ಸುರಕ್ಷಿತ, ಆರೋಗ್ಯಕರ ಆಹಾರದ ಭಾಗವಾಗಿ ಸೇವಿಸಿ ಕಾಫಿ


Team Udayavani, Jun 19, 2022, 6:10 AM IST

ಸುರಕ್ಷಿತ, ಆರೋಗ್ಯಕರ ಆಹಾರದ ಭಾಗವಾಗಿ ಸೇವಿಸಿ ಕಾಫಿ

“ಕಾಫಿ ಕುಡಿದರೆ ನನಗೆ ಎಸಿಡಿಟಿ ಆಗುತ್ತದೆ, ಕಾಫಿ ಎಂದರೆ ನನಗಾಗದು, ಕಾಫಿ ಅಷ್ಟು ಒಳ್ಳೆಯ ದಲ್ಲ ಅಲ್ಲವೇ?, ನನಗೆ ಕಾಫಿ ಕುಡಿಯದಿದ್ದರೆ ಉಲ್ಲಾಸವೇ ಇರುವುದಿಲ್ಲ, ಕಾಫಿ ಕುಡಿಯ ಬಹುದೇ?’ ಇತ್ಯಾದಿ ಮಾತುಗಳನ್ನು, ಸಂಶಯಗಳನ್ನು ನಾವು ಬಹಳಷ್ಟು ಸಲ ಕೇಳಿರುತ್ತೇವೆ. ಅದರಲ್ಲೂ ಆಯುರ್ವೇದ ವೈದ್ಯರಂತೂ ಕೆಲವು ರೋಗಿಗಳಿಗೆ ಅನಿವಾರ್ಯವಾದಲ್ಲಿ ಕಾಫಿಯನ್ನು ಸೇವಿಸದಂತೆ ನಿರ್ಬಂಧಿಸುವುದೂ ಇದೆ. ಹಾಗಾದರೆ ಕಾಫಿಯ ಕುರಿತಾಗಿ ಇರುವ ಸತ್ಯ ಅಥವಾ ಸುಳ್ಳುಗಳು ಏನು?

ಅಮೆರಿಕನ್‌ ಕಾಲೇಜ್‌ ಆಫ್ ಕಾರ್ಡಿಯಾಲಜಿ ಇದರ 71ನೇ ವೈಜ್ಞಾನಿಕ ವಿಚಾರ ಸಂಕಿರಣದಲ್ಲಿ ಮಂಡಿಸಲಾದ ವೈಜ್ಞಾನಿಕ ವರದಿಗಳು ಮತ್ತು ಅಧ್ಯಯನಗಳ ಪ್ರಕಾರ ದಿನಕ್ಕೆ 2ರಿಂದ 3 ಕಪ್‌ ಕಾಫಿ ಸೇವನೆ ಹೃದಯ ರೋಗವನ್ನು ತಡೆಗಟ್ಟುವುದು. ಹೃದಯದ ಬಡಿತದಲ್ಲಾಗುವ ಏರುಪೇರನ್ನು ತಡೆಗಟ್ಟುವುದು. ಜೀವಿತಾವಧಿಯನ್ನು ಹೆಚ್ಚಿಸುವುದು. ಇದು ಈಗಾಗಲೇ ಹೃದಯದ ಕಾಯಿಲೆ ಹೊಂದಿರುವ ಮತ್ತು ಹೊಂದದಿರುವ ಇಬ್ಬರಿಗೂ ಅನ್ವಯಿಸುವುದು. ಇದರಿಂದ ಹೃದ್ರೋಗದಲ್ಲಿ ಮತ್ತು ಹೃದ್ರೋಗಿಗಳ ಸಾವಿನಲ್ಲಿ ಕಾಫಿಯ ಪಾತ್ರ ನಾವು ಈ ಮೊದಲು ಭಾವಿಸಿದಂತೆ ಋಣಾತ್ಮಕ ಪರಿಣಾಮವನ್ನು ಹೊಂದಿಲ್ಲ ಎಂಬುದು ಸಾಬೀತಾಯಿತು.

