ಭಾರತೀಯ ಮೂಲದವರ ಮತ, ದೇಣಿಗೆಯತ್ತ ಚಿತ್ತ!


Team Udayavani, Oct 31, 2020, 5:15 AM IST

Vote for Indian origin, mood for donation!

ಡೆಮಾಕ್ರಟಿಕ್‌ ಹಾಗೂ ರಿಪಬ್ಲಿಕನ್‌ ಪಕ್ಷ ಭಾರತೀಯ ಮೂಲದ ಮತದಾರರತ್ತ ಹೆಚ್ಚು ಗಮನ ಹರಿಸುತ್ತಿವೆ. ಭಾರತೀಯ ಮೂಲದವರ ಸಂಖ್ಯೆ ಒಟ್ಟು ಮತದಾರರ ಪ್ರಮಾಣದಲ್ಲಿ ಕೇವಲ 1 ಪ್ರತಿಶತವಿದೆಯಾದರೂ, ಇವರೆಲ್ಲ ಅಮೆರಿಕದಲ್ಲಿನ ಎರಡನೇ ಅತೀದೊಡ್ಡ ವಲಸಿಗ ಸಮೂಹವಾಗಿದ್ದಾರೆ. 2000-2018ರ ನಡುವೆ ಇಂಡಿಯನ್‌ ಅಮೆರಿಕನ್‌ ಜನಸಂಖ್ಯೆ 150 ಪ್ರತಿಶತ ಹೆಚ್ಚಳ ಕಂಡಿದೆ. ಇದೂ ಚಿಕ್ಕ ಪ್ರಮಾಣವೇ ಆದರೂ ಚುನಾವಣೆಯಲ್ಲಿ ನಿರ್ಣಾಯಕವಾಗಬಲ್ಲದು.

ಅತೀದೊಡ್ಡ ಆದಾಯ ವರ್ಗಗಳಲ್ಲಿ ಒಂದು
ಅಮೆರಿಕದಲ್ಲಿ ಅತೀಹೆಚ್ಚು ಆದಾಯ ಇರುವ ವರ್ಗಗಳಲ್ಲೂ ಭಾರತೀಯ ಮೂಲದವರ ಪ್ರಮಾಣ ಅಧಿಕವಿದೆ. ಒಂದು ಅಂದಾಜಿನ ಪ್ರಕಾರ ಅಮೆರಿಕ ದಲ್ಲಿನ ಭಾರತೀಯ ಕುಟುಂಬವೊಂದರ ವಾರ್ಷಿಕ ಸರಾಸರಿ ಆದಾಯ 1 ಲಕ್ಷ ಡಾಲರ್‌ನಷ್ಟಿದೆ (74. 58 ಲಕ್ಷ ರೂಪಾಯಿ). ಇದು ರಾಷ್ಟ್ರೀಯ ಸರಾಸರಿಗಿಂತ ದುಪ್ಪಟ್ಟು.

ಡೆಮಾಕ್ರಾಟ್ ಗಳಿಗೇ ದೇಣಿಗೆ ಹೆಚ್ಚು
ಭಾರತೀಯ ಮೂಲದ ಮತ ದಾರರ ವರ್ಗ ಅಮೆರಿಕದ ಪಕ್ಷಗಳಿಗೆ ದೇಣಿಗೆ ನೀಡುವಲ್ಲೂ ಮುಂದಿವೆ. 2016ರ ಚುನಾವಣೆಯಲ್ಲಿ ಭಾರತೀಯರು ಡೆಮಾಕ್ರಟಿಕ್‌ ಪಕ್ಷಕ್ಕೆ 75 ಕೋಟಿ ರೂಪಾಯಿಗೂ ಅಧಿಕ ದೇಣಿಗೆ ನೀಡಿದ್ದರು. ಅದೇ ವರ್ಷ ಶಲಭ್‌ ಕುಮಾರ್‌ ಎನ್ನುವ ಉದ್ಯಮಿಯೊಬ್ಬರೇ ಟ್ರಂಪ್‌ರ ಪಕ್ಷಕ್ಕೆ 6.70 ಕೋಟಿ ರೂಪಾಯಿ ನೀಡಿದ್ದರು. ಈ ಸೆಪ್ಟಂಬರ್‌ ತಿಂಗಳೊಂದರಲ್ಲೇ ಡೆಮಾಕ್ರಟಿಕ್‌ ಪಕ್ಷಕ್ಕೆ ಭಾರತೀಯ ಮೂಲದ ಮತದಾರರು 24 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

