Isrel- Palestine ಪಾಶ್ಚಾತ್ಯ-ಅರಬ್‌ ಸಂಘರ್ಷಕ್ಕೆ ಮುನ್ನುಡಿ?

ತಂತ್ರಾಲೋಚನೆ

Team Udayavani, Oct 23, 2023, 7:15 AM IST

ISREL

ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರು ಮತ್ತು ಇಸ್ರೇಲ್‌ ನಡುವಣ ಸಮರ ಆರಂಭಗೊಂಡು 16 ದಿನಗಳು ಕಳೆದರೂ ಯುದ್ಧದ ತೀವ್ರತೆ ಇನ್ನೂ ಕಡಿಮೆಯಾಗಿಲ್ಲ. ಇಸ್ರೇಲ್‌ ಸೇನೆ ಹಮಾಸ್‌ ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು ಗಾಜಾಪಟ್ಟಿ ಮತ್ತು ವೆಸ್ಟ್‌ಬ್ಯಾಂಕ್‌ನಲ್ಲಿ ನಿರಂತರವಾಗಿ ದಾಳಿಗಳನ್ನು ನಡೆಸುತ್ತಿದೆ. ಇಸ್ರೇಲ್‌ನತ್ತ ರಾಕೆಟ್‌ಗಳನ್ನು ಉಡಾಯಿಸಿ ಈ ಯುದ್ಧಕ್ಕೆ ಮುನ್ನುಡಿ ಬರೆದಿದ್ದ ಹಮಾಸ್‌ ಉಗ್ರರು ಕೂಡ ಇಸ್ರೇಲ್‌ನತ್ತ ಪ್ರತಿದಾಳಿಗಳನ್ನು ನಡೆಸುವ ಮೂಲಕ ಇಸ್ರೇಲ್‌ ಪಡೆಗಳನ್ನು ಹಿಮ್ಮೆಟ್ಟಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಈ ಬಾರಿ ಹಮಾಸ್‌ ಉಗ್ರರನ್ನು ಸಂಪೂರ್ಣವಾಗಿ ಸದೆಬಡಿದೇ ಯುದ್ಧಕ್ಕೆ ಅಂತ್ಯ ಹಾಡುವುದಾಗಿ ಇಸ್ರೇಲ್‌ ಪಟ್ಟು ಹಿಡಿದಿದೆ. ಅಮೆರಿಕ, ಬ್ರಿಟನ್‌ ಆದಿಯಾಗಿ ಪಾಶ್ಚಾತ್ಯ ರಾಷ್ಟ್ರಗಳು ಕೂಡ ಇಸ್ರೇಲ್‌ನ ಬೆನ್ನಿಗೆ ನಿಂತಿವೆ. ಇದೇ ವೇಳೆ ಯುದ್ಧದ ಆರಂಭದಲ್ಲಿ ಬೆರಳೆಣಿಕೆಯ ರಾಷ್ಟ್ರಗಳು ಹಮಾಸ್‌ ಉಗ್ರರು ಇಸ್ರೇಲ್‌ ವಿರುದ್ಧ ಕೈಗೆತ್ತಿಕೊಂಡಿರುವ ಕಾರ್ಯಾಚರಣೆಗೆ ನೇರ ಬೆಂಬಲ ವ್ಯಕ್ತಪಡಿಸಿದರೆ ಉಳಿದ ರಾಷ್ಟ್ರಗಳು ತಟಸ್ಥ ನಿಲುವನ್ನು ತಮ್ಮದಾಗಿಸಿಕೊಂಡಿದ್ದವು. ಆದರೆ ಯುದ್ಧ ತೀವ್ರತೆ ಪಡೆಯಲಾರಂಭಿಸಿದಂತೆ ಮಧ್ಯಪ್ರಾಚ್ಯ ಅದರಲ್ಲೂ ಮುಖ್ಯವಾಗಿ ಅರಬ್‌ ರಾಷ್ಟ್ರಗಳು ಒಗ್ಗೂಡಲಾರಂಭಿಸಿದ್ದು ಇಸ್ರೇಲ್‌ ಸೇನೆ, ಪ್ಯಾಲೆಸ್ತೀನ್‌ ಮತ್ತು ಗಾಜಾ ಪಟ್ಟಿಯಲ್ಲಿ ನಡೆಸುತ್ತಿರುವ ದಾಳಿಗಳನ್ನು ಏಕಕಂಠದಿಂದ ಖಂಡಿಸಲಾರಂಭಿಸಿವೆ. ಅಷ್ಟು ಮಾತ್ರವಲ್ಲದೆ ಹಮಾಸ್‌ ನಿರ್ದಯಿ ಉಗ್ರರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಸಹಕಾರ ನೀಡತೊಡಗಿವೆ.

ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವೆ ಕದನ ಆರಂಭಗೊಂಡಾಗಿನಿಂದ ಇಂತಹ ಆತಂಕವೊಂದು ಜಾಗತಿಕ ಸಮುದಾಯವನ್ನು ಕಾಡಲಾರಂಭಿಸಿತ್ತು. ಯುದ್ಧ ಸಾಗುತ್ತಿರುವ ರೀತಿ ಮತ್ತು ಇತ್ತೀಚಿನ ಬೆಳವಣಿಗೆಗಳನ್ನು ಅವಲೋಕಿಸಿದರೆ ಯುದ್ಧ ಕೇವಲ ಇಸ್ರೇಲ್‌-ಹಮಾಸ್‌ ಉಗ್ರರಿಗೆ ಸೀಮಿತವಾಗಿರದೆ ಪಾಶ್ಚಾತ್ಯ ಮತ್ತು ಅರಬ್‌ ರಾಷ್ಟ್ರಗಳ ನಡುವಣ ಕದನ ವಾಗಿ ಮಾರ್ಪಟ್ಟರೆ ಅಚ್ಚರಿ ಏನಿಲ್ಲ. ವಿಶ್ವದ ಅತ್ಯಂತ ಪ್ರಬಲ ರಾಷ್ಟ್ರಗಳು ಇಸ್ರೇಲ್‌ನ ಜತೆಗಿದ್ದರೂ ಅರಬ್‌ ರಾಷ್ಟ್ರಗಳು ಈಗ ಬಹಿರಂಗವಾಗಿಯೇ ಇಸ್ರೇಲ್‌ ಪಡೆಗಳ ದಾಳಿಗಳನ್ನು ಕಟು ಮಾತುಗಳಲ್ಲಿ ಖಂಡಿಸಲಾರಂ ಭಿಸಿರುವುದು ಹಾಗೂ ನೇರವಾಗಿ ಹಮಾಸ್‌ ಉಗ್ರರಿಗೆ ಶಸ್ತ್ರಾಸ್ತ್ರ ಮತ್ತು ಆರ್ಥಿಕ ನೆರವು ನೀಡತೊಡಗಿರುವುದು ಸಹಜವಾಗಿಯೇ ಆತಂಕವನ್ನು ಹೆಚ್ಚಿಸಿದೆ.

