ಬಹೂರಾನಿಯ ಅತಿಸುಲಭದ ಆನ್‌ಲೈನ್‌ ರಿಟರ್ನ್ ಫೈಲಿಂಗ್‌


Team Udayavani, Jul 10, 2017, 8:07 AM IST

ANKAN-1.jpg

ನಿನ್ನೆಯ ಸಂಡೆ ಬೆಳಗ್ಗೆ ಹನ್ನೊಂದು ಗಂಟೆ ಸುಮಾರಿಗೆ ಗುರುಗುಂಟಿರಾಯರು ಈಸೀ ಚೇರಿನಲ್ಲಿ ಹೆಬ್ಟಾವಿನಂತೆ ಬಿದ್ದುಕೊಂಡು ಸಂಡೆ ಸಪ್ಲಿಮೆಂಟನ್ನು ಅಸಹನೆಯಿಂದ ಹನ್ನೆರಡು ಬಾರಿ ತಿರುವಿ ಹಾಕಿ ಹದಿಮೂರು ಬಾರಿ ಕಿಚನ್‌ ಕಡೆ ದೃಷ್ಟಿ ಹರಿಸಿದರೂ ಸೊಸೆಯ ವತಿಯಿಂದ ತಮ್ಮ ಹದಿನಾಲ್ಕನೆಯ ಕಪ್‌ ಚಹ ಭಾಗ್ಯ ಮಾತ್ರ ಇತ್ತ ಕಡೆ ಹರಿಯಲೇ ಇಲ್ಲ. ಇನ್ನು ಸುಮ್ಮನುಳಿದರೆ ಇವತ್ತಿನ್ನು ನೇರವಾಗಿ ಲಂಚೇ ಗತಿ ಎಂದು ಮನಗಂಡ ಗುರುಗುಂಟಿರಾಯರು ಟಪ್ಪೆಂದು ಚೇರಿನಿಂದೆದ್ದು ಕಿಚನ್‌ ಕಡೆ ಹೊರಟರು. ಡೈನಿಂಗ್‌ ಟೇಬಲ್ಲಿನಲ್ಲಿ ಕಟಕಟನೆ ಲಾಪ್‌ಟಾಪ್‌ ಕುಟ್ಟುತ್ತಿರುವ ಬಹೂರಾನಿಯ ದರ್ಶನವಾಯಿತು. ಈ ವಯಸ್ಸ‌ಲ್ಲಿ ಸೊಸೆ ಮೇಲೆ ಕೂಗಾಡಿದರೆ ಮುಂದ ತಮಗೇ ತೊಂದರೆ ಎನ್ನುವ ಪ್ರಾಥಮಿಕ ಜ್ಞಾನೋದಯ ಯಾವಾಗಲೋ ಆಗಿರುವ ರಾಯರು ತಮ್ಮ ಸಿಟ್ಟನ್ನು ಅದುಮಿ ಸ್ವರವನ್ನು ತುಸು ಸ್ವೀಟಾಗಿಸಿ ಬಹೂರಾನಿಯ ಹಿಂದಿನಿಂದ ತಲೆಬಾಗಿಸಿ “ಎಂತ ಬಿಸಿಯಾ…?’ ಅಂತ ಕೂಲಾಗಿಯೇ ಕೇಳಿದರು. ರಾಯರ ಚಾಯಾರ್ಥಿ ದನಿಯನ್ನು ಕೇಳಿಸಿಕೊಂಡ ಬಹುರಾನಿ ಅವರ ಹದಿನಾಲ್ಕನೆಯ ಕಪ್ಪಿನ ಟೀಟೈಮ್‌ ಮೀರಿ ಆವಾಗಲೇ ಅರ್ಧ ಗಂಟೆ ಆಗಿದ್ದು ಅರಿವಾಗಿ ಗಾಬರಿಯಿಂದ ಕಂಪ್ಯೂಟರ್‌ ಬಿಟ್ಟು ಧಿಗ್ಗನೆ ಎದ್ದಳು. ತಮ್ಮ ಸ್ಮಾರ್ಟ್‌ ಸೊಸೆ ಕಂಪ್ಯೂಟರ್‌ನಲ್ಲಿ ಆನ್‌ಲೈನ್‌ ಆಗಿ ಆದಾಯ ತೆರಿಗೆ ರಿಟರ್ನ್ ಫೈಲಿಂಗ್‌ ಮಾಡುವುದನ್ನು ಕಂಡ ರಾಯರು ಎಕªಂ ಖುಶ್‌ ಆಗಿ ತಮ್ಮ ಚಹ ಮರೆತು “ಇರಲಿ ಬಿಡು ಪರವಾಗಿಲ್ಲ, ನೀನು ಕಂಪ್ಯೂಟರಿನಲ್ಲಿ ತೆರಿಗೆ ಫೈಲಿಂಗ್‌ ಅದ್‌ ಹ್ಯಾಗೆ ಮಾಡ್ತೀಯಾ ಸ್ವಲ್ಪ ಹೇಳಿಕೊಡು ನೋಡುವಾ’ ಅಂತ ಕಿವಿ ಕುತ್ತ ಮಾಡಿ ನಿಂತರು. ಈಗ ತಾನೆ ರಿಟರ್ನ್ ಫೈಲಿಂಗಿನ ಕೊನೆಯ ಹಂತಕ್ಕೆ ಬಂದಿಳಿದಿದ್ದ ಸೊಸೆಗೆ ಮಾವನ ಮೆಚ್ಚುಗೆ ಕಂಡು ಖುಶಿಯಾಗಿ ಆನ್‌ಲೈನ್‌ ರಿಟರ್ನ್ ಫೈಲಿಂಗ್‌ ಬಗ್ಗೆ ಉತ್ಸಾಹದಿಂದ ವಿವರಿಸತೊಡಗಿದಳು: 