ಕಾಫಿಯು ಹೃದಯದ ಬಡಿತವನ್ನು ವೇಗವನ್ನು ಹೆಚ್ಚಿಸುವುದರಿಂದ ಕಾಫಿ ಹಾನಿಕಾರಕ ಎಂಬ ತಪ್ಪು ಕಲ್ಪನೆ ಬಂದಿರಬಹುದು. ಆದರೆ ಅಧ್ಯಯನಗಳ ಆಧಾರದಲ್ಲಿ ಕಾಫಿ ಸೇವನೆಯನ್ನು ಖಂಡಿತವಾಗಿ ನಾವು ಉತ್ತೇಜಿಸಬಹುದು. ಹೃದಯದ ತೊಂದರೆ ಇದ್ದವರು ಮತ್ತು ಇಲ್ಲದವರು, ಆರೋಗ್ಯಕರ ಆಹಾರದ ಭಾಗವಾಗಿ ಇದನ್ನು ಮಾಡಿಕೊಳ್ಳ ಬಹುದು. ಆಸ್ಟ್ರೇಲಿಯಾದಲ್ಲಿನ ಮೆಲ್ಬೋರ್ನ್ನ ಆಲ್ಫೆಡ್‌ ಹಾಸ್ಪಿಟಲ್‌ ಮತ್ತು ಬೇಕರ್‌ ಹಾರ್ಟ್‌ ಇನ್‌ಸ್ಟಿಟ್ಯೂಟ್‌ನಲ್ಲಿರುವ ಹೃದಯದ ಏರುಪೇರಿನ ಅಧ್ಯಯನ ವಿಭಾಗವು ಕಾಫಿಯ ಪ್ರಯೋಜನಕಾರಿ ಅಂಶವನ್ನು ಒತ್ತಿ ಹೇಳಿದೆ- ನಾವು ನೋಡಿದ ಪ್ರಕಾರ ಕಾಫಿಯು ಹಾನಿಮಾಡದ ಒಂದು ತಟಸ್ಥ ದ್ರವ್ಯ, ಅಂದರೆ ಅದು ಯಾವ ತೊಂದರೆಯನ್ನು ಉಂಟು ಮಾಡದ ಹೃದಯದ ಆರೋಗ್ಯ ಸಾಧಿಸುವ ಒಂದು ದ್ರವ್ಯ.