ಸ್ವಿಂಗ್‌ ಸ್ಟೇಟ್‌ಗಳಲ್ಲಿ ಗಮನಾರ್ಹ ಸಂಖ್ಯೆಯಲ್ಲಿದ್ದಾರೆ
ಚುನಾವಣ ಫ‌ಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸಬಲ್ಲ ಟೆಕ್ಸಾಸ್‌, ಮಿಶಿಗನ್‌, ಕ್ಯಾಲಿಫೋರ್ನಿಯಾ ಮತ್ತು ಪೆಲ್ಸಿಲ್ವೇನಿಯಾದಂಥ ರಾಜ್ಯಗಳಲ್ಲಿ ಭಾರತೀಯರ ಹಾಗೂ ದಕ್ಷಿಣ ಏಷ್ಯನ್‌ ಸಮುದಾಯಗಳ ಸಂಖ್ಯೆ ಅಧಿಕವಿದ್ದು, ಚುನಾವಣೆಗೆ ತಿರುವು ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಡೆಮಾಕ್ರಾಟ್ಸ್‌ ಮತ್ತು ರಿಪಬ್ಲಿಕನ್ನರು ಸ್ವಿಂಗ್‌ ಸ್ಟೇಟ್‌ಗಳತ್ತ ಹೆಚ್ಚು ಗಮನ ಹರಿಸಿದ್ದಾರೆ. ಇಲ್ಲಿಯವರೆಗಿನ ಸಮೀಕ್ಷೆಗಳ ಆಧಾರದಲ್ಲಿ ನೋಡುವುದೇ ಆದರೆ, ಅಮೆರಿಕದಲ್ಲೇ ಹುಟ್ಟಿದ ಭಾರತೀಯ ಕುಟುಂಬದ ಜನ ಡೆಮಾಕ್ರಟಿಕ್‌ ಪಕ್ಷದ ಪರವಿದ್ದರೆ, ಭಾರತದಲ್ಲಿಯೇ ಹುಟ್ಟಿ ಅಮೆರಿಕದ ಪೌರತ್ವ ಪಡೆದವರು ಡೊನಾಲ್ಡ್‌ ಟ್ರಂಪ್‌ರ ಪರ ಹೆಚ್ಚು ಒಲವು ಹೊಂದಿದ್ದಾರೆ.

ಭಾರತೀಯ ಭಾಷೆಗಳಲ್ಲಿ ಜಾಹೀರಾತು
ಕಳೆದ ಕೆಲವು ತಿಂಗಳಿಂದ ಟ್ರಂಪ್‌ ಹಾಗೂ
ಬೈಡೆನ್‌ರ ಟೆಲೀವಿಷನ್‌ ಜಾಹೀರಾತುಗಳು, ಹಿಂದಿ ಮತ್ತು ಭಾರತದ ಇತರೆ ಭಾಷೆಗಳಲ್ಲಿ ಪ್ರಸಾರವಾಗುತ್ತಿವೆ. ಟಿವಿ ಏಷ್ಯಾ ಮತ್ತು ಸೋನಿ ಎಂಟಟೇìನ್ಮೆಂಟ್‌ ಚಾನೆಲ್‌ಗ‌ಳಲ್ಲಿ ಈ ಜಾಹೀರಾತುಗಳು ಹೆಚ್ಚು ಪ್ರಚಾರವಾಗುತ್ತಿವೆ.

