ಸೈನಿಕರ ಹನಿಟ್ರ್ಯಾಪ್‌ ಪ್ರಕರಣ: ಮಾನಸಿಕ ತರಬೇತಿ ಅಗತ್ಯ 

Team Udayavani, Jan 15, 2019, 12:30 AM IST

honey-trap-case-222.jpg

ಸೇನೆಯ ಮಾಹಿತಿ ಲಪಟಾಯಿಸಲು ಮಹಿಳೆಯರನ್ನು ಬಳಸುವುದು ಪುರಾತನ ತಂತ್ರ. ಸೋಷಿಯಲ್‌ ಮೀಡಿಯಾ ಯುಗದಲ್ಲೀಗ ಈ ತಂತ್ರ ಹೊಸ ರೀತಿಯಲ್ಲಿ ಬಳಕೆಯಾಗುತ್ತಿದೆ. ಪಾಕಿಸ್ತಾನದ ಬೇಹುಪಡೆ ಐಎಸ್‌ಐ ಭಾರತದ ಸೇನೆಯ ರಹಸ್ಯಗಳನ್ನು ತಿಳಿದುಕೊಳ್ಳಲು ಸಾಮಾಜಿಕ ಮಾಧ್ಯಮಗಳ ನೆರವಿನಿಂದ ಹನಿಟ್ರ್ಯಾಪ್‌ ಮಾಡಿದ ಹಲವು ಘಟನೆಗಳು ಸಂಭವಿಸಿವೆ.ಅದಕ್ಕೆ ಹೊಸ ಸೇರ್ಪಡೆ ಇದೀಗ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಬೆಳಕಿಗೆ ಬಂದ ಘಟನೆ. ಸೇನಾ ಶಿಬಿರದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಪಾಯಿಯೊಬ್ಬರನ್ನು ಯುವತಿಯ ಹೆಸರಿನಲ್ಲಿ ತೆರೆಯಲಾದ ಫೇಸ್‌ಬುಕ್‌ ಮೂಲಕ ಬುಟ್ಟಿಗೆ ಹಾಕಿಕೊಂಡು ಅವರಿಂದ ಸೇನೆಗೆ ಸಂಬಂಧಿಸಿದ ಹಲವು ರಹಸ್ಯ ಮಾಹಿತಿಗಳನ್ನು ಪಡೆದುಕೊಳ್ಳಲಾಗಿದೆ. ಇದೇ ರೀತಿ 50 ಸೈನಿಕರನ್ನು ಹನಿಟ್ರ್ಯಾಪ್‌ ಜಾಲಕ್ಕೆ ಕೆಡಹಲಾಗಿದೆ ಎನ್ನುವುದು ಕಳವಳಕಾರಿ ಸಂಗತಿ. 

ಭಾರತವನ್ನು ನೇರ ಯುದ್ಧದಲ್ಲಿ ಸೋಲಿಸುವ ಸಾಮರ್ಥ್ಯವಿಲ್ಲದ ಪಾಕಿಸ್ತಾನ ಆಗಾಗ ಇಂಥ ಕುಟಿಲ ತಂತ್ರಗಳನ್ನು ನಡೆಸುತ್ತಿರುತ್ತದೆ. ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌, ಇನ್‌ಸ್ಟಾಗ್ರಾಂನಂಥ ಸಾಮಾಜಿಕ ಮಾಧ್ಯಮಗಳನ್ನು ಅದು ಈ ಉದ್ದೇಶಕ್ಕೆ ಬಳಸಿಕೊಳ್ಳುತ್ತದೆ. ಆಕರ್ಷಕ ಹೆಸರಿನಲ್ಲಿ ಖಾತೆಗಳನ್ನು ತೆರೆದು ಸೈನಿಕರು ಮತ್ತು ಸೇನಾಧಿಕಾರಿಗಳ ಸ್ನೇಹ ಸಂಪಾದಿಸಿ ಅವರನ್ನು ಮೋಹದ ಬಲೆಯಲ್ಲಿ ಕೆಡವಿ ರಹಸ್ಯ ಮಾಹಿತಿಗಳನ್ನು ಲಪಟಾಯಿಸಿದ ಹಲವು ಪ್ರಕರಣಗಳನ್ನು ಬಯಲಿ ಗೆಳೆ ಯಲಾಗಿದೆ. ವಾಯುಪಡೆಯ ಗ್ರೂಪ್‌ ಕ್ಯಾಪ್ಟನ್‌, ವಾಯುಪಡೆಯ ಉನ್ನತಾಧಿಕಾರಿಯನ್ನೇ ಐಎಸ್‌ಐ ಹನಿಟ್ರ್ಯಾಪ್‌ ಬಲೆಗೆ ಕೆಡವಿದೆ ಎಂದಮೇಲೆ ಸಾಮಾನ್ಯ ಸೈನಿಕರು ಈ ಜಾಲಕ್ಕೆ ಬೀಳುವುದರಲ್ಲಿ ಆಶ್ಚರ್ಯವಿಲ್ಲ. ಇಂಥ ಹಲವು ಪ್ರಕರಣಗಳು ಸಂಂಭವಿಸಿದ ಬಳಿಕ ಸೇನೆ ಸಾಮಾಜಿಕ ಮಾಧ್ಯಮಗಳ ಬಳಕೆಗೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸುವುದಾಗಿ ಹೇಳಿತ್ತು. ಆದರೆ ಈ ನಿಯಮಗಳಿನ್ನೂ ಜಾರಿಗೆ ಬಂದಿರುವಂತೆ ಕಾಣಿಸುವುದಿಲ್ಲ. ಒಂದು ವೇಳೆ ಜಾರಿಯಾಗಿದ್ದರೆ ಮತ್ತೆ ಅದೇ ಮಾದರಿಯ ಘಟನೆ ಸಂಭವಿ ಸುತ್ತಿರಲಿಲ್ಲ. 

