ಇನ್ನಷ್ಟು ಸಮಗ್ರವಾಗಬೇಕಿತ್ತು: ಹೊಸ ಟೆಲಿಕಾಂ ನೀತಿ


Team Udayavani, Sep 28, 2018, 6:00 AM IST

d-32.jpg

ಖಾಸಗಿ ಕಂಪೆನಿಗಳು ಉತ್ತಮ ಇಂಟರ್‌ನೆಟ್‌ ಸೌಲಭ್ಯ ಒದಗಿಸುತ್ತಿದ್ದರೂ ಅವುಗಳ ಲಕ್ಷ್ಯವಿರುವುದು ಹೆಚ್ಚು ಗ್ರಾಹಕರು ಇರುವ ನಗರಗಳಲ್ಲೇ ಹೊರತು ಹಳ್ಳಿಗಾಡುಗಳಲ್ಲಿ ಅಲ್ಲ. ಎಲ್ಲವೂ ಡಿಜಿಟಲ್‌ವುಯ ಆಗಬೇಕೆಂದು ಬಯಸುವಾಗ ಎಲ್ಲೆಡೆಗೂ ಸಶಕ್ತವಾದ ಇಂಟರ್‌ನೆಟ್‌ ಸಂಪರ್ಕವೂ ಇರಬೇಕು.

ಅತ್ಯಂತ ವೇಗವಾಗಿ ಮತ್ತು ಬೃಹತ್‌ ಗಾತ್ರದಲ್ಲಿ ಬೆಳೆಯುತ್ತಿರುವ ಉದ್ಯಮ ದೂರಸಂಪರ್ಕ ಕ್ಷೇತ್ರ. ಒಂದು ದೂರವಾಣಿ ಸಂಪರ್ಕ ಪಡೆಯಲು ಅರ್ಜಿ ಕೊಟ್ಟು 5 ವರ್ಷ ಕಾಯುವಲ್ಲಿಂದ ಒಬ್ಬನಿಗೆ ಐದಾರು ದೂರವಾಣಿ ಸಂಪರ್ಕ ನಿರಾಯಾಸವಾಗಿ ದೊರಕುವ ತನಕದ ಪ್ರಗತಿ ಅದ್ಭುತವೇ ಸರಿ. ಡಿಜಿಟಲ್‌ ಸಂವಹನದ ಆವಿಷ್ಕಾರದ ಬಳಿಕ ದೇಶದ ದೂರಸಂಪರ್ಕ ಕ್ಷೇತ್ರದ ಅಭಿವೃದ್ಧಿ ನಿರೀಕ್ಷೆಗೂ ಮೀರಿದ್ದು. ಕಾಲು ಶತಮಾನದ ಹಿಂದಿನ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ಹೋಲಿಕೆ ಮಾಡಿ ನೋಡಿದಾಗ ಈ ಕ್ಷೇತ್ರದಲ್ಲಿ ನಾವು ಮಾಡಿದ ಸಾಧನೆ ಏನು ಎನ್ನುವುದು ಅನುಭವಕ್ಕೆ ಬರುತ್ತದೆ. ಸರಕಾರಿ ಸ್ವಾಮ್ಯದಲ್ಲಿದ್ದ ದೂರಸಂಪರ್ಕ ಕ್ಷೇತ್ರ ಉದಾರೀಕರಣದ ಫ‌ಲವಾಗಿ ಖಾಸಗಿಯವರಿಗೂ ತೆರೆದುಕೊಂಡ ಪರಿಣಾಮವಾಗಿ ಈ ಪ್ರಗತಿ ಸಾಧ್ಯವಾಗಿದೆ. ಹೀಗೆ ದೂರಸಂಪರ್ಕ ಕ್ಷೇತ್ರದಲ್ಲಾಗಿರುವ ಬದಲಾವಣೆಗೆ ತಕ್ಕಂತೆ ನೀತಿಯೂ ಬದಲಾಗುವ ಅಗತ್ಯವಿತ್ತು. ಈ ಅಗತ್ಯವನ್ನು ಕೇಂದ್ರ ಸರಕಾರ ರಾಷ್ಟ್ರೀಯ ಡಿಜಿಟಲ್‌ ಸಂವಹನ ನೀತಿಯನ್ನು ರಚಿಸುವ ಮೂಲಕ ಈಡೇರಿಸಿದೆ. ಲೋಕಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿರುವ ಈ ರಾಷ್ಟ್ರೀಯ ನೀತಿ ಇನ್ನು ಮೇಲ್ಮನೆಯಲ್ಲೂ ಅನುಮೋದಿಸಲ್ಪಡಬೇಕು. 

