ಕೊಯ್ಲು ಮಾಡದ ರೋಬಾಸ್ಟ ಕಾಫಿ ಬೆಳೆಗೆ ಮಳೆಯ ಪೆಟ್ಟು

Team Udayavani, Feb 20, 2021, 1:24 PM IST

ಕೊಯ್ಲು ಮಾಡದ ರೋಬಾಸ್ಟ ಕಾಫಿ ಬೆಳೆಗೆ ಮಳೆಯ ಪೆಟ್ಟು

ಸಕಲೇಶಪುರ: ತಾಲೂಕಿನ ದೇವಾಲದಕೆರೆ, ಹಾನುಬಾಳ್‌ ಸುತ್ತಮುತ್ತ ಗುರುವಾರ ರಾತ್ರಿಯೇ ಮಳೆ ಬಿದ್ದಿತ್ತು. ಪಟ್ಟಣ ವ್ಯಾಪ್ತಿಯಲ್ಲಿ ಚದುರಿದಂತೆ ಮಳೆ ಆಗಿತ್ತು. ಮತ್ತೆ ಶುಕ್ರವಾರ ಮುಂಜಾನೆಯಿಂದಲೇ ಇಬ್ಬನಿ, ಮೋಡ ಕವಿದ ವಾತಾವರಣ ವಿತ್ತಾದ್ರೂ ಮಳೆ ಸುರಿಯಲಿಲ್ಲ. ಆದರೆ, ಮಧ್ಯಾಹ್ನ 2.30ರಿಂದ ಆರಂಭವಾದ ಮಳೆ 3.30ರವರೆಗೂ ಧಾರಾಕಾರವಾಗಿ ಸುರಿಯಿತು. ತಾಲೂಕಿನ ಹಲವು ಭಾಗದಲ್ಲಿ ಆಲಿಕಲ್ಲು ಸಹ ಬಿದ್ದಿರುವ ಕಾರಣ ಕೊಯ್ಲು ಮಾಡದೇ ಇರುವ ಕಾಫಿ, ಇತರೆ ಬೆಳೆಗೆ ಹಾನಿಯಾಗಿದೆ.

ತಾಲೂಕಿನ ಕಸಬಾ ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಆಗಿದ್ದು, ಯಸಳೂರು ಹೋಬಳಿಯ ಹೊಸೂರು,ಬಾಳ್ಳುಪೇಟೆಯಲ್ಲಿ ಅಲ್ಪಸ್ವಲ್ಪ ಬಿದ್ದಿದೆ. ಹೆತ್ತೂರು,ಹೆಗ್ಗದ್ದೆ ಸುತ್ತಮುತ್ತ ಮಳೆ ವರದಿ ಆಗಿಲ್ಲ. ಒಟ್ಟಾರೆಯಾಗಿ ತಾಲೂಕಿನ ಕೆಲವೆಡೆ ಮಳೆ ಬಂದರೆಕೆಲವೆಡೆ ಮೋಡ ಮುಸುಕಿದ ವಾತಾವರಣ ಇತ್ತು.ತಾಲೂಕಿಗೆ ಹೊಂದಿಕೊಂಡಿರುವ ಕೊಡಗಿನಶನಿವಾರಸಂತೆಯಲ್ಲಿ ಭರ್ಜರಿಯಾಗಿ ಆಲಿಕಲ್ಲುಮಳೆ ಬಿದ್ದಿದ್ದು, ಜಮ್ಮು ಕಾಶ್ಮೀರದ ಹಿಮದ ರಾಶಿಯನ್ನು ನೆನಪಿಸಿತು.