ಒಂದೆಡೆಯಿಂದ ಅಮೆರಿಕ ನೇರವಾಗಿ ಇಸ್ರೇಲ್‌ಗೆ ಶಸ್ತ್ರಾಸ್ತ್ರ ಮತ್ತು ಹಣಕಾಸಿನ ನೆರವು ನೀಡುವ ಮೂಲಕ ಈ ಯುದ್ಧಕ್ಕೆ ತುಪ್ಪ ಸುರಿಯುವ ಕಾರ್ಯದಲ್ಲಿ ನಿರತವಾಗಿದ್ದರೆ ಇತರ ಪಾಶ್ಚಾತ್ಯ ರಾಷ್ಟ್ರಗಳು ಕೂಡ ವಿಶ್ವದ ದೊಡ್ಡಣ್ಣನ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕ ತೊಡಗಿವೆ. ಇದು ಇಸ್ರೇಲ್‌ನ ಯುದ್ಧ ದಾಹವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಆರಂಭದಲ್ಲಿ ನಮ್ಮದೇನಿದ್ದರೂ ಹಮಾಸ್‌ ಉಗ್ರರ ವಿರುದ್ಧದ ಕಾರ್ಯಾಚರಣೆ ಎಂದು ವಾದಿಸುತ್ತಲೇ ಬಂದಿದ್ದ ಇಸ್ರೇಲ್‌ ಈಗ ಉಗ್ರರನ್ನು ಮಟ್ಟಹಾಕುವ ನೆಪದಲ್ಲಿ ಇಡೀ ಗಾಜಾಪಟ್ಟಿ, ವೆಸ್ಟ್‌ ಬ್ಯಾಂಕ್‌ ಮತ್ತು ಪ್ಯಾಲೆಸ್ತೀನ್‌ ಅನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸುತ್ತಿದ್ದು ಭಾರೀ ಸಂಖ್ಯೆಯಲ್ಲಿ ಅಮಾಯಕ ನಾಗರಿಕರೂ ಸಾವಿಗೀಡಾಗಿದ್ದಾರೆ. ಹಮಾಸ್‌ ಉಗ್ರರೂ ದಾಳಿ ಮುಂದುವರಿಸಿರುವುದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು ಇತ್ತಂಡಗಳಲ್ಲೂ ಭಾರೀ ಸಾವು ನೋವು, ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ.

ಪಾಶ್ಚಾತ್ಯ ರಾಷ್ಟ್ರಗಳ ಬೆಂಬಲಿತ ಇಸ್ರೇಲ್‌ ಪಡೆಗಳ ಈ ಕಾರ್ಯಾಚರಣೆ ಈಗ ವಿಶ್ವದ ಇತರ ಅದರಲ್ಲೂ ಅಭಿವೃದ್ಧಿಶೀಲ ಮತ್ತು ಬಡ ದೇಶಗಳನ್ನು ಕಂಗೆಡುವಂತೆ ಮಾಡಿದ್ದು ಈ ದಾಳಿಗಳನ್ನು ತತ್‌ಕ್ಷಣವೇ ಸ್ಥಗಿತಗೊಳಿಸು ವಂತೆ ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ಮೇಲೆ ಒತ್ತಡ ಹೇರಲಾರಂಭಿಸಿವೆ. ಯುದ್ಧವೇ ಅಮಾನವೀಯ ವಾಗಿರುವಾಗ ಇಂತಹ ದಾಳಿಗಳ ಸಂದರ್ಭದಲ್ಲಿ ಮಾನವೀಯತೆಯನ್ನು ನಿರೀಕ್ಷಿಸುವುದು ಅತಾರ್ಕಿ ಕವಾದರೂ ಯುದ್ಧದ ಸಂದರ್ಭದಲ್ಲೂ ಯುದ್ಧನಿರತ ರಾಷ್ಟ್ರಗಳು ಕೆಲವೊ ಂದು ಅಂತಾರಾಷ್ಟ್ರೀಯ ನೀತಿ, ನಿಯಮಾವಳಿಯನ್ನು ಪಾಲಿಸಬೇಕು. ಆದರೆ ಇದ್ಯಾವುದರತ್ತಲೂ ಲಕ್ಷ್ಯ ಹರಿಸದ ಇತ್ತಂಡಗಳ ದಾಳಿ- ಪ್ರತಿದಾಳಿಗಳ ಸುರಿಮಳೆಗೆ ಅಮಾಯಕರ ಮಾರಣ ಹೋಮ ನಡೆಯುತ್ತಿರುವುದು ವಿಪರ್ಯಾಸವೇ ಸರಿ.