ಯು.ಕೆ. ಬಯೋ ಬ್ಯಾಂಕ್‌ ಎಂಬ ಆರೋಗ್ಯ ಮಾಹಿತಿಗಳ ದೊಡ್ಡಮಟ್ಟದ ಡಾಟಾಬೇಸ್‌ ಇದೆ. ಸಂಶೋಧಕರು ಇದನ್ನು ಆಧರಿಸಿ ಅರ್ಧ ಮಿಲಿಯನ್‌ಗೂ ಹೆಚ್ಚು ಜನರನ್ನು ಹತ್ತು ವರ್ಷಗಳ ಅಧ್ಯಯನದ ಆಧಾರದಲ್ಲಿ ಈ ಮಾಹಿತಿಯನ್ನು ಪ್ರಕಟಿಸಿದ್ದಾರೆ. ಸಂಶೋಧಕರು ಇದಕ್ಕೆ ವಿಧಾನವೊಂದನ್ನು ಅನು ಸರಿಸಿದ್ದಾರೆ. ಒಂದು ಕಪ್‌ನಿಂದ ತೊಡಗಿ ಆರು ಕಪ್‌ಗ್ಳವರೆಗೆ ಪ್ರತೀದಿನ ಕಾಫಿ ಸೇವಿಸಿದ ಜನರ ಹೃದಯದ ಬಡಿತವನ್ನು, ಸ್ಥಿತಿಯನ್ನು ಶೋಧನೆಗೆ ಒಳಪಡಿಸಿದರು. ಹೃದಯದ ಕೊರೊನರಿ ರಕ್ತನಾಳಗಳು, ಹೃದಯದ ವೈಫ‌ಲ್ಯ, ಹೃದಯಾ ಘಾತಗಳು ಕೂಡ ಈ ಅಧ್ಯಯನದ ಭಾಗವಾಗಿದ್ದವು. ಮೊದಲ ಹಂತದ ಅಧ್ಯಯನದಲ್ಲಿ ಹೃದಯದ ಕಾಯಿಲೆ ಇಲ್ಲದ, 3,82,535 ವ್ಯಕ್ತಿಗಳನ್ನು ಆಯ್ದುಕೊಂಡರು. ಹತ್ತು ವರ್ಷಗಳ ಕಾಲ ಅವರ ಹೃದಯದ ಚಟುವಟಿಕೆ ಮತ್ತು ಸ್ಥಿತಿಗತಿಗಳನ್ನು ಗಮನಿಸಿದರು. ಅವರ ಸರಾಸರಿ ವಯಸ್ಸು 57 ವರ್ಷಗಳು. ಅವರಲ್ಲಿ ಅರ್ಧದಷ್ಟು ಮಹಿಳೆಯರೇ ಆಗಿದ್ದರು. ದಿನಕ್ಕೆ 2-3 ಕಪ್‌ ಕಾಫಿ ಸೇವನೆ ಅಗಾಧವಾದ ಪ್ರಯೋಜನವನ್ನು ಉಂಟು ಮಾಡಿತು. ಕೊರೊನರಿ ರಕ್ತನಾಳಗಳ ತೊಂದರೆ, ಹೃದಯದ ವೈಫ‌ಲ್ಯ, ಹೃದಯದ ಬಡಿತದ ಏರುಪೇರು, ಹಠಾತ್‌ ಮರಣಗಳನ್ನು ಶೇ. 10-15ರಷ್ಟು ಕಡಿಮೆ ಮಾಡಿತು. ಹೃದಯಾಘಾತದ ಅಪಾಯವು 1-2 ಕಪ್‌ ಕಾಫಿ ಸೇವನೆ ಮಾಡಿದವರಲ್ಲಿ ಕನಿಷ್ಠ ಪ್ರಮಾಣದಲ್ಲಿ ಇತ್ತು. ಗರಿಷ್ಠ ಪ್ರಯೋಜನವು ದಿನಕ್ಕೆ 2-3 ಕಪ್‌ ಕಾಫಿ ಸೇವನೆ ಮಾಡಿದವರಲ್ಲಿ ಕಂಡುಬಂತು. ಇದಕ್ಕಿಂತ ಹೆಚ್ಚು ಅಥವಾ ಕಡಿಮೆ ಸೇವನೆ ಮಾಡಿದವರು ಮತ್ತು ಬೇರೆಯವರಿಗೆ ಹೋಲಿಸಿದಾಗ, ಪ್ರಯೋಜನ ಕನಿಷ್ಠ ಪ್ರಮಾಣದಲ್ಲಿ ಇತ್ತು. ಎರಡನೆಯ ಅಧ್ಯ ಯನದಲ್ಲಿ ಈಗಾಗಲೇ ಹೃದಯದ ಕಾಯಿಲೆ ಹೊಂದಿರುವ 34,279 ವ್ಯಕ್ತಿಗಳನ್ನು ಆರಿಸಿ ಕೊಂಡರು. ದಿನಕ್ಕೆ 2-3 ಕಪ್‌ ಕಾಫಿ ಸೇವನೆ ಮಾಡಿ ದಾಗ, ಕಾಫಿ ಸೇವನೆ ಮಾಡದವರಿಗೆ ಹೋಲಿಸಿದರೆ, ಇದರಲ್ಲಿ ಹಠಾತ್‌ ಮರಣದ ಪ್ರಮಾಣ ಕಡಿಮೆಯಾಗಿತ್ತು. ಕಾಫಿಯನ್ನು ಯಾವುದೇ ಪ್ರಮಾಣದಲ್ಲಿ ಸೇವಿಸಿದರೂ ಕೂಡ ಈಗಾಗಲೇ ಎಲ್ಲರೂ ಭಾವಿಸಿದಂತೆ ಹೃದಯದ ಬಡಿತದ ಲಯದಲ್ಲಿ ವ್ಯತ್ಯಾಸ, ತೊಂದರೆ ಉಂಟಾಗಲಿಲ್ಲ. ಅಧ್ಯಯನಕ್ಕೆ ಒಳಗೊಂಡ ಇವರಲ್ಲಿ 24,111 ವ್ಯಕ್ತಿಗಳು ಮೂಲತಃ ಇಂತಹ ತೊಂದರೆ ಮೊದಲಿನಿಂದ ಹೊಂದಿದವರಾಗಿದ್ದರು.

