ಇಂದು ದೇಶದ 75ನೇ ಗಣರಾಜ್ಯೋತ್ಸವ: ಗೌರವ ವಂದನೆ ಸ್ವೀಕರಿಸಲಿರುವ ರಾಷ್ಟ್ರಪತಿ ಮುರ್ಮು

ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುವಲ್‌ ಮ್ಯಾಕ್ರನ್‌ ಅತಿಥಿ

Team Udayavani, Jan 26, 2024, 8:16 AM IST

ಇಂದು ದೇಶದ 75ನೇ ಗಣರಾಜ್ಯೋತ್ಸವ: ಗೌರವ ವಂದನೆ ಸ್ವೀಕರಿಸಲಿರುವ ರಾಷ್ಟ್ರಪತಿ ಮುರ್ಮು

ನವದೆಹಲಿ: ದೇಶಕ್ಕೆ ಸ್ವಾತಂತ್ರ್ಯ ಪ್ರಾಪ್ತಿಯಾಗಿ 75 ವರ್ಷಗಳು ಪೂರ್ತಿಗೊಂಡ ಅಮೃತಕಾಲದ ಸಂಭ್ರಮದಲ್ಲಿ ಇರುವಂತೆಯೇ ಶುಕ್ರವಾರ 75ನೇ ವರ್ಷದ ಗಣರಾಜ್ಯ ದಿನವನ್ನು ಆಚರಿಸಿಕೊಳ್ಳಲಿದೆ. ಈ ಬಾರಿಯ ಗಣರಾಜ್ಯ ದಿನಕ್ಕೆ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವಲ್‌ ಮ್ಯಾಕ್ರನ್‌ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಾರೆ. ಅವರು ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೇನಾಪಡೆಗಳಿಂದ ಗೌರವ ವಂದನೆ ಸ್ವೀಕರಿಸಲಿದ್ದಾರೆ.

ಒಟ್ಟು 90 ನಿಮಿಷಗಳ ಈ ಬಾರಿಯ ಗಣರಾಜ್ಯ ಕಾರ್ಯಕ್ರಮದಲ್ಲಿ ಸೇನೆಯ 3 ವಿಭಾಗಗಳು ಹೊಂದಿರುವ ಶಸ್ತ್ರಾಸ್ತ್ರಗಳ ಸಂಗ್ರಹ, ತಾಂತ್ರಿಕ ಮತ್ತು ಸಂಶೋಧನಾ ವಿಭಾಗದಲ್ಲಿ ಮಾಡಿರುವ ಸಾಧನೆಗಳನ್ನು ಪ್ರದರ್ಶಿಸಲಾಗುತ್ತದೆ. ಕ್ಷಿಪಣಿಗಳು, ಡ್ರೋನ್‌ ಜ್ಯಾಮರ್‌ಗಳು, ವಾಹನಗಳ ಮೂಲಕ ಯುದ್ಧಭೂಮಿ ಯಲ್ಲಿ ನಿರ್ವಹಿಸುವ ಮೋರ್ಟಾರ್‌ಗಳನ್ನು ಪ್ರದರ್ಶಿಸಲಾಗುತ್ತದೆ.

ಹಲವು ಪ್ರಥಮಗಳು: ದೇಶದ ವಿವಿಧ ರಾಜ್ಯಗಳ ಸಾಂಸ್ಕೃತಿಕ ಮತ್ತು ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳ ಸ್ತಬ್ದ ಚಿತ್ರಗಳ ಜತೆಗೆ ಹಲವು ಪ್ರಥಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಯೋಧರ ತುಕಡಿ ಪಂಥಸಂಚನಲದಲ್ಲಿ ಭಾಗಿಯಾಗಲಿದ್ದಾರೆ. ಆರ್ಟಿಲಿಯರಿ ರೆಜಿಮೆಂಟ್‌ಗೆ ನಿಯುಕ್ತಿಯಾಗಿರುವ 10 ಮಹಿಳಾ ಲೆಫ್ಟಿನೆಂಟ್‌ ಅಧಿಕಾರಿಗಳಲ್ಲಿ ಇಬ್ಬರಾ ಗಿರುವ ಲೆ.ದೀಪ್ತಿ ರಾಣಾ ಮತ್ತು ಲೆ.ಪ್ರಿಯಾಂಕಾ ಸೇವ್ಡ ಅವರು ಪಥಸಂಚನದಲ್ಲಿ ಭಾಗಿಯಾಗಲಿದ್ದಾರೆ.

