ಜಿಎಸ್‌ಟಿಗೆ ವರ್ಷ: ಇನ್ನಷ್ಟು ಸುಧಾರಣೆಯಾಗಲಿ


Team Udayavani, Jun 30, 2018, 6:00 AM IST

z-27.jpg

ಸರಿಯಾಗಿ ಒಂದು ವರ್ಷದ ಹಿಂದೆ ಮಧ್ಯರಾತ್ರಿ “ಒಂದು ದೇಶ ಒಂದು ತೆರಿಗೆ’ ಎಂಬ ಧ್ಯೇಯದೊಂದಿಗೆ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿ ಜಗತ್ತಿನ ಅತಿ ದೊಡ್ಡ ತೆರಿಗೆ ಸುಧಾರಣೆ ಕ್ರಮ ಎಂಬ ಹಿರಿಮೆಗೆ ಪಾತ್ರವಾಗಿದೆ. ದೇಶದ ಆರ್ಥಿಕ ಇತಿಹಾಸದಲ್ಲಿ ಇದೊಂದು ಮೈಲುಗಲ್ಲಾಗುವಂತಹ ನಿರ್ಧಾರ. ಕಳೆದೊಂದು ವರ್ಷದಲ್ಲಿ ಇಡೀ ಆಡಳಿತ ಯಂತ್ರ ಮತ್ತು ಕಾರ್ಯಾಂಗ ಜಿಎಸ್‌ಟಿ ಅನುಷ್ಠಾನವನ್ನು ಯಶಸ್ಸುಗೊಳಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದು ಅದರ ಫ‌ಲವಾಗಿ ಇಂದು ದೇಶದ ಆರ್ಥಿಕತೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. 

ಯಾವುದೇ ಬೃಹತ್‌ ಸುಧಾರಣೆಗಳನ್ನು ತರುವಾಗ ಒಂದಿಷ್ಟು ಸಮಸ್ಯೆಗಳಾಗುವುದು, ಹಿನ್ನಡೆಯಾಗುವುದು ಮತ್ತು ಜನಸಾಮಾನ್ಯರು ತೊಂದರೆಗೀಡಾಗುವುದು ಸಹಜ ಬೆಳವಣಿಗೆ. ಜಿಎಸ್‌ಟಿ ವಿಚಾರದಲ್ಲೂ ಆರಂಭದಲ್ಲಿ ಇವೆಲ್ಲ ಎದುರಾಗಿತ್ತು. ಒಂದು ಹಂತದಲ್ಲಿ ಆರ್ಥಿಕತೆಗೆ ಭಾರೀ ಹಿನ್ನಡೆಯೂ ಉಂಟಾಗಿತ್ತು. ಈ ಸಂದರ್ಭದಲ್ಲಿ ಜಿಎಸ್‌ಟಿಯನ್ನು ವಿರೋಧಿಸಿದವರೆಲ್ಲ ನಾವು ಹೇಳಿದ ಭವಿಷ್ಯ ನಿಜವಾಯಿತು ಎಂದು ಬೀಗಿದ್ದೂ ಇದೆ. ಆದರೆ ಕ್ರಮೇಣ ಜಿಎಸ್‌ಟಿ ತನ್ನ ಪರಿಣಾಮವನ್ನು ತೋರಿಸಲಾರಂಭಿಸಿತು. ತೆರಿಗೆ ಸಂಗ್ರಹ ಹೆಚ್ಚಳವಾಗಿದ್ದು ಮಾತ್ರವಲ್ಲದೆ ದೇಶದಲ್ಲಿ ವಿತ್ತೀಯ ಶಿಸ್ತು ಕಾಣಿಸಿಕೊಂಡಿದೆ. ತೆರಿಗೆ ಕಳ್ಳತನ ಮತ್ತು ತೆರಿಗೆ ವಂಚನೆಯನ್ನು ತಡೆಗಟ್ಟುವಲ್ಲಿ ಜಿಎಸ್‌ಟಿ ತಕ್ಕಮಟ್ಟಿಗೆ ಸಫ‌ಲವಾಗಿದೆ. ಜಿಎಸ್‌ಟಿ ಅನುಷ್ಠಾನಕ್ಕೆ ಬಂದ ಮೊದಲ ಎಂಟು ತಿಂಗಳಲ್ಲಿ 7.41 ಲಕ್ಷ ಕೋ. ರೂ. ತೆರಿಗೆ ಸಂಗ್ರಹವಾಗಿತ್ತು. ಇದೇ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾದರೆ ವಾರ್ಷಿಕ ಸಂಗ್ರಹ 11.11 ಲಕ್ಷ ಕೋ. ರೂ. ದಾಟಬಹುದು ಎಂದು ಲೆಕ್ಕಹಾಕಲಾಗಿದೆ. ಮಾಸಿಕ ಸರಾಸರಿ 92,581 ಕೋ. ರೂ. ತೆರಿಗೆ ಸಂಗ್ರಹವಾಗುತ್ತಿರುವುದು ದೇಶದ ಆರ್ಥಿಕ ಇತಿಹಾದಲ್ಲಿ ಇದೇ ಮೊದಲು ಎನ್ನುವುದು ಜಿಎಸ್‌ಟಿಯ ಯಶೋಗಾಥೆಯನ್ನು ತಿಳಿಸುತ್ತದೆ. 