Atrial fibrillation ಎಂಬ ಹೃದಯದ ಲಯದ ತೊಂದರೆ ಹೊಂದಿದವರಲ್ಲಿ ದಿನಕ್ಕೆ ಒಂದು ಕಪ್‌ ಕಾಫಿ ಸೇವಿಸಿದಾಗ, ಕಾಫಿ ಕುಡಿಯದವರಿಗೆ ಹೋಲಿಸಿದರೆ ಮರಣ ಪ್ರಮಾಣ ಕಡಿಮೆಯಾಗಿತ್ತು. ಬಹಳಷ್ಟು ಮಂದಿ ವೈದ್ಯರು ಈ ರೀತಿ ತೊಂದರೆ ಇರುವವರಲ್ಲಿ ಕಾಫಿ ಸೇವನೆಯನ್ನು ಕಡಿಮೆ ಮಾಡುವುದಕ್ಕೆ ಅಥವಾ ನಿಲ್ಲಿಸುವುದಕ್ಕೆ ಹೇಳುವ ಸಂದರ್ಭಗಳು ಅನೇಕ. ಇದಕ್ಕೆ ಕಾಫಿ ಹೃದಯದ ಬಡಿತದ ಏರುಪೇರನ್ನು ಉಂಟುಮಾಡಬಹುದು ಎಂಬ ವೈದ್ಯರ ಭಯವೇ ಕಾರಣ.