ಪಾಕಿಸ್ತಾನದ ಸ್ಥಿತಿಯೀಗ ತೀರಾ ಹದಗೆಟ್ಟಿದೆ. ಆರ್ಥಿಕವಾಗಿ ದಿವಾಳಿಯಾಗಿರುವ ಆ ದೇಶಕ್ಕೆ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಈ ರೀತಿ ಏನಾದರೂ ಮಾಡುವ ಅನಿವಾರ್ಯತೆ ಇದೆ. ಕಾಶ್ಮೀರಕ್ಕೆ ಉಗ್ರರನ್ನು ನುಗ್ಗಿಸುವುದು, ಅಫ್ಘಾನಿಸ್ಥಾನದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದೆಲ್ಲ ಪಾಕ್‌ ಸೇನೆಯು ಜನರ ಗಮನ ತಿರುಗಿಸಲು ಮಾಡುತ್ತಿರುವ ತಂತ್ರಗಳು. 

ಕೆಲ ಸಮಯದ ಹಿಂದೆ ಇಸ್ರೇಲ್‌ ಕೂಡಾ ಇದೇ ಮಾದರಿಯ ಸಮಸ್ಯೆಯನ್ನು ಎದುರಿಸಿತ್ತು. ಹಲವಾರು ಇಸ್ರೇಲ್‌ ಸೈನಿಕರನ್ನು ಹನಿಟ್ರ್ಯಾಪ್‌ ಮೋಹದಲ್ಲಿ ಸಿಲುಕಿಸಿ ಅವರಿಂದ ಮಾಹಿತಿ ಲಪಟಾಯಿಸುವ ಪ್ರಯತ್ನ ಮಾಡಲಾಗಿತ್ತು. ಹನಿಟ್ರ್ಯಾಪ್‌ಗೆ ಸಿಲುಕಿದ ಸೈನಿಕರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಗೊಂದಲದಿಂದಾಗಿ ಅವರ ಸಾಮರ್ಥ್ಯ ಕುಂಠಿತವಾಗಿತ್ತು. ಇದು ಬೆಳಕಿಗೆ ಬಂದ ತಕ್ಷಣವೇ ಎಚ್ಚೆತ್ತ ಅಲ್ಲಿನ ಸರಕಾರ ಸೋಷಿಯಲ್‌ ಮೀಡಿಯಾ ಬಳಕೆ ಮೇಲೆ ಹಲವು ನಿರ್ಬಂಧಗಳನ್ನು ಹೇರಿತು. ಹನಿಟ್ರ್ಯಾಪ್‌ಗೊಳಗಾಗಿದ್ದ ಸೈನಿಕರಿಗೆ ಕೌನ್ಸೆಲಿಂಗ್‌ ಮಾಡಿ ಅವರನ್ನು ಸರಿಪಡಿಸಲಾಯಿತು. ಈ ರೀತಿಯಾಗಿ ವಿರೋಧಿಗಳು ಹೆಣೆದಿದ್ದ ಷಡ್ಯಂತ್ರವನ್ನು ಇಸ್ರೇಲ್‌ ವಿಫ‌ಲಗೊಳಿಸಿತು. ಭಾರತದ ಸೇನೆ ಕೂಡಾ ಸೈನಿಕರು ಹನಿಟ್ರ್ಯಾಪ್‌ಗೊಳಗಾಗುವುದನ್ನು ತಪ್ಪಿಸಲು ಇಸ್ರೇಲ್‌ ಮಾದರಿಯನ್ನು ಅಧ್ಯಯನ ಮಾಡುವುದೊಳ್ಳೆಯದು. 