37 ಭಿನ್ನ ತೆರಿಗೆ ಮಂಡಳಿಗಳು, 16 ಭಿನ್ನ ತೆರಿಗೆಗಳು ಮತ್ತು 15 ಭಿನ್ನ ಸೆಸ್‌ ಮತ್ತು ಮೇಲೆ¤ರಿಗೆಗಳನ್ನು ಒಗ್ಗೂಡಿಸಿ ಏಕರೂಪದ ಪರೋಕ್ಷ ತೆರಿಗೆ ಸಂಹಿತೆಯನ್ನು ರೂಪಿಸುವುದೇ ದೊಡ್ಡ ಸವಾಲಿನ ಕೆಲಸವಾಗಿತ್ತು. ಇದಕ್ಕಾಗಿ ಸಂವಿಧಾನ ತಿದ್ದಪಡಿ ಮಾಡಿದ್ದು ಮೊದಲ ಮೈಲುಗಲ್ಲಾಗಿತ್ತು. ಕರಡು ಕಾನೂನು ರಚನೆ ಮತ್ತು ನಿಯಮಗಳ ರೂಪಣೆ ಸರಕಾರ ಎದುರಿಸಿದ ಎರಡನೇ ದೊಡ್ಡ ಸವಾಲು. ಎಲ್ಲ ರಾಜ್ಯಗಳನ್ನು ಒಂದೇ ಸೂತ್ರದಡಿ ತರಲು ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ಮತ್ತು ಜಾಲವನ್ನು ರಚಿಸುವುದು ಮೂರನೇ ಸವಾಲಾಗಿತ್ತು. ಈ ಎಲ್ಲ ಸವಾಲುಗಳನ್ನು ಎದುರಿಸುವಲ್ಲಿ ಸರಕಾರ ತೋರಿಸಿದ ಜಾಣ್ಮೆ ಮತ್ತು ಸಂಯಮ ಗಮನಾರ್ಹವಾದದ್ದು. ಈ ನಿಟ್ಟಿನಲ್ಲಿ ಜಿಎಸ್‌ಟಿ ಕೌನ್ಸಿಲ್‌ ಎಲ್ಲ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೀತಿನಿಯಮಗಳನ್ನು ರಚಿಸುವ ಮೂಲಕ ಒಕ್ಕೂಟ ವ್ಯವಸ್ಥೆಯ ಘನತೆಯನ್ನೂ ಎತ್ತಿ ಹಿಡಿದಿದೆ. 

