75ನೇ ಗಣರಾಜ್ಯೋತ್ಸವಕ್ಕೆ ಮ್ಯಾಕ್ರಾನ್‌ ಅತಿಥಿ

Team Udayavani, Jan 25, 2024, 5:49 AM IST

1-asdsad

ಭಾರತ ತನ್ನ 75ನೇ ಗಣರಾಜ್ಯೋತ್ಸವವನ್ನು ಶುಕ್ರವಾರ ಆಚರಿಸಲಿದೆ. ಕರ್ತವ್ಯ ಪಥದಲ್ಲಿ (ರಾಜಪಥ) ನಡೆಯಲಿರುವ ಪಥಸಂಚಲನದಲ್ಲಿ ಮಹಿಳಾ ತಂಡದ ಪಾಲ್ಗೊಳ್ಳುವಿಕೆಯೂ ಪ್ರಧಾನ ವಿಚಾರವಾಗಿದೆ. ಅದರೊಡನೆ, ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವರ್ಣರಂಜಿತ ಸ್ತಬ್ಧ ಚಿತ್ರಗಳು ಪ್ರದರ್ಶನಗೊಂಡು, ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿ ಸಲಿವೆ. ಮೂರು ದಿನಗಳ ಸಮಾರಂಭ ಗಳು ಜನವರಿ 29ರಂದು ಬೀಟಿಂಗ್‌ ರಿಟ್ರೀಟ್‌ ಕಾರ್ಯಕ್ರಮದೊಡನೆ ಕೊನೆಗೊಳ್ಳುತ್ತವೆ.

2024ರಲ್ಲಿ ಭಾರತ ತನ್ನ ಅತ್ಯುನ್ನತ ರಾಜ ತಾಂತ್ರಿಕ ನಡೆಯಲ್ಲಿ ಫ್ರಾನ್ಸ್‌ ಅಧ್ಯಕ್ಷರಾದ ಇಮ್ಮಾನುಯೆಲ್‌ ಮ್ಯಾಕ್ರಾನ್‌ ಅವರನ್ನು ಗಣರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಆಹ್ವಾನಿಸಿದೆ. ಮ್ಯಾಕ್ರಾನ್‌ ಅವರು ಜನವರಿ 25ರಂದು ಹೊಸದಿಲ್ಲಿಗೆ ಆಗಮಿಸಲಿದ್ದಾರೆ. ಅವರು ಈಗಾಗಲೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಲು ತನ್ನ ಒಪ್ಪಿಗೆ ಸೂಚಿಸಿದ್ದಾರೆ. ಮ್ಯಾಕ್ರಾನ್‌ ಉಪಸ್ಥಿತಿ, ಭಾರತ ಮತ್ತು ಫ್ರಾನ್ಸ್‌ಗಳ ನಡುವಿನ ಸಂಬಂಧ ಗಟ್ಟಿಯಾಗುತ್ತಿರುವುದನ್ನು ಪ್ರತಿಬಿಂಬಿಸುತ್ತದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಡನೆ ಉತ್ತಮ ಬಾಂಧವ್ಯ ಹೊಂದಿರುವ ಮ್ಯಾಕ್ರಾನ್‌ ಅವರು ಗಣ ರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವ ಎರಡನೇ ಫ್ರೆಂಚ್‌ ಅಧ್ಯಕ್ಷರಾ ಗಿ¨ªಾರೆ. ಈ ಮೊದಲು 2016ರಲ್ಲಿ ಫ್ರಾಂಕೋಯಿಸ್‌ ಹಾಲೆಂಡ್‌ ಅವರು ಮುಖ್ಯ ಅತಿಥಿಯಾಗಿದ್ದರು.

