Udayavni Special

ಗತಕಾಲದ ವೈಭವ ಸಾರುವ ಕೋಟಿ ಚೆನ್ನಯ ಥೀಮ್ ಪಾರ್ಕ್


Team Udayavani, Apr 18, 2021, 10:59 AM IST

Article About Koti Chennaya Theame Park

 ಕಾರ್ಕಳ : ಕೆದಕಿದಷ್ಟು ಆಳ ಇತಿಹಾಸವನ್ನು ತನ್ನ ಗರ್ಭದೊಳಗೆ ಹಚ್ಚ ಹಸಿರಾಗಿರಿಸುವ ಪ್ರದೇಶ ತುಳುನಾಡು. ವಿವಿಧ ಧರ್ಮಗಳ ಆಚಾರ ವಿಚಾರಗಳನ್ನು ಉಳಿಸಿ ಹಿರಿಯರು ಬಿಟ್ಟು ಹೋದ ಸಂಸ್ಕೃತಿಗಳನ್ನು ಪೋಷಿಸುತ್ತ ಬಂದಿದೆ.

ಇಂತಹ ತುಳುನಾಡಿನ ಜನಪದ ಚರಿತ್ರೆಯಲ್ಲಿ ಕೇಳಿ ಬರುವ ಅವಳಿ ಸಹೋದರರ ಹೆಸರು ಕೋಟಿ ಚೆನ್ನಯ. ಸುಮಾರು 450 ವರ್ಷಗಳ ಹಿಂದೆ ಪುತ್ತೂರು ತಾಲೂಕಿನ ಪಡುಮಲೆಯಲ್ಲಿ ಪವಿತ್ರವಾದ ದೇಯಿಬೈದೆತಿಯ ಗರ್ಭದಲ್ಲಿ ಜನ್ಮ ತಾಳಿದ ಕೋಟಿ- ಚೆನ್ನಯ ಸಾಮಾಜಿಕ ವ್ಯವಸ್ಥೆಯಲ್ಲಿ ಇದ್ದಂತಹ ತಾರತಮ್ಯದ ವಿರುದ್ಧ ಹೋರಾಡಿದ ಧೀಮಂತರು. ಇವರ ಜೀವನಗಾಥೆ ತುಳುನಾಡಿನ ಮಣ್ಣಿನಲ್ಲಿ ಇಂದಿಗೂ ಜೀವಂತ. ಹಾಗಾಗಿ ಈ ವೀರ ಪುರುಷರ ಕಥೆಯನ್ನು ಆಧಾರವಾಗಿಟ್ಟುಕೊಂಡು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಕೋಟಿ ಚೆನ್ನಯ ಹೆಸರಿನ ಥೀಮ್ ಪಾರ್ಕ್ ಅನ್ನು 2012ನೆಯ ಇಸವಿಯಲ್ಲಿ ನಿರ್ಮಿಸಲಾಯಿತು.