ಇದಲ್ಲದೆ ಕೇಂದ್ರ ಸಂಸ್ಕೃತಿ ಸಚಿವಾಲಯದ ವತಿಯಿಂದ ಶಂಖ, ನಾದಸ್ವರ, ನಗಾರಿ ಸೇರಿದಂತೆ ದೇಶದ ಸಾಂಪ್ರದಾಯಿಕ ಸಂಗೀತ ಉಪ ಕÃ  ‌ ಣ  ಗಳನ್ನು ನುಡಿಸುವ 100 ಮಹಿಳಾ ಕಲಾವಿದರು ಭಾಗಿಯಾಗ ಲಿದ್ದಾರೆ. ಇದಲ್ಲದೆ, ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆ (ಸಿಎಪಿಎಫ್), ಐಎಎಫ್ನ 15 ಮಹಿಳಾ ಪೈಲಟ್‌ಗಳೂ ಪಥ ಸಂಚಲನದಲ್ಲಿ ಭಾಗಿಯಾಗಲಿದ್ದಾರೆ. ದೇಶಿಯವಾಗಿಯೇ ನಿರ್ಮಿಸಲಾಗಿ ರುವ ಯುದ್ಧ ವಿಮಾನ ತೇಜಸ್‌ ಕೂಡ ಭಾಗಿಯಾಗಲಿದೆ.

ಪ್ರಧಾನಿ ಭೇಟಿಯಿಂದ ಶುರು: ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ಹುತಾತ್ಮರಿಗೆ ಗೌರವ ಸಲ್ಲಿಸುವ ಮೂಲಕ ನವದೆಹಲಿಯಲ್ಲಿ ಗಣರಾಜ್ಯದ ಕಾರ್ಯಕ್ರಮಗಳು ಶುರುವಾಗಲಿವೆ.

40 ವರ್ಷಗಳ ಬಳಿಕ: ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಮುಖ್ಯ ಅತಿಥಿ ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುವೆಲ್‌ ಮ್ಯಾಕ್ರನ್‌ ಅವರು 40 ವರ್ಷಗಳ ಬಳಿಕ ಮೊದಲ ಬಾರಿಗೆ ಸಾರೋಟಿನಲ್ಲಿ ಕಾರ್ಯಕ್ರಮ ಸ್ಥಳಕ್ಕೆ ಆಗಮಿ ಸಲಿದ್ದಾರೆ. ಕರ್ತವ್ಯ ಪಥದಲ್ಲಿ ಕುಳಿತಿರುವ ಅತಿಥಿಗಳ ಮೇಲೆ ಸೇನೆಯ ನಾಲ್ಕು ಹೆಲಿಕಾಪ್ಟರ್‌ಗಳ ಮೂಲಕ ಪುಷ್ಪವೃಷ್ಟಿ ಮಾಡಲಾಗುತ್ತದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ನವದೆಹಲಿಯಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಕರ್ನಾಟಕದಿಂದ ಐವರಿಗೆ ಆಹ್ವಾನ
ಈ ಬಾರಿಯ ಗಣರಾಜ್ಯ ದಿನದ ಕಾರ್ಯ ಕ್ರಮಕ್ಕೆ 13 ಸಾವಿರ ಮಂದಿ ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗಿದೆ. ಈ ಪೈಕಿ ಕರ್ನಾಟಕದ ಶಿರಸಿಯ ಜೇನು ಕೃಷಿಕ ಮಧುಕೇಶ್ವರ ಹೆಗಡೆ, ಗದಗ್‌ನ ಸಾಹಿತಿ, ಹೊಟೇಲ್‌ ಉದ್ಯಮಿ ಕಾ.ವೆಂ.ಶ್ರೀನಿವಾಸ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಕಸಬಾ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಿದ ನಾಗರಾಜು, ಇದರ ಜತೆಗೆ ಜೋಗುಳ ಹಾಡಿನಿಂದ ಖ್ಯಾತಿ ಪಡೆದ ಬಿ.ಎಂ.ಮಂಜು ನಾಥ್‌ ಅವರಿಗೆ ಕೂಡ ಆಹ್ವಾನ ಲಭಿಸಿದೆ.