ಹೌಡಿ ಮೋದಿ, ಟ್ರಂಪ್‌ ದೋಸ್ತಿ
ಯೂಗೌ ಸಮೀಕ್ಷೆಯ ಪ್ರಕಾರ ಅಮೆರಿಕದಲ್ಲಿನ ಭಾರತೀಯ ಮೂಲದ ಮತದಾರರು ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಶ್ಲಾ ಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ನರೇಂದ್ರ ಮೋದಿ-ಟ್ರಂಪ್‌ರ ನಡುವೆ ದೋಸ್ತಿ ಹೆಚ್ಚಾಗಿರುವುದರಿಂದಾಗಿ ಮತದಾರರು ಟ್ರಂಪ್‌ರ ಪರವೂ ವಾಲುವ ಸಾಧ್ಯತೆಯನ್ನು ಅಲ್ಲಗಳೆಯಲು ಆಗುವುದಿಲ್ಲ. ಭಾರತೀಯ ಮೂಲದ ಮತದಾರರನ್ನು ಸೆಳೆಯಲು ಡೆಮಾಕ್ರಟಿಕ್‌ ಪಕ್ಷ ಕಮಲಾ ಹ್ಯಾರಿಸ್‌ರನ್ನು ಬಳಸುತ್ತಿದೆಯಾದರೂ, ಕಾಶ್ಮೀರದ ವಿಚಾರದಲ್ಲಿ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಬರುತ್ತಿದ್ದ ಕಮಲಾ ಅವರ ಬಗ್ಗೆ ಈ ಮತ ವರ್ಗದಲ್ಲಿ ಅಷ್ಟು ಸೆಳೆತ ಕಾಣಿಸುತ್ತಿಲ್ಲ.

ಟಾಪ್ ನ್ಯೂಸ್

ಭಿಕ್ಷೆ ಬೇಡುವ ಕೈಗಳಿಗೆ ಕೃಷಿ ಕಾರ್ಯ

ಭಿಕ್ಷೆ ಬೇಡುವ ಕೈಗಳಿಗೆ ಕೃಷಿ ಕಾರ್ಯ

rwytju11111111111

ಭಾನುವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಅಮೇಠಿಯಲ್ಲಿ ಎಕೆ-203 ರೈಫ‌ಲ್‌ ಉತ್ಪಾದನೆ

ಅಮೇಠಿಯಲ್ಲಿ ಎಕೆ-203 ರೈಫ‌ಲ್‌ ಉತ್ಪಾದನೆ

ಒಮಿಕ್ರಾನ್‌ ಸೋಂಕು 4ಕ್ಕೆ

ಒಮಿಕ್ರಾನ್‌ ಸೋಂಕು 4ಕ್ಕೆ

ಕೃತಿಗಳ ರೂಪದಲ್ಲಿ ಅನಾವರಣಗೊಳ್ಳಲಿವೆ ನೌಕಾಪಡೆಯ ಸಮರಗಳ ಇತಿಹಾಸ 

ಕೃತಿಗಳ ರೂಪದಲ್ಲಿ ಅನಾವರಣಗೊಳ್ಳಲಿವೆ ನೌಕಾಪಡೆಯ ಸಮರಗಳ ಇತಿಹಾಸ 

ಬೋನಸ್‌ಗಾಗಿ 600 ಕೋಟಿ!

ಬೋನಸ್‌ಗಾಗಿ 600 ಕೋಟಿ!

ವಾಷಿಂಗ್ಟನ್‌ ದೂತಾವಾಸದಲ್ಲೂ ದಿವಾಳಿ ಬಿಸಿ!

ವಾಷಿಂಗ್ಟನ್‌ ದೂತಾವಾಸದಲ್ಲೂ ದಿವಾಳಿ ಬಿಸಿ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Several, including children, killed in Taliban’s celebratory gunfire in Kabul: Reports

ಪಂಜ್ ಶೀರ್ ತಾಲಿಬಾನ್ ಗೆ : ಮನ ಬಂದಂತೆ ಗುಂಡು ಹಾರಿಸಿ ಸಂಭ್ರಮ : ಹಲವರು ಗಂಭೀರ ಗಾಯ.!