ಭಾರತ – ಫ್ರಾನ್ಸ್‌ ಸಹಯೋಗ: ಭಾರತ ಮತ್ತು ಫ್ರಾನ್ಸ್‌ ನಡುವೆ ಬೆಳೆಯುತ್ತಿರುವ ಕಾರ್ಯತಂತ್ರದ ಸಹಯೋಗದ ಕಾರಣದಿಂದ, 2024ರ ಗಣ ರಾಜ್ಯೋತ್ಸವಕ್ಕೆ ಫ್ರಾನ್ಸ್‌ ಅಧ್ಯಕ್ಷ ಇಮ್ಮಾನುಯೆಲ್‌ ಮ್ಯಾಕ್ರಾನ್‌ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾ ನಿಸಲಾಗಿದೆ. ಈ ಸಹಯೋಗ ಪ್ರಮುಖ ವಿಭಾಗ ಗಳಾದ ಬಾಹ್ಯಾಕಾಶ ಅನ್ವೇಷಣೆ, ಮಾನವ ಹಕ್ಕು ಗಳು, ರಕ್ಷಣಾ ವ್ಯವಸ್ಥೆಗಳು, ಮತ್ತು ಇತರ ವಲಯ ಗಳಲ್ಲೂ ಮುಂದುವರಿಯಲಿದ್ದು, ಫ್ರಾನ್ಸ್‌ ರಷ್ಯಾಗೆ ಈ ವಿಭಾಗಗಳಲ್ಲಿ ಪ್ರಮುಖ ಜತೆಗಾರನಾಗಿದೆ.

ಮೂಲಗಳ ಪ್ರಕಾರ, ಕರ್ತವ್ಯ ಪಥದಲ್ಲಿ ನೆರವೇರಲಿರುವ 2024ರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಫ್ರೆಂಚ್‌ ನಿರ್ಮಾಣದ ರಫೇಲ್‌ ಮತ್ತು ಮಲ್ಟಿ ರೋಲ್‌ ಟ್ಯಾಂರ್ಕ ಟ್ರಾನ್ಸೊ$³àರ್ಟ್‌ (ಎಂಆರ್ಟಿಟಿ) ವಿಮಾನಗಳು ಪ್ರದರ್ಶನ ಗೊಳ್ಳಲಿವೆ. ಅದರೊಡನೆ ಒಂದು ಫ್ರೆಂಚ್‌ ತಂಡವೂ ಪಥ ಸಂಚಲನದಲ್ಲಿ ಪಾಲ್ಗೊಳ್ಳುವ ಸಂಭವವಿದೆ ಎನ್ನಲಾಗಿದೆ. ಭಾರತ – ಫ್ರಾನ್ಸ್‌ ಎರಡೂ ದೇಶಗಳು ತೃತೀಯ ಜಗತ್ತಿನ ರಾಷ್ಟ್ರಗಳಿಗೆ ನೆರವಾಗುವ ಉದ್ದೇಶದಿಂದ, ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನ ಗಳನ್ನು ಜಂಟಿಯಾಗಿ ಅಭಿವೃದ್ಧಿ ಪಡಿಸುವ ಗುರಿ ಹೊಂದಿದ್ದು, ಇದು ಭಾರತ – ಫ್ರಾನ್ಸ್‌ ಸಂಬಂಧ ವನ್ನು ಇನ್ನಷ್ಟು ನಿಕಟಗೊಳಿಸಿದೆ.

