ರೈತರಿಗೆ ಬೆಳೆ ಉಳಿಸಿಕೊಳ್ಳುವ ಸವಾಲು; ಪಂಪ್‌ಸೆಟ್‌ಗಳಿಗೆ ಕರೆಂಟ್‌ ಶಾಕ್‌

ವ್ಯಾಟ್‌ ಟ್ರಾನ್ಸ್‌ಫಾರ್ಮರ್‌ ಸುಟ್ಟು ನಾಲ್ಕು ದಿನ ಕಳೆದರೂ ಹೊಸ ಟ್ರಾನ್ಸ್‌ಫಾರ್ಮರ್‌ ಜೋಡಣೆಯಾಗಿಲ್ಲ.

Team Udayavani, Jan 23, 2021, 5:53 PM IST

ರೈತರಿಗೆ ಬೆಳೆ ಉಳಿಸಿಕೊಳ್ಳುವ ಸವಾಲು; ಪಂಪ್‌ಸೆಟ್‌ಗಳಿಗೆ ಕರೆಂಟ್‌ ಶಾಕ್‌

ಸಿಂಧನೂರು: ತಾಲೂಕಿನ ತುರುವಿಹಾಳ ಪಟ್ಟಣದಲ್ಲಿ ಉಪಕೇಂದ್ರದಲ್ಲಿ 10 ಮೆಗಾ ವ್ಯಾಟ್‌ ಸಾಮರ್ಥ್ಯದ ಬೃಹತ್‌ ಪರಿವರ್ತಕ ಸುಟ್ಟ ಪರಿಣಾಮ ಪಂಪ್‌ಸೆಟ್‌
ಅವಲಂಬಿತ ಕೃಷಿಕರಿಗೆ ಸಮಸ್ಯೆಯಾಗಿದ್ದು, ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಬೋರ್‌ವೆಲ್‌ ಆಧರಿತ ನೀರಾವರಿ ಅವಲಂಬಿಸಿರುವ ರೈತರು ಬೆಳೆಗೆ ನೀರುಣಿಸಲಾಗದೇ ಸಂಕಷ್ಟಕ್ಕೆ ಸಿಲುಕಿದ್ದು, ಹೊಸ ಪರಿವರ್ತಕ ಅಳವಡಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಹಾಕಿದ ಬೆಳೆಗಳಿಗೆ ಸಕಾಲದಲ್ಲಿ ನೀರು ಪೂರೈಸದ್ದರಿಂದ ಒಣಗಲಾರಂಭಿಸಿದ್ದು, ತುರ್ತಾಗಿ ಕೆಪಿಟಿಸಿಎಲ್‌ ರೈತರ ನೆರವಿಗೆ ಧಾವಿಸಬೇಕಿದೆ. ವಿದ್ಯುತ್‌ ಕೈ ಕೊಟ್ಟು ಆರು ದಿನ ಕಳೆದಿದ್ದು, 1.50 ಕೋಟಿ ವೆಚ್ಚದ ಟ್ರಾನ್ಸ್‌ ಫಾರ್ಮರ್‌ ತರಿಸುವ ಪ್ರಯತ್ನ ಮುಂದುವರಿದಿದೆ.

ಎಲ್ಲೆಲ್ಲಿ ಸಮಸ್ಯೆ?: ತುರುವಿಹಾಳ ಉಪಕೇಂದ್ರದಿಂದ ತಾಲೂಕಿನ ವಿರೂಪಾಪುರ, ಕಲ್ಮಂಗಿ, ಚಿಕ್ಕಬೇರಿ, ಕೆ. ಹೊಸಳ್ಳಿ, ಏಳುಮೈಲ್‌ ಕ್ಯಾಂಪ್‌, ಉಮಲೂಟಿ
ಸೇರಿದಂತೆ ಇತರ ಗ್ರಾಮಗಳಿಗೆ ವಿದ್ಯುತ್‌ ಪೂರೈಸಬೇಕಿದೆ. ಉಪಕೇಂದ್ರದಲ್ಲಿನ 10ಮೆ. ವ್ಯಾಟ್‌ ಟ್ರಾನ್ಸ್‌ಫಾರ್ಮರ್‌ ಸುಟ್ಟು ನಾಲ್ಕು ದಿನ ಕಳೆದರೂ ಹೊಸ ಟ್ರಾನ್ಸ್‌ಫಾರ್ಮರ್‌ ಜೋಡಣೆಯಾಗಿಲ್ಲ.