ಓದಿ : ‘ರಿವೈಂಡ್’ ಚಿತ್ರ ವಿಮರ್ಶೆ: ಮಾಡರ್ನ್ ಟೆಕ್ನಿಕ್‌ನಲ್ಲಿ ಕನಸುಗಳ ಹುಡುಕಾಟ

ಕರಾವಳಿ ಭಾಗದಲ್ಲಿ ಕೋಟಿ ಚೆನ್ನಯರನ್ನು ದೇವರು ಎಂದು ಪೂಜಿಸಿಕೊಂಡು ಬಂದಿದ್ದು, ಇವರ ಚರಿತ್ರೆ ಹಾಗೂ ತುಳುನಾಡಿನ ಪರಂಪರೆಗಳನ್ನು “ಥೀಮ್ ಪಾರ್ಕ್ ವಸ್ತು ಸಂಗ್ರಹಾಲಯ”ದಲ್ಲಿ ತುಳುವರ ಸಾಂಪ್ರದಾಯಿಕ ಬದುಕಿನ ಚಿತ್ರಣವನ್ನು ಜನರಿಗೆ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ತುಳುನಾಡಿನ ಐತಿಹಾಸಿಕ ವಸ್ತು ಸಂಗ್ರಹಾಲಯದೊಂದಿಗೆ, 5 ಅಡಿ ಎತ್ತರದ ಪೀಠದ ಮೇಲೆ ಸ್ಥಾಪಿಸಲಾದ ಹತ್ತು ಅಡಿ ಎತ್ತರವುಳ್ಳ ಕೋಟಿ ಚೆನ್ನಯರ ಶಿಲಾ ಮೂರ್ತಿಗಳನ್ನೂ ಈ ಫಾರ್ಕ್ ಹೊಂದಿದೆ. ಕಾರ್ಕಳದ ಶಿಲ್ಪಿ ಜಯರಾಜ ಆಚಾರ್ಯ ಈ ಶಿಲ್ಪಗಳನ್ನು ಕೆತ್ತಿದ್ದಾರೆ.

ಥೀಮ್ ಪಾರ್ಕ್‍ನಲ್ಲಿರುವ ವಸ್ತು ಸಂಗ್ರಹಾಲಯ ಪ್ರವೇಶಿಸುತ್ತಿದ್ದಂತೆ ‘ಗುತ್ತಿನ ಮನೆ ಹೆಬ್ಬಾಗಿಲು ಚಾವಡಿ’ಯನ್ನು ಕಾಣಬಹುದು. ಮೊದಲನೆ ಹಂತದಲ್ಲಿ ಮುಖದ್ವಾರ, ಅದನ್ನು ಅನುಸರಿಸಿ ಕೋಟಿ- ಚೆನ್ನಯರ ಕಲ್ಲಿನ ಮೂರ್ತಿಗಳು, ನಂತರ ಗರೋಡಿ ಮಾದರಿ, ಅದರ ಸುತ್ತ ಆವರಣ. ಆವರಣದಲ್ಲಿ ಕೋಟಿ- ಚೆನ್ನಯರ ಹುಟ್ಟಿನಿಂದ ಅವಸಾನದವರೆಗಿನ ಕಥೆ, ಸಂದೇಶ ಸಾರುವ 34 ತೈಲ ಚಿತ್ರಗಳ ರಚನೆ, ಕೋಟಿ-ಚೆನ್ನಯರ ಬದುಕಿನ ಘಟನಾವಳಿಯನ್ನು ನೆನಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಗೋಡೆಗಳ ಮೇಲೆ ತುಳು ಪರಂಪರೆಯ ಕಂಬಳ (ಕ್ರೀಡೆ) ಹಾಗೂ ಇನ್ನಿತರ ಜೀವನಶೈಲಿಗಳ ಚಿತ್ರಗಳನ್ನು ಕಾಣಬಹುದು.

ತುಳು ಸಮುದಾಯಗಳಲ್ಲಿ ಕಾಣಬಹುದಾದಂಥಹ ಕಾವಿ ಕಳೆ, ಹಾಗೂ ಸಾಂಸ್ಕೃತಿಕ ಮನೆಗಳ ರಚನಾಶೈಲಿಯನ್ನೇ ಇಲ್ಲಿನ ವಸ್ತು ಸಂಗ್ರಹಾಲಯದ ರಚನೆಯಲ್ಲಿ ಬಳಸಲಾಗಿದೆ. ಅಲ್ಲದೆ, ಕನ್ನಡ ಹಾಗೂ ತುಳು ಸಂಸ್ಕೃತಿಗಳ ಪ್ರತೀಕಗಳಾಗಿರುವ ‘ನಂದಿಕೇಶ್ವರ’, ‘ವೀರಭದ್ರ’, ‘ಗೊಮ್ಮಟ ಮಲ್ಲ’, ‘ಸಂಸಾರ ಬ್ರಹ್ಮ’, ಹಾಗೂ ಇನ್ನಿತರ ಪುಥ್ಥಳಿಗಳನ್ನೂ, ಹಾಗೂ ದಿನನಿತ್ಯದ ಉಪಯೋಗದ ಹಳೆ ಸಾಮಾಗ್ರಿಗಳು ವಸ್ತು ಸಂಗ್ರಹಾಲಯದ ಆಕರ್ಷಣ ಕೇಂದ್ರವಾಗಿದೆ.