ಈ ಬಾರಿಯ ಪ್ರಥಮಗಳು ಏನು?
– ಆರ್ಟಿಲರಿ ರೆಜಿಮೆಂಟ್‌ಗೆ ಸೇರ್ಪಡೆಯಾಗಿರುವ ಲೆ.ದೀಪ್ತಿ ರಾಣಾ, ಲೆ.ಪ್ರಿಯಾಂಕಾ ಸೇವಾx ಪಥ ಸಂಚಲನದಲ್ಲಿ ಭಾಗಿ.
– ಸೇನೆಯ ಮೂರು ವಿಭಾಗಗಳ ಮಹಿಳಾ ಯೋಧರ ಉಪಸ್ಥಿತಿ ಮತ್ತು ಭಾಗಿ
– ಇಸ್ರೋದ ಚಂದ್ರಯಾನ-3 ಯಶಸ್ಸಿನ ಬಗೆಗಿನ ಸ್ತಬ್ದ ಚಿತ್ರ
– ವಿವಿಧ ಕ್ಷೇತ್ರಗಳಲ್ಲಿ ಬುದ್ಧಿಮತ್ತೆಯ ಬಳಕೆಯ ಬಗ್ಗೆ ಇಲೆಕ್ಟ್ರಾನಿಕ್ಸ್‌ ಸಚಿವಾಲಯದ ಸ್ತಬ್ದಚಿತ್ರ.
– ಫ್ರಾನ್ಸ್‌ ಸೇನೆಯ 95 ಸದಸ್ಯರ ತುಕಡಿ, 2 ರಫೇಲ್‌ ಯುದ್ಧ ವಿಮಾನ, ಏರ್‌ಬಸ್‌ಎ330 ಬಹೂಪಯೋಗಿ ಸರಕು ಸಾಗಣೆ ವಿಮಾನ ಪ್ರದರ್ಶನ.
– ಭಾರತೀಯ ಪಾರಂಪರಿಕ ವಾದ್ಯಗಳನ್ನು ನುಡಿಸುವ ಮಹಿಳಾ ಕಲಾವಿದರು.
– ಸಿಎಪಿಎಫ್, ಐಎಎಫ್ನ ಮಹಿಳಾ ಯೋಧರು ಭಾಗಿ.
– 40 ವರ್ಷಗಳ ಬಳಿಕ ಸಾರೋಟಿನಲ್ಲಿ ರಾಷ್ಟ್ರಪತಿ ಮುರ್ಮು, ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುವಲ್‌ ಮ್ಯಾಕ್ರನ್‌ ಆಗಮನ
– ದೇಶಿವಾಗಿಯೇ ನಿರ್ಮಾಣಗೊಂಡ ತೇಜಸ್‌ ಯುದ್ಧ ವಿಮಾನದ ಪ್ರದರ್ಶನ.

ಟಾಪ್ ನ್ಯೂಸ್

2-blr-crime

Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

1-24-friday

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ

PM Modi: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಕಣ್ಮರೆಯಾಗಿದ್ದೇಕೆ?

PM Modi: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಕಣ್ಮರೆಯಾಗಿದ್ದೇಕೆ?

IMD

IMD; ರಾಜ್ಯದ 19 ಜಿಲ್ಲೆಗಳಿಗೆ ಬಿಸಿ ಗಾಳಿ ಮುನ್ಸೂಚನೆ : ಬೆಂಗಳೂರಿನಲ್ಲಿ ಮಳೆ

Bommai BJP

Haveri; ಕಮಲ-ಕೈ ನಡುವೆ ನೇರ ಸ್ಪರ್ಧೆ: ಯಾರ ಕೊರಳಿಗೆ ಏಲಕ್ಕಿ ಹಾರ?

bjp-congress

Bagalkote: ಒಬ್ಬರಿಗೆ ಮೊದಲನೆಯದು, ಇನ್ನೊಬ್ಬರಿಗೆ ‘ಕಡೇ’ ಚುನಾವಣೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-blr-crime

Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

1-24-friday

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

19

Fraud: ಬೆಳಪು; ಹಣ ಪಡೆದು ಕಾಯಿಲ್‌ ನೀಡದೆ ವಂಚನೆ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.