ಯಾವುದೇ ಹೊಸ ಸುಧಾರಣೆಯಿಂದ ಜನಸಾಮಾನ್ಯರ ಬದುಕಿನಲ್ಲಿ ಧನಾತ್ಮಕವಾದ ಯಾವ ಬದಲಾವಣೆಗಳಾಗಿವೆ ಎನ್ನುವುದು ಅದರ ಯಶಸ್ಸಿನ ಮಾನದಂಡವಾಗುತ್ತದೆ. ಮಾರುಕಟ್ಟೆಯಲ್ಲಿ ಅಗತ್ಯ ದಿನಸಿಯೂ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣದಲ್ಲಿದ್ದು, ಇದರ ಪರಿಣಾಮವಾಗಿ ಹಣದುಬ್ಬರವೂ ನಿಯಂತ್ರಣಕ್ಕೆ ಬಂದಿದೆ. ಇದು ಜಿಎಸ್‌ಟಿಯ ಬಲುದೊಡ್ಡ ಸಾಧನೆಯೆಂದೇ ಹೇಳಬಹುದು. 

ಆರಂಭಿಕ ಎಡರುತೊಡರುಗಳನ್ನು ನಿವಾರಿಸಿಕೊಂಡು ಜಿಎಸ್‌ಟಿ ಈಗ ಎರಡನೇ ವರ್ಷಕ್ಕೆ ಕಾಲಿರಿಸಿದೆ. ಜಿಎಸ್‌ಟಿ ಕೌನ್ಸಿಲ್‌ ಮತ್ತು ಸರಕಾರ ಈ ಸುಧಾರಣೆಯನ್ನು ಮುಂದುವರಿಸಿಕೊಂಡು ಹೋಗಲು ತೆರಿಗೆ ಸಲ್ಲಿಕೆ ಪದ್ಧತಿಯನ್ನು ಇನ್ನಷ್ಟು ಸರಳಗೊಳಿಸುವ ಅಗತ್ಯವಿದೆ. ಸರಳೀಕೃತ ಮತ್ತು ಪಾರದರ್ಶಕ ಜಿಎಸ್‌ಟಿ ವ್ಯಾಪಾರಿಗಳಿಗೆ, ಕೈಗಾರಿಕೆಗಳಿಗೆ ಮಾತ್ರವಲ್ಲದೆ ಜನಸಾಮಾನ್ಯರಿಗೂ ಪ್ರಯೋಜನಕಾರಿ. ಅದೇ ರೀತಿ ಜಿಎಸ್‌ಟಿ ದರಗಳಲ್ಲೂ ಇನ್ನಷ್ಟು ಸುಧಾರಣೆಗಳಾಗುವ ಅಗತ್ಯವಿದೆ. ಪ್ರಸ್ತುತ ಇರುವ ನಾಲ್ಕು ದರಗಳನ್ನು ಅಂತರಾಷ್ಟ್ರೀಯ ಮಾನದಂಡಕ್ಕನುಗುಣವಾಗಿ ಮೂರಕ್ಕಿಳಿಸಿಕೊಳ್ಳಬೇಕು. ಅಂತೆಯೇ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗುಳಿದಿರುವ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ರಿಯಲ್‌ ಎಸ್ಟೇಟ್‌ ಉದ್ಯಮವನ್ನು ಒಳಗೆ ತರುವ ಕೆಲಸವಾಗಬೇಕು. ಇವೆರಡು ರಾಜ್ಯಗಳಿಗೆ ದೊಡ್ಡ ಮೊತ್ತದ ಕಂದಾಯ ತಂದುಕೊಡುವ ಮೂಲಗಳು ಎನ್ನುವುದು ನಿಜ. ಆದರೆ ಒಂದು ದೇಶ ಒಂದು ತೆರಿಗೆ ಧ್ಯೇಯ ಪೂರ್ಣ ಪ್ರಮಾಣದಲ್ಲಿ ಸಾಕಾರವಾಗಬೇಕಾದರೆ ಇದು ಆಗುವುದು ಅನಿವಾರ್ಯ. 

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.