ಕಡ್ಡಾಯ ಆಡಿಟ್‌ ಇರುವ ಬಿಸಿನೆಸ್‌ ಹಾಗೂ ಪ್ರೊಫೆಶನಲ್‌ ವ್ಯಕ್ತಿಗಳಿಗೆ ರಿಟರ್ನ್ ಫೈಲಿಂಗ್‌ ಮಾಡಲು ಕೊನೆಯ ದಿನಾಂಕ ಸೆಪ್ಟೆಂಬರ್‌ 30, ಆದರೆ ಸಂಬಳ ಮತ್ತಿತರ ಸೀಮಿತ ಆದಾಯವುಳ್ಳ ಬಹುತೇಕ ಜನಸಾಮಾನ್ಯರೆಲ್ಲರಿಗೆ ಅದು ಜುಲೈ 31.  

ಯಾವ ರೀತಿಯ ಆದಾಯ ಉಳ್ಳವರು ಯಾವ ಫಾರ್ಮನ್ನು ಉಪಯೋಗಿಸತಕ್ಕದ್ದು ಎನ್ನುವುದರ ಬಗ್ಗೆ ಕಳೆದ ವಾರದ ಕಾಕುವಿನಲ್ಲಿ  ವಿವರಗಳಿವೆ. ಇರುವ ನಾಲ್ಕು ಫಾರ್ಮುಗಳಲ್ಲಿ ಜನಸಾಮಾನ್ಯರ ವತಿಯಿಂದ ಅತ್ಯಂತ ಜಾಸ್ತಿ ಉಪಯೋಗಿಸಲ್ಪಡುವ ಫಾರ್ಮ್ ಅಂದರೆ ಅದು ಐಟಿಆರ್‌-1 ಅಥವಾ ಸಹಜ್‌ ಫಾರ್ಮ್.

ಐಟಿಆರ್‌-1/ಸಹಜ್‌ ಫಾರ್ಮ್:  ವೈಯಕ್ತಿಕ ನೆಲೆಯಲ್ಲಿ ಸಂಬಳ/ಪೆನ್ಷನ್‌ ಆದಾಯ, ಗರಿಷ್ಟ ಒಂದು ಮನೆಯ ಗೃಹ ಸಂಬಂಧಿ ಆದಾಯ, ಇತರ ಆದಾಯ, ರೂ 5000 ಮೀರದ ಕೃಷಿ ಆದಾಯ ರೂ 50 ಲಕ್ಷ ಮೀರದ ಒಟ್ಟು ಆದಾಯ ಅಥವಾ ಯಾವುದೇ ಮಿತಿ ಇಲ್ಲದೆ ಕರಮಾಫಿಯುಳ್ಳ ಆದಾಯ ಹೊಂದಿದವರು ಈ ಫಾರ್ಮನ್ನು ಉಪಯೋಗಿಸಬಹುದು. ಬಹುತೇಕ ನೌಕರರಿಗೆ ವೇತನ/ಪೆನÒನ್‌ ಹಾಗೂ ಕೆಲವೊಂದು ಇತರ ಆದಾಯ (ಬಹುತೇಕ ಬಡ್ಡಿ) ಮಾತ್ರವೇ ಇರುವ ಕಾರಣ ಅಂಥವರಿಗೆ ಈ ಫಾರ್ಮ್ ಸೂಕ್ತ. ಒಂದು ಸ್ವಂತ ವಾಸದ ಅಥವಾ ಬಾಡಿಗೆಗೆ ನೀಡಿದ ಮನೆಯಿದ್ದವರೂ ಇದನ್ನು ಉಪಯೋಗಿಸಬಹುದಾಗಿದೆ. ಈ ಫಾರ್ಮನ್ನು ತುಂಬಿ ಆದಾಯ ತೆರಿಗೆಯ ರಿಟರ್ನ್ ಹೇಳಿಕೆಯನ್ನು ಕಾಗದದ ಫಾರ್ಮ್ ತುಂಬಿ ಭೌತಿಕವಾಗಿಯೂ ಸಲ್ಲಿಸಬಹುದು; ಆನ್‌ಲೈನ್‌ ಆಗಿ ಕಂಪ್ಯೂಟರ್‌ ಮೂಲಕವೂ ಸಲ್ಲಿಸಬಹುದು. ರೂ 5 ಲಕ್ಷದ ಗ್ರಾಸ್‌ ಆದಾಯದ ಒಳಗಿನವರಿಗೆ ಮಾತ್ರ ಈ ರೀತಿ ಕಾಗದದ ಹಾಳೆಯಲ್ಲಿ ರಿಟರ್ನ್ ಸಲ್ಲಿಕೆ ಮಾಡುವ ಅವಕಾಶ ನೀಡಲಾಗಿದೆ. ಜಾಲತಾಣದಲ್ಲಿ ಸಲ್ಲಿಕೆ ರೂ 5 ಲಕ್ಷಕ್ಕಿಂತ ಜಾಸ್ತಿ ಆದಾಯ ಇರುವವರಿಗೆ ಹಾಗೂ ತೆರಿಗೆಯ ರೀಫ‌ಂಡ್‌ ಪಡೆಯಲು ಅರ್ಹರಾದವರಿಗೆ ಮಾತ್ರ ಕಡ್ಡಾಯವಾದರೂ ಇದನ್ನು ಇತರರೂ ಮಾಡಬಹುದು.

ಆನ್‌ಲೈನ್‌ ಫೈಲಿಂಗ್‌: ಮೊತ್ತಮೊದಲಾಗಿ ಆದಾಯ ತೆರಿಗೆಯ ಜಾಲತಾಣ www.incometaxindiaefiling.gov.in ದಲ್ಲಿ ಹೋಗಿ ನಿಮ್ಮ ಈಗಾಗಲೇ ರಿಜಿಸ್ಟರ್‌ ಮಾಡಿಕೊಂಡಿರುವ ಖಾತೆಯಲ್ಲಿ ನಿಮ್ಮ ಲಾಗ್‌-ಇನ್‌ ಐಡಿಯನ್ನು (ಅದು ನಿಮ್ಮ ಪ್ಯಾನ್‌ ನಂಬರ್‌, ಪಾಸ್ವರ್ಡ್‌ ಹಾಗೂ ನಿಮ್ಮ ಜನ್ಮ ದಿನಾಂಕ) ಬಳಸಿಕೊಂಡು ಲಾಗ್‌-ಇನ್‌ ಆಗಿಬಿಡಿ. (ಲಾಗ್‌-ಇನ್‌ ಆಗುವ ಸಂದರ್ಭದಲ್ಲಿ ಜಾಲತಾಣ ನಿಮ್ಮ ಆಧಾರ್‌ ನಂಬರ್‌ ಲಿಂಕ್‌ ಮಾಡಿಕೊಳ್ಳಲು – ಹಾಗೆ ಈಗಾಗಲೇ ಮಾಡಿರದಿದ್ದಲ್ಲಿ- ಕೇಳಬಹುದು) 

ಕ್ವಿಕ್‌ ಫೈಲಿಂಗ್‌: ಲಾಗ್‌ಇನ್‌ ಆದ ಮೇಲೆ ಕ್ವಿಕ್‌ ಇ-ಫೈಲ್‌ ಐಟಿಆರ್‌’ ಎಂಬ ಎಡಭಾಗದ ಮೂರನೆಯ ಬಟನ್‌ ° ಒತ್ತಿ. ಆಗ ಬರುವ ಪರದೆಯಲ್ಲಿ ನಿಮ್ಮ ಪ್ಯಾನ್‌ ನಂಬರ್‌, ಬೇಕಾದ ಐಟಿಆರ್‌ ಫಾರ್ಮ್ ನಂಬರ್‌ 1/ಸಹಜ್‌, ಅಸೆಸೆ¾ಂಟ್‌ ವರ್ಷ (ಸದ್ರಿ 2017-18. ಅಂದರೆ, ವಿತ್ತ ವರ್ಷ 2016-17; ದಯವಿಟ್ಟು ಗಮನಿಸಿ) ಇತ್ಯಾದಿಗಳನ್ನು ತುಂಬಿ ಮುಂದಕ್ಕೆ ಹೋಗಿರಿ. ಮುಂದೆ ತೆರೆದುಕೊಳ್ಳುವ ಸ್ಕ್ರೀನಿನಲ್ಲಿ ಸೂಚನೆಗಳ ಪುಟ ಸಹಿತ ಇನ್ನು 5 ಪುಟಗಳು ಇರುತ್ತವೆ. ಅವುಗಳನ್ನು ಒಂದೊಂದಾಗಿ ತೆರೆದು ಮಾಹಿತಿಗಳನ್ನು ತುಂಬಿರಿ.

1ವೈಯಕ್ತಿಕ ಮಾಹಿತಿ: ಈ ಪುಟದಲ್ಲಿ ಹೆಸರು, ಪ್ಯಾನ್‌ ನಂಬರ್‌, ಲಿಂಗ, ವಿಳಾಸ, ಸ್ಟೇಟಸ್‌, ಇ-ಮೈಲ್‌, ಮೊಬೈಲ್‌, ಆಧಾರ್‌ ನಂಬರ್‌ ಇತ್ಯಾದಿ ವಿವರಗಳನ್ನು ತುಂಬಿರಿ. ಅಲ್ಲೇ ಕೆಳಗೆ ನಿಮ್ಮ ಎಂಪ್ಲಾಯೀ ಕೆಟಗರಿ, ರೆಸಿಡೆಂಟ್‌/ಎನ್ನಾರೈ, ಟ್ಯಾಕ್ಸ್‌ ರೀಫ‌ಂಡ್‌/ಪಾವತಿ ಬಾಕಿ ಇದೆ ಯಾ ಇಲ್ಲ, ಈ ಸಲ್ಲಿಕೆಯು ಕೊನೆ ದಿನಾಂಕದ ಮೊದಲೋ, ನಂತರವೋ ಅಥವಾ ಇನ್ಯಾವುದಾದರು ಕಾರಣಕ್ಕೆ ಪರಿಷ್ಕೃತವೋ, ಅಲ್ಲದೆ ನೀವು ಪೋರ್ಚುಗೀಸ್‌ ಕಾನೂನಿನಡಿ ಬರುತ್ತೀರಾ? ಇತ್ಯಾದಿ ವಿವರಗಳನ್ನು ಆಯ್ದು ನಮೂದಿಸಬೇಕು. 

2 ಆದಾಯದ ವಿವರಗಳು: ಈ ಪುಟದಲ್ಲಿ ಸಂಬಳದ ಆದಾಯ,  ಗೃಹ ಸಂಬಂಧಿ ಆದಾಯ ಹಾಗೂ ಇತರ ಆದಾಯಗಳ ಮೊತ್ತವನ್ನು ನಮೂದಿಸಿರಿ. ಕಂಪ್ಯೂಟರ್‌ ಗ್ರಾಸ್‌ ಟೋಟಲ್‌ ಆದಾಯವನ್ನು ಅದರಷ್ಟಕ್ಕೇ ಲೆಕ್ಕ ಹಾಕಿ ನಮೂದಿಸುತ್ತದೆ. ಅದರ ಕೆಳಗೆ ಆದಾಯ ತೆರಿಗೆ ರಿಯಾಯಿತಿಗಾಗಿ ಮಾಡಿದ ಎಲ್ಲಾ ಹೂಡಿಕೆ ಖರ್ಚುಗಳನ್ನೂ ನಮೂದಿಸಿ. ಇದರಲ್ಲಿ 80ಸಿ, ಸಿಸಿಸಿ, ಸಿಸಿಡಿ(1)/(1ಬಿ)/(2), ಸಿಸಿಜಿ, ಡಿ, ಡಿಡಿ, ಡಿಡಿಬಿ, ಇ, ಟಿಟಿಎ, ಯು, ಇತ್ಯಾದಿ ಎಲ್ಲಾ ಕರವಿನಾಯಿತಿಯ ಸೆಕ್ಷನ್ನುಗಳಡಿಯಲ್ಲಿ ಮಾಡಿದ ಹೂಡಿಕೆ/ಪಾವತಿ ನಮೂದಿಸಿ. ಅದರ ಕೆಳಭಾಗದಲ್ಲಿ ಕಂಪ್ಯೂಟರ್‌ ನಿಮ್ಮ ಕರ ಲೆಕ್ಕ ಹಾಕಿ ಅದರ ಮೊತ್ತವನ್ನು ನಮೂದಿಸುತ್ತದೆ. ಮೂಲ ಕರ, ಸೆಸ್‌, ಬಡ್ಡಿ ಇತ್ಯಾದಿ ವಿವರಗಳು ಸಿಗುತ್ತವೆ.

3 ಕರ ವಿವರಗಳು: ಈ ಪುಟದಲ್ಲಿ ಇದುವರೆಗೆ ಕಟ್ಟಿದ ಆದಾಯ ಕರ – ಟಿಡಿಎಸ್‌, ಎಡ್ವಾನ್ಸ್‌ ಟ್ಯಾಕ್ಸ್‌ ಹಾಗೂ ಸೆಲ್ಫ್ ಅಸೆಸೆ¾ಂಟ್‌ ಟ್ಯಾಕ್ಸ್‌ – ಮತ್ತು ಅವುಗಳ ಬಿಎಸ್‌ಆರ್‌ ಕೋಡ್‌, ಚಲನ್‌ ನಂಬರ್‌, ದಿನಾಂಕ, ಮೊತ್ತ ಇತ್ಯಾದಿಗಳನ್ನು ನಮೂದಿಸಿ. ಈ ವಿವರಗಳನ್ನು ನಮೂದಿಸುವ ಮೊದಲು, ಫಾರ್ಮ್ 16, 16ಏ ಹಾಗೂ 26ಎಎಸ್‌ಗಳನ್ನೂ ಪರಿಶೀಲಿಸಿಕೊಳ್ಳಿ. ಅವುಗಳಲ್ಲಿ ಆ ವಿವರಗಳು ಇರುತ್ತವೆ. 

4 80ಜಿ: ಈ ಸೆಕ್ಷನ್‌ಗೆ ಪ್ರತ್ಯೇಕ ಪುಟ ಮೀಸಲಿಟ್ಟಿದ್ದಾರೆ. ನೀವು ಕರ ವಿನಾಯಿತಿ ಉಳ್ಳ ದೇಣಿಗೆ ಕೊಟ್ಟಿದ್ದಿದ್ದರೆ ಅದರ ವಿವರಗಳನ್ನು ಇಲ್ಲಿ ತುಂಬಬೇಕು. 100% ಹಾಗೂ 50% ವಿನಾಯಿತಿಗಳುಳ್ಳ (ಮಿತಿ ಇರುವ ಹಾಗೂ ಮಿತಿ ಇಲ್ಲದ) ಎಲ್ಲಾ ದೇಣಿಗೆಗಳ ವಿವರಗಳನ್ನು (ಹೆಸರು, ವಿಳಾಸ, ಪ್ಯಾನ್‌ ನಂಬರ್‌, ಮೊತ್ತ) ಇಲ್ಲಿ ತುಂಬಿ.   

5ಕಟ್ಟಿದ ಕರ ಮತ್ತು ಪರಿಶೀಲನೆ: ಈ ಪುಟದಲ್ಲಿ ನೀವು ಕಟ್ಟಿದ ಒಟ್ಟು ಕರಮೊತ್ತ, ಕಟ್ಟಬೇಕಾದ ಮೊತ್ತ, ಬಾಕಿ /ರೀಫ‌ಂಡ್‌ ಮೊತ್ತ ಇತ್ಯಾದಿಗಳ ವಿವರಗಳು ಅದರಷ್ಟಕ್ಕೇ ಲೆಕ್ಕ ಹಾಕಿ ಬರುತ್ತವೆ. ಅದಾದ ಬಳಿಕ ಈ ಪುಟದಲ್ಲಿ ನಿಮ್ಮ ಇಡೀ ವರ್ಷದ ಕರಮುಕ್ತ ಆದಾಯದ ಬಗ್ಗೆ ವಿವರಗಳನ್ನು ತುಂಬಬೇಕಾಗುತ್ತದೆ. ರೂ 5,000 ಮೀರದ ಕೃಷಿ ಆದಾಯ ಹಾಗೂ ಸೆಕ್ಷನ್‌ 10(38) ಅಡಿಯಲ್ಲಿ ಬರುವ ದೀರ್ಘ‌ಕಾಲಿಕ ಕರಮುಕ್ತ ಶೇರು ಆದಾಯ ಹಾಗೂ ಸೆಕ್ಷನ್‌ 10(34) ಅಡಿಯಲ್ಲಿ ಬರುವ ಕರಮುಕ್ತವಾದ ಡಿವಿಡೆಂಡ್‌ ಆದಾಯ ಮತ್ತು ಇನ್ನಿತರ ಯಾವುದೇ ಕರಮುಕ್ತ ಆದಾಯದ ಬಗ್ಗೆ ನಮೂದಿಸಬೇಕು. ಇವಗಳನ್ನು ಕರಲೆಕ್ಕಕ್ಕೆ ತೆಗೆದುಕೊಳ್ಳದಿದ್ದರೂ ಕೇವಲ ಮಾಹಿತಿಗಾಗಿ ಇವುಗಳನ್ನು ತುಂಬತಕ್ಕದ್ದು. ಭವಿಷ್ಯತ್ತಿನಲ್ಲಿ ನಿಮ್ಮಲ್ಲಿರುವ ಒಟ್ಟಾರೆ ಧನ ಸಂಪತ್ತನ್ನು ಸಮರ್ಥಿಸಲು ಈ ಮಾಹಿತಿಗಳು ಸಹಾಯವಾದೀತು.  ಅಷ್ಟೇ ಅಲ್ಲ, ಇನ್ನೂ ಕೆಳಗೆ ಕಳೆದ ವಿತ್ತ ವರ್ಷದಲ್ಲಿ ಚಾಲನೆಯಲ್ಲಿ ಇದ್ದ ನಿಮ್ಮ ಎಲ್ಲಾ ಎಸ್‌ಬಿ ಖಾತೆಗಳ ನಂಬರ್‌, ಬ್ಯಾಂಕ್‌ ಹೆಸರು, ಕೋಡ್‌ ನಮೂದಿಸಿ. ಖಾತೆಯಲ್ಲಿನ ಮೊತ್ತವನ್ನು ತುಂಬುವ ಅವಶ್ಯಕತೆ ಇಲ್ಲ. ರೀಫ‌ಂಡ್‌ ಬರುವುದಿದ್ದರೆ ಯಾವ ಖಾತೆಗೆ ಬರಬೇಕು ಎನ್ನುವುದನ್ನೂ ಗುರುತಿಸಿರಿ. ಈ ವರ್ಷ ಹೊಸತೆಂಬಂತೆ ಡಿಮೊನೆಟೈಸೇಶನ್‌ ಅವಧಿಯಲ್ಲಿ (9.11.16- 31.12.16) ಒಟ್ಟು ನಗದು ರೂ 2 ಲಕ್ಷ ಮೀರಿ ಬ್ಯಾಂಕ್‌ ಖಾತೆಗಳಲ್ಲಿ ತುಂಬಿದ್ದರೆ ಮಾತ್ರ ಅಂತಹ ಮೊತ್ತಗಳನ್ನು ಆಯಾ ಖಾತೆಯಡಿಯಲ್ಲಿ ನಮೂದಿಸತಕ್ಕದ್ದು.  ಎಲ್ಲದಕ್ಕೂ ಕೊನೆಗೆ ನಿಮ್ಮ ಹೆಸರು, ತಂದೆಯ ಹೆಸರು, ಸ್ಥಳ, ದಿನಾಂಕ ನಮೂದಿಸಿ ಮಾಹಿತಿಗಳನ್ನು ದೃಢೀಕರಿಸಿ.  ಈ ಮಾಹಿತಿಗಳನ್ನು ತುಂಬುತ್ತಿರುವಾಗ ಕೆಳಗೆ ಕಾಣುವ “ಸೇವ್‌’ ಬಟನ್‌ ಅನ್ನು ಅಗಾಗ್ಗೆ ಒತ್ತಿ ಮಾಹಿತಿಗಳನ್ನು ಉಳಿಸಿಕೊಳ್ಳಿ. ಎಲ್ಲಾ ಮಾಹಿತಿ ತುಂಬಿ ಸಬ್ಮಿಟ್‌ ಬಟನ್‌ ಒತ್ತಿ. 

