಬಹಿರಂಗ ಪ್ರಚಾರ ಅಂತ್ಯ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

ಯತ್ನಾಳ್ ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.