ದೂರಸಂಪರ್ಕ ಕ್ಷೇತ್ರಕ್ಕೆ ಇನ್ನಷ್ಟು ಉತ್ತೇಜನ ನೀಡುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ಟೆಲಿಕಾಂ ನೀತಿಯನ್ನು ರಚಿಸಲಾಗಿದೆ. ವಿಪುಲ ಉದ್ಯೋಗ ಸೃಷ್ಟಿಗೆ ಅವಕಾಶವಿರುವ ಈ ಕ್ಷೇತ್ರದಲ್ಲಿ ಹೂಡಿಕೆಯನ್ನು ಆಕರ್ಷಿಸುವುದು ಸರಕಾರದ ಮುಖ್ಯ ಉದ್ದೇಶ. 2022ಕ್ಕಾಗುವಾಗ ಸುಮಾರು 7 ಲಕ್ಷ ಕೋಟಿ ರೂಪಾಯಿ ಹೂಡಿಕೆ ಟೆಲಿಕಾಂ ಕ್ಷೇತ್ರಕ್ಕೆ ಹರಿದುಬರಬಹುದು ಹಾಗೂ ಇದೇ ವೇಳೆ ಸುಮಾರು 40 ಲಕ್ಷ  ಉದ್ಯೋಗ ಸೃಷ್ಟಿಯಾಗಬಹುದು ಎಂಬ ನಿರೀಕ್ಷೆಯನ್ನು ಸರಕಾರ ಇಟ್ಟುಕೊಂಡಿದೆ. ಇದಕ್ಕಾಗಿ 10 ಲಕ್ಷ ಮಂದಿಗೆ ಕೌಶಲ ವೃದ್ಧಿ ತರಬೇತಿಯನ್ನೂ ನೀಡಲುದ್ದೇಶಿಸಿದೆ. ಉದ್ಯೋಗ ಸೃಷ್ಟಿ ತುರ್ತು ಅಗತ್ಯವಾಗಿರುವುದರಿಂದ ನೀತಿಯಲ್ಲಿ ಅದಕ್ಕೆ ಪೂರವಾದ ಇಂಥ ಅಂಶಗಳಿರುವುದು ಸ್ವಾಗತಾರ್ಹ. 

ಎಲ್ಲ ಗ್ರಾಮ ಪಂಚಾಯತುಗಳಿಗೆ 2020ರ ಒಳಗಾಗಿ 1 ಜಿಪಿಪಿಎಸ್‌ ವೇಗದ ಇಂಟರ್ನೆಟ್‌ ಸೌಲಭ್ಯ, ಪ್ರತಿ ವ್ಯಕ್ತಿಗೆ 50 ಎಂಬಿಪಿಎಸ್‌ ಬ್ರಾಡ್‌ಬ್ಯಾಂಡ್‌ ಸಂಪರ್ಕ ಮತ್ತಿತರ ಕೆಲವು ಆಕರ್ಷಣೀಯ ಅಂಶಗಳು ಹೊಸ ನೀತಿಯಲ್ಲಿವೆ. ಆದರೆ ಹೊಸ ನೀತಿಯಲ್ಲಿರುವ ಕೆಲವು ಅಂಶಗಳು 2012ರಲ್ಲಿ ಆಗಿನ ಸರಕಾರ ರಚಿಸಿದ ನೀತಿಯಲ್ಲಿದ್ದ ಅಂಶಗಳೇ ಆಗಿವೆ. ಉದಾಹರಣೆಗೆ ಹೇಳುವುದಾದರೆ ಪ್ರತಿ ನಾಗರಿಕನಿಗೆ ಇಂಟರ್‌ನೆಟ್‌ ಸೌಲಭ್ಯ ಕಲ್ಪಿಸುವುದು. 2012ರ ರಾಷ್ಟ್ರೀಯ ದೂರಸಂಪರ್ಕ ನೀತಿಯಲ್ಲೂ ಈ ಅಂಶವನ್ನು ಪ್ರಸ್ತಾವಿಸಲಾಗಿತ್ತು. ಆರು ವರ್ಷ ಕಳೆದರೂ ಇದನ್ನು ಪೂರ್ಣವಾಗಿ ಸಾಕಾರಗೊಳಿಸಲು ಸಾಧ್ಯವಾಗಿಲ್ಲ. 4ಜಿ ಯುಗಕ್ಕೆ ಕಾಲಿರಿಸಿದ್ದರೂ ಇನ್ನೂ 2ಜಿ ಸಂಪರ್ಕವೂ ಇಲ್ಲದ ಅನೇಕ ಹಳ್ಳಿಗಳು ದೇಶದಲ್ಲಿವೆ ಎನ್ನುವುದು ವಾಸ್ತವ ವಿಚಾರ. ಎಲ್ಲರಿಗೂ ಬ್ರಾಡ್‌ಬ್ಯಾಂಡ್‌ ಸಂಪರ್ಕ ಒದಗಿಸುವ ಕನಸಂತೂ ಇನ್ನೂ ಕೈಗೆಟುಕದಷ್ಟು ದೂರದಲ್ಲಿದೆ. 