ತಾಲೂಕು ಮಟ್ಟದಲ್ಲಿ ದೊಡ್ಡ ಟ್ರಾನ್ಸ್‌ಫಾರ್ಮರ್‌ಗಳ ಪೂರೈಕೆ ಇಲ್ಲವಾಗಿದ್ದು, ಬೇರೆ ಕಡೆಯಲ್ಲಿ ಹುಡುಕಾಟ ನಡೆದಿದೆ. ಕಡಲೆ, ಹತ್ತಿ, ಸಜ್ಜಿ, ಶೇಂಗಾ ಸೇರಿದಂತೆ
ಸೀತಾಫಲ, ಮೋಸಂಬಿ, ದಾಳಿಂಬೆ ತೋಟಗಳು ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು, ಪಂಪ್‌ಸೆಟ್‌ ಆರಂಭವಾದರಷ್ಟೇ ನೀರು ಪೂರೈಕೆಯಾಗುತ್ತದೆ.
ನಿರಂತರ ವಿದ್ಯುತ್‌ ಫೂರೈಕೆ ಇದ್ದಾಗಲೂ ತ್ರಿಫೇಸ್‌ ನಂತೆ 3 ತಾಸು ಪಂಪ್‌ಸೆಟ್‌ ಚಾಲ್ತಿಯಲ್ಲಿರುತ್ತವೆ. ಇದೇ ಲೆಕ್ಕದ ಮೇಲೆ ಜಮೀನಿನಲ್ಲಿ ಬೆಳೆ ಹಾಕಿದ ರೈತರಿಗೆ ರೋಟೇಶನ್‌ ಪ್ರಕಾರ ಎಲ್ಲ ಜಮೀನಿಗೆ ನೀರು ಪೂರೈಸುವಲ್ಲಿ ಸಮಸ್ಯೆಯಾಗಿದೆ. ತಾತ್ಕಾಲಿಕ ವ್ಯವಸ್ಥೆಯಾದರೂ ತ್ರಿಫೇಸ್‌ ವಿದ್ಯುತ್‌ ಸಮರ್ಪಕವಾಗಿ ದೊರೆಯದ್ದರಿಂದ ಗೊಂದಲ ಏರ್ಪಟ್ಟಿದೆ.

ಕೆಪಿಟಿಸಿಎಲ್‌ ಜತೆ ಚರ್ಚೆ: ಜೆಸ್ಕಾಂ ವ್ಯವಸ್ಥಾಪಕ
ನಿರ್ದೇಶಕ ಪಾಂಡ್ವೆ ರಾಹುಲ್‌ ತುಕಾರಾಂ ತಾಲೂಕಿಗೆ ಭೇಟಿ ನೀಡಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು. ಆದರೆ, ತಾಲೂಕಿನ ರೈತರಿಗೆ ಉಂಟಾಗಿರುವ ಸಮಸ್ಯೆ ಬಗ್ಗೆ ಗಮನ ಸೆಳೆದಾಗ, ಈ ವಿಷಯ ಗೊತ್ತಿರಲಿಲ್ಲ ಎಂದರು. ನಾಲ್ಕು ದಿನ ವಿಳಂಬ ಏಕೆ? ಎಂದು ಅಧಿ ಕಾರಿಗಳಿಗೆ ಪ್ರಶ್ನಿಸಿದ ಅವರು, ತುರ್ತಾಗಿ ಕರೆಂಟ್‌ ವ್ಯವಸ್ಥೆ ಮಾಡುವಂತೆ ಸ್ಥಳದಲ್ಲಿದ್ದ ಅಧಿ ಕಾರಿಗಳಿಗೆ ಸೂಚಿಸಿದರು. ಈ ನಡುವೆ ಶಾಸಕ ಪ್ರತಾಪ್‌ಗೌಡ ಪಾಟೀಲ್‌ ಕೂಡ ಜೆಸ್ಕಾಂ ಎಂಡಿಯವರ ಜತೆ ಚರ್ಚಿಸಿದ್ದು, 10 ಮೆ.ವ್ಯಾ. ಟ್ರಾನ್ಸ್‌ಫಾರ್ಮರ್‌ ಅಳವಡಿಕೆಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ತ್ವರಿತವಾಗಿ ಹೊಸ ಟ್ರಾನ್ಸ್‌ಫಾರ್ಮರ್‌ ಅಳವಡಿಕೆಯಾದರೆ ಮಾತ್ರ ರೈತರ ಬೆಳೆಗಳು ಉಳಿಯಲಿದ್ದು, ಮೇಲಧಿ ಕಾರಿಗಳು ಈ ಬಗ್ಗೆ ತುರ್ತು ಕಾರ್ಯಪ್ರವೃತ್ತರಾಗಬೇಕಿದೆ.

*ಯಮನಪ್ಪ ಪವಾರ

ಟಾಪ್ ನ್ಯೂಸ್

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.