ಕೆಲವರಿಗೆ ಕಷ್ಟ: ಸಾಮಾನ್ಯವಾಗಿ ಮಲೆನಾಡಿನಲ್ಲಿ ರೋಬಾಸ್ಟ ಕಾಫಿ ಬೆಳೆ ಕೊಯ್ಲು ಮಾಡುವ ಸಮಯ ಜನವರಿ ಹಾಗೂ ಫೆಬ್ರವರಿ. ಈಗಾಗಲೇಬಹುತೇಕ ಕಾಫಿ ತೋಟಗಳಲ್ಲಿ ಕಾಫಿ ಕೊಯ್ಲು ಮಾಡಿದ್ದು, ಕೆಲವು ಕಡೆ ಮುಗಿದಿದೆ. ಇನ್ನು ಹಲವು ತೋಟಗಳಲ್ಲಿ ಕಾಫಿ ಕೊಯ್ಲು ನಡೆಯುತ್ತಲೇ ಇದೆ.ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಕಾಫಿ ಕೊಯ್ಲು ಮಾಡಲು ಹೊರ ರಾಜ್ಯ, ಜಿಲ್ಲೆಗಳಿಂದ ಕೂಲಿ ಕಾರ್ಮಿಕರು ಬಾರದ ಕಾರಣ ಮಲೆನಾಡಿನಲ್ಲಿ ಇನ್ನು ಶೇ.20 ರಿಂದ 25 ರೊಬಾಸ್ಟ ಕಾಫಿ ಕೊಯ್ಲುಬಾಕಿ ಇದೆ. ಇಂತಹವರಿಗೆ ಈಗ ಸುರಿದ ಮಳೆ ಆತಂಕ ತಂದರೆ, ಕಾಫಿ ಕೊಯ್ಲು ಸಂಪೂರ್ಣ ಮುಗಿಸಿದವರಿಗೆ ಸಂತೋಷ ತಂದಿದೆ.ಕೆಲವು ತೋಟಗಳಲ್ಲಿ ಕೊಯ್ಲು ಮಾಡಿದ ಕಾಫಿಯನ್ನು ಒಣಗಿಸಲು ಕಣದಲ್ಲಿ ಹಾಕಿದ್ದು, ಇವರಿಗೆ ಅಕಾಲಿಕವಾಗಿ ಸುರಿದ ಮಳೆ ಸಂಕಷ್ಟಕ್ಕೆಸಿಲುವಂತೆ ಮಾಡಿದೆ. ಸಾಮಾನ್ಯವಾಗಿ ಮಾರ್ಚ್‌ ಮೊದಲ ಹಾಗೂ ಎರಡನೇ ವಾರ ಮಳೆ ಬಂದಿರುವಉದಾಹರಣೆಗಳಿದೆ. ಆದರೆ, ಫೆ.3ನೇ ವಾರದಲ್ಲಿ ಮಳೆ ಬಂದಿರುವುದು ಅಪರೂಪವಾಗಿದೆ. ಕಳೆದ ಜನವರಿ ಮೊದಲ ವಾರದಲ್ಲಿ ಸುರಿದ ಅಕಾಲಿಕ ಮಳೆಯಿಂದ ತಾಲೂಕಿನ ಬೆಳೆಗಾರರು ತತ್ತರಿಸಿದ್ದರು. ಇದೀಗ ಸುರಿಯುತ್ತಿರುವ ಮಳೆ ಕಾಫಿ ಕೊಯ್ಲು ನಡೆಸಿದವರಿಗೆ ದುಬಾರಿ ದರ ತೆತ್ತುಮೋಟಾರ್‌ಗಳಿಗೆ ಡೀಸೆಲ್‌ ಹಾಕಿ ಕೃತಕವಾಗಿ ಗಿಡಗಳಿಗೆ ನೀರು ಸಿಂಪಡಿಸುವುದು ತಪ್ಪಿದೆ. ಇದರಿಂದ ಡೀಸೆಲ್‌ ಖರೀದಿ ಮಾಡಲು ಉಪಯೋಗಿಸುತ್ತಿದ್ದ ಲಕ್ಷಾಂತರ ರೂ. ಹಣ ಉಳಿದಿದೆ.