ಕೋಟಿ ಚೆನ್ನಯರ ಬೇಟೆಯ ಪರಿಕರಗಳು, ತರ್ಕತ್ತಿ, ಕೈತಲೆ, ಕಾರತಲೆ, ಕೋಲು, ತಾಮ್ರದ ಬುತ್ತಿ, ಕೌಳಿಗೆ, ಕಂಚಿನ ಉರುಳಿ, ಯುದ್ಧಕ್ಕೆ ಬಳಸುತ್ತಿದ್ದ ಖಡ್ಗ, ಚೆನ್ನಮಣೆ, ಬೀಸುಗತ್ತಿ ಬೇಟೆ ಪರಿಕರಗಳು, ಕಂಚಿನ ಬುಟ್ಟಿ, ಮರದ ಶ್ಯಾವಿಗೆ ಸೇರು, ಮೊಸರು ಕಡಿಯುವ ವಿವಿಧ ಮರದ ಸಲಕರಣೆಗಳು, ಕೊಂಬು, ಕಹಳೆ, ವಾಲಗ, ನದಿಯ ದೋಣಿ, ಎತ್ತಿನ ಗಾಡಿಯ ಚಕ್ರಗಳು, ಹಳೆ ಕಾಲದ ವಿಭಿನ್ನ ಮಾದರಿಯ ವಿಗ್ರಹಗಳು, ಗರಡಿ ಮನೆಗಳ ಜೋಕಾಲಿಗಳು, ಮಂಟಪ, ಗೋಪುರಗಳು ಹೀಗೆ ಕೋಟಿ ಚೆನ್ನಯರ ಕಾಲದಲ್ಲಿದ್ದ ಅತ್ಯಂತ ಪುರಾತನ ವಸ್ತುಗಳು ಗತಕಾಲದ ವೈಭವ ಸಾರುತ್ತಿದೆ.

ಓದಿ :  ಡಿಸೆಂಬರ್‌ನಲ್ಲಿ ರಣಜಿಗೆ ಬಿಸಿಸಿಐ ಯೋಜನೆ: ಇರಾನಿ, ದೇವಧರ್‌, ದುಲೀಪ್‌ ಟ್ರೋಫಿ ಅನುಮಾನ!

ಥೀಮ್ ಪಾರ್ಕ್ ನಲ್ಲಿ ದೈವಾರಾಧನೆಯ ಗುಡಿಯಾದ ‘ಗರೋಡಿ’ಯ ಮಾದರಿಯೂ ಇದ್ದು, ಪೂರ್ತಿ ಸಂಗ್ರಹಾಲಯದ ಪರಿಶೀಲನೆ ನಡೆಸಿದರೆ, ಕೋಟಿ ಚೆನ್ನಯರ ಜೀವನವನ್ನು ಬಿಂಬಿಸುವ ೧೪೩ ಚಿತ್ರಣಗಳನ್ನು ಕಾಣಬಹುದಾಗಿದೆ.

ಇತಿಹಾಸದ ನೆನಪುಗಳನ್ನು ನಾಲ್ಕು ಗೋಡೆಗಳ ನಡುವೆ ಜೀವಂತವಾಗಿಸಿರುವ ಕೋಟಿ ಚೆನ್ನಯ ಥೀಮ್ ಪಾರ್ಕ್ ಕಾರ್ಕಳ ತಾಲೂಕಿನಿಂದ 5 ಕಿಲೋಮೀಟರ್ ದೂರದಲ್ಲಿದ್ದು, ಮಂಗಳೂರು ಮಹಾನಗರದಿಂದ 50 ಕಿಲೋಮೀಟರ್ ದೂರದಲ್ಲಿದೆ. ವಾರದ ಎಲ್ಲ ದಿನವೂ ತೆರೆದಿರುವ ಥೀಮ್ ಪಾರ್ಕ್‌ಗೆ ಬೆಳಿಗ್ಗೆ 9ರಿಂದ ಸಂಜೆ 7ರವರೆಗೂ ಭೇಟಿಗೆ ಉಚಿತ ಪ್ರವೇಶವಿದೆ.