ಯುದ್ಧ ಆರಂಭವಾದಾಗಿನಿಂದಲೂ ಇಸ್ರೇಲ್‌ನ ಶತ್ರು ರಾಷ್ಟ್ರವೆಂದೇ ಪರಿಗಣಿಸಲ್ಪಟ್ಟಿರುವ ಇರಾನ್‌, ಹಮಾಸ್‌ ಉಗ್ರರಿಗೆ ಬಹಿರಂಗವಾಗಿಯೇ ಬೆಂಬಲ ನೀಡುತ್ತಿದೆ. ಹಮಾಸ್‌ ಉಗ್ರರಿಗೆ ಆರ್ಥಿಕ ನೆರವಿನ ಜತೆಯಲ್ಲಿ ಶಸ್ತ್ರಾಸ್ತ್ರಗಳನ್ನೂ ಪೂರೈಸುತ್ತಿದೆ. ಹಮಾಸ್‌ನ ಇನ್ನೊಂದು ಪ್ರಬಲ ಬೆಂಬಲಿಗ ರಾಷ್ಟ್ರವಾಗಿರುವ ಕತಾರ್‌ ಉಗ್ರರಿಗೆ ಆರ್ಥಿಕ ನೆರವನ್ನು ನೀಡುತ್ತಿದೆ. ಈ ಎರಡು ರಾಷ್ಟ್ರಗಳ ಜತೆಯಲ್ಲಿ ಮಧ್ಯಪ್ರಾಚ್ಯದ ಇತರ ದೇಶಗಳಾದ ಅಫ್ಘಾನಿಸ್ಥಾನ, ಸೌದಿ ಅರೇಬಿಯಾ, ಇರಾಕ್‌, ಯೆಮನ್‌ ಮತ್ತು ಲೆಬನಾನ್‌ ಕೂಡ ಹಮಾಸ್‌ ಉಗ್ರರ ಬೆನ್ನಿಗೆ ನಿಂತಿದ್ದು ಇಸ್ರೇಲ್‌ನ ವಿರುದ್ಧ ತೊಡೆ ತಟ್ಟಿವೆ. ಈಜಿಪ್ಟ್, ಕೆನಡಾ, ಟರ್ಕಿ, ಸೂಡಾನ್‌ ಪ್ಯಾಲೆಸ್ತೀನ್‌ ಪರವಾಗಿ ನಿಂತಿರುವುದು ಹಮಾಸ್‌ ಉಗ್ರರಿಗೆ ಮತ್ತಷ್ಟು ಬಲ ತುಂಬಿದಂತಾಗಿದೆ.

ಅತ್ತ ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರಿಗೆ ಪ್ರಾದೇಶಿಕ ಬೆಂಬಲ ವ್ಯಕ್ತವಾಗಿರುವುದು ಉದ್ವಿಗ್ನತೆಯನ್ನು ಹೆಚ್ಚಿ ಸಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳು ಹಮಾಸ್‌ ಉಗ್ರರಿಗೆ ರಾಜಕೀ ಯ ಮತ್ತು ಆರ್ಥಿಕ ಬೆಂಬಲವನ್ನು ನೀಡುವ ಮೂಲಕ ಪಾಶ್ಚಾತ್ಯ ರಾಷ್ಟ್ರಗಳ ವಿರುದ್ಧ ಸೆಟೆದು ನಿಂತಿವೆ. ಇಷ್ಟು ಮಾತ್ರವಲ್ಲದೆ ಈ ದೇಶಗಳ ನಾಗರಿಕರು ಕೂಡ ಬೀದಿಗೆ ಬಂದು ಪಾಶ್ಚಾತ್ಯ ರಾಷ್ಟ್ರಗಳ ಯುದ್ಧದಾಹ ಮತ್ತು ಅಮಾನವೀಯ ನಡೆಯ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ನಮ್ಮನ್ನಾಳುವವರ ಬೆಂಬಲಕ್ಕೆ ನಿಂತಿ ರುವುದು ಸಹಜವಾಗಿಯೇ ಕುತೂಹಲ ಕೆರಳಿಸಿದೆ.

