ಫೇಸ್ ಬುಕ್ ಲೈವ್ ಮಾಡುತ್ತಲೇ ಮೈಮರೆತ ಯುವಕರು; ಬೋಟ್ ಮಗುಚಿ ಇಬ್ಬರು ಸಾವು
Team Udayavani, Feb 22, 2021, 9:30 AM IST
ಬಲ್ಲಿಯಾ(ಉತ್ತರಪ್ರದೇಶ): ಫೇಸ್ ಬುಕ್ ಲೈವ್ ಮಾಡುತ್ತಿದ್ದ ಸಂದರ್ಭದಲ್ಲಿ ಬೋಟ್ ಮಗುಚಿ ಇಬ್ಬರು ಯುವಕರು ನೀರುಪಾಲಾದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಮೈರಿತಾರ್ ಗ್ರಾಮದ 6 ಮಂದಿ ಯುವಕರು ದ್ವೀಪವೊಂದಕ್ಕೆ ಬೋಟ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಫೇಸ್ ಬುಕ್ ಲೈವ್ ನಲ್ಲೂ ತೊಡಗಿದ್ದರು. ಆದರೇ ಲೈವ್ ವೇಳೆ ಮೈಮರೆತದ್ದರಿಂದ ಬೋಟ್ ಪಲ್ಟಿಯಾಗಿದೆ.
ಇದನ್ನೂ ಓದಿ: ಮಧ್ಯಪ್ರದೇಶ: 10 ಅಡಿ ಕೆಳಕ್ಕೆ ಬಿದ್ದ ಮಾಜಿ ಸಿಎಂ ಕಮಲ್ ನಾಥ್ ಪ್ರಯಾಣಿಸುತ್ತಿದ್ದ ಲಿಫ್ಟ್
ಪರಿಣಾಮವಾಗಿ ಆರು ಮಂದಿ ಯುವಕರು ಕೂಡ ನೀರಿನಲ್ಲಿ ಬಿದ್ದಿದ್ದಾರೆ. ಕೂಡಲೇ ಅವರನ್ನು ರಕ್ಷಣೆ ಮಾಡಲಾಗಿತ್ತು. ಅದಾಗ್ಯೂ ಉಳಿದಿಬ್ಬರು ಆಸ್ಪತ್ರೆ ತಲುಪುವ ವೇಳೆ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಮೃತ ಯುವಕರನ್ನು ಅನೂಜ್ ಗುಪ್ತಾ(25) ಮತ್ತು ದೀಪಕ್ ಗುಪ್ತಾ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಸೇನೆ ಹಿಂದೆಗೆತ ಪೂರ್ಣ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಣೆ