ಪ್ರಿಸೈಡಿಂಗ್‌ ಅಧಿಕಾರಿಗಳಿಗೆ ಹೊರೆ

Team Udayavani, May 10, 2019, 6:00 AM IST

38

ಚುನಾವಣೆಯ ಸಂದರ್ಭದಲ್ಲಿ ಒಂದು ಮತಗಟ್ಟೆಯ ಮತದಾನ ಕಾರ್ಯ ಯಶಸ್ವಿಯಾಗಿ ನಡೆಯುವಲ್ಲಿ PRO (ಪ್ರಿಸೈಡಿಂಗ್‌ ಆಫೀಸರ್‌) ಅವರ ಕೆಲಸ ತುಂಬಾ ಮಹತ್ವಪೂರ್ಣವಾದುದು. ಸುಮಾರು 25 ವರ್ಷಗಳಿಂದ ಈ ಕೆಲಸವನ್ನು ನಿರ್ವಹಿಸುತ್ತಾ ಬಂದವರ ಅನಿಸಿಕೆಯೇನೆಂದರೆ, ಚುನಾವಣೆಯಿಂದ ಚುನಾವಣೆಗೆ ಈ ಕೆಲಸದ ಹೊರೆ ಜಾಸ್ತಿ ಆಗುತ್ತಾ ಬಂದಿದೆ ಎಂಬುದು. ಮತಪೆಟ್ಟಿಗೆಯಿಂದ ಮತಯಂತ್ರ (EVM)ಬಂದಾಗ, ಮತಯಂತ್ರದ ಜೊತೆ ಮತದಾನ ಖಾತ್ರಿ ಯಂತ್ರ (VVPAT)ಬಂದಾಗ ಕೆಲಸ ಹಗುರವಾಗುವ ಬದಲು ಇನ್ನಷ್ಟು ಸಂಕೀರ್ಣವಾಗುತ್ತಿದೆ. ಕೆಲವಷ್ಟು ಬದಲಾವಣೆಗಳಿಗೆ ಹೊಂದಿಕೊಳ್ಳಬೇಕಾದದ್ದು ಅನಿವಾರ್ಯ, ಆದರೆ ಅನಗತ್ಯ ಕೆಲಸದ ಭಾರ ಹೊರಿಸಿದಾಗ ಅದನ್ನು ಸಹಿಸಿಕೊಳ್ಳುವುದು ಕಷ್ಟ ಸಾಧ್ಯ.

ಒಂದು ಮತಗಟ್ಟೆಯಲ್ಲಿ ಮುಖ್ಯವಾಗಿ ಆಗಬೇಕಾದ ಕೆಲಸವೇನು? ಯೋಗ್ಯ ಮತದಾರನಿಂದ ಗೌಪ್ಯವಾಗಿ ಮತ ಪಡೆದು ಸುರಕ್ಷಿತವಾಗಿ ಮತ ಎಣಿಕೆ ಕೇಂದ್ರಕ್ಕೆ ಮುಟ್ಟಿಸುವುದು ತಾನೆ? ಈ ಮುಖ್ಯ ಕೆಲಸದ ನಡುವೆ PRO ನಿರ್ವಹಿಸಬೇಕಾದ ಇತರ ಕೆಲಸಗಳೆಂದರೆ ಪ್ರತಿ ಎರಡು ಗಂಟೆಗೊಮ್ಮೆ ಮತದಾನ ಮಾಡಿದ ಗಂಡಸರು ಮತ್ತು ಹೆಂಗಸರ ಸಂಖ್ಯೆಯನ್ನು ಮೇಲಧಿಕಾರಿಗಳಿಗೆ ತಿಳಿಸುವುದು ಮತ್ತು PRO ಡೈರಿಯಲ್ಲಿ ನಮೂದಿಸುವುದು. ಅಂಧ ಹಾಗೂ ದುರ್ಬಲ ಮತದಾರರ ಸಂಗಡಿಗರ ಹೇಳಿಕೆಗಳನ್ನು ಪಡೆದುಕೊಳ್ಳುವುದು. ಮತದಾರರ ವಯಸ್ಸಿನ ಬಗ್ಗೆ, ಗುರುತಿನ ಬಗ್ಗೆ ಆಕ್ಷೇಪಣೆಗಳಿದ್ದರೆ ಅದನ್ನು ಪರಿಹರಿಸಿ ದಾಖಲಿಸುವುದು. ಪೋಲಿಂಗ್‌ ಏಜೆಂಟರ ನೇಮಕ ಹಾಗೂ ಅನುಮತಿ ಪಾಸ್‌ ನೀಡುವುದು. ಮತದಾನದ ಬಳಿಕ ಡಿ-ಮಸ್ಟರಿಂಗ್‌ ಕೇಂದ್ರಕ್ಕೆ ಸಲ್ಲಿಸಬೇಕಾದ ಸುಮಾರು 40 ಲಕೋಟೆಗಳನ್ನು ಹಾಗೂ ಅವುಗಳಿಗೆ ಸಂಬಂಧಿಸಿದ ನಮೂನೆಗಳನ್ನು ಸಿದ್ಧಪಡಿಸಿಕೊಳ್ಳುವುದು. ಮತಗಟ್ಟೆಯ ಇತರ ಅಧಿಕಾರಿಗಳಿಗೆ ಊಟ ಉಪಾಹಾರಗಳಿಗೆ ಬಿಡುವು ಮಾಡಿಕೊಡಲು ಅವರ ಕೆಲಸಗಳನ್ನು ಆಗಾಗ ತಾನೇ ನಿರ್ವಹಿಸುವುದು. ಇವೆಲ್ಲವೂ ಸಾಮಾನ್ಯವಾಗಿದ್ದು ಮೊದಲಿನಿಂದ ಇದ್ದ ಕೆಲಸಗಳು. ಈ ವರ್ಷ ಈ ಕೆಲಸಗಳ ಜೊತೆ ಹೊಸದಾಗಿ ಸೇರಿಸಿದ ಕೆಲಸಗಳೆಂದರೆ ASD (ಎಬೆಟ್‌, ಶಿಫೆಡ್‌, ಡೆತ್‌) ವೋಟರ್‌ ಲಿಸ್ಟ್‌ನಲ್ಲಿ ಇರುವವರು ಯಾರಾದರೂ ಬಂದಿದ್ದಾರೋ ಎಂಬುದನ್ನು ಪರಿಶೀಲಿಸು ವುದು. PWD(ದೈಹಿಕ ದುರ್ಬಲತೆ ಇರುವವರು) ವೋಟರ್‌ ಲಿಸ್ಟ್‌ನಲ್ಲಿ ಇರುವವರು ಬಂದಿದ್ದಾರೋ, ಅವರಲ್ಲಿ ವೀಲ್‌ಚೇರ್‌ ಬಳಸಿದವರು ಎಷ್ಟು? ಭೂತಗನ್ನಡಿ ಬಳಸಿದವರು ಎಷ್ಟು? ದೃಷ್ಟಿದೋಷ ಉಳ್ಳವರು ಎಷ್ಟು? ಸಾಮಾನ್ಯ ಹಾಗೂ ವಿಶೇಷ ಅಂಗವಿಕಲತೆ ಹೊಂದಿದವರು ಎಷ್ಟು? ಮೂಲ ನಿವಾಸಿ ಕೊರಗ ಸಮುದಾಯದವರು ಎಷ್ಟು? ಹೀಗೆ ಈ ಎಲ್ಲ ಅಂಕಿ ಅಂಶಗಳನ್ನು ಸಲ್ಲಿಸಬೇಕಾಗಿರುತ್ತದೆ.

ಈ ಪಟ್ಟಿ ಹೀಗೆ ಮುಂದುವರಿದರೆ ಮುಂದಿನ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗೆ ಮತದಾನ ಮಾಡಿದ ಪ.ಪಂ.,ಪ. ಜಾ. ಮತದಾರರ ವಿವರ, ಹಿಂದೂ, ಮುಸ್ಲಿಂ ಮತದಾರರ ವಿವರ, ಬ್ರಾಹ್ಮಣ ಲಿಂಗಾಯಿತ ಮತದಾರರ ವಿವರ ಕೇಳಿದರೆ ಆಶ್ಚರ್ಯವೇನೂ ಇಲ್ಲ. ಒಂದು ಮತಗಟ್ಟೆ ಯಲ್ಲಿ 900 ಅಥವಾ ಅದಕ್ಕಿಂತ ಜಾಸ್ತಿ ಮತದಾನವಾದರೆ ಆ ಮತಗಟ್ಟೆಯ ಅಧಿಕಾರಿಗಳಿಗೆ ಬೆಳಿಗ್ಗೆ 5 ಗಂಟೆಯಿಂದ (ಅಣಕು ಮತದಾನದ ಸಿದ್ಧತೆಯಿಂದ) ರಾತ್ರಿ 9-10 ಗಂಟೆಯವರೆಗೆ (ಡಿ-ಮಸ್ಟರಿಂಗ್‌ ಕೇಂದ್ರಕ್ಕೆ ಎಲ್ಲವನ್ನು ಸಲ್ಲಿಸುವವರೆಗೆ) ಒಂದು ನಿಮಿಷವೂ ಬಿಡುವಿಲ್ಲದಷ್ಟು ಕೆಲಸವಿರುತ್ತದೆ. ಹೀಗಿರುವಾಗ ಅಂಕಿಅಂಶಗಳನ್ನು ಸಂಗ್ರಹಿಸುವ ಆತುರದಲ್ಲಿ PRO ಕೆಲಸದ ಒತ್ತಡವನ್ನು ಜಾಸ್ತಿ ಮಾಡುತ್ತಿರುವುದು ತುಂಬಾ ಅಸಹನೀಯ ಹಾಗೂ ಕಷ್ಟಸಾಧ್ಯವಾಗುತ್ತಿದೆ. ಈ ಎಲ್ಲ ಕೆಲಸದ ಒತ್ತಡದಲ್ಲಿ ಆತನ ಮುಖ್ಯ ಕೆಲಸದಲ್ಲಿ ಲೋಪದೋಷಗಳಾದರೆ ಯಾರು ಹೊಣೆ? ಈ ಎಲ್ಲ ಅಂಕಿ ಅಂಶಗಳು ಅಷ್ಟು ಅಗತ್ಯವಿದ್ದಲ್ಲಿ PROಗೆ ಸಹಾಯಕರಾಗಿ ಇನ್ನೊಬ್ಬ ಅಧಿಕಾರಿಯನ್ನು ನೇಮಿಸ ಬಹುದಲ್ಲವೇ?

ನನಗೆ ಅನಿಸುವುದೇನೆಂದರೆ PRO ತನ್ನ ಮುಖ್ಯ ಕೆಲಸವನ್ನು ತಪ್ಪಿಲ್ಲದಂತೆ, ಒತ್ತಡ ರಹಿತವಾಗಿ ನಿರ್ವಹಿಸಲು ಆತನ ಕೆಲಸಗಳ ಸರಳೀಕರಣ ಆಗಬೇಕಾಗಿದೆ. 40 ಲಕೋಟೆಗಳಿಗೆ ತುಂಬಿರುವ ಮಾಹಿತಿಯನ್ನು ಕ್ರೋಡೀಕರಿಸಿದರೆ 4 ಲಕೋಟೆಗಳಿಗೆ ಇಳಿಸಬಹುದು. ಇದನ್ನು ಸಾಧಿಸಲು ತಜ್ಞರ, ಅನುಭವಿಗಳ ಚಿಂತನೆ ಅಗತ್ಯವಿದೆ. ಕೆಲಸ ಹಾಗೂ ಕಾಗದ ಉಳಿಸಲು ಮುಂದಿನ ಚುನಾವಣೆ ವೇಳೆಗೆ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳುವರೆಂದು ಆಶಿಸೋಣವೇ?

ಎಸ್‌.ವಿ. ಭಟ್ಟ , ಹಿರಿಯಡಕ

ಟಾಪ್ ನ್ಯೂಸ್

Missing Case ಯುವಕ ನಾಪತ್ತೆ ; ದೂರು ದಾಖಲು

Missing Case ಯುವಕ ನಾಪತ್ತೆ ; ದೂರು ದಾಖಲು

Mangaluru ಉದ್ಯಮಿ ಮನೆ ದರೋಡೆ ಪ್ರಕರಣ: ಸ್ಥಳೀಯ ತಂಡದ ಕೃತ್ಯವೇ?

Mangaluru ಉದ್ಯಮಿ ಮನೆ ದರೋಡೆ ಪ್ರಕರಣ: ಸ್ಥಳೀಯ ತಂಡದ ಕೃತ್ಯವೇ?

ಕಾರಿನಲ್ಲಿ ಬಂದು ದನ ಕಳವು; ಕೃತ್ಯ ಸಿಸಿ ಕೆಮರಾದಲ್ಲಿ ದಾಖಲು

ಕಾರಿನಲ್ಲಿ ಬಂದು ದನ ಕಳವು; ಕೃತ್ಯ ಸಿಸಿ ಕೆಮರಾದಲ್ಲಿ ದಾಖಲು

Kundapura ಸಮುದ್ರ ಪಾಲಾಗಿ ಕಳೆಯಿತು 5 ದಿನ; ಹುಡುಕಾಟವೇ ಸವಾಲು

Kundapura ಸಮುದ್ರ ಪಾಲಾಗಿ ಕಳೆಯಿತು 5 ದಿನ; ಹುಡುಕಾಟವೇ ಸವಾಲು

Gangolli ಜಾಮೀನಿನಲ್ಲಿ ಬಂದು ವಾರದಲ್ಲಿ ಕದ್ದು ಸಿಕ್ಕಿಬಿದ್ದ

Gangolli ಜಾಮೀನಿನಲ್ಲಿ ಬಂದು ವಾರದಲ್ಲಿ ಕದ್ದು ಸಿಕ್ಕಿಬಿದ್ದ

1-sadsdsad

T20 World Cup; ರೋಹಿತ್‌ ಅಬ್ಬರ: ಆಸೀಸ್ ಗೆ ಸೋಲುಣಿಸಿ ಸೆಮಿ ಪ್ರವೇಶಿಸಿದ ಟೀಮ್ ಇಂಡಿಯಾ

ಬೆಳಗಾವಿ, ಕೋಲಾರ: ಕಲುಷಿತ ನೀರು ಸೇವಿಸಿ ಇಬ್ಬರ ಸಾವು

ಬೆಳಗಾವಿ, ಕೋಲಾರ: ಕಲುಷಿತ ನೀರು ಸೇವಿಸಿ ಇಬ್ಬರ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Constitution of India -Environment Protection

ಭಾರತ ಸಂವಿಧಾನ -ಪರಿಸರ ಸಂರಕ್ಷಣೆ

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

MUST WATCH

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

ಹೊಸ ಸೇರ್ಪಡೆ

Missing Case ಯುವಕ ನಾಪತ್ತೆ ; ದೂರು ದಾಖಲು

Missing Case ಯುವಕ ನಾಪತ್ತೆ ; ದೂರು ದಾಖಲು

Mangaluru ಉದ್ಯಮಿ ಮನೆ ದರೋಡೆ ಪ್ರಕರಣ: ಸ್ಥಳೀಯ ತಂಡದ ಕೃತ್ಯವೇ?

Mangaluru ಉದ್ಯಮಿ ಮನೆ ದರೋಡೆ ಪ್ರಕರಣ: ಸ್ಥಳೀಯ ತಂಡದ ಕೃತ್ಯವೇ?

ಕಾರಿನಲ್ಲಿ ಬಂದು ದನ ಕಳವು; ಕೃತ್ಯ ಸಿಸಿ ಕೆಮರಾದಲ್ಲಿ ದಾಖಲು

ಕಾರಿನಲ್ಲಿ ಬಂದು ದನ ಕಳವು; ಕೃತ್ಯ ಸಿಸಿ ಕೆಮರಾದಲ್ಲಿ ದಾಖಲು

Kundapura ಸಮುದ್ರ ಪಾಲಾಗಿ ಕಳೆಯಿತು 5 ದಿನ; ಹುಡುಕಾಟವೇ ಸವಾಲು

Kundapura ಸಮುದ್ರ ಪಾಲಾಗಿ ಕಳೆಯಿತು 5 ದಿನ; ಹುಡುಕಾಟವೇ ಸವಾಲು

Gangolli ಜಾಮೀನಿನಲ್ಲಿ ಬಂದು ವಾರದಲ್ಲಿ ಕದ್ದು ಸಿಕ್ಕಿಬಿದ್ದ

Gangolli ಜಾಮೀನಿನಲ್ಲಿ ಬಂದು ವಾರದಲ್ಲಿ ಕದ್ದು ಸಿಕ್ಕಿಬಿದ್ದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.