ಖಾಸಗಿ ಕಂಪೆನಿಗಳು ಉತ್ತಮ ಇಂಟರ್‌ನೆಟ್‌ ಸೌಲಭ್ಯ ಒದಗಿಸುತ್ತಿದ್ದರೂ ಅವುಗಳ ಲಕ್ಷ್ಯವಿರುವುದು ಹೆಚ್ಚು ಗ್ರಾಹಕರು ಇರುವ ನಗರಗಳಲ್ಲೇ ಹೊರತು ಹಳ್ಳಿಗಾಡುಗಳಲ್ಲಿ ಅಲ್ಲ. ಎಲ್ಲವೂ ಡಿಜಿಟಲ್‌ವುಯ ಆಗಬೇಕೆಂದು ಬಯಸುವಾಗ ಎಲ್ಲೆಡೆಗೂ ಸಶಕ್ತವಾದ ಇಂಟರ್‌ನೆಟ್‌ ಸಂಪರ್ಕವೂ ಇರಬೇಕು. ಹೊಸ ನೀತಿಯಲ್ಲಿ ಇಂಥ ಕೆಲವು ಲೋಪಗಳತ್ತಲೂ ಗಮನ ಹರಿಸಿದ್ದರೆ ಸಮುಚಿತವಾಗುತ್ತಿತ್ತು. 

ಅದೇ ರೀತಿ ಸಿ-ಡಾಟ್‌ ಅನ್ನು ಪ್ರಮುಖ ಟೆಲಿಕಾಂ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯಾಗಿ ಮಾರ್ಪಡಿಸುವ ಅಂಶವನ್ನು ಪ್ರಸ್ತಾವಿಸಲಾಗಿದ್ದು ಇದು ಕಳೆದೊಂದು ದಶಕದಿಂದ ಪ್ರಸ್ತಾವನೆಯಲ್ಲಿರುವ ವಿಷಯ. ಈ ವಿಚಾರವಾಗಿ ಇನ್ನು ಒಂದಿಂಚು ಮುಂದುವರಿಯಲು ಸಾಧ್ಯವಾಗಿಲ್ಲ. ಹೊಸ ನೀತಿಯಲ್ಲಿ ಮತ್ತೆ ಅದನ್ನೇ ಉಲ್ಲೇಖೀಸುವ ಅಗತ್ಯವಿರಲಿಲ್ಲ. ಹೀಗೆ ಹಳೆ ಪ್ರಸ್ತಾವಗಳನ್ನೇ ಹೊಸ ರೂಪದಲ್ಲಿ ಮಂಡಿಸುವುದಕ್ಕಿಂತ ಇವುಗಳನ್ನು ಜಾರಿಗೊಳಿಸುವ ಕ್ರಿಯಾ ಯೋಜನೆ ಏನು ಎನ್ನುವುದನ್ನು ತಿಳಿಸಬಹುದಿತ್ತು. ಸೆಮಿಕಂಡಕ್ಟರ್‌ಗಳನ್ನು ಸ್ಥಳೀಯವಾಗಿ ಉತ್ಪಾದಿಸುವ ಸಲುವಾಗಿ ನೀತಿಯೊಂದನ್ನು ಕೆಲವು ವರ್ಷದ ಹಿಂದೆಯೇ ರಚಿಸಲಾಗಿದ್ದರೂ ಇನ್ನೂ ಯಾವುದೇ ಕಂಪೆನಿ ಇದರಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿಲ್ಲ. ಹೊಸ ನೀತಿ ರಚಿಸುವಾಗ ಇಂಥ ವಿಚಾರಗಳತ್ತಲೂ ಗಮನ ಹರಿಸುವ ಅಗತ್ಯವಿತ್ತು. ಹಳೇ ಮದ್ಯವನ್ನು ಹೊಸ ಬಾಟಲಿಯಲ್ಲಿ ನೀಡಿದರೆ ಅದರ ರುಚಿ ಬದಲಾಗುವುದಿಲ್ಲ. 

ಟಾಪ್ ನ್ಯೂಸ್

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.