ಯಾರ ಕೈಗೆ ಶ್ವೇತ ಭವನದ ಕೀಲಿ ಕೈ?

ಯಾರ ಕೈಗೆ ಶ್ವೇತ ಭವನದ ಕೀಲಿ ಕೈ?

ಅಂಕಲ್‌ ಗೆಲ್ಲುವವರಾರು? ಅಮೆರಿಕ ಅಧ್ಯಕ್ಷರ ಆಯ್ಕೆಗೆ ನಡೆದಿದೆ ಮತ

ಅಂಕಲ್‌ ಗೆಲ್ಲುವವರಾರು? ಅಮೆರಿಕ ಅಧ್ಯಕ್ಷರ ಆಯ್ಕೆಗೆ ನಡೆದಿದೆ ಮತ

ಅಮೆರಿಕ ಚುನಾವಣೆ ವೆಚ್ಚ 1.4 ಲ.ಕೋ. ರೂ?

ಅಮೆರಿಕ ಚುನಾವಣೆ ವೆಚ್ಚ 1.4 ಲ.ಕೋ. ರೂ?

ಟ್ರಂಪ್‌ಗೆ ದೊಡ್ಡ ಸವಾಲೊಡ್ಡುತ್ತಿರುವ ಜೋ ಬೈಡೆನ್‌

ಟ್ರಂಪ್‌ಗೆ ದೊಡ್ಡ ಸವಾಲೊಡ್ಡುತ್ತಿರುವ ಜೋ ಬೈಡೆನ್‌

MUST WATCH

udayavani youtube

ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ

udayavani youtube

ನಮ್ಮ ನೌಕಾಪಡೆ ಎಲ್ಲದಕ್ಕೂ ಸನ್ನದ್ಧ !

udayavani youtube

ಸರ್ಕಾರ ಹೇಗೆಲ್ಲಾ ರೈತರ ಬೆಂಬಲಕ್ಕೆ ನಿಂತಿದೆ ?

udayavani youtube

ಬಂಟ್ವಾಳ : ಬೇಟೆಗಾಗಿ ಬಂದು ಹೆದರಿ ಓಡಿದ ಚಿರತೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ಚಿಕ್ಕಮಗಳೂರು : ಕಾಫಿ ತೋಟದೊಳಗೆ ನುಗ್ಗಿದ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಾವಲು ವಾಹನ

ಹೊಸ ಸೇರ್ಪಡೆ

ಭಿಕ್ಷೆ ಬೇಡುವ ಕೈಗಳಿಗೆ ಕೃಷಿ ಕಾರ್ಯ

ಭಿಕ್ಷೆ ಬೇಡುವ ಕೈಗಳಿಗೆ ಕೃಷಿ ಕಾರ್ಯ

rwytju11111111111

ಭಾನುವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಅಮೇಠಿಯಲ್ಲಿ ಎಕೆ-203 ರೈಫ‌ಲ್‌ ಉತ್ಪಾದನೆ

ಅಮೇಠಿಯಲ್ಲಿ ಎಕೆ-203 ರೈಫ‌ಲ್‌ ಉತ್ಪಾದನೆ

ಒಮಿಕ್ರಾನ್‌ ಸೋಂಕು 4ಕ್ಕೆ

ಒಮಿಕ್ರಾನ್‌ ಸೋಂಕು 4ಕ್ಕೆ

ಕೃತಿಗಳ ರೂಪದಲ್ಲಿ ಅನಾವರಣಗೊಳ್ಳಲಿವೆ ನೌಕಾಪಡೆಯ ಸಮರಗಳ ಇತಿಹಾಸ 

ಕೃತಿಗಳ ರೂಪದಲ್ಲಿ ಅನಾವರಣಗೊಳ್ಳಲಿವೆ ನೌಕಾಪಡೆಯ ಸಮರಗಳ ಇತಿಹಾಸ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.