-ಪೂಜಶ್ರೀ ತೋಕೂರು

ಓದಿ :  ಯಡಿಯೂರಪ್ಪ ಆರೋಗ್ಯ ಸ್ಥಿರ: ಆಸ್ಪತ್ರೆಯಲ್ಲಿ ಪುಸ್ತಕ ಓದುತ್ತಿದ್ದಾರೆ ಸಿಎಂ ಬಿಎಸ್ ವೈ

ಟಾಪ್ ನ್ಯೂಸ್

LIC new rule these major changes will be applicable from may 10

ಇನ್ಮುಂದೆ ವಾರದಲ್ಲಿ ಐದು ದಿನಗಳು ಮಾತ್ರ ಕಾರ್ಯ ನಿರ್ವಹಿಸಲಿದೆ ಎಲ್ ಐ ಸಿ ಕಚೇರಿ ..!

dyhtyt

ಪಶ್ಚಿಮ ಬಂಗಾಳ : ಕೇಂದ್ರ ಸಚಿವರ ವಾಹನದ ಮೇಲೆ ದಾಳಿ

ಕೋವಿಡ್ ಪಾಸಿಟಿವ್ ಆದವರು ಹೊರಗೆ ಬಂದ್ರೆ ಎಫ್ ಐಆರ್‌: ಸೋಮಶೇಖರ್

ಕೋವಿಡ್ ಪಾಸಿಟಿವ್ ಆದವರು ಹೊರಗೆ ಬಂದ್ರೆ ಎಫ್ ಐಆರ್‌: ಸೋಮಶೇಖರ್

Uber announces cash incentives for vaccinating 150000 drivers

ತನ್ನ ಎಲ್ಲಾ ಚಾಲಕರಿಗೆ ಲಸಿಕೆಗಾಗಿ ಪ್ರೋತ್ಸಾಹ ಧನ ನೀಡಲು ಮುಂದಾದ ಉಬರ್ !

ಕಾಫಿನಾಡಿನಲ್ಲಿ ಆಕ್ಸಿಜನ್ ಗಾಗಿ ಸೋಂಕಿತರ ಪರದಾಟ!

ಕಾಫಿನಾಡಿನಲ್ಲಿ ಆಕ್ಸಿಜನ್ ಗಾಗಿ ಸೋಂಕಿತರ ಪರದಾಟ!

uiuyiuyi

ನಾಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ

giyuiyiuuy

ಸಾವಿರಾರು ಜನರ ಹಸಿವು ನೀಗಿಸುತ್ತಿರುವ ಬಾಲಿವುಡ್ ನಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಡುವ ಸ್ಥಿತಿಯಲ್ಲಿ ಕೋವಿಡ್ ವಾರಿಯರ್ಸ್‌!:108 ಆ್ಯಂಬುಲೆನ್ಸ್‌ ಸಿಬಂದಿಗೆ ದೊರಕಿಲ್ಲ ವೇತನ