ವೆರಿಫಿಕೇಶನ್‌/ದೃಢೀಕರಣ: ಸಬ್ಮಿಟ್‌ ಬಟನ್‌ ಒತ್ತಿದಾಗ ನಿಮ್ಮ ಹೇಳಿಕೆ ಆದಾಯ ತೆರಿಗೆ ಇಲಾಖೆಯ ಕಂಪ್ಯೂಟರಿನಲ್ಲಿ ಸಲ್ಲಿಕೆಯಾಗಿ ನಿಮಗೊಂದು ಟ್ರಾನ್ಸಾಕ್ಷನ್‌ ನಂಬರನ್ನು ನೀಡುತ್ತದೆ. ಅಲ್ಲದೆ, ನಿಮ್ಮ ಇ-ಮೈಲ್‌ಗೆ ರಶೀದಿ ಫಾರ್ಮ್ ಆದ ಫಾರ್ಮ್-ವಿಯನ್ನು ಹುಟ್ಟು ಹಾಕುತ್ತದೆ. ಈ ಫಾರ್ಮ್-ವಿ ಅನ್ನು ದೃಢೀಕರಿಸಬೇಕು. ಇದಕ್ಕಾಗಿ ಕೆಲವು ಆನ್‌-ಲೈನ್‌ ಹಾದಿಗಳಿವೆ.  1)ನಿಮ್ಮ ಆಧಾರ್‌ ನೋಂದಾಯಿತ ಮೊಬೈಲ್‌ ನಂಬರಿಗೆ ಒಟಿಪಿ ಹೋಗುತ್ತದೆ. ಅದನ್ನು ನಮೂದಿಸಿದರೆ ನಿಮ್ಮ ವೆರಿಫಿಕೇಶನ್‌ ಸಂಪೂರ್ಣವಾಗುತ್ತದೆ.  2) ಕರ ಇಲಾಖೆ ಕಳಿಹಿಸುವ ಇವಿಸಿ ಕೋಡ್‌ ಅನ್ನು ನಿಮ್ಮ ನೆಟ್‌ ಬ್ಯಾಂಕಿಂಗ್‌, ಬ್ಯಾಂಕ್‌ ಖಾತೆ, ಎಟಿಎಂ, ಡಿಮ್ಯಾಟ್‌ ಖಾತೆ ಇತ್ಯಾದಿಗಳ ಮೂಲಕ ಪಡೆದುಕೊಳ್ಳಲು ಬರುತ್ತದೆ.  ಈ ರೀತಿಯ ಆನ್‌ಲೈನ್‌ ಪದ್ಧತಿ ಸಾಧ್ಯವಾಗದವರು ವಿ ಫಾರ್ಮಿನ ಅಚ್ಚು ತೆಗೆದು ಸಹಿ ಹಾಕಿ ಅದರಲ್ಲಿ ನೀಡಿದ ಬೆಂಗಳೂರಿನ ವಿಳಾಸಕ್ಕೆ ಅದನ್ನು 120 ದಿನಗಳೊಳಗೆ ಕಳುಹಿಸಿರಿ. ದೃಢೀಕರಣದ ಬಳಿಕವೇ ನಿಮ್ಮ ಸಲ್ಲಿಕೆ ಸಂಪೂರ್ಣವಾಗುತ್ತದೆ. 

ಇಷ್ಟು ವಿವರಣೆ ನೀಡಿದ ಬಹೂರಾನಿ ಮಾವಯ್ಯನಿಗೆ ಚಹ ತಯಾರಿ ನಡೆಸಲು ಕಿಚನ್‌ ಒಳಕ್ಕೆ ಓಡಿದಳು.

ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.