ಒಬ್ಬ ಸೈನಿಕ ಅಥವಾ ಸೇನಾಧಿಕಾರಿ ಹನಿಟ್ರ್ಯಾಪ್‌ ಜಾಲಕ್ಕೆ ಬಿದ್ದರೆ ಅದು ಅವನಿಗೆ ವೈಯಕ್ತಿಕವಾಗಿ ಸಮಸ್ಯೆ ತಂದೊಡ್ಡುವುದು ಮಾತ್ರವಲ್ಲದೆ ದೇಶಕ್ಕೂ ಅಪಾಯಕಾರಿಯಾಗಿ ಪರಿಣಮಿಸುತ್ತದೆ.ಅದರಲ್ಲೂ ಪಾಕಿಸ್ತಾನ ಸೇನೆಯ ಆಯಕಟ್ಟಿನ ಸ್ಥಳ ಮತ್ತು ಹುದ್ದೆಯಲ್ಲಿರುವ ವ್ಯಕ್ತಿಗಳನ್ನೇ ಆಯ್ದು ಹನಿಟ್ರ್ಯಾಪ್‌ಗೆ ಬೀಳಿಸುತ್ತಿರುವುದರ ಹಿಂದಿನ ಉದ್ದೇಶ ಸ್ಪಷ್ಟವಾಗಿ ತಿಳಿಯುತ್ತದೆ. 

ಯುದ್ಧಾಸ್ತ್ರಗಳು, ಸೇನೆ ನಿಯೋಜನೆ ಈ ಮುಂತಾದ ಸೂಕ್ಷ್ಮ ವಿಷಯಗಳನ್ನು ತಿಳಿದುಕೊಳ್ಳುವ ಸಲುವಾಗಿಯೇ ಪಾಕ್‌ ಐಎಸ್‌ಐ ಹನಿಟ್ರ್ಯಾಪ್‌ ಜಾಲವನ್ನು ಬಳಸಿಕೊಳ್ಳುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ನಮ್ಮ ಸೇನೆ ಕಟ್ಟೆಚ್ಚರದಲ್ಲಿರುವುದು ಅಗತ್ಯ. ಒಂದು ರೀತಿಯಲ್ಲಿ ಇದು ಪಾಕಿಸ್ತಾನ ನಮ್ಮ ವಿರುದ್ಧ ನಡೆಸುತ್ತಿರುವ ಸೈಬರ್‌ವಾರ್‌. ಇದನ್ನು ಇದೇ ತಂತ್ರದಿಂದ ಎದುರಿಸುವ ಮಾರ್ಗವನ್ನು ಕಂಡುಕೊಳ್ಳಬೇಕು. 

ಇದಕ್ಕಿಂತಲೂ ಮಿಗಿಲಾಗಿ ಶತ್ರುಗಳ ಇಂಥ ಅಗ್ಗದ ತಂತ್ರಗಳಿಗೆ ಬಲಿಬೀಳದಂಥ ಮನೋದಾಡ್ಯìವನ್ನು ಬೆಳೆಸಿಕೊಳ್ಳುವಂಥ ತರಬೇತಿಯನ್ನು ಸೈನಿಕರಿಗೆ ಕೊಡುವ ಅಗತ್ಯವಿದೆ. ಸೇನಾ ತರಬೇತಿ ಸಂದರ್ಭದಲ್ಲಿಯೇ ಸೋಷಿಯಲ್‌ ಮೀಡಿಯಾದ ಮೂಲಕ ನಡೆಯುವ ಯುದ್ಧವನ್ನು ಎದುರಿಸುವುದು ಹೇಗೆ ಎಂದು ಕಲಿಸಬಹುದು.

ಟಾಪ್ ನ್ಯೂಸ್

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

9-kushtagi

Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.