ಬೇಡುವ ಸ್ಥಿತಿಯಲ್ಲಿ ಕೋವಿಡ್ ವಾರಿಯರ್ಸ್‌!:108 ಆ್ಯಂಬುಲೆನ್ಸ್‌ ಸಿಬಂದಿಗೆ ದೊರಕಿಲ್ಲ ವೇತನ

ಉಡುಪಿ ಜಿಲ್ಲಾಸ್ಪತ್ರೆ 80-90 ಜಂಬೋ ಸಿಲಿಂಡರ್‌ ಮೀಸಲು, 25 ಹೆಚ್ಚುವರಿ ಬೆಡ್‌

ಉಡುಪಿ ಜಿಲ್ಲಾಸ್ಪತ್ರೆ 80-90 ಜಂಬೋ ಸಿಲಿಂಡರ್‌ ಮೀಸಲು, 25 ಹೆಚ್ಚುವರಿ ಬೆಡ್‌

Covid Death

ಶ್ರೀನಿಧಿ ಮೆಡಿಕಲ್ಸ್‌ ಮಾಲಕಿ ವಸಂತಿ ಕೆ. ಭಟ್‌ ನಿಧನ

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇ.5 ರಷ್ಟು ರಿಯಾಯತಿ ಸಹಿತ ತೆರಿಗೆ ಪಾವತಿ ಕಾಲಾವಧಿ ವಿಸ್ತರಣೆ

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇ.5 ರಷ್ಟು ರಿಯಾಯತಿ ಸಹಿತ ತೆರಿಗೆ ಪಾವತಿ ಕಾಲಾವಧಿ ವಿಸ್ತರಣೆ

ಬೇಸಗೆಯಲ್ಲೂ ಬಜೆಯಲ್ಲಿ  5.71  ಮೀ. ನೀರು ಸಂಗ್ರಹ!

ಬೇಸಗೆಯಲ್ಲೂ ಬಜೆಯಲ್ಲಿ  5.71  ಮೀ. ನೀರು ಸಂಗ್ರಹ!

MUST WATCH

udayavani youtube

ಬಯಲು ಪ್ರದೇಶದಲ್ಲಿ ಕೋವಿಡ್ ಸೋಂಕಿತರಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ

udayavani youtube

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವ ವಿ.ಮುರಳೀಧರನ್ ಅವರ ಕಾರ್ ಮೇಲೆ ಹಲ್ಲೆ

udayavani youtube

ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿಯಿಂದ ಕೊರೊನಾ ಜಾಗೃತಿ

udayavani youtube

ನರೇಗಾ ವೇತನ ತಾರತಮ್ಯ: ಕಂಪ್ಯೂಟರ್ ಆಪರೇಟರ್ ಮೇಲೆ ಹಲ್ಲೆ

udayavani youtube

ಆಸ್ಪತ್ರೆಗಳಲ್ಲಿ ಬೆಡ್ ಸಿಗದಿದ್ದಕ್ಕೆ CM Yediyurappa ಮನೆ ಮುಂದೆ ಧರಣಿ

ಹೊಸ ಸೇರ್ಪಡೆ

LIC new rule these major changes will be applicable from may 10

ಇನ್ಮುಂದೆ ವಾರದಲ್ಲಿ ಐದು ದಿನಗಳು ಮಾತ್ರ ಕಾರ್ಯ ನಿರ್ವಹಿಸಲಿದೆ ಎಲ್ ಐ ಸಿ ಕಚೇರಿ ..!

dyhtyt

ಪಶ್ಚಿಮ ಬಂಗಾಳ : ಕೇಂದ್ರ ಸಚಿವರ ವಾಹನದ ಮೇಲೆ ದಾಳಿ

ಕೋವಿಡ್ ಪಾಸಿಟಿವ್ ಆದವರು ಹೊರಗೆ ಬಂದ್ರೆ ಎಫ್ ಐಆರ್‌: ಸೋಮಶೇಖರ್

ಕೋವಿಡ್ ಪಾಸಿಟಿವ್ ಆದವರು ಹೊರಗೆ ಬಂದ್ರೆ ಎಫ್ ಐಆರ್‌: ಸೋಮಶೇಖರ್

covid effect

ಕೊರೊನಾ ತಡೆ ಪಂಚಾಯ್ತಿ ಮಟ್ಟದಿಂದ ಆಗಲಿ

Give extra land for tomato trading

ಟೊಮೆಟೋ ವಹಿವಾಟಿಗೆ ಹೆಚ್ಚುವರಿ ಭೂಮಿ ನೀಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.