ಆದರೆ ಈ ಮೇಲಿನ ಅಧ್ಯಯನಗಳ ಪ್ರಕಾರ ಕಾಫಿ ಸುರಕ್ಷಿತ ಮತ್ತು ಆರೋಗ್ಯಕರ ಆಹಾರದ ಒಂದು ಭಾಗ ಆಗಬೇಕು. 2ರಿಂದ 3 ಕಪ್‌ ಸೇವನೆ ಯೋಗ್ಯ. ಆದರೆ ಇದಕ್ಕಿಂತ ಹೆಚ್ಚು ಸೇವನೆ ಮಾಡಿದಾಗ ಒಂದು ವೇಳೆ ಆತಂಕ ಅಥವಾ ಕಿರಿಕಿರಿ ಭಾವನೆ ಉಂಟಾದಲ್ಲಿ ಮಿತವಾಗಿ ಸೇವಿಸ ಬೇಕು. ಕಾಫಿ ಉಲ್ಲಾಸದಾಯಕ. ಮನಸ್ಸನ್ನು ಚುರುಕುಗೊಳಿಸುವುದು. ಕಾಫಿಯನ್ನು ಕೆಫೀನ್‌ ಎಂಬ ರಾಸಾ ಯನಿಕಕ್ಕೆ ಸರಿದೂಗಿಸಿ, ಆ ರಾಸಾ ಯನಿಕದ ಅಡ್ಡ ಪರಿ ಣಾಮ ಗಳೆಲ್ಲವನ್ನೂ ಕಾಫಿಯ ಮೇಲೆ ಆರೋ ಪಿಸುವುದು ತಪ್ಪಾಗು ವುದು. ಏಕೆಂದರೆ ಕಾಫಿಯಲ್ಲಿ ಕೆಫಿನ್‌ ಮಾತ್ರವಲ್ಲ, ನೂರಕ್ಕೂ ಹೆಚ್ಚು ಇತರ ಅಂಶಗಳಿವೆ. ಈ ಅಂಶಗಳು ಔಷಧೀಯ ಜಾಡಮಾಲಿ(antioxidant)ಗಳಾಗಿ ಮತ್ತು ಉರಿಯೂತ ನಿವಾರಕ (Anti inflammatory)ಗಳಾಗಿ ಕಾರ್ಯ ನಿರ್ವಹಿಸುತ್ತವೆ. ಜೀವಕೋಶಗಳನ್ನು ಇನ್ಸುಲಿನ್‌ ಹಾರ್ಮೋನಿಗೆ ಸೂಕ್ಷ್ಮಸಂವೇದಿ (sensitivit) ಆಗಿಸುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಆಗುತ್ತದೆ. ಕರುಳಿನಿಂದ ಕೊಬ್ಬಿನ ಅಂಶದ ಹೀರುವಿಕೆ ಕಡಿಮೆಯಾಗುತ್ತದೆ. ಪರಿಣಾಮವಾಗಿ ಬೊಜ್ಜು ಉಂಟಾ ಗುವುದು ತಪ್ಪುತ್ತದೆ. ಹೃದಯದ ಬಡಿತವನ್ನು ಏರುಪೇರು ಮಾಡುವ ಕೆಲವೊಂದು ಮಧ್ಯವರ್ತಿ ರಾಸಾಯನಿಕಗಳನ್ನು ದಮನ ಮಾಡುತ್ತದೆ. ಕೆಫಿನ್‌ ರಹಿತ ಕಾಫಿಯನ್ನು ಪ್ರಯೋಗ ಮಾಡಿದಾಗ ಅದು ಹೃದಯದ ಕಾಯಿಲೆಯನ್ನು ಕಡಿಮೆ ಮಾಡುವ ಪರಿಣಾಮ ಕಂಡುಬರಲಿಲ್ಲ. ಆದಕಾರಣ ಕೆಫಿನ್‌ ರಹಿತ ಕಾಫಿ ಸೇವನೆ ಮಾಡುವುದರಿಂದ ಹೃದಯಕ್ಕೆ ಹೆಚ್ಚು ಪ್ರಯೋಜನ ಎಂಬುದನ್ನು ಪ್ರಮಾಣಿಸಿ ತೋರುವುದಕ್ಕೆ ಸಾಕ್ಷ್ಯಾಧಾರಗಳಿಲ್ಲ. ಆದ ಕಾರಣ ಕೊನೆಯದಾಗಿ ಕಾಫಿಯನ್ನು ಇಡಿಯಾಗಿ, ಪೂರ್ಣ ವಾಗಿ ದಿನಕ್ಕೆ ಎರಡರಿಂದ ಮೂರು ಕಪ್‌ ಸೇವಿಸಿ. ಆರೋಗ್ಯಕ್ಕೆ, ಹೃದಯಕ್ಕೆ ಒಳ್ಳೆಯದು. ಆದರೆ ಸಕ್ಕರೆ ಹಾಕದೆ ಸೇವಿಸಿ. ಏಕೆಂದರೆ ಕಾಫಿ ಅಮೃತ, ಸಕ್ಕರೆ ವಿಷ. ಆದರೆ ಹಿತವಾದದ್ದನ್ನು ಸೇವಿಸಿ. ಮಿತವಾಗಿ ಸೇವಿಸಿ. ಅತಿಯಾದರೆ ಅಮೃತವೂ ವಿಷ.

(ಲೇಖಕರು: ಆಯುರ್ವೇದ ವೈದ್ಯರು)

– ಡಾ| ಆರ್‌. ಪಿ. ಬಂಗಾರಡ್ಕ, ಪುತ್ತೂರು

ಟಾಪ್ ನ್ಯೂಸ್

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.