ಒಟ್ಟಾರೆಯಾಗಿ ಸುರಿದ ಮಳೆಯಿಂದ ಕಾಫಿಗಿಡಗಳಲ್ಲಿ ಹೂವು ಕಟ್ಟುವ ಎಲ್ಲಾ ಸಾಧ್ಯತೆಯಿದ್ದು,15 ದಿನಗಳಿಗೊಮ್ಮೆ ಮತ್ತೂಮ್ಮೆ ಮಳೆ ಬಂದರೆಬೆಳೆಗಾರರಿಗೆ ಬಹಳ ಅನುಕೂಲವಾಗುತ್ತದೆ.ಸುರಿದ ಮಳೆ ಮೆಣಸು ಬೆಳೆಗೆ ಸಹ ಅನುಕೂಲ ವಾಗಿದೆ. ಮಳೆಯಿಂದ ಮೆಣಸು ಕಾಳುಗಳುದಪ್ಪವಾಗುವ ಸಾಧ್ಯತೆಯಿದೆ. ಬಿಸಿಲ ಧಗೆಗೆ ಬಾಡಿ ಹೋಗಿದ್ದ ಗಿಡ ಮರಗಳಿಗೆ ಮಳೆ ನವ ಚೈತನ್ಯತಂದಿದ್ದು, ಕಾಫಿ ಕೊಯ್ಲು ಮಾಡದವರಿಗೆ ಮಾತ್ರ ಸುರಿದ ಮಳೆ ಆತಂಕ ತಂದಿರುತ್ತದೆ. ಮಳೆ ಇನ್ನು 2ದಿನ ಮುಂದುವರಿಯುತ್ತದೆ ಎಂದು ಹೇಳಲಾಗು ತ್ತಿದ್ದು ಇದು ಕೆಲವರಲ್ಲಿ ನಿರೀಕ್ಷೆ ತಂದಿದೆ

ತಾಲೂಕಿನ ಹಲವೆಡೆ ಮಳೆ ಸುರಿದಿದೆ. ಹೆತ್ತೂರಿನಲ್ಲಿ ಮಳೆ ಬೀಳದಿರುವುದರಿಂದ ಹಲವು ರೈತರಿಗೆಅನಾನುಕೂಲವಾಗಿದೆ. ಇನ್ನೆರಡು ದಿನ ಮಳೆ ಬೀಳುತ್ತದೆ ಎಂದು ಹೇಳಲಾಗುತ್ತಿದೆ. ಮಳೆ ಬೀಳದಿದ್ದಲ್ಲಿ ಕೃತಕವಾಗಿ ಕಾಫಿ ಗಿಡಗಳಿಗೆ ನೀರು ಸಿಂಪಡಿಸಬೇಕಾಗುತ್ತದೆ. ರವಿಕುಮಾರ್‌, ಹೆತ್ತೂರು ಗ್ರಾಮಸ್ಥ

ಗಾಣದಹೊಳೆ ಸುತ್ತಮತ್ತಲಿನಲ್ಲಿ 90 ಮಿ.ಮೀ ಮಳೆ ಬಿದ್ದಿರುವುದರಿಂದ ಕೃತಕವಾಗಿ ನೀರು ಸಿಂಪಡಿಸುವುದು ಸದ್ಯಕ್ಕೆ ತಪ್ಪಿದೆ. ಈಗಾಗಲೇ ಕೊಯ್ಲುಮಾಡಿದ ಕಾಫಿ ಗಿಡಗಳಿಗೆ ಈ ಮಳೆ ಚೈತನ್ಯ ನೀಡಿದೆ. 15 ದಿನ ಬಿಟ್ಟು ಮಳೆ ಬಂದಲ್ಲಿ ಬಹಳ ಅನುಕೂಲವಾಗುತ್ತದೆ. ಭೂಷಣ್‌, ಕಾಫಿ ಬೆಳೆಗಾರ

ಸುಧೀರ್‌ ಎಸ್‌.ಎಲ್‌.

ಟಾಪ್ ನ್ಯೂಸ್

veerappa-moily

Prajwal case; ಪಾತ್ರ ಯಾರದ್ದು ಮುಖ್ಯವಲ್ಲ; ಅಭಿನಯ ಮಾಡಿದ್ದು ಮುಖ್ಯ; ವೀರಪ್ಪ ಮೊಯ್ಲಿ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Aravinda Limbavali reacts to Prajwal Case

Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

6-virtual-world

UV Fusion: ವರ್ಚುವಲ್‌  ಪ್ರಪಂಚದಲ್ಲಿ ಅನಾಥರು

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

fashion-world

Fashion World: ಮಹಿಳೆಯರ ನೆಚ್ಚಿನ ಉಡುಗೆ ಸೀರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

veerappa-moily

Prajwal case; ಪಾತ್ರ ಯಾರದ್ದು ಮುಖ್ಯವಲ್ಲ; ಅಭಿನಯ ಮಾಡಿದ್ದು ಮುಖ್ಯ; ವೀರಪ್ಪ ಮೊಯ್ಲಿ

ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!

ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!

7-uv-fusion

Father: ಅಪ್ಪ – ಮರೆಯಲಾಗದ ಬಂಧ…

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Aravinda Limbavali reacts to Prajwal Case

Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.