ಮತ್ತೂಂದೆಡೆ ಇಸ್ರೇಲ್‌-ಹಮಾಸ್‌ ಉಗ್ರರ ನಡುವಣ ಕಾದಾಟದ ವಿಷಯದಲ್ಲಿ ರಷ್ಯಾ ಮತ್ತು ಚೀನ ಇರಿಸಿರುವ ಹೆಜ್ಜೆಗಳು ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇಸ್ರೇಲ್‌ನೊಂದಿಗೆ ಉಭಯ ರಾಷ್ಟ್ರಗಳು ಸಾಧಾರಣ ಸಂಬಂಧ ಹೊಂದಿವೆಯಾದರೂ ಪಾಶ್ಚಾತ್ಯ ರಾಷ್ಟ್ರಗಳು ಇಸ್ರೇಲ್‌ನೊಂದಿಗೆ ಕೈಜೋಡಿಸಿರುವುದರಿಂದ ಈ ಎರಡೂ ರಾಷ್ಟ್ರಗಳು ಪರೋಕ್ಷವಾಗಿ ಪ್ಯಾಲೆಸ್ತೀನ್‌ ಅಂದರೆ ಹಮಾಸ್‌ ಉಗ್ರರನ್ನು ಬೆಂಬಲಿಸುತ್ತಿವೆ. ಸದ್ಯ ರಷ್ಯಾ, ಉಕ್ರೇನ್‌ ವಿರುದ್ಧ ನಡೆಸುತ್ತಿರುವ ಯುದ್ಧ 606ನೇ ದಿನವೂ ಮುಂದುವರಿದಿದೆ. ಅಮೆರಿಕ, ಬ್ರಿಟನ್‌ ಸಹಿತ ಪಾಶ್ಚಾತ್ಯ ರಾಷ್ಟ್ರಗಳು ಉಕ್ರೇನ್‌ನ ಬೆಂಬಲಕ್ಕೆ ನಿಂತಿರುವುದರಿಂದ ಈ ದೇಶಗಳೊಂದಿಗಿನ ರಷ್ಯಾದ ಸಂಬಂಧ ಬಿಗಡಾಯಿಸಿದೆ. ಅಷ್ಟು ಮಾತ್ರವಲ್ಲದೆ ಪಾಶ್ಚಾತ್ಯ ದೇಶಗಳು ರಷ್ಯಾದ ವಿರುದ್ಧ ಹಲವಾರು ಆರ್ಥಿಕ ಮತ್ತು ವಾಣಿಜ್ಯ ನಿರ್ಬಂಧಗಳನ್ನು ಹೇರಿವೆ. ಇವೆಲ್ಲದರ ಪರಿಣಾಮ ರಷ್ಯಾ ಪರೋಕ್ಷವಾಗಿ ಪ್ಯಾಲೆಸ್ತೀನ್‌ನ ಬೆಂಬಲಕ್ಕೆ ನಿಂತಿದೆ.

ಇನ್ನು ಅಮೆರಿಕದೊಂದಿಗಿನ ಚೀನದ ಸಂಬಂಧ ಸಂಪೂರ್ಣ ಹದಗೆಟ್ಟಿದೆ. ತನ್ನ ವಿಸ್ತರಣವಾದದ ವಿರುದ್ಧ ಅಮೆರಿಕ ತನ್ನ ಮಿತ್ರ ರಾಷ್ಟ್ರಗಳೊಡಗೂಡಿ ಚೀನದ ವಿರುದ್ಧ ತೊಡೆತಟ್ಟಿರುವುದರಿಂದ ಸಹಜವಾಗಿಯೇ ಅಮೆರಿಕದ ವಿರುದ್ಧದ ತನ್ನ ತಂತ್ರಗಾರಿಕೆಯನ್ನು ಹೆಣೆಯಲು ಚೀನ, ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವಣ ಸಮರವನ್ನು ಬಳಸಿಕೊಳ್ಳಲು ಹವಣಿಸುತ್ತಿದೆ. ಅಷ್ಟು ಮಾತ್ರವಲ್ಲದೆ ತನ್ನ ಮಹತ್ವಾಕಾಂಕ್ಷೆಯ ರೋಡ್‌ ಆ್ಯಂಡ್‌ ಬೆಲ್ಟ್ ಯೋಜನೆಯಲ್ಲೂ ಅರಬ್‌ ರಾಷ್ಟ್ರಗಳು ಅತ್ಯಂತ ಪ್ರಮುಖ ಪಾತ್ರ ವಹಿಸಿರುವುದರಿಂದ ಚೀನ ಅರಬ್‌ ರಾಷ್ಟ್ರಗಳಿಗೆ ತನ್ನ ಪರೋಕ್ಷ ಬೆಂಬಲವನ್ನು ನೀಡಿದೆ.