ಇದೇ ಮೊದಲ ಬಾರಿಗೆ, ಗಣರಾಜ್ಯೋತ್ಸವ ಪಥ ಸಂಚಲನವನ್ನು ಸಾಂಪ್ರದಾಯಿಕ ವಾದ್ಯಗಳನ್ನು ನುಡಿಸುವ 100 ಸಂಗೀತಗಾರ್ತಿಯರು ಮುನ್ನ ಡೆಸಲಿದ್ದಾರೆ. ಮುಖ್ಯ ಅತಿಥಿಯ ಆಯ್ಕೆ ಪ್ರಕ್ರಿಯೆ: ಗಣ ರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಯನ್ನು ಆಯ್ಕೆ ಮಾಡುವುದು ಒಂದು ಸವಾಲಿನ ಪ್ರಕ್ರಿಯೆ ಯಾಗಿದೆ. ಇದು ದೇಶ ಒದಗಿಸಬಹುದಾದ ಅತಿದೊಡ್ಡ ಶಿಷ್ಟಾಚಾರದ ಗೌರವವೂ ಆಗಿದೆ. ಈ ಜಾಗರೂಕ ಆಯ್ಕೆ ಪ್ರಕ್ರಿಯೆ ಗಣರಾಜ್ಯೋತ್ಸವ ಸಮಾರಂಭಕ್ಕೆ ಆರು ತಿಂಗಳು ಪೂರ್ವಭಾವಿ ಯಾಗಿ ಆರಂಭಗೊಳ್ಳುತ್ತದೆ. ಯಾವುದೇ ದೇಶದ ಮುಖ್ಯಸ್ಥರನ್ನು ಆಹ್ವಾನಿಸುವ ಮುನ್ನ, ವಿದೇಶಾಂಗ ಸಚಿವಾಲಯ ಹಲವು ಅಂಶಗಳನ್ನು ಕೂಲಂಕಷವಾಗಿ ಪರಿಗಣನೆಗೆ ತೆಗೆದುಕೊಳ್ಳುತ್ತದೆ.

ಇಲ್ಲಿ ಪ್ರಮುಖವಾಗಿ ಗಮನಿಸುವ ಅಂಶ ವೆಂದರೆ, ಆ ದೇಶದ ಜೊತೆಗೆ ಭಾರತದ ಸಂಬಂಧ ಎಷ್ಟು ಉತ್ತಮವಾಗಿದೆ ಎನ್ನುವುದಾಗಿದೆ. ಯಾಕೆಂದರೆ, ಭಾರತ ಯಾವುದಾದರೂ ದೇಶದ ನಾಯಕನನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸು ತ್ತದೆ ಎಂದರೆ, ಭಾರತಕ್ಕೆ ಆ ದೇಶದೊಡನೆ ಸ್ನೇಹ ಸಂಬಂಧ ಸ್ಥಾಪಿಸುವ, ಅಥವಾ ಇರುವ ಬಾಂಧವ್ಯವನ್ನು ಉತ್ತಮಗೊಳಿಸುವ ಉದ್ದೇಶ ಇದೆ ಎಂದರ್ಥ. ಭಾರತ ಮುಖ್ಯ ಅತಿಥಿಯನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ, ತನ್ನ ರಾಜಕೀಯ, ವ್ಯಾವಹಾರಿಕ, ಮಿಲಿಟರಿ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಗಮನದಲ್ಲಿರಿಸುತ್ತದೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಅವಕಾಶವನ್ನು ಅತಿಥಿ ದೇಶದೊಡನೆ ಉತ್ತವ ಸ್ನೇಹ ಸಂಬಂಧ ಬೆಳೆಸಲು ಬಳಸಿಕೊಳ್ಳುತ್ತದೆ.

ಐತಿಹಾಸಿಕವಾಗಿ ಗಮನಿಸಲಾಗುತ್ತಿದ್ದ ಇನ್ನೊಂದು ಅಂಶವೆಂದರೆ, ಆಯ್ಕೆಯಾಗುವ ಅತಿಥಿ ಅಲಿಪ್ತ ಚಳುವಳಿಯೊಡನೆ ಹೊಂದಿರುವ ಸಂಬಂಧ. 1961ರಲ್ಲಿ ಸ್ಥಾಪನೆಗೊಂಡ ಅಲಿಪ್ತ ಚಳುವಳಿ ಒಂದು ಜಾಗತಿಕ ಚಳುವಳಿಯಾಗಿದ್ದು, ನೂತನವಾಗಿ ಸ್ವಾತಂತ್ರ್ಯ ಪಡೆದ ದೇಶಗಳು ಶೀತಲ ಸಮರದ ಸುಳಿಗೆ ಸಿಲುಕದೆ, ಪರಸ್ಪರರ ಅಭಿವೃದ್ಧಿಗೆ ನೆರವಾಗುವ ಉದ್ದೇಶ ಹೊಂದಿತ್ತು. ಇದು ಭಾರತ 1950ರಲ್ಲಿ ತನ್ನ ಪ್ರಥಮ ಗಣರಾಜ್ಯೋತ್ಸವದ ಮುಖ್ಯ ಅತಿಥಿಯನ್ನು ಆರಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿತ್ತು. ಭಾರತ ಆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾದ ಅಧ್ಯಕ್ಷರಾಗಿದ್ದ, ಅಲಿಪ್ತ ಚಳುವಳಿಯ ಪ್ರಮುಖ ಸ್ಥಾಪಕರಲ್ಲೊಬ್ಬರಾಗಿದ್ದ ಸುಕರ್ಣೋ ಅವರನ್ನು ಆಹ್ವಾನಿಸಿತ್ತು.

ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ವಿದೇಶಾಂಗ ಸಚಿವಾಲಯ ಅತ್ಯಂತ ಜಾಗರೂಕ ವಾಗಿ ಸಂಭಾವ್ಯ ಅತಿಥಿಗಳ ಪಟ್ಟಿಯೊಂದನ್ನು ಸಿದ್ಧ ಪಡಿಸುತ್ತದೆ. ಇದರಲ್ಲಿ ಕೇವಲ ಒಂದು ಆಯ್ಕೆ ಮಾತ್ರವೇ ಇರುವುದಿಲ್ಲ. ಒಂದು ಬಾರಿ ಭಾರತ ತನ್ನ ಅತಿಥಿಯನ್ನು ಆರಿಸಿದ ಬಳಿಕ, ಅತಿಥಿಯ ದೇಶ ದೊಡನೆ ಔಪಚಾರಿಕ ಮಾತುಕತೆ ನಡೆಸಲಾಗುತ್ತದೆ. ವಿದೇಶಾಂಗ ಸಚಿವಾಲಯದ ವಿವಿಧ ವಿಭಾಗಗಳು ಒಪ್ಪಂದಗಳ ಕುರಿತು ಕಾರ್ಯಾಚರಿಸಲು ಆರಂಭಿಸುತ್ತವೆ. ಶಿಷ್ಟಾಚಾರ ಮುಖ್ಯಸ್ಥರು ಕಾರ್ಯಕ್ರಮದ ವೇಳಾಪಟ್ಟಿ ಮತ್ತು ಸಂಚಾರ ಮತ್ತಿತರ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಾರೆ.

ಗಣರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿ ಅಪಾರ ಗಮನ ಸೆಳೆಯುತ್ತಾರೆ. ಅತಿಥಿಯ ದೇಶವೂ ಸಹ ಈ ಭೇಟಿಯನ್ನು ಯಶಸ್ವಿ ಭೇಟಿ ಎಂದು ಪರಿಗಣಿಸುವುದು ಅತ್ಯವಶ್ಯಕವಾಗಿದೆ. ಮುಖ್ಯ ಅತಿಥಿಗೆ ರಾಷ್ಟ್ರಪತಿ ಭವನದಿಂದ ಅಧಿಕೃತ ಆಹ್ವಾನ ಬರುತ್ತದೆ. ಅವರು ಸಂಜೆ ಭಾರತದ ರಾಷ್ಟ್ರಪತಿಗಳು ಆಯೋಜಿಸುವ ಔತಣಕೂಟದಲ್ಲಿ ಪಾಲ್ಗೊಳ್ಳುತ್ತಾರೆ. ಅವರು ರಾಜಾ^ಟ್ನಲ್ಲಿರುವ ಮಹಾತ್ಮಾ ಗಾಂಧಿಯವರ ಸಮಾಧಿಗೆ ಭೇಟಿ ನೀಡಿ, ಗೌರವ ಸಲ್ಲಿಸುತ್ತಾರೆ. ಭಾರತದ ಪ್ರಧಾನಿಯವರೂ ಅತಿಥಿಗಾಗಿ ವಿಶೇಷ ಭೋಜನ ಕೂಟವನ್ನು ಆಯೋಜಿಸುತ್ತಾರೆ.

ಗಿರೀಶ್‌ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಟಾಪ್ ನ್ಯೂಸ್

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.