ಇಸ್ರೇಲ್‌-ಹಮಾಸ್‌ ಉಗ್ರರ ನಡುವಣ ಸಮರದ ಮೊದಲ ವಾರದಲ್ಲಿ ಜಾಗತಿಕ ಮಟ್ಟದಲ್ಲಿ ಇಸ್ರೇಲ್‌ ಪರವಾಗಿ ಭಾರೀ ಬೆಂಬಲ ವ್ಯಕ್ತವಾದರೆ ಯುದ್ಧ ಎರ ಡನೇ ವಾರಕ್ಕೆ ಕಾಲಿಡುತ್ತಿದ್ದಂತೆಯೇ ಹಮಾಸ್‌ ಅದ ರಲ್ಲೂ ಮುಖ್ಯವಾಗಿ ಪ್ಯಾಲೆಸ್ತೀನ್‌ ಪರವಾಗಿ ಒಂದಷ್ಟು ಪ್ರಬಲ ಧ್ವನಿ ಕೇಳಲಾರಂಭಿಸಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳು ಪ್ಯಾಲೆಸ್ತೀನ್‌ಗೆ ಬೆಂಬಲ ವ್ಯಕ್ತಪಡಿಸಿ, ಹಮಾಸ್‌ ಉಗ್ರರಿಗೆ ರಾಜಕೀಯ ಬೆಂಬಲ, ಆರ್ಥಿಕ ನೆರವು ಮತ್ತು ಶಸ್ತ್ರಾಸ್ತ್ರ ಪೂರೈಸು ತ್ತಿರುವುದರಿಂದ ಯುದ್ಧ ಮತ್ತಷ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ.

ಇವೆಲ್ಲದರ ನಡುವೆ ಶಾಂತಿ ಮಾತುಕತೆಯ ಪ್ರಯತ್ನಗಳು ಆರಂಭಗೊಂಡಿವೆಯಾದರೂ ಯಾವೊಂದೂ ರಾಷ್ಟ್ರವೂ ಮಧ್ಯಸ್ಥಿಕೆ ವಹಿಸಲು ಆಸಕ್ತಿ ತೋರದಿರುವ ಹಿನ್ನೆಲೆಯಲ್ಲಿ ಇದು ಕೂಡ ರಷ್ಯಾ-ಉಕ್ರೇನ್‌ ಕದನದ ಮಾದರಿಯಲ್ಲಿ ಸುದೀರ್ಘ‌ ಕಾಲ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿವೆ. ಇಷ್ಟೆಲ್ಲ ಆಗಿಯೂ ಎರಡನೇ ವಿಶ್ವ ಯುದ್ಧದ ಬಳಿಕ ಇಡೀ ವಿಶ್ವದಲ್ಲಿ ಶಾಂತಿಯನ್ನು ಕಾಯ್ದುಕೊಳ್ಳುವ ಮಹತ್ತರ ಉದ್ದೇ ಶದಿಂದ ಸ್ಥಾಪನೆಯಾದ ವಿಶ್ವ ಸಂಸ್ಥೆಯ ಮಾತಿಗೆ ವಿಶ್ವದ ಯಾವೊಂದೂ ರಾಷ್ಟ್ರಗಳೂ ಕಿವಿಗೊಡದಿರುವುದು ಈ ಸಂಸ್ಥೆಯ ಅಸ್ತಿತ್ವದ ಔಚಿತ್ಯವನ್ನೇ ಪ್ರಶ್ನಿಸುವಂತೆ ಮಾಡಿದೆ.

ಹರೀಶ್‌ ಕೆ.

ಟಾಪ್ ನ